AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope in Kannada: ವಾರ ಭವಿಷ್ಯ: ಮೇ​ 12 ರಿಂದ 18 ರವರೆಗೆ ನಿಮ್ಮ ಭವಿಷ್ಯ ಹೀಗಿದೆ

2024 May 12 to 18 weekly horoscope: ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಮೇ​ 12 ರಿಂದ 18ರವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.

Weekly Horoscope in Kannada: ವಾರ ಭವಿಷ್ಯ: ಮೇ​ 12 ರಿಂದ 18 ರವರೆಗೆ ನಿಮ್ಮ ಭವಿಷ್ಯ ಹೀಗಿದೆ
ರಾಶಿ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್|

Updated on: May 11, 2024 | 9:46 PM

Share

ಮೇ ತಿಂಗಳ ಮೂರನೇ ವಾರವು ಮೇ 12 ರಿಂದ 18 ರವರೆಗೆ ಇರಲಿದೆ. ಶುಭಾಶುಭ ಮಿಶ್ರ ಫಲಗಳು ಇದ್ದು, ಪುರುಷ ಪ್ರಯತ್ನವನ್ನು ಮಾಡುತ್ತಾ ದೈವ ಬಲವನ್ನೂ ಬೇಡುತ್ತಾ ಮಾಡಬೇಕಾದ ಕಾರ್ಯದಲ್ಲಿ ಮುನ್ನಡೆದರೆ ಎಲ್ಲವೂ ಸಫಲವಾಗುವುದು. ಶುಭವಾಗಲಿ ಈ ವಾರ.

ಮೇಷ ರಾಶಿ : ಈ ವಾರ ನಿಮಗೆ ಸಂಶೋಧನಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಇಷ್ಟವಾಗುವುದು. ಅದೃಷ್ಟವು ಎಲ್ಲದರಲ್ಲೂ ಯಶಸ್ಸನ್ನು ನೀಡುವುದು. ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಕಷ್ಟಕರ ಸಂದರ್ಭಗಳು ಗೋಚರಿಸುತ್ತವೆ, ವ್ಯವಹಾರದಲ್ಲಿ ಚಿಂತನಶೀಲವಾಗಿ ಕೆಲಸ ಮಾಡಬೇಕು. ಸಂಪೂರ್ಣ ಶಕ್ತಿಯನ್ನು ಬಳಸಿ ಕೆಲಸ ಮಾಡಬೇಕಾಗುವುದು. ಒತ್ತಡವೂ ಅಧಿಕವಾಗಿ ಇರುವುದು. ಕುಟುಂಬದಲ್ಲಿ ದಾಯಾದಿಗಳ ಜೊತೆ ವಿವಾದ ಉಂಟಾಗುವ ಸಾಧ್ಯತೆಯಿದೆ. ವಿವಾದವು ಯಾವುದೇ ರೀತಿಯಲ್ಲಿ ಒಳ್ಳೆಯದಲ್ಲ. ಅದನ್ನು ತಪ್ಪಿಸಲು ಪ್ರಯತ್ನಿಸಿ.

ವೃಷಭ ರಾಶಿ : ಈ ವಾರ ಉನ್ನತ ಅಧಿಕಾರಿಗಳ ನೆರವಿನಿಂದ ಸಮಸ್ಯೆಗಳು ಬಗೆಹರಿಯಲಿವೆ. ವ್ಯವಹಾರದಲ್ಲಿ ಲಾಭವನ್ನು ವಾರದ ಮಧ್ಯದಲ್ಲಿ ಪಡೆಯುತ್ತಾರೆ. ತಿಳುವಳಿಕೆಯಿಂದ ವ್ಯಾಪಾರ ಮಾಡಿ. ವಿಳಂಬವಾದರೂ ತೊಂದರೆ ಇಲ್ಲ. ಕುಟುಂಬದಲ್ಲಿ ಪ್ರೀತಿಪಾತ್ರರಿಂದ ಸಮಾಧಾನ ಸಿಗಲಿದೆ. ನಿಮ್ಮ ಮಧುರವಾದ ಮಾತು ಹಳೆಯ ಗಾಯಗಳನ್ನು ಸಹ ವಾಸಿಮಾಡುತ್ತದೆ. ಆರೋಗ್ಯದ ವಿಷಯದಲ್ಲಿ ನಿಷ್ಕಾಳಜಿ ವಹಿಸಬೇಡಿ. ಅದು ಮತ್ತೇನಾದರೂ ಆಗಬಹುದು. ಬೇರೆಯವರಿಗೆ ಗೌರವವನ್ನು ನೀಡಿ, ನಿಮ್ಮ ಸ್ಥಾನವೂ ಹೆಚ್ಚುವುದು.

ಮಿಥುನ ರಾಶಿ : ಈ ವಾರ ಒಂದು ಗುರಿಯನ್ನು ತೀರ್ಮಾನಿಸಿ ಅದರತ್ತ ಹೆಜ್ಜೆ ಹಾಕಿ. ನಿಮ್ಮ ಗುರಿಗಳನ್ನು ಹೊಂದಿಸಿ ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸಿ ಯಶಸ್ಸು ನಿಮ್ಮದಾಗಲಿದೆ. ಉದ್ಯಮಿಗಳ ಹೂಡಿಕೆಯ ಯೋಜನೆ ಯಶಸ್ವಿಯಾಗುತ್ತದೆ. ಇದರಿಂದ ದೊಡ್ಡ ಲಾಭದ ಸಾಧ್ಯತೆ ಇದೆ. ಬೇರೆಯವರ ಮಾತಿಗೆ ಮರುಳಾಗಬೇಡಿ ಎಂಬುದನ್ನು ಯುವಕರು ನೆನಪಿನಲ್ಲಿಡಬೇಕು. ನೀವು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಯಸಿದರೆ, ಆಹಾರದಲ್ಲಿ ಸಂಯಮವನ್ನು ಕಾಪಾಡಿಕೊಳ್ಳಿ, ಇಲ್ಲದಿದ್ದರೆ ಸಮಸ್ಯೆ ಉದ್ಭವಿಸಬಹುದು. ಈ ವಾರ ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶವಿದೆ. ಕೆಲವನ್ನು ನೀವೇ ಹಾಳುಮಾಡಿಕೊಳ್ಳುವಿರಿ.

ಕರ್ಕಾಟಕ ರಾಶಿ : ಮೇ ತಿಂಗಳ ಮೂರನೇ ವಾರದಲ್ಲಿ ಈ ರಾಶಿಯವರಿಗೆ ಬಯಸಿದ ಉದ್ಯೋಗವನ್ನು ಪಡೆಯುವ ಅವಕಾಶ ಇರವುದು. ಉಡುಗೆ ತೊಡುಗೆಗಳ ವ್ಯಾಪಾರ ಮಾಡುವ ಉದ್ಯಮಿಗಳು ಉತ್ತಮ ಲಾಭವನ್ನು ಗಳಿಸುವರು. ಉದ್ಯೋಗದ ಕಾರಣಕ್ಕಾಗಿ ಹೆಚ್ಚು ಪ್ರಯಾಣ ಮಾಡಬೇಕಾಗಬಹುದು. ನೀವು ತಾಯಿಯ ಬೆಂಬಲ ಮತ್ತು ಒಡನಾಟವನ್ನು ಪಡೆಯುತ್ತೀರಿ. ಕೈಯ ಭಾಗದಲ್ಲಿ ಗಾಯವಾಗುವ ಸಾಧ್ಯತೆಗಳು ಇದೆ. ಸುರಕ್ಷಿತವಾಗಿರಿ ಮತ್ತು ಚಾಲನೆ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ನಿಮ್ಮ ಕೀರ್ತಿಯನ್ನು ಹೆಚ್ಚಿಸಿಕೊಳ್ಳಲು ಈ ವಾರ ಅವಕಾಶ ಹೆಚ್ಚಿರುವುದು.

ಸಿಂಹ ರಾಶಿ : ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉನ್ನತ ಹುದ್ದೆ ಸಿಗಲಿದೆ. ಆರ್ಥಿಕತೆಯ ಅರಿವಿಲ್ಲದೇ ಸಾಲವನ್ನು ಮಾಡುವ ಸ್ಥಿತಿ ಬರುವುದು. ಯಾರದೋ ಕಾರಣದಿಂದ ಕುಟುಂಬದಲ್ಲಿ ಉದ್ವಿಗ್ನತೆ ಭಿನ್ನತೆಗಳು ಉಂಟಾಗಬಹುದು, ವಿವಾದದಿಂದ ಉದ್ವಿಗ್ನತೆ ಹೆಚ್ಚಾಗುತ್ತದೆ, ಆದ್ದರಿಂದ ವಿವಾದದ ಪರಿಸ್ಥಿತಿಯನ್ನು ತಪ್ಪಿಸಿ. ಮಹಿಳೆಯರು ಅತಿಯಾಗಿ ಕ್ರಿಯಾಶೀಲರಾಗದೇ ಒತ್ತಡ ತಂದುಕೊಳ್ಳದೇ ಇರುವುದು ಉತ್ತಮ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನೀವು ಈಗಾಗಲೇ ಪೂರೈಸಲು ಯೋಜಿಸಿದ್ದ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುವುದು. ಆಲಸ್ಯದಿಂದ ಯಾವುದನ್ನೂ ಮುಂದೂಡುವುದು ಬೇಡ.

ಕನ್ಯಾ ರಾಶಿ : ಈ ವಾರ ವಿದೇಶದಲ್ಲಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ಸಿಗುವುದು. ವ್ಯಾಪಾರಸ್ಥರು ಧಾನ್ಯಗಳ ವ್ಯವಹಾರದಲ್ಲಿ ದೊಡ್ಡ ಲಾಭವನ್ನು ಗಳಿಸುವರು. ಸಣ್ಣ ವ್ಯಾಪಾರಿಗಳೂ ಮಾರಾಟದಲ್ಲಿ ಚೇತರಿಕೆ ಕಾಣುವರು. ಯಾವುದೇ ಅರಿವಿಲ್ಲದೆ ವಿವಾದಗಳಿಗೆ ಸಿಕ್ಕಿಬೀಳುವರು. ಮೊದಲು ಅದರ ಬಗ್ಗೆ ಮಾಹಿತಿ ಸಂಗ್ರಹಿಸಿ ಚೆನ್ನಾಗಿ ಯೋಚಿಸಿದ ಬಳಿಕವೇ ಯಾವುದೇ ಕೆಲಸಕ್ಕೆ ಕೈ ಹಾಕಿ. ಕುಟುಂಬದಲ್ಲಿ ಸಹೋದರರ ಜೊತೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಪರಿಸ್ಥಿತಿಯನ್ನು ಗಮನಿಸಿ, ತಾಳ್ಮೆಯಿಂದ ವರ್ತಿಸಿ. ಎತ್ತರದಲ್ಲಿ ನಿಂತು ಕೆಲಸ ಮಾಡಬೇಡಿ. ಬೀಳುವ ಸಾಧ್ಯತೆ ಇದೆ. ಸಹಾಯವನ್ನು ಬಯಸಿದವರಿಗೆ ಯಥಾಶಕ್ತಿ ಮಾಡಿ.

ತುಲಾ ರಾಶಿ : ಮೂರನೇ ವಾರ ನಿಮಗೆ ಬರಬೇಕಿದ್ದ ಬಾಕಿ ಮೊತ್ತಗಳು ಬಂದು ಸೇರುವುವು. ಉದ್ಯೋಗದಲ್ಲಿ ಸ್ವಲ್ಪ ಸಮಾಧಾನ ಸಿಗುವ ಸಾಧ್ಯತೆ ಇದೆ. ಎಲೆಕ್ಟ್ರಾನಿಕ್ ವ್ಯಾಪಾರ ಮಾಡುವವರಿಗೆ ಈ ವಾರ ಉತ್ತಮ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ತಮ್ಮ ಅಪೂರ್ಣ ಅಧ್ಯಯನವನ್ನು ತೊಡಗಿಸುವರು. ನಿಮ್ಮ ಯೋಜನೆಯನ್ನು ಸರಿಯಾಗಿ ರೂಪಿಸಿಕೊಳ್ಳಿ. ನಿಮ್ಮ ಮನೆಯ ಒಳಾಂಗಣವನ್ನು ಬದಲಾಯಿಸುವ ಸಾಧ್ಯತೆ ಇದೆ. ಈ ವಾರ ನೀವು ಮನೆಗೆ ಬೇಕಾದ ವಸ್ತುಗಳನ್ನು ಹೆಚ್ಚು ಖರೀದಿಸುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ನೀವು ಇತರರಿಗೆ ಸಹಾಯ ಮಾಡಲು ಮುಂದುವರಿಯಬೇಕಾಗುತ್ತದೆ. ಇತರರಿಗೆ ಸಹಾಯ ಮಾಡಿದ ತೃಪ್ತಿಯು ಇರುವುದು.

ವೃಶ್ಚಿಕ ರಾಶಿ : ಮೇ ತಿಂಗಳ ಮೂರನೇ ವಾರ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಮೇಲಧಿಕಾರಿಗಳು ನಿಮ್ಮ ಪ್ರಾಮಾಣಿಕತೆಯನ್ನು ಪರೀಕ್ಷಿಸಬಹುದು. ಪೋಷಕರ ವ್ಯವಹಾರವನ್ನು ವಿವೇಕದಿಂದ ನಡೆಸುವುದು ಸೂಕ್ತ. ತಿಳುವಳಿಕೆ ಮಾತ್ರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಅಹಂಕಾರಗಳ ಸಂಘರ್ಷವು ಸಂಬಂಧದಲ್ಲಿ ಬಿರುಕು ಉಂಟುಮಾಡಬಹುದು. ಆದ್ದರಿಂದ ಅಂತಹ ಸಂದರ್ಭವನ್ನು ಜಾಣ್ಮೆಯಿಂದ ತಪ್ಪಿಸಿ. ಕುಟುಂಬದಲ್ಲಿ ತಂದೆಯ ಜೊತೆ ಭಿನ್ನಾಭಿಪ್ರಾಯ ಬರುವುದು. ನೀವು ಸಭ್ಯತೆ ಮತ್ತು ನಮ್ರತೆಯಿಂದ  ಮಾತನಾಡುವುದರಿಂದ ಪರಿಸ್ಥಿತಿ ತಿಳಿಗೊಳ್ಳಲಿದೆ. ಉತ್ತಮ ಆರೋಗ್ಯಕ್ಕಾಗಿ, ಆಹಾರದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ. ನೀವು ಹಿಂದೆ ಮಾಡಿದ ಶ್ರಮವು ಈಗ ಫಲ ನೀಡುತ್ತದೆ.‌

ಧನು ರಾಶಿ : ಈ ವಾರ ಕೆಲಸದ ಪಟ್ಟಿಯು ಚಿಕ್ಕದಾಗಿ ಇರುವುದು. ಐಷಾರಾಮಿ ಸರಕುಗಳ ವ್ಯಾಪಾರಿಗಳು ಗ್ರಾಹಕರ ಮೇಲೆ ಕಣ್ಣಿಡಬೇಕು. ಯುವಕರು ಚಿಂತೆ ಹೆಚ್ಚಾಗುವುದು. ಕೆಲವರ ಸಹವಾಸದಿಂದ ದೂರವಾದರೆ ಅವರಿಗೆ ಉತ್ತಮ. ನಿಮ್ಮ ಮೇಲೆ ಅಪವಾದಗಳು ಬರುವುದು. ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ, ಇದರಿಂದಾಗಿ ಕುಟುಂಬದ ವಾತಾವರಣವು ಆಧ್ಯಾತ್ಮಿಕ ಮತ್ತು ಶಕ್ತಿಯುತವಾಗಿರುತ್ತದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವವರು ತಮ್ಮ ಮಾತಿನ ಮೇಲೆ ಹಿಡಿತ ಸಾಧಿಸಬೇಕು, ಇಲ್ಲದಿದ್ದರೆ ತೊಂದರೆಯಾಗಬಹುದು. ಯಾವುದೇ ಹಂತದಲ್ಲಿಯೂ ಕೆಲಸವನ್ನು ಕೈಬಿಡುವಿರಿ.

ಮಕರ ರಾಶಿ : ಈ ತಿಂಗಳ ಮೂರನೇ ವಾರ ಸಹೋದ್ಯೋಗಿಗಳ ಜೊತೆ ಆಗಾಗ ಕಾರ್ಯಕ್ಕೆ ಸಂಬಂಧಿಸಿದಂತೆ ಮನಸ್ತಾಪ ಉಂಟಾಗುವುದು. ಇದನ್ನು ನಿಮ್ಮಲ್ಲೇ ಗೌಪ್ಯವಾಗಿ ಇಟ್ಟುಕೊಳ್ಳಿ. ಮೇಲಧಿಕಾರಿಗಳಿಗೆ ತಿಳಿಸದಿದ್ದರೆ ಒಳ್ಳೆಯದು. ಇಲ್ಲವೇ ಹೆಚ್ಚಿನ ಸಮಸ್ಯೆಗಳು ಎದುರಾಗುತ್ತವೆ. ಜಮೀನು ಖರೀದಿ ಮತ್ತು ಮಾರಾಟ ಮಾಡುವ ಉದ್ಯಮಿಗಳಿಗೆ ಬಾಕಿ ಉಳಿದಿರುವ ವ್ಯವಹಾರಗಳನ್ನು ಇತ್ಯರ್ಥಗೊಳಿಸಲು ಇದು ಸೂಕ್ತ ಸಮಯ. ಕೌಟುಂಬಿಕ ಕೆಲಸ ಎಲ್ಲರ ಒಪ್ಪಿಗೆ ಮೇರೆಗೆ ನಡೆಯಬೇಕು, ಯಾವುದಾದರೂ ಕೆಲಸವಿದ್ದರೆ ಮೊದಲು ಎಲ್ಲರ ಜೊತೆ ಕುಳಿತು ಅವರ ಅಭಿಪ್ರಾಯ ತಿಳಿದುಕೊಳ್ಳಿ. ನಿಮ್ಮ ಮಾತುಗಳು ಇತರರನ್ನು ದ್ವೇಷಿದಂತೆ ಕಾಣಿಸುವುದು.

ಕುಂಭ ರಾಶಿ : ಮೇ ತಿಂಗಳ ಮೂರನೇ ವಾರ ಹೆಚ್ಚಿನ ಕೆಲಸದ ಹೊರೆ ಇರುತ್ತದೆ. ಉದ್ಯಮಿಗಳು ತಮ್ಮ ಆನ್‌ಲೈನ್ ವ್ಯವಹಾರವನ್ನು ವಿಸ್ತರಿಸಬೇಕಾಗುವಜದು. ಪರೀಕ್ಷೆ ಬರೆಯಲು, ಪರೀಕ್ಷೆಗೆ ಹುರುಪಿನಿಂದ ತಯಾರಿ ನಡೆಸಲಿರುವ ಯುವಕರಿಗೆ ಈ ವಾರ ಉತ್ತಮ. ಕುಟುಂಬದಲ್ಲಿ ಮದುವೆಗೆ ಸಂಬಂಧಿಸಿದ ಕೆಲಸಗಳು ಪೂರ್ಣಗೊಳ್ಳಬಹುದು. ಇದು ಸಂತೋಷಕ್ಕೆ ಕಾರಣವಾಗುತ್ತದೆ. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ, ದುರ್ವ್ಯಸನವು ಮಾರಣಾಂತಿಕ ಕಾಯಿಲೆಯ ರೂಪವನ್ನು ತೆಗೆದುಕೊಳ್ಳಬಹುದು. ಈ ಅಭ್ಯಾಸವನ್ನು ಬಿಡಿ. ವಿವಾಹ ವಿಳಂಬವಾದರೂ ತೊಂದರೆ ಇಲ್ಲ, ಬಂದ ಸಂಬಂಧವನ್ನು ಒಪ್ಪಿಕೊಳ್ಳಿ.

ಮೀನ ರಾಶಿ : ಮೇ ತಿಂಗಳ ಮೂರನೇ ವಾರವು ಹನ್ನೆರಡನೇ ರಾಶಿಯವರಿಗೆ ಮಿಶ್ರಫಲ. ಉದ್ಯಮಿಗಳು ತಮ್ಮ ವ್ಯವಹಾರದಲ್ಲಿ ಸರಿಯಾದ ಆದಾಯ ಬರುವ ಯೋಜನೆಗಳನ್ನು ಮಾಡಬೇಕು. ಈಗಿರುವುದರ ಮುಂದುವರಿಕೆಯಾದರೆ ಉತ್ತಮ. ಯುವಕರು ಸೃಜನಾತ್ಮಕ ಕೆಲಸಗಳತ್ತ ಗಮನ ಹರಿಸಬೇಕು. ಕಲಾ ಪ್ರದರ್ಶನಕ್ಕೆ ಇದು ಸೂಕ್ತ ಸಮಯ. ಪಾಲಕರು ತಮ್ಮ ಚಿಕ್ಕ ಮಕ್ಕಳನ್ನು ಅಧ್ಯಯನದಲ್ಲಿ ಬೆಂಬಲಿಸಬೇಕು, ಅವರ ಕೆಟ್ಟ ಅಭ್ಯಾಸಗಳನ್ನು ಸುಧಾರಿಸಲು ಇದು ಸರಿಯಾದ ಸಮಯ. ಸರಿಯಾದ ಜೀವನ ಕ್ರಮದಿಂದ ಆಯಾಸಗಳು ದೂರವಾಗುವುದು. ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಕುಟುಂಬದವರೂ ಸುತ್ತಾಡಬಹುದು, ಕುಟುಂಬದಲ್ಲಿ ಸಂತೋಷ ಇರುತ್ತದೆ.

-ಲೋಹಿತ ಹೆಬ್ಬಾರ್ – 8762924271 (what’s app only)