AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope in Kannada: ವಾರ ಭವಿಷ್ಯ: ಆಗಸ್ಟ್ ತಿಂಗಳ ಈ ವಾರವು ನಿಮಗೆ ಪೂರ್ಣ ಹಿತಕರವಲ್ಲ

ಆಗಸ್ಟ್ 18ರಿಂದ 25ರ ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಶುಭ. ಏಕಾದಶದಲ್ಲಿ ಇರುವ ಗುರುವಿನ ಪ್ರಭಾವದ ಮೇಲೆ ಸಂಕಷ್ಟಗಳು ದೂರಾಗುವುದು. ನಿಮ್ಮ ಮೇಲೆ ಯಾರಾದರೂ ಪ್ರಭಾವ ಬೀರುವ ಸಾಧ್ಯತೆ ಇದೆ. ಈ ವಾರ ಕ್ಷಣಿಕ ಭಾವನೆಗಳ ಆಧಾರದ ಮೇಲೆ ಆತುರದ ನಿರ್ಧಾರವನ್ನು ಮಾಡುವಿರಿ. ಆಗಸ್ಟ್ ತಿಂಗಳಲ್ಲಿ ಯಾವ ರಾಶಿಗೆ ಮಿಶ್ರ ಫಲವಿರಲಿದೆ ತಿಳಿಯಿರಿ.

Weekly Horoscope in Kannada: ವಾರ ಭವಿಷ್ಯ: ಆಗಸ್ಟ್ ತಿಂಗಳ ಈ ವಾರವು ನಿಮಗೆ ಪೂರ್ಣ ಹಿತಕರವಲ್ಲ
ವಾರ ಭವಿಷ್ಯ: ಆಗಸ್ಟ್ ತಿಂಗಳ ಈ ವಾರವು ನಿಮಗೆ ಪೂರ್ಣ ಹಿತಕರವಲ್ಲ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Aug 18, 2024 | 12:10 AM

Share

ಆಗಸ್ಟ್‌ ತಿಂಗಳ ಮೂರನೇ ವಾರ ಆಗಸ್ಟ್​ 18 ರಿಂದ 25 ರವರೆಗೆ ಇರಲಿದೆ. ಸೂರ್ಯನು ಸ್ವರಾಶಿಯಾದ ಸಿಂಹವನ್ನು ಪ್ರವೇಶಿಸಿದ್ದಾನೆ. ಗ್ರಹಗಳ ರಾಜನಾದ ಇವರು ಉನ್ನತ ಸ್ತರಗಳಲ್ಲಿ ಫಲವನ್ನು ನೀಡುವನು. ಸೂರ್ಯನು ಉತ್ತಮ‌ಸ್ಥಾನಕ್ಕೆ ಕರೆದುಕೊಂಡು ಹೋಗಿ ಯಶಸ್ಸನ್ನು ಕೊಡಿಸುವನು. ಜೊತೆಗೆ ಬುಧನಿರುವ ಕಾರಣ ಜಾಣತನದಿಂದ ಎಲ್ಲ ಕಾರ್ಯವನ್ನೂ ಮಾಡಿಸುವನು. ಎಲ್ಲರಿಗೂ ಹೊರಗಿನಿಂದ ಬಿಸಿಯನ್ನು ಕೊಡುವ ಸೂರ್ಯ, ಬದುಕಿಗೆ ತಂಪನ್ನು ನೀಡಲಿ.

ಮೇಷ ರಾಶಿ: ಆಗಷ್ಟ್ ತಿಂಗಳ ಮೂರನೇ ವಾರದಲ್ಲಿ ನೀವು ಶುಭವನ್ನು ನಿರೀಕ್ಷಿಸಬಹುದು. ಉತ್ತಮ‌ ಸ್ನೇಹಿತರ ಬೆಂಬಲವು ನಿಮಗೆ ಇದೆ. ನಿರುತ್ಸಾಹವನ್ನೂ ಸರಿಮಾಡಿಕೊಳ್ಳುವ ಮನೋಬಲವು ಈ ವಾರ ನಿಮಗೆ ಬರಲಿದೆ. ಮಕ್ಕಳಿಂದ ಚಿಂತೆ ದೂರವಾಗಿ, ನೆಮ್ಮದಿ‌ ಕಾಣುವಿರಿ. ಬೇಕಾಗಿರುವುದನ್ನು ನೀವು ಪಡೆದುಕೊಂಡು ಸುಖದಿಂದ ಇರುವಿರಿ. ಸಿಕ್ಕಿದ್ದರಲ್ಲಿ ಸಂತೋಷವನ್ನು ಅನುಭವಿಸುವುದು ಸೂಕ್ತ. ಸುಬ್ರಹ್ಮಣ್ಯನು ಸರ್ವತೋಮುಖದಿಂದ ಕಾಯುವನು.

ವೃಷಭ ರಾಶಿ: ಆಗಸ್ಟ್ ತಿಂಗಳ ಈ ವಾರವು ನಿಮಗೆ ಪೂರ್ಣ ಹಿತಕರವಲ್ಲ. ಆರೋಗ್ಯದ ಅಸಮತೋಲನದಿಂದ ನಿಮಗೆ ಕಷ್ಟವಾಗುವುದು. ಅನಗತ್ಯ ಒತ್ತಡವು ಕಾರ್ಯದಲ್ಲಿ ಹಿನ್ನಡೆ ತರಬಹುದು. ವ್ಯವಹಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವಾಗ ಜಾಗರೂಕತೆ ಅವಶ್ಯಕ. ಉದ್ಯಮವು ನಿರೀಕ್ಷಿತ ಲಾಭವನ್ನು ಪಡೆಯದೇ ಇರಬಹುದು. ಸ್ವಂತಿಕೆಯನ್ನು ಬಿಟ್ಟು ಬದುಕುವ ಸ್ಥಿತಿ ಬರಬಹುದು. ಸಂಗಾತಿಯ ಮಾತಿಗೆ ವಿರೋಧಗಳು ಹೆಚ್ಚಿರುವುದು. ಶುಕ್ರವಾರದಂದು ಮಹಾಲಕ್ಷ್ಮಿಯನ್ನು ಇಷ್ಟಾರ್ಥವನ್ನು ಪ್ರಾರ್ಥಿಸಿ, ಪೂಜಿಸಿ.

ಮಿಥುನ ರಾಶಿ: ಈ ವಾರವು ನಿಮಗೆ ಅಶುಭವೆನಿಸುವುದು. ನಿಮ್ಮ ಮೇಲಿನ ನಂಬಿಕೆಯು ಹುಸಿಯಾಗುವುದು. ಜನರು ದೀರ್ಘಕಾಲದ ಉದ್ವಿಗ್ನತೆ ಮತ್ತು ಒತ್ತಡಗಳಿಂದ ಪರಿಹಾರವನ್ನು ಕಾಣುವಿರಿ. ಕೆಲವರನ್ನು ನೀವು ದೂರವಿಡುವ ಕಡೆ ಗಮನಹರಿಸುವಿರಿ. ನಿಮ್ಮ ದೈನಂದಿನ ಹಣಕಾಸು ನಿರ್ವಹಣೆಯಲ್ಲಿ ಬುದ್ದಿವಂತಿಕೆಯನ್ನು ವ್ಯಾಯಾಮ ಮಾಡಿ. ಹಿತಶತ್ರುಗಳನ್ನು ಗುರುತಿಸುವುದು ಕಷ್ಟವಾಗುವುದು. ನಿಮ್ಮ ಹರ್ಷಚಿತ್ತದ ಮನೋಭಾವವು ನಿಮ್ಮ ಸುತ್ತಲಿರುವವರಿಗೆ ಸಂತೋಷ ಮತ್ತು ಸಕಾರಾತ್ಮಕತೆಯನ್ನು ಹರಡುತ್ತದೆ. ಹತಾಶೆಯಿಂದ ನೀವು ಹೊರಬರವುದು ಅನಿವಾರ್ಯವಾದೀತು. ಲಕ್ಷ್ಮೀನಾರಾಯಣರ ಆರಾಧನೆಯಿಂದ ನೆಮ್ಮದಿ ಕಾಣುವಂತೆ ಆಗುವುದು.

ಕರ್ಕಾಟಕ ರಾಶಿ: ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಶುಭ. ಏಕಾದಶದಲ್ಲಿ ಇರುವ ಗುರುವಿನ ಪ್ರಭಾವದ ಮೇಲೆ ಸಂಕಷ್ಟಗಳು ದೂರಾಗುವುದು. ನಿಮ್ಮ ಮೇಲೆ ಯಾರಾದರೂ ಪ್ರಭಾವ ಬೀರುವ ಸಾಧ್ಯತೆ ಇದೆ. ಈ ವಾರ ಕ್ಷಣಿಕ ಭಾವನೆಗಳ ಆಧಾರದ ಮೇಲೆ ಆತುರದ ನಿರ್ಧಾರವನ್ನು ಮಾಡುವಿರಿ. ಇದು ನಿಮ್ಮ ಮಕ್ಕಳ ಯೋಗಕ್ಷೇಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಎಚ್ಚರಿಕೆಯಿಂದ ಹೆಜ್ಜೆ ಇಡಿ. ತಂದೆಯ ಜೊತೆ ಕಲಹವಾಗುವ ಸಾಧ್ಯತೆ ಇದೆ. ಬೇರೆಯವರ ಅವಲಂಬನೆಯನ್ನು ಬಿಡುವುದು ಒಳಿತು.

ಸಿಂಹ ರಾಶಿ: ಆಗಸ್ಟ್ ತಿಂಗಳ ಮೂರನೇ ವಾರದಲ್ಲಿ ನಿಮಗೆ ಮಿಶ್ರಫಲವು ಇರಲಿದೆ. ಜಾಡ್ಯದಿಂದ ನಿಮಗೆ ಸಿಗುವ ಅವಕಾಶಗಳು ತಪ್ಪಿಹೋಗುವುದು. ಕೋಪವನ್ನು ಕಡಿಮೆ‌ಮಾಡಿಕೊಳ್ಳಲು ಪ್ರಯತ್ನಿಸುವುದು ಮುಖ್ಯ. ಆದಾಯದಲ್ಲಿ ಕೊರತೆ ಕಾಣಿಸುವುದು. ಸುಲಭದ ಕಾರ್ಯವನ್ನು ಸಂಕೀರ್ಣ ಮಾಡಿಕೊಳ್ಳುವಿರಿ. ಯಾರ ಮೇಲೂ ನಂಬಿಕೆ ಬಾರದೇ ನಿಮ್ಮ ವ್ಯವಹಾರವನ್ನು ನೀವೇ ಮಾಡಿಕೊಳ್ಳಬೇಕಾಗುವುದು. ಆದಿತ್ಯ ಹೃದಯವನ್ನು ಶ್ರದ್ಧೆಯಿಂದ ಪಠಿಸಿ.

ಕನ್ಯಾ ರಾಶಿ: ರಾಶಿ ಚಕ್ರದ ಆರನೇ ರಾಶಿಯವರಿಗೆ ಈ ವಾರ ಶುಭ. ನಿಮ್ಮ ಆರೋಗ್ಯವನ್ನು ಉತ್ತಮವಾಗಿಸಿಕೊಳ್ಳಬೇಕು. ಎಲ್ಲರನ್ನೂ ಎದುರಿಸಿಕೊಂಡು ಇರುವುದು ಕಷ್ಟವಾಗುವುದು. ಭೂ ವಿವಾದದಿಂದ ಭಯವಾಗಲಿದೆ. ಸಾಲ ಪಡೆದ ವ್ಯಕ್ತಿಗಳು ಅವುಗಳನ್ನು ಮರುಪಾವತಿಸಲು ತೊಂದರೆಗಳನ್ನು ಎದುರಿಸಬಹುದು. ಪರೋಪಕಾರ ಸ್ವಭಾವದಿಂದ ಒಳ್ಳೆಯ ಅಭಿಪ್ರಾಯ ಇರುವುದು. ಪ್ರಭಾವಿ ವ್ಯಕ್ತಿಗಳ ಜೊತೆಗೆ ಸಂಪರ್ಕ ಸಾಧಿಸುವ ಅವಕಾಶವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಿ. ಈ ವಾರ ದೀರ್ಘಾವಧಿಯ ಯೋಜನೆಯ ಸಿದ್ಧತೆ ಮಾಡಿಕೊಳ್ಳಿರಿ. ಸಂಗಾತಿಯ ವಿಷಯದಲ್ಲಿ ಬೇಸರವಾಗಬಹುದು.

ತುಲಾ ರಾಶಿ: ರಾಶಿ ಚಕ್ರದ ಏಳನೇ ರಾಶಿಯವರಿಗೆ ಮಿಶ್ರಫಲ. ಪತ್ರವ್ಯವಹಾರದಲ್ಲಿ ನಿಮಗೆ ಕುಶಲತೆ ಇರುವುದು ಈ ವಾರ ಗೊತ್ತಾಗುವುದು. ಇನ್ನೊಬ್ಬರ ಮನವೊಲಿಸುವ ಪ್ರಯತ್ನವು ವಿಫಲವಾಗುವುದು. ಯಾವುದಾದರೂ ಘಟನೆಯು ಸ್ವಾಭಿಮಾನಕ್ಕೆ ತೊಂದರೆ ಕೊಟ್ಟೀತು. ಎಂದೋ ಕೊಟ್ಟ ನಿಮ್ಮ ವಸ್ತುವು ಈ ವಾರ ಮರಳಿ ಬರಲಿದೆ. ನಿಮ್ಮ ನಿರ್ಧಾರಗಳು ನೌಕರರ‌ ಮೇಲೆ‌ ವಿಪರೀತ ಪರಿಣಾಮವನ್ನು ಬೀರುವುದು. ಈ ವಾರದಲ್ಲಿ ಮಾತಿಗೆ ತಪ್ಪುವ ಅವಕಾಶಗಳು ಹೆಚ್ಚು ಕಾಣಿಸುವುದು. ಸವತ್ಸ ಗೋವಿಗೆ ಪೂಜೆ ಸಲ್ಲಿಸಿ.

ವೃಶ್ಚಿಕ ರಾಶಿ; ಆಗಸ್ಟ್ ತಿಂಗಳ ಮೂರನೇ ವಾರ ನಿಮಗೆ ಶುಭ. ಎಲ್ಲದರಲ್ಲಿಯೂ ಅಂತರ ಕಾಯ್ದುಕೊಂಡು ನಿಮ್ಮ ಕಾರ್ಯವನ್ನು ಪೂರ್ಣ ಮಾಡಿಕೊಳ್ಳುವಿರಿ. ಕೆಲಸವಿದ್ದಾಗ ಮಾತ್ರ ನಿಮ್ಮ ಸ್ಥಾನವನ್ನು ಬಿಡುವುದು ಸೂಕ್ತ. ಈ ವಾರದಲ್ಲಿ ಯಾರಾದರೂ ನಿಮಗೆ ಆಗಬಾರದ ಮಾತುಗಳನ್ನು ಆಡುವರು. ಮನೋರಂಜನೆಗೆ ಅವಕಾಶವನ್ನು ಮಾಡಿಕೊಳ್ಳುವಿರಿ. ಮಕ್ಕಳಿಗಾಗಿ ಓಡಾಟ ಮಾಡಬೇಕಾದೀತು. ಜಾಗರೂಕತೆಯಿಂದ ವ್ಯವಹಾರ ಮಾಡುವುದು ಅನಿವಾರ್ಯವಾಗಲಿದೆ. ಸುಮಂಗಲಿಯರಿಗೆ ಭೋಜನ‌ ಮಾಡಿಸಿ.

ಧನು ರಾಶಿ: ಈ ರಾಶಿಯವರಿಗೆ ಈ ವಾರ ಅಶುಭ ಫಲ. ಕಬ್ಬಿಣ ಕಾದಾಗಲೇ ಅದಕ್ಕೆ ಕೊಡಬೇಕಾದ ರೂಪವನ್ನು ಕೊಡುವುದು ಉತ್ತಮ. ಯುಕ್ತಿಯಿಂದ ಸಾಧಿಸಲು ಸಾಧ್ಯವಾಗುವುದನ್ನು ಶಕ್ತಿಯಿಂದ ಮಾಡುವುದು ಬೇಡ. ನಿಮಗೆ ನಂಬಿಕೆ ಕಡಿಮೆ. ಎಲ್ಲವನ್ನೂ ಅನುಕರಣೆ ಮಾಡುವಿರಿ ಅಷ್ಟೇ. ನೇರ ಮಾತುಗಳನ್ನು ಆಡಿದ ಮಾತ್ರ ನಡೆಯೂ ನೇರವಾಗಿರಬೇಕೆಂದಿಲ್ಲ. ನಿಮ್ಮ ಕರ್ತವ್ಯವನ್ನು ಲೋಪ ಮಾಡದೇ ನಿರ್ವಹಿಸಿ. ಅನಗತ್ಯ ಸಲಹೆಗಳನ್ನು ನೀವು ಕೇಳಿ ಚಿಂತೆಗೊಳ್ಳುವಿರಿ. ಯಾವುದಾದರೂ ರಮಣೀಯ ಸ್ಥಳಗಳಿಗೆ ಹೋಗಿ‌ ಮನಸ್ಸು ಖಾಲಿ ಮಾಡಿ ಬನ್ನಿ. ಪುಣ್ಯಾತ್ಮರ ಪರಿಚಯವೂ ಆಗುವುದು. ಗುರುಚರಿತ್ರೆಯನ್ನು ಪಠಿಸಿ.

ಮಕರ ರಾಶಿ: ಈ ರಾಶಿಯವರಿಗೆ ಆಗಸ್ಟ್ ತಿಂಗಳ ಈ ವಾರ ಶುಭ. ಕೆಲವರ ಮಾತು ನಿಮ್ಮ ಅಸ್ತಿತ್ವಕ್ಕೆ ಸವಾಲಾಗಬಹುದು. ಉತ್ತಮ ಸ್ನೇಹಿತರ ಲಾಭವಾಗಲಿದೆ. ಭವ್ಯವಾದ ಯೋಜನೆಗಳು ಮತ್ತು ಆಲೋಚನೆಗಳನ್ನು ಹೊಂದಿರುವ ವ್ಯಕ್ತಿಗಳ ಬಗ್ಗೆ ಗಮನವಿರಲಿ. ನಿಮ್ಮ ಮಾತುಗಳನ್ನು ಕೇಳುವ ಸಹನೆ ಯಾರಿಗೂ ಇರದು. ಯಾವುದೇ ಹೂಡಿಕೆಗಳನ್ನು ಪರಿಗಣಿಸುವ ಮೊದಲು ಅವರ ವಿಶ್ವಾಸಾರ್ಹತೆ ಮತ್ತು ದೃಢೀಕರಣವನ್ನು ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಿ. ಈ ವಾರ ಹೆಚ್ಚು ಮೌನವೇ ಲೇಸು. ರುದ್ರನಿಗೆ ಪ್ರಿಯವಾದ ಅಭಿಷೇಕವನ್ನು ವಿವಿಧ ವಸ್ತುಗಳಿಂದ ಮಾಡಿಸಿ.

ಕುಂಭ ರಾಶಿ: ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಈ ವಾರ ಶುಭ. ನಿಮ್ಮ ಉದಾರ ಮನೋಭಾವವು ಯಾವುದೋ ರೀತಿಯಲ್ಲಿ ಕಾರ್ಯವನ್ನು ಮಾಡುತ್ತದೆ. ಈ ವಾರ ಸಾಮಾಜಿಕ ಕಾರ್ಯಗಳಿಗೆ ಹೆಚ್ಚು ಒತ್ತು ನೀಡುವಿರಿ. ಇತರರ ಬಗ್ಗೆ ಆಲೋಚಿಸಲೂ ನಿಮಗೆ ಸಮಯ ಸಿಗದು. ಸಂಗಾತಿಯ ದುಃಖವನ್ನು ನಿವಾರಿಸುವ ಪ್ರಯತ್ನದಲ್ಲಿ ಯಶಸ್ವಿಯಾಗುವಿರಿ. ಕಪ್ಪು ತಿಲವನ್ನು ಸಂಕಲ್ಪ ಪೂರ್ವಕವಾಗಿ ದಾನ‌ ಮಾಡಿ.

ಮೀನ ರಾಶಿ: ಆಗಸ್ಟ್ ತಿಂಗಳ ಮೂರನೇ ವಾರ ಈ ರಾಶಿಯವರಿಗೆ ಮಿಶ್ರ ಫಲ. ಈ ವಾರದಲ್ಲಿ ಸ್ನೇಹಿತರ ಜೊಯೆ ಸುಂದರ ಸಮಯವನ್ನು ಕಳೆಯುವರು. ಹಣಕಾಸಿನ ಕೊರತೆ ಕಂಡುಬಂದರೂ ಅನಂತರ ಅದು ಅನಿರೀಕ್ಷಿತವಾಗಿ ಸರಿಯಾಗುವುದು. ಒಳ್ಳೆಯವರಿಗೆ ಒಳ್ಳೆಯ ಮನಸ್ಸಿನಿಂದ ದಾನ ಮಾಡುವಿರಿ. ಹೊಸಬರ ಭೇಟಿಯು ನಿಮಗೆ ಆಹ್ಲಾದವನ್ನೂ ಉತ್ಸಾವನ್ನೂ ಕೊಡುವುದು. ನಿಮ್ಮ ಯೋಜನೆಗಳು ಪೂರ್ಣತೆಯನ್ನು ಬಹಳ ಬಲದಿಂದ ಕಾಣುವುದು. ಗೋಪೂಜೆಯಿಂದ ಮನಸ್ಸಿಗೆ ನೆಮ್ಮದಿ ಇದೆ.

ಲೋಹಿತ ಹೆಬ್ಬಾರ್ – 8762924271 (what’s app only)

ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು