Weekly Job Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಉದ್ಯೋಗ ಭವಿಷ್ಯ ಇಲ್ಲಿ ತಿಳಿಯಿರಿ

ಜೂನ್ 21ರಿಂದ 27ರವರೆಗೆ ಈ ತಿಂಗಳ ನಾಲ್ಕನೇ ವಾರವು ಉದ್ಯೋಗ ಮತ್ತು ವೃತ್ತಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿದೆ. ಕೆಲವರಿಗೆ ಶುಭಫಲಗಳಿದ್ದರೆ, ಮತ್ತೆ ಕೆಲವರು ತಾಳ್ಮೆಯಿಂದ ನಿರ್ಧಾರ ಕೈಗೊಳ್ಳಬೇಕಾಗಬಹುದು. ರಾಶಿಗಳಿಗೆ ಅನುಗುಣವಾಗಿ ವೃತ್ತಿ ಅವಕಾಶಗಳು, ಆರ್ಥಿಕ ಪ್ರಗತಿ ಮತ್ತು ಸೃಜನಶೀಲ ವಾತಾವರಣ ಸೃಷ್ಟಿಯಾಗಲಿದೆ. ದುಡುಕದೆ, ಸೂಕ್ತ ಸಮಯಕ್ಕಾಗಿ ಕಾಯುವುದು ಯಶಸ್ಸಿಗೆ ಮುಖ್ಯ.

Weekly Job Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಉದ್ಯೋಗ ಭವಿಷ್ಯ ಇಲ್ಲಿ ತಿಳಿಯಿರಿ
ಉದ್ಯೋಗ ಭವಿಷ್ಯ
Image Credit source: Getty Images
Edited By:

Updated on: Jun 21, 2026 | 11:50 AM

ಜೂನ್ 21ರಿಂದ ಜೂನ್‌ 27ರವರೆಗೆ ಈ ತಿಂಗಳ ನಾಲ್ಕನೇ ವಾರವಾಗಿದ್ದು ಉದ್ಯೋಗಾಧಿಪತಿ ಮತ್ತು ಉದ್ಯೋಗಸ್ಥಾನಧಿಪತಿಗಳ ಸಂಯೋಗದಿಂದ ಕೆಲವರಿಗೆ ಅತ್ಯಂತ ಶುಭಫಲ‌ ಹಾಗೂ ಶುಭ ಸಮಾಚಾರಗಳು ಇರಲಿವೆ. ದುಡುಕಿ ನಿಮ್ಮ ನಿರ್ಧಾರಗಳನ್ನು ಹಾಳುಮಾಡುಕೊಳ್ಳುವುದು ಬೇಡ. ಸಮಯ ನಿರೀಕ್ಷೆಯಿಂದ ಎಲ್ಲವೂ ಸಾಧ್ಯ.

​ಮೇಷ ರಾಶಿ:

ದ್ವಿತೀಯದಲ್ಲಿ ಮಂಗಳನಿದ್ದಾನೆ. ಬ್ಯಾಂಕಿಂಗ್, ಆರ್ಥಿಕ ಸಂಸ್ಥೆ ಹಾಗೂ ಭೂಮಿ ಮಾರಾಟದ ಉದ್ಯಮಿಗಳಿಗೆ ಧನಲಾಭದ ಯೋಗವಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರಶಂಸೆ ದೊರೆತು, ಕಾರ್ಯಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ.

​ವೃಷಭ ರಾಶಿ:

ಸ್ವರಾಶಿಯಲ್ಲಿ ಮಂಗಳನ ಉಪಸ್ಥಿತಿಯಿದೆ. ಸ್ವತಂತ್ರ ಉದ್ಯಮ, ಯಾಂತ್ರಿಕ ಕ್ಷೇತ್ರ ಹಾಗೂ ಕೃಷಿ ಸಂಬಂಧಿತ ಉದ್ಯೋಗಿಗಳಿಗೆ ಇದು ಅತ್ಯಂತ ಸೃಜನಶೀಲ ವಾರ. ಹೊಸ ಯೋಜನೆಗಳನ್ನು ಧೈರ್ಯದಿಂದ ಆರಂಭಿಸಲು ಸೂಕ್ತ ಸಮಯವಾಗಿದೆ.

​ಮಿಥುನ ರಾಶಿ:

ನಿಮ್ಮ ರಾಶಿಯಲ್ಲಿ ಸೂರ್ಯನಿದ್ದಾನೆ. ಸರ್ಕಾರಿ ಅಧಿಕಾರಿಗಳಿಗೆ, ಆಡಳಿತ ವಿಭಾಗದವರಿಗೆ ಹಾಗೂ ರಾಜಕೀಯ ರಂಗದಲ್ಲಿರುವವರಿಗೆ ಉನ್ನತ ಗೌರವ ಸಿಗಲಿದೆ. ನಾಯಕತ್ವ ಗುಣದಿಂದಾಗಿ ಮೇಲಧಿಕಾರಿಗಳ ಸಂಪೂರ್ಣ ಬೆಂಬಲ ನಿಮ್ಮದಾಗಲಿದೆ.

​ಕರ್ಕಾಟಕ ರಾಶಿ :

ಬುಧ, ಶುಕ್ರ ಮತ್ತು ಗುರುಗಳು ನಿಮ್ಮ ರಾಶಿಯಲ್ಲಿದ್ದಾರೆ. ಕಲೆ, ಸಾಹಿತ್ಯ, ಶಿಕ್ಷಣ ಕ್ಷೇತ್ರ, ಚಿನ್ನದ ವ್ಯಾಪಾರ ಹಾಗೂ ಸಂಶೋಧಕರಿಗೆ ಈ ವಾರ ಸುವರ್ಣಾವಕಾಶ ತರಲಿದೆ. ಪ್ರಗತಿಯೊಂದಿಗೆ ಆರ್ಥಿಕ ಸ್ಥಿತಿ ಭದ್ರವಾಗುತ್ತದೆ.

ಸಿಂಹ ರಾಶಿ :

ನಿಮ್ಮ ರಾಶಿಯಲ್ಲಿ ಕೇತು ಇದ್ದಾನೆ. ಆಧ್ಯಾತ್ಮಿಕ ಕ್ಷೇತ್ರ, ಕೌನ್ಸಿಲಿಂಗ್, ಯೋಗ ತರಬೇತುದಾರರು ಹಾಗೂ ಕರಕುಶಲ ಉದ್ಯೋಗಿಗಳಿಗೆ ಉತ್ತಮ ಯಶಸ್ಸು ಸಿಗಲಿದೆ. ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ವರ್ತಿಸುವುದು ಪ್ರಗತಿಗೆ ಪೂರಕವಾಗುತ್ತದೆ.

​ಕನ್ಯಾ ರಾಶಿ :

ರಾಶ್ಯಾಧಿಪತಿ ಬುಧನು ಕರ್ಕಾಟಕದಲ್ಲಿದ್ದಾನೆ. ಮಾಹಿತಿ ತಂತ್ರಜ್ಞಾನ, ಮಾಧ್ಯಮ, ಲೇಖಕರು ಹಾಗೂ ಲೆಕ್ಕಪರಿಶೋಧನೆ ರಂಗದವರಿಗೆ ನವೀನ ಅವಕಾಶಗಳು ಸೃಷ್ಟಿಯಾಗಲಿವೆ. ನಿಮ್ಮ ಸಂವಹನ ಕಲೆಗೆ ಉತ್ತಮ ಮನ್ನಣೆ ದೊರೆಯುತ್ತದೆ.

​ತುಲಾ ರಾಶಿ:

ಶುಕ್ರನು ಕರ್ಕಾಟಕದಲ್ಲಿ ಮಿಂಚುತ್ತಿದ್ದಾನೆ. ಫ್ಯಾಷನ್ ಡಿಸೈನಿಂಗ್, ಸೌಂದರ್ಯ ವರ್ಧಕ ವ್ಯಾಪಾರ, ಹೋಟೆಲ್ ಉದ್ಯಮ ಹಾಗೂ ಚಿತ್ರರಂಗದ ಉದ್ಯೋಗಿಗಳಿಗೆ ಅದ್ಭುತ ಲಾಭ ಕಾಯ್ದಿರಿಸಿದೆ. ಕೀರ್ತಿ ಮತ್ತು ಸೌಭಾಗ್ಯಗಳು ಹೆಚ್ಚಲಿವೆ.

​ವೃಶ್ಚಿಕ ರಾಶಿ:

ಚಂದ್ರನು ನಿಮ್ಮ ರಾಶಿಯಲ್ಲಿದ್ದಾನೆ. ಹಾಲಿನ ಉತ್ಪನ್ನಗಳು, ಜಲಸಾರಿಗೆ, ವೈದ್ಯಕೀಯ ರಂಗ ಹಾಗೂ ಮಾನವ ಸಂಪನ್ಮೂಲ ವಿಭಾಗದ ಉದ್ಯೋಗಿಗಳಿಗೆ ಶುಭ ತರಲಿದೆ. ಮಾನಸಿಕ ಉತ್ಸಾಹದಿಂದ ಕೆಲಸ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳಲಿವೆ.

ಇದನ್ನೂ ಓದಿ: ಕೇತುವಿನ ಮೇಲಿದೆ ಕುಜನ ದೃಷ್ಟಿ: ಯಾರಿಗೆ ಒಲಿಯಲಿದೆ ಪೂರ್ಣ ರಾಜಯೋಗ? ಯಾರಿಗೆ ಧನಲಾಭ?

​ಧನು ರಾಶಿ:

ಲಗ್ನದಲ್ಲೇ ರಾಶಿ ನಕ್ಷತ್ರವಿದ್ದು, ಗುರು ಭಾಗ್ಯದಲ್ಲಿದ್ದಾನೆ. ಶಿಕ್ಷಕರು, ಉಪನ್ಯಾಸಕರು, ಕಾನೂನು ಸಲಹೆಗಾರರು ಹಾಗೂ ಧಾರ್ಮಿಕ ಮುಖಂಡರಿಗೆ ಗೌರವದ ವಾರವಿದು. ದೀರ್ಘಾವಧಿ ಹೂಡಿಕೆಗಳು ಉದ್ಯೋಗದಲ್ಲಿ ಉತ್ತಮ ಲಾಭವನ್ನು ತಂದುಕೊಡಲಿವೆ.

ಮಕರ ರಾಶಿ:

ಶನಿಯು ತೃತೀಯದಲ್ಲಿದ್ದಾನೆ. ತಾಂತ್ರಿಕ ಕ್ಷೇತ್ರ, ಗಣಿಗಾರಿಕೆ, ಕಾರ್ಖಾನೆಗಳ ಮಾಲೀಕರು ಹಾಗೂ ಕಠಿಣ ಶ್ರಮದ ಉದ್ಯೋಗಿಗಳಿಗೆ ಸ್ಥಿರವಾದ ಪ್ರಗತಿ ಸಿಗಲಿದೆ. ಶಿಸ್ತು ಮತ್ತು ಸಮಯಪ್ರಜ್ಞೆ ನಿಮ್ಮನ್ನು ಯಶಸ್ಸಿನ ಉನ್ನತ ಶಿಖರಕ್ಕೆ ಮುನ್ನಡೆಸುತ್ತದೆ.

ಕುಂಭ ರಾಶಿ:

ನಿಮ್ಮ ರಾಶಿಯಲ್ಲಿ ರಾಹು ಇದ್ದಾನೆ. ಬಹುರಾಷ್ಟ್ರೀಯ ಕಂಪನಿಗಳು, ತಂತ್ರಜ್ಞಾನ ಆವಿಷ್ಕಾರ, ವಿದೇಶಿ ವ್ಯಾಪಾರ ಹಾಗೂ ಷೇರು ಮಾರುಕಟ್ಟೆಯ ಉದ್ಯೋಗಿಗಳಿಗೆ ಅನಿರೀಕ್ಷಿತ ಧನಲಾಭ ಸಿಗಲಿದೆ. ರಾಜತಾಂತ್ರಿಕ ನಡೆಗಳು ಯಶಸ್ಸು ನೀಡಲಿವೆ.

ಮೀನ ರಾಶಿ:

ರಾಶಿಯಲ್ಲಿ ಶನಿಯ ಸಂಚಾರವಿದೆ. ನ್ಯಾಯಾಂಗ, ಸಮಾಜ ಸೇವೆ, ರಕ್ಷಣಾ ಇಲಾಖೆ ಹಾಗೂ ಆಡಳಿತಾತ್ಮಕ ಉದ್ಯೋಗಗಳಲ್ಲಿ ಜವಾಬ್ದಾರಿಗಳು ಹೆಚ್ಚಲಿವೆ. ತಾಳ್ಮೆಯುಳ್ಳ ಕಠಿಣ ಪರಿಶ್ರಮವು ವಾರದ ಅಂತ್ಯಕ್ಕೆ ಅತ್ಯುತ್ತಮ ಫಲಿತಾಂಶವನ್ನು ನೀಡುತ್ತದೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ: 

Follow Us