AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Love Horoscope: ಕುಜ-ಶುಕ್ರ ಸಂಯೋಗದಿಂದ ಈ ರಾಶಿಯ ಪ್ರೇಮ ಸಂಬಂಧದಲ್ಲಿ ಪ್ರಮುಖ ಬದಲಾವಣೆ

ನವೆಂಬರ್ 23 ರಿಂದ 30 ರವರೆಗೆ ಕುಜ ಮತ್ತು ಶುಕ್ರರ ಸಂಯೋಗದಿಂದ ನಿಮ್ಮ ಪ್ರೇಮ ಜೀವನದಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಬದಲಾವಣೆಗಳು ನಿರೀಕ್ಷಿತ. ಈ ವಾರದ ಪ್ರೇಮ ಭವಿಷ್ಯವು ಪ್ರತಿ ರಾಶಿಯ ಪ್ರೀತಿ ಸಂಬಂಧಗಳ ಮೇಲೆ ಗ್ರಹಗಳ ಪ್ರಭಾವವನ್ನು ವಿವರಿಸುತ್ತದೆ. ನಿಮ್ಮ ಮನಸ್ಸಿನ ಮಾತುಗಳನ್ನು ಹೊರಹಾಕಲು ಮತ್ತು ಸಂಬಂಧಗಳಲ್ಲಿ ಸಮತೋಲನ ಕಂಡುಕೊಳ್ಳಲು ಇದು ಸೂಕ್ತ ಸಮಯ.

Weekly Love Horoscope: ಕುಜ-ಶುಕ್ರ ಸಂಯೋಗದಿಂದ ಈ ರಾಶಿಯ ಪ್ರೇಮ ಸಂಬಂಧದಲ್ಲಿ ಪ್ರಮುಖ ಬದಲಾವಣೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Nov 20, 2025 | 5:50 PM

Share

ನವೆಂಬರ್ 23 ರಿಂದ ನವೆಂಬರ್ 30 ವರೆಗೆ ಕುಜ ಹಾಗೂ ಶುಕ್ರರ ಸಂಯೋಗವಾಗುವ (Mars-Venus Conjunction) ಕಾರಣ ಪ್ರೀತಿಯ ಮೇಲೆ‌ ಕೆಲವರಿಗೆ ಸಕಾರಾತ್ಮಕ ಹಾಗೂ ನಕಾರಾತ್ಮಕ ಪರಿಣಾಮಗಳು ಬರುವ ಸಾಧ್ಯತೆ ಇದೆ. ಎಲ್ಲವನ್ನೂ ಸಾಧಿಸುತ್ತೇನೆ ಎಂಬ ಆತ್ಮಬಲವೂ ಅವರನ್ನು ಪ್ರೇರಿಸುತ್ತದೆ. ಈ ವಾರ ಪ್ರೀತಿ ಕೇವಲ ಸೌಂದರ್ಯ ಹಾವಭಾವಕ್ಕೆ ಮಾತ್ರವಲ್ಲ ಹಿನ್ನೆಲೆಯನ್ನೂ ಅದು ಬಯಸುತ್ತದೆ.

ಮೇಷ ರಾಶಿ :

ನವೆಂಬರ್ ತಿಂಗಳ ಈ ವಾರ ನಿಮ್ಮ ಮನಸ್ಸಿನಲ್ಲಿ ಕಾದಿದ್ದ ಮಾತುಗಳು ಹೊರಬರಲು ಅವಕಾಶ ಸಿಗುತ್ತದೆ. ಹಿಂದಿನ ವಾರಗಳಿಂದ ಉಳಿದ ಅಸಮಾಧಾನ ನಿಧಾನವಾಗಿ ಮಾಯವಾಗುತ್ತದೆ. ಈ ವಾರ ನಿಮಗೆ ಸ್ವಲ್ಪ ಸಿಟ್ಟಿನ ಸ್ವಭಾವ. ಆದರೆ ಈ ವಾರ ನಿಮ್ಮ ಮನಸ್ಸು ಮೃದುವಾಗಿ, ಕೇಳುವ ಗುಣ ಹೆಚ್ಚಾಗುತ್ತದೆ. ಈ ಬದಲಾವಣೆ ಸಂಗಾತಿಗೆ ಸಂತೋಷ ನೀಡುತ್ತದೆ. ಒಬ್ಬರೇ ಇರುವವರಿಗೆ ಹಳೆಯ ಪರಿಚಯದಲ್ಲಿರುವ ಮಂದಿಗೆ ನಿನ್ನ ಮನಸ್ಸು ಸೆಳೆಯುತ್ತದೆ. ಈ ವ್ಯಕ್ತಿ ನನಗೆ ಹತ್ತಿರವಾಗಬಹುದು ಅನ್ನುವ ಭಾವನೆ ಮೂಡುವುದು.

ವೃಷಭ ರಾಶಿ :

ಎರಡನೇ ರಾಶಿಯವರಿಗೆ ಈ ವಾರ ನೀವು ನಿಜವಾದ ಹೃದಯವನ್ನು ತೆರೆದಿಡಲು ಬಯಸುತ್ತೀರಿ. ಸಂಗಾತಿಯ ನಡೆ, ಮಾತು, ಕಾಳಜಿಯಲ್ಲೇ ನಿಮಗೆ ಭದ್ರತೆ ಕಾಣಿಸುತ್ತದೆ. ಹಳೆಯ ನೋವುಗಳನ್ನು ಹಿಡಿದುಕೊಂಡಿದ್ದರೆ, ಅವು ಬಿಟ್ಟುಹೋಗುವುದು. ಮನದಲ್ಲಿ ಸಂಗ್ರಹಿಸಿದ ಭಾರ ಕಡಿಮೆಯಾಗುತ್ತದೆ. ಈ ರಾಶಿಯವರಿಗೆ ಅತ್ಯಂತ ಗಾಢವಾಗಿ ಪ್ರೀತಿಸುವ ವ್ಯಕ್ತಿಯ ಪರಿಚಯವಾಗಲಿದೆ. ಮನಸ್ಸು ಮೃದುವಾಗಿಯೇ ಇರಲಿ. ಅನುಮಾನಗಳು ಸಹಜವಾಗಿ ಬರಲಿದ್ದು, ಅದನ್ನು ವಿಶ್ವಾಸವಾಗಿ ಪರಿವರ್ತಿಸಿ.

ಮಿಥುನ ರಾಶಿ :

ಈ ರಾಶಿವರಿಗೆ ಎಲ್ಲವೂ ಮಾತಿನ ಮೇಲೆ ನಿಂತಿರುವ ವಾರವಗಾಲಿದೆ. ನೀವು ಹೇಳುವ ಒಂದು ಮಾತೂ ನೀವು ಕೇಳದಿರುವ ಒಂದು ಮಾತೂ ಸಂಬಂಧದ ದಾರಿಗೆ ಬದಲಾವಣೆಯನ್ನು ತರಬಹುದು. ಮನಸ್ಸು ಚಂಚಲವಾಗಿದ್ದರೂ, ಈ ವಾರ ನೀವೇ ಶಾಂತವಾಗಿ ಮಾತನಾಡಲು ತಯಾರಾಗುತ್ತೀರಿ. ಸಂಗಾತಿ ನಿಮ್ಮ ಪ್ರಾಮಾಣಿಕತೆಯನ್ನು ಮೆಚ್ಚುತ್ತಾರೆ. ಸಂದೇಶ ಸಂಭಾಷಣೆ, ಇವುಗಳಿಂದ ಆದ ಸಣ್ಣ ಪರಿಚಯ ದೊಡ್ಡ ಕಲ್ಪನೆಗೆ ಕಾರಣವಾಗಬಹುದು. ಮುಚ್ಚಿಟ್ಟು ಹೇಳುವುದಕ್ಕಿಂತ, ನೇರವಾಗಿ ಹೇಳಿ. ತಪ್ಪುಗ್ರಹಿಕೆ ಕ್ಷಣದಲ್ಲಿ ದೂರಾಗುತ್ತದೆ.

ಕರ್ಕಾಟಕ ರಾಶಿ :

ನಾಲ್ಕನೇ ವಾರ ನಿಮ್ಮ ಮೃದು ಸ್ವಭಾವ ಮತ್ತು ಕಾಳಜಿ ಸಂಗಾತಿಗೆ ಮಮತೆಯಿಂದ ನಿಮಗೆ ಹತ್ತಿರವಾಗುವಂತೆ ಮಾಡುತ್ತದೆ. ಕುಟುಂಬದ ಸಂಬಂಧಗಳು ಮಹತ್ವವಿರುವಂತೆ, ಸಂಗಾತಿಯೂ ಅದನ್ನು ಗೌರವಿಸುತ್ತಾರೆ. ಕುಟುಂಬ ಮತ್ತು ಪ್ರೀತಿ ಎರಡೂ ಸಮವಾಗಿರಲಿ. ಒಬ್ಬರೇ ಇರುವವರು ಮನಸ್ಸಿಗೆ ಮುದ ನೀಡುವ, ಮನೆತನದ ಅಸ್ಮಿತೆಯನ್ನು ಹೆಚ್ಚಿಸುವ ಬಗ್ಗೆ ಯೋಚಿಸುವಿರಿ. ನೀವು ಒಳಗೊಳಗೇ ಅಳುಕು ಇದ್ದು ವ್ಯಕ್ತಪಡಿಸಲಾರಿರಿ.

ಸಿಂಹ ರಾಶಿ :

ನವೆಂಬರ್ ತಿಂಗಳ ಈ ವಾರ ನಿಮ್ಮ ಹೆಮ್ಮೆಯ ಗುಣದ ಜೊತೆಗೆ ಸೌಂದರ್ಯವೂ ಮುಖ್ಯವಾಗಲಿದೆ. ಸಂಗಾತಿ ನಿಮಗೆ ಹೆಚ್ಚು ಒಲಿಯುತ್ತಾರೆ. ಮನಸ್ಸು ಉಲ್ಲಾಸದಿಂದ ವಿಜೃಂಭಿಸುವುದು. ನೀವು ನೀಡುವ ಅಲ್ಪ ಗಮನವೂ ಸಂಗಾತಿಯನ್ನು ಸಂತೋಷಪಡಿಸುತ್ತದೆ. ಜೊತೆಗಿರುವ ಜಾಗದಲ್ಲಿ ಯಾರೋ ನಿಮ್ಮ ಮೇಲೆ ಕಣ್ಣು ಹಾಕಿರುವುದು ಗಮನಕ್ಕೆ ಬರುತ್ತದೆ. ಉದ್ವೇಗದ ಮಾತು, ಘರ್ಷಣೆ ತರುವ ವರ್ತನೆಯನ್ನು ಕಡಿಮೆ ಮಾಡಿ. ನಯವಾದ ಹಾದಿಯೇ ಉತ್ತಮ.

ಕನ್ಯಾ ರಾಶಿ :

ಬುಧನ ಆಧಿಪತ್ಯದ ಈ ರಾಶಿಯವರಿಗೆ ಪ್ರೀತಿಯ ಗೊಂದಲಗಳು ಕರಗುವ ವಾರ. ಸಂಬಂಧದಲ್ಲಿ ಒತ್ತಡ ಇದ್ದರೆ ಅದು ಕಡಿಮೆಯಾಗುತ್ತದೆ. ನಿಮ್ಮ ಪ್ರೀತಿಯನ್ನು ನಾನಾ ಬಗೆಯಲ್ಲಿ ವಿಶ್ಲೇಷಿಸುವ ಪ್ರವೃತ್ತಿಯಿಂದ ಮನಸ್ಸು ಸ್ವಲ್ಪ ವಿಶ್ರಾಂತಿ ಪಡೆಯುತ್ತದೆ. ಕೆಲಸದ ಮಧ್ಯದಲ್ಲಿ ಪರಿಚಿತರ ಮೂಲಕ ಹೊಸ ವ್ಯಕ್ತಿಗೆ ಮನಸ್ಸು ಒಲಿಯುತ್ತದೆ. ಎಲ್ಲವನ್ನೂ ಅಳೆಯಬೇಡಿ, ಕೆಲವು ಪ್ರೀತಿಯು ಕಾಲ ಕಳೆದಂತೆ ನಿಮ್ಮದಾಗಲಿದೆ.

ತುಲಾ ರಾಶಿ :

ರಾಶಿ ಚಕ್ರದ ಏಳನೇ ರಾಶಿಯವರಿಗೆ ಮಾಧುರ್ಯವು ಅತಿಯಾಗಬಹುದು. ಸಂಬಂಧದಲ್ಲಿ ಸೌಂದರ್ಯ‌ ಹಾಗೂ ಒಲವು ತುಂಬುತ್ತದೆ. ಸಂಗಾತಿಯಿಂದ ಹೆಚ್ಚಿನ ಕಾಳಜಿ ಮತ್ತು ಗೌರವ ಸಿಗುತ್ತದೆ. ಕೆಲವರಿಗೆ ಪ್ರೀತಿಯ ನೂತನ ವರಸೆ ಇರಷ್ಟವಾಗುವುದು. ಒಬ್ಬರೇ ಇರುವವರು ಹೊಸ ಜಾಗದಲ್ಲಿ ಕಾಣುವ ವ್ಯಕ್ತಿಯು ಮನಸ್ಸಿಗೆ ಮುದ ಹೊರಿಸುತ್ತದೆ. ಹಿಂಜರಿಯದೇ ಕೈ ಹಿಡಿಯುವ ಧೈರ್ಯ ಮಾಡಿ.

ಇದನ್ನೂ ಓದಿ: ನ. 16 ರಿಂದ 22 ವರೆಗೆ ಹೇಗಿರಲಿದೆ ನಿಮ್ಮ ಲವ್ ಲೈಫ್? 12 ರಾಶಿಗಳ ಪ್ರೇಮ- ಪ್ರೀತಿ ಭವಿಷ್ಯ ಇಲ್ಲಿದೆ

ವೃಶ್ಚಿಕ ರಾಶಿ :

ಎಂಟನೇ ರಾಶಿಯವರಿಗೆ ಈ ವಾರ ಭಾವನೆಗಳ ತೀವ್ರತೆ ಹೆಚ್ಚಿರುತ್ತದೆ. ಆದರೆ ಈ ತೀವ್ರತೆ ಸಂಬಂಧಕ್ಕೆ ಬಲವೂ ಕೊಡುತ್ತದೆ. ನೀವು ಮನದಾಳದಿಂದ ಯಾರನ್ನಾದರೂ ಪ್ರೀತಿಸಿದರೆ, ಅದು ಈ ವಾರ ಸ್ಪಷ್ಟವಾಗಿ ಗೋಚರಿಸುತ್ತದೆ. ಸಂಗಾತಿಯು ನಿಮ್ಮ ಪ್ರೀತಿಯನ್ನು ಪರೀಕ್ಷೆಯ ಮೂಲಕ ಅರ್ಥಮಾಡಿಕೊಳ್ಳುತ್ತಾರೆ. ನಿಮಗೆ ಹತ್ತಿರವಾಗುವ ಗುಣಗಳಿರುವ ವ್ಯಕ್ತಿಯ ಪರಿಚಯ. ಸ್ವಾಮಿತ್ವವನ್ನು ಕಡಿಮೆ ಮಾಡಿ, ಪ್ರೀತಿಯ ಭಯವಿಲ್ಲದೆ ಬಿಡಿ.

ಧನು ರಾಶಿ :

ಈ ವಾರ ಪ್ರೀತಿ ಜೀವನದಲ್ಲಿ ನಗು, ಚೈತನ್ಯ, ಹೊಸ ಚಲನೆಗಳು ನಿಮ್ಮ ಸುತ್ತಲಿನವರಿಗೆ ಗೊತ್ತಾಗುವುದು. ಮನಸ್ಸು ಸ್ವತಂತ್ರ, ಒಲವಿನಿಂದ ಹೊಳೆಯುತ್ತದೆ. ಸಂಗಾತಿಯೊಡನೆ ಸಣ್ಣ ಸಾಹಸ ಮಾಡುವಿರಿ. ನಿಮ್ಮ ಮಧುರ ಕ್ಷಣಗಳನ್ನು ಹಂಚಿಕೊಳ್ಳುವಿರಿ. ಒಬ್ಬರೇ ಇರುವವರಿಗೆ ಹಾಸ್ಯದ ಮಾತು, ಉತ್ಸಾಹಭರಿತ ನೋಟ, ಮೊದಲ ಕ್ಷಣದ ಆಕರ್ಷಣೆಯಾಗುವುದು. ಮನಸ್ಸನ್ನು ತೆರೆದಿಡಿ. ಹೊಸತನ್ನು ಸ್ವೀಕರಿಸಲು ಹೆದರಬೇಡಿ.

ಮಕರ ರಾಶಿ :

ಈ ವಾರ ನಿಮ್ಮ ಸಂಬಂಧವನ್ನು ಗಂಭೀರವಾಗಿ ಪರಿಗಣಿಸುವ ಹಂತ. ಭವಿಷ್ಯದ ಯೋಚನೆಗಳು. ನೀವು ಎದುರಿನಲ್ಲಿ ಎಷ್ಟೇ ಮಾತನಾಡಿದರೂ ಹಿಂಬದಿಯಲ್ಲಿ ಸುಮ್ಮನಿರುವಿರಿ. ಸಂಗಾತಿಗೆ ಇದೇ ಪ್ರಿಯವೂ ಆಗಲಿದೆ. ನಿಧಾನವಾಗಿ ನಂಬಿಕೆ ಮೂಡಿಸುವ ವ್ಯಕ್ತಿ ಪರಿಚಯ. ನೀವು ಕೊಡುವ ಉಡುಗೊರೆ ನಿಮಗೇ ಸಣ್ಣದೆನಿಸುವುದು. ಭಾವನೆಗಳನ್ನು ಹಂಚಿಕೊಂಡರೆ ಬಂಧನ ಬಲವಾಗುತ್ತದೆ. ಸಂದೇಶಗಳಿಂದ ಭಾವ ವಿನಿಮಯ ಹೆಚ್ಚಾಗುವುದು.

ಕುಂಭ ರಾಶಿ :

ರಾಶಿ ಚಕ್ರದ ಈ ರಾಶಿಯವರಿಗೆ ನಾಲ್ಕನೇ ವಾರ ಸ್ನೇಹದಿಂದ ಪ್ರೀತಿಯ ಬಣ್ಣ ಬದಲಾಗುವುದು. ಪರಸ್ಪರದ ಆಲೋಚನೆಗಳು ಒಂದಾಗುತ್ತವೆ. ಹೊಸ ಚಟುವಟಿಕೆ ಹಾಗೂ ಪ್ರಯತ್ನಗಳು ಸಂಗಾತಿಯೊಂದಿಗೆ ಒಗ್ಗಟ್ಟನ್ನು ಹೆಚ್ಚಿಸುತ್ತವೆ. ಈ ವಾರ ಆಪ್ತನಾದ ಸ್ನೇಹಿತನೇ ಮನಸ್ಸಿನಲ್ಲಿ ಗುಪ್ತವಾಗಿ ಹಿಡಿದಿಟ್ಟಿದ್ದ ಪ್ರೀತಿಯನ್ನು ಹೇಳಬಹುದು. ಕಂಠಶೋಷಣೆಗಿಂತ ಹೃದಯದ ಮಾತಿಗೆ ಕಿವಿಯಾಗಿ.

ಮೀನ ರಾಶಿ :

ಈ ವಾರ ನಿಮಗೆ ಪ್ರೀತಿಪಾತ್ರರ ಜೊತೆ ಅನುರಾಗ, ಮೃದು ಭಾವನೆ, ಕನಸಿನಂತಿರುವ ಕ್ಷಣಗಳು ಸೇರಿಕೊಳ್ಳುವುವು. ಸಂಗಾತಿಯ ಜೊತೆ ತುದಿ ಮೊದಲಿಲ್ಲದ ಮಾತುಗಳನ್ನು ಆಡುವಿರಿ. ನಿಮ್ಮ ಮೃದುತ್ವವನ್ನು ಸಂಗಾತಿ ಹೆಚ್ಚು ಪ್ರೀತಿಯಿಂದ ಸ್ವೀಕರಿಸುತ್ತಾರೆ. ಸಂಬಂಧದಲ್ಲಿ ಅಶಾಂತಿಗೆ ಪ್ರವೇಶ ಕೊಡಬೇಡಿ. ಒಬ್ಬರೇ ಇರುವವರಿಗೆ ಮೃದು ಸ್ವಭಾವದ, ನಿಮಗೆ ಮನಸೂರೆಗೊಳ್ಳುವ ವ್ಯಕ್ತಿಯ ಪರಿಚಯ. ನಿಮ್ಮ ಒಳಗಣ್ಣಿನ ಹೇಳಿಕೆಯನ್ನು ಅನುಸರಿಸಿ.

– ಲೋಹಿತ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ