Weekly Love Horoscope: ಈ ರಾಶಿಯವರಿಗೆ ಈ ವಾರ ಸಂಗಾತಿಯಿಂದ ವಿಶೇಷ ಉಡುಗೊರೆ ಸಿಗುವ ಸಾಧ್ಯತೆಯಿದೆ

ಮೇ 31 ರಿಂದ ಜೂನ್ 06 ರವರೆಗಿನ ಈ ವಾರದಲ್ಲಿ, ಗುರು ಮತ್ತು ಶುಕ್ರರ ಸ್ಥಾನ ಬದಲಾವಣೆಯು ನಿಮ್ಮ ಪ್ರೇಮ ಜೀವನಕ್ಕೆ ಹೊಸ ಆಯಾಮ ನೀಡಲಿದೆ. ಶುಕ್ರನು ಶತ್ರು ಸಹವಾಸದಿಂದ ಮುಕ್ತನಾಗಿ ಪ್ರೇಮದ ಫಲವನ್ನು ನೀಡುವನು. ಪ್ರತಿ ರಾಶಿಗಳಿಗೂ ಈ ಗ್ರಹಗಳ ಪ್ರಭಾವದಿಂದ ಪ್ರೇಮ ಸಂಬಂಧಗಳಲ್ಲಿ ಧನಾತ್ಮಕ ಬದಲಾವಣೆಗಳು ನಿರೀಕ್ಷಿತ. ಕೆಲವರಿಗೆ ಹೊಸ ಪ್ರೀತಿ, ಕೆಲವರಿಗೆ ಬಾಂಧವ್ಯ ಗಟ್ಟಿಗೊಳಿಸುವ ಅವಕಾಶಗಳು ದೊರೆಯುತ್ತವೆ.

Weekly Love Horoscope: ಈ ರಾಶಿಯವರಿಗೆ ಈ ವಾರ ಸಂಗಾತಿಯಿಂದ ವಿಶೇಷ ಉಡುಗೊರೆ ಸಿಗುವ ಸಾಧ್ಯತೆಯಿದೆ
ವಾರದ ಪ್ರೇಮ - ಪ್ರೀತಿ ಭವಿಷ್ಯ
Image Credit source: Pinterest
Edited By:

Updated on: May 28, 2026 | 11:11 AM

ಮೇ 31ರಿಂದ ಜೂನ್ 06ರವರೆಗೆ ಜೂನ್ ಮೊದಲವಾರವಾಗಲಿದ್ದು, ಗುರುವಿನ ಸ್ಥಾನದ ಬದಲಾವಣೆಯಿಂದ ಪ್ರೇಮ ಜೀವನಕ್ಕೆ ಹೊಸ ಆಯಾಮ ಸಿಗಲಿದೆ. ಶುಕ್ರ ಶತ್ರುವಿನ ಸಹವಾಸದಿಂದ ಸದ್ಯ ಮುಕ್ತನಾಗುವನು. ಪ್ರೇಮದ ಫಲವನ್ನು ಕೊಡುವನು.

ಮೇಷ ರಾಶಿ:

ನಿಮ್ಮ ರಾಶಿಯಲ್ಲಿಯೇ ಮಂಗಳನಿರುವುದರಿಂದ ಪ್ರೇಮ ಜೀವನದಲ್ಲಿ ಉತ್ಸಾಹ ಹೆಚ್ಚಿರುತ್ತದೆ. ಆದರೆ ಸಂಗಾತಿಯೊಂದಿಗೆ ಮಾತನಾಡುವಾಗ ಹಠಮಾರಿತನ ಬಿಟ್ಟು ನಡೆದುಕೊಳ್ಳುವುದು ಒಳಿತು. ಅನಗತ್ಯ ವಾದಗಳು ದೂರವಾಗಿ ಪ್ರೀತಿ ಮೂಡುವುದು.

ವೃಷಭ ರಾಶಿ :

​ನಿಮ್ಮ ರಾಶಿಯಲ್ಲಿ ಸೂರ್ಯನಿದ್ದಾನೆ. ಸಂಗಾತಿಯ ಮೇಲಿನ ಪ್ರೀತಿ ಗಾಢವಾಗಲಿದ್ದರೂ, ಅಹಂಕಾರದ ಮಾತುಗಳು ಬಾಂಧವ್ಯಕ್ಕೆ ಕದಡಬಹುದು. ತಾಳ್ಮೆಯಿಂದ ವರ್ತಿಸಿದರೆ ಈ ವಾರ ಶೃಂಗಾರದ ಕ್ಷಣಗಳನ್ನು ಕಳೆಯಬಹುದು.

​ಮಿಥುನ ರಾಶಿ:

​ಬುಧ ಮತ್ತು ಶುಕ್ರರು ನಿಮ್ಮ ರಾಶಿಯಲ್ಲಿ ಜಂಟಿಯಾಗಿದ್ದಾರೆ. ಪ್ರೇಮಿಗಳಿಗೆ ಅತ್ಯಂತ ಅದ್ಭುತವಾದ ಸಮಯವಿದು. ಮನಸ್ತಾಪಗಳು ದೂರವಾಗಿ ಹೊಸ ಒಡನಾಟ ಸೃಷ್ಟಿಯಾಗಲಿದೆ. ಸಂಗಾತಿಯಿಂದ ನಿಮಗಾಗಿ ವಿಶೇಷ ಉಡುಗೊರೆ ಸಿಗುವ ಸಾಧ್ಯತೆಯಿದೆ.

​ಕರ್ಕಾಟಕ ರಾಶಿ:

​ಗುರುವು ನಿಮ್ಮ ರಾಶಿಯಲ್ಲಿ ಉಚ್ಛಸ್ಥಿತಿಯಲ್ಲಿದ್ದಾನೆ. ಪ್ರೇಮ ಜೀವನದಲ್ಲಿ ಘನತೆ ಮತ್ತು ಪರಸ್ಪರ ಗೌರವ ಹೆಚ್ಚಾಗಲಿದೆ. ವಿವಾಹಾಕಾಂಕ್ಷಿಗಳಿಗೆ ಸೂಕ್ತ ಸಂಬಂಧಗಳು ಕೂಡಿಬರಲಿವೆ. ಹಳೆಯ ನೆನಪುಗಳು ನಿಮ್ಮಿಬ್ಬರನ್ನು ಮತ್ತಷ್ಟು ಹತ್ತಿರವಾಗಿಸಲಿವೆ.

ಸಿಂಹ ರಾಶಿ:

​ಕೇತು ನಿಮ್ಮ ರಾಶಿಯಲ್ಲಿದ್ದಾನೆ. ಪ್ರೇಮ ಬಾಂಧವ್ಯದಲ್ಲಿ ಸ್ವಲ್ಪ ಗೊಂದಲ ಅಥವಾ ಅಸ್ಪಷ್ಟತೆ ಮೂಡಬಹುದು. ಸಂಗಾತಿಯನ್ನು ಶಂಕಿಸದೆ ಮುಕ್ತವಾಗಿ ಮಾತನಾಡಿ. ವಾರಾಂತ್ಯದ ವೇಳೆಗೆ ಪರಿಸ್ಥಿತಿ ತಿಳಿಯಾಗಿ ಸುಧಾರಣೆ ಕಂಡುಬರಲಿದೆ.

ಕನ್ಯಾ ರಾಶಿ:

ಪ್ರೇಮ ಜೀವನದಲ್ಲಿ ಈ ವಾರ ಮಿಶ್ರಫಲ ಸಿಗಲಿದೆ. ಸಂಗಾತಿಯ ಭಾವನೆಗಳಿಗೆ ಸೂಕ್ತ ಗೌರವ ನೀಡುವುದು ಮುಖ್ಯ. ನಿಮ್ಮ ಕಾರ್ಯನಿರತತೆಯ ಮಧ್ಯೆಯೂ ಪ್ರೀತಿಪಾತ್ರರಿಗಾಗಿ ಸಮಯ ಮೀಸಲಿಟ್ಟರೆ ಸಂಬಂಧವು ಮಧುರವಾಗಿರುತ್ತದೆ.

ತುಲಾ ರಾಶಿ :

​ಪ್ರೇಮ ಸಂಬಂಧದಲ್ಲಿ ಸಾಮರಸ್ಯ ಇರಲಿದೆ. ಪರಸ್ಪರ ನಂಬಿಕೆ ಹೆಚ್ಚಾಗಲಿದ್ದು, ದೂರದ ಪ್ರಯಾಣಕ್ಕೆ ಯೋಜನೆ ರೂಪಿಸುವಿರಿ. ಸಂಗಾತಿಯ ಆರೋಗ್ಯದ ಕಡೆ ಗಮನವಿರಲಿ. ಅವಿವಾಹಿತರಿಗೆ ಹೊಸ ಪರಿಚಯಗಳು ಪ್ರೇಮವಾಗಿ ಬದಲಾಗಬಹುದು.

ವೃಶ್ಚಿಕ ರಾಶಿ:

​ಭಾವನಾತ್ಮಕವಾಗಿ ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಕನೆಕ್ಟ್ ಆಗುವಿರಿ. ಪ್ರೀತಿಯ ವಿಷಯದಲ್ಲಿ ಯಾವುದೇ ನಿರ್ಧಾರವನ್ನು ಅವಸರದಿಂದ ತೆಗೆದುಕೊಳ್ಳಬೇಡಿ. ಪರಸ್ಪರರ ತಪ್ಪುಗಳನ್ನು ಕ್ಷಮಿಸಿ ಮುನ್ನಡೆದರೆ ಪ್ರೇಮ ಜೀವನ ಸುಖಮಯವಾಗಿರುತ್ತದೆ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

​ಧನು ರಾಶಿ:

ನಿಮ್ಮ ಲಗ್ನದಲ್ಲೇ ಪೂರ್ವಷಾಢ ನಕ್ಷತ್ರದ ಪ್ರಭಾವವಿದೆ. ಸಂಗಾತಿಯ ಕಡೆಯಿಂದ ಉತ್ತಮ ಬೆಂಬಲ ದೊರೆಯಲಿದೆ. ಪ್ರೀತಿಯನ್ನು ವ್ಯಕ್ತಪಡಿಸಲು ಈ ವಾರ ಯೋಗ್ಯವಾಗಿದೆ. ಪರಸ್ಪರ ಆಕರ್ಷಣೆ ಹೆಚ್ಚಲಿದ್ದು, ಸಣ್ಣ ಪ್ರವಾಸದ ಯೋಗವಿದೆ.

ಮಕರ ರಾಶಿ:

​ಪ್ರೇಮ ವ್ಯವಹಾರಗಳಲ್ಲಿ ಸಮಾಧಾನದಿಂದ ಇರಬೇಕು. ಸಣ್ಣ ಪುಟ್ಟ ತಪ್ಪು ಕಲ್ಪನೆಗಳು ಮೂಡುವ ಸಂಭವವಿರುವುದರಿಂದ ಮಾತು ನಿಯಂತ್ರಣದಲ್ಲಿರಲಿ. ಮೂರನೇ ವ್ಯಕ್ತಿಯ ಹಸ್ತಕ್ಷೇಪಕ್ಕೆ ಅವಕಾಶ ನೀಡಬೇಡಿ, ಬಾಂಧವ್ಯ ಗಟ್ಟಿಯಾಗಿರಲಿದೆ.

​ಕುಂಭ ರಾಶಿ:

ಚಂದ್ರ ಮತ್ತು ರಾಹು ಒಟ್ಟಿಗೆ ನಿಮ್ಮ ರಾಶಿಯಲ್ಲಿದ್ದಾರೆ. ಮನಸ್ಸಿನಲ್ಲಿ ಇಲ್ಲದ ಆತಂಕ ಅಥವಾ ಸಂಶಯಗಳು ಮೂಡಬಹುದು. ಸಂಗಾತಿಯೊಂದಿಗೆ ಮುಕ್ತವಾಗಿ ಸಂವಹನ ನಡೆಸಿ. ಗೊಂದಲಗಳನ್ನು ಬಗೆಹರಿಸಿಕೊಂಡರೆ ಪ್ರೀತಿ ಮತ್ತಷ್ಟು ಆಳವಾಗುತ್ತದೆ.

​ಮೀನ ರಾಶಿ:

​ನಿಮ್ಮ ರಾಶಿಯಲ್ಲಿ ಶನಿ ನೆಲೆಸಿದ್ದಾನೆ. ಪ್ರೇಮ ಸಂಬಂಧದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿವೆ. ಸಂಗಾತಿಗೆ ನೀಡಿದ ಮಾತನ್ನು ಉಳಿಸಿಕೊಳ್ಳಲು ಶ್ರಮಿಸುವಿರಿ. ಸಂಬಂಧದಲ್ಲಿ ತಾಳ್ಮೆ ಮತ್ತು ಪ್ರಬುದ್ಧತೆ ನಿಮ್ಮನ್ನು ಯಶಸ್ಸಿನತ್ತ ಮುನ್ನಡೆಸುತ್ತದೆ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us