Weekly Love Horoscope: ಸೆಪ್ಟೆಂಬರ್ ಮೂರನೇ ವಾರದಲ್ಲಿ ಈ ರಾಶಿಯವರ ಪ್ರೀತಿಗೆ ಸಿಗಲಿದೆ ಸಿಹಿಸುದ್ದಿ
ಸೆಪ್ಟೆಂಬರ್ ಮೂರನೇ ವಾರದಲ್ಲಿ ಈ ರಾಶಿಯವರಿಗೆ ಒಳ್ಳೆಯ ದಿನ ಆರಂಭವಾಗಲಿದೆ. ಇಲ್ಲಿಂದ ನಿಮ್ಮ ಪ್ರೀತಿಗೆ ಒಂದು ಅರ್ಥಪೂರ್ಣ ದಾರಿ ಸಿಗಲಿದೆ. ಕುಜ ಹಾಗು ಶುಕ್ರರು ಪ್ರೇಮಕ್ಕೆ ಕಾರಣವಾಗಿದ್ದರೂ ಉಳಿದ ಗ್ರಹಗಳೂ ಕೆಲವು ಸಹಯೋಗವನ್ನು ಕೊಡುತ್ತವೆ. ಅದೆಲ್ಲವೂ ಹೇಗಿದೆ ಎನ್ನುವುದು ತಿಳಿಯಬಹುದು. ಈ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸಪ್ಟೆಂಬರ್ 21ರಿಂದ 29ರವರೆಗೆ ಪ್ರೇಮ ಜೀವನ ಏನಾಗಲಿದೆ, ಯಾರೊಂದಿಗೆ ಪ್ರೇಮವಿರಿವುದು? ಎಂತಹ ಪ್ರೇಮ, ಯಾವ ಕಾರಣಕ್ಕಾಗಿ ಪ್ರೇಮ ಬಂದಿದೆ ಎನ್ನುವುದೂ ಬಹಳ ಮುಖ್ಯವಾಗಿದೆ ಎನ್ನುವುದನ್ನು ತಿಳಿಕೊಂಡರೆ ದುಃಖಗಳು ಕಡಿಮೆಯಾಗಬಹುದು.ಕುಜ ಹಾಗು ಶುಕ್ರರು ಪ್ರೇಮಕ್ಕೆ ಕಾರಣವಾಗಿದ್ದರೂ ಉಳಿದ ಗ್ರಹಗಳೂ ಕೆಲವು ಸಹಯೋಗವನ್ನು ಕೊಡುತ್ತವೆ. ಅದೆಲ್ಲವೂ ಹೇಗಿದೆ ಎನ್ನುವುದು ತಿಳಿಯಬಹುದು.
ಮೇಷ ರಾಶಿ :
ಸಪ್ಟೆಂಬರ್ ತಿಂಗಳ ಈ ವಾರ ನಿಮಗೆ ಪ್ರೀತಿ ಅರ್ಥಪೂರ್ಣವಾಗುವುದು. ಕುಜನು ಏಳನೇ ರಾಶಿಯಾದ ಶುಕ್ರನ ರಾಶಿಯಲ್ಲಿ ಇರುವ ಕಾರಣ ದಾಂಪತ್ಯದಲ್ಲಿ ಉಂಟಾದ ವೈಮನಸ್ಯವೂ ದೂರವಾಗಲಿದೆ. ಪ್ರೇಮ ವಿವಾಹವನ್ನು ಬಯಸುವವರು ದುಡುಕುವುದು ಬೇಡ, ಜಾತಕವನ್ನು ಪರಿಶೀಲಿಸಿ ಮುಂದುವರೆಯಿರಿ. ನಿಮಗಿಂತ ಸುಂದರವಾಗಿಯೂ ಉತ್ಸಾಹದಲ್ಲಿ ಇರುವವರೂ ಕುಳ್ಳಗಿನ ರೂಪವೂ ಇರುವುದು. ನಗರದಲ್ಲಿ ನಿಮ್ಮನ್ನು ವರಿಸಬಹುದು. ಶುಕ್ರದಶೆಯವರಿಗೆ ಈ ವಾರ ಉತ್ತಮ.
ವೃಷಭ ರಾಶಿ :
ಇದು ಎರಡನೇ ರಾಶಿಯಾಗಿದ್ದು ಪ್ರೀತಿಯಲ್ಲಿ ಜಾಗರೂಕತೆ ಬೇಕು. ರಾಶಿಯ ಅಧಿಪತಿ ಚತುರ್ಥದಲ್ಲಿ ಇದ್ದು ತಾಯಿ ತಂದೆಯಿಂದ ಸೂಚಿಸಿದವರನ್ನು ಪ್ರೀತಿಸಲು ಒಪ್ಪಲಾರಿರಿ. ಮನೆಯಲ್ಲಿಯೇ ಪ್ರೇಮ ಅಂಕುರಿಸುವುದು. ಪ್ರೇಮಕ್ಕೆ ಸಂಬಂಧಿಸದಂತೆ ಇಬ್ಬರ ನಡುವೆ ಸಂಘರ್ಷದಿಂದ ನಿಮ್ಮ ಮನಸ್ಸು ಕುಗ್ಗುವುದು. ಪ್ರೌಢ ವ್ಯಕ್ತಿತ್ವ ಹಾಗೂ ಸಾಮಾನ್ಯ ರೂಪದವರು ಸಿಗವರು.
ಮಿಥುನ ರಾಶಿ :
ರಾಶಿ ಚಕ್ರದ ಮೂರನೇ ರಾಶಿಗೆ ಈ ವಾರ ಪ್ರೇಮದಲ್ಲಿ ಗೊಂದಲಗಳು ಕಾಣಿಸುವುದು. ಪ್ರೇಮಿಯ ಜೊತೆ ನಿಮ್ಮ ಬಗ್ಗೆ ಅತಿಯಾಗಿ ಹೇಳಿಕೊಂಡ ಇರಿಟೆಟ್ ಮಾಡುವ ಸಾಧ್ಯತೆ ಇದೆ. ಬಹಳ ಜಾಣ್ಮೆಯಿಂದ ಅವರ ಜೊತೆ ವರ್ತಿಸುವಿರಿ. ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರೇಮವಾಗಲಿದೆ. ಈ ರಾಶಿಯವರಿಗೆ ಸಿಗುವ ಸಂಗತಿಯು ನಿಮ್ಮ ಸ್ವಭಾವಕ್ಕೆ ಹತ್ತಿರವಿರುವರು. ಪ್ರೇಮಿಗೆ ಯಾವುದೇ ಬಲವಂತಕ್ಕೆ ಹೋಗಬೇಡಿ.
ಕರ್ಕಾಟಕ ರಾಶಿ :
ಸಪ್ಟೆಂಬರ್ ತಿಂಗಳ ನಾಲ್ಕನೆಯ ವಾರ ಪ್ರೇಮಿಗಳಿಗೆ ಶುಭ. ಬಣ್ಣದ ಮಾತುಗಳಿಂದ ಪ್ರೇಮಿಯನ್ನು ಸಂತೈಸಬಹುದು. ಅವರಿಗಾಗಿ ಉಡುಗೊರೆಯನ್ನು ನೀಡುವ ಸಂದರ್ಭ ಬರಲಿದೆ. ಕೃತಕತೆಯಿಂದ ನೀವು ಪ್ರೇಮವನ್ನು ಉಳಿಸಿಕೊಳ್ಳುವಿರಿ. ಕುಟುಂಬದಲ್ಲಿ ತಂದೆಯಿಂದ ವಿರೋಧ ಬಂದರೂ ಅನಂತರ ಸರಿಯಾಗುವುದು. ದಾಂಪತ್ಯದಲ್ಲಿ ಪರಸ್ಪರ ಶ್ರೇಯಸ್ಸಿಗಾಗಿ ವಿವಾದ ಮಾಡಿಕೊಳ್ಳುವರು.
ಸಿಂಹ ರಾಶಿ :
ಐದನೇ ರಾಶಿಯಾಗಿದ್ದು, ಈ ತಿಂಗಳ ನಾಲ್ಕನೇ ವಾರದಲ್ಲಿ ಪ್ರೇಮ ಜೀವನಕ್ಕೆ ಅತಂತ್ರತೆ ಕಾಣಿಸುವುದು. ಪ್ರೇಮಿಯ ವಿಚಾರದಲ್ಲಿ ಕೋಪ ಹೆಚ್ಚಾಗಲಿದೆ. ಸಣ್ಣ ವಿಚಾರವೂ ನಿಮಗೆ ಅತಿಯಾದ ನೋವನ್ನು ಕೊಡುವುದು. ದಾಂಪತ್ಯದಲ್ಲಿ ಪರಸ್ಪರ ಸಹಾಯವಿರಬೇಕೇ ವಿನಃ ಸೇವೆಯ ಮನೋಭಾವ ಬಂದರೆ ಅದು ಸ್ಫೋಟವಾಗುವುದು. ಮನೆಯರನ್ನು ಒಪ್ಪಿಸಲು ಶ್ರಮ ಹಾಕುವಿರಿ. ತಾಯಿಯಿಂದ ಅದನ್ನು ಮಾಡಿಸುವ ಯೋಚನೆ ಬರಲಿದೆ.
ಕನ್ಯಾ ರಾಶಿ :
ಈ ರಾಶಿಯವರಿಗೆ ಈ ತಿಂಗಳ ನಾಲ್ಕನೇ ವಾರದಲ್ಲಿ ಪ್ರೇಮ ಜೀವನವು ಸಂಪೂರ್ಣ ಯಶಸ್ಸು ಕಾಣುತ್ತದೆ ಎನ್ನುವುದು ಬೇಡ. ಹಣವನ್ನು ಖರ್ಚು ಮಾಡಿ, ಶೋಕಿಯನ್ನು ಮಾಡಿದರೂ ಪೂರ್ಣ ಮನಸ್ಸು ನಿಮ್ಮ ಮೇಲೆ ಇರದು. ಒತ್ತಾಯ ಪೂರ್ವಕವಾಗಿ ಹಿಡಿದಿಟ್ಟುಕೊಂಡು ಅನಂತರ ಕಳೆದುಕೊಳ್ಳುವ ಭೀತಿ ನಿಮ್ಮನ್ನು ಈ ವಾರ ಬಾಧಿಸುವುದು. ನಿಮಗಿಂತ ಹೆಚ್ಚಿನ ವಯಸ್ಸಿನವರ ಮೇಲೆ ಪ್ರೀತಿ ಬರುವ ಸಾಧ್ಯತೆ ಇದೆ.
ತುಲಾ ರಾಶಿ :
ಶುಕ್ರನ ಆಧಿಪತ್ಯ ರಾಶಿಯಾಗಿದ್ದು ಈ ತಿಂಗಳ ನಾಲ್ಕನೇ ವಾರದಲ್ಲಿ ಪ್ರೇಮಿಗಳು ಬಹಳ ಎಚ್ಚರಿಕೆಯಿಂದ ವ್ಯವಹಾರವನ್ನು ಇಟ್ಟುಕೊಳ್ಳಬೇಕಾಗುವುದು. ಕುಜನು ನಿಮ್ಮದೇ ರಾಶಿಯಲ್ಲಿ ಇರುವ ಕಾರಣ ಪ್ರೇಮವು ಮಾರ್ಗವನ್ನು ಬದಲಿಸುವ ಸಂದರ್ಭ ಬರುವುದು, ಮಂಗಳವಾರ ಶುಕ್ರವಾರ ವಿಶೇಷ ಗಮನ ಅವಶ್ಯಕ. ಪರಾಕ್ರಮದಿಂದ ಪ್ರೇಮವು ನಷ್ಟವೂ ಆಗಬಹುದು. ಈ ವಾರ ಹಿರಿಯ ಮಾತುಗಳನ್ನು ಕೇಳುವ ಅಭ್ಯಾಸ ಒಳ್ಳೆಯದು.
ಇದನ್ನೂ ಓದಿ: ಸೆ.15ರಿಂದ 21ರವರೆಗೆ ಈ ರಾಶಿಗಳಲ್ಲಿ ಮಹತ್ವದ ಬದಲಾವಣೆ
ವೃಶ್ಚಿಕ ರಾಶಿ :
ಎಂಟನೇ ರಾಶಿಯಾದ ನಿಮಗೆ ಈ ವಾರ ದಾಂಪತ್ಯದಲ್ಲಿ ಸುಖವಿದ್ದರೂ ಉದ್ಯೋಗಕ್ಕೆ ಹೋಗುವವರು ಗಮನವಿಟ್ಟುಕೊಳ್ಳಬೇಕು. ಮನೆಯವರ ದೃಷ್ಟಿಯೂ ಅವರ ಮೇಲೆ ಹೆಚ್ಚಿರುವುದು. ಶುಕ್ರನು ಕೇತುವಿನ ಜೊತೆ ಇರುವ ಕಾರಣ ಸಕಾರಣ ಪ್ರೇಮ ಮತ್ತು ಕ್ಷುಲ್ಲಕ ಪ್ರೇಮವೂ ಜನಿಸುವುದು. ಎಲ್ಲಿಗೂ ಸುತ್ತಾಟಕ್ಕೆ ಒಪ್ಪಿಗೆಯನ್ನು ಕೊಡುಬುದು ಬೇಡ. ಉದ್ಯೋಗ ಹಾಗೂ ಮನೆಕೆಲಸದ ಬಗ್ಗೆಯೇ ಅಧಿಕಗಮನವಿರಲಿ.
ಧನು ರಾಶಿ :
ರಾಶಿ ಚಕ್ರದ ಒಂಭತ್ತನೆಯ ರಾಶಿಯಾಗಿದ್ದು ಸಪ್ಟೆಂಬರ್ ತಿಂಗಳ ಈ ವಾರದಲ್ಲಿ ದಾಂಪತ್ಯ ಜೀವನವು ಚೆನ್ನಾಗಿ ಇರುವುದು. ಗುರುವಿನ ದೃಷ್ಟಿ ನಿಮ್ಮ ರಾಶಿಯಲ್ಲಿ ಇದ್ದು ಪತಿ ಪತ್ನಿಯರ ನಡುವೆ ಅನ್ನಯೋನ್ಯತೆ ಇರುವುದು. ಪ್ರೇಮ ವಿಚಾರಕ್ಕೆ ಬಂದರೆ ನಿಮ್ಮನ್ನು ಹೆಚ್ಚು ಕೇರ್ ಮಾಡುವವರನ್ನು ಇಷ್ಟಪಡುವಿರಿ. ತಂದೆಯ ಪ್ರೀತಿಯನ್ನು ಇಷ್ಟಪಡುವವರಲ್ಲಿ ಕಾಣುವಿರಿ. ಕುಟುಂಬದ ಹಿನ್ನೆಲೆಯನ್ನೂ ತಿಳಿದು ಮಾನಸಿಕವಾಗಿ ನಿಮ್ಮ ಮುಂದಿನ ಜೀವನದ ಸಿದ್ಧತೆಯನ್ನು ಮಾಡಿಕೊಳ್ಳುವಿರಿ.
ಮಕರ ರಾಶಿ :
ಈ ರಾಶಿಯವರಿಗೆ ಸಪ್ಟೆಂಬರ್ ತಿಂಗಳ ನಾಲ್ಕನೇ ವಾರದಲ್ಲಿ ಶುಭಾಶುಭ. ವಾರದ ಮಧ್ಯದಲ್ಲಿ ಮನಸ್ಸು ಚಂಚಲವಾಗಿ ಬೇಡದ ಕಾರ್ಯಕ್ಕೆ ಹೋಗುವುದು. ಅನಂತರ ಪಶ್ಚಾತ್ತಾಪಪಟ್ಟು ಪ್ರಯೋಜನ ಆಗದು. ವಾರದ ಆರಂಭದ ದೃಢ ಮನಸ್ಸು ಬದಲಾವಣೆ ಆಗುವುದು ವಿಶೇಷ. ಆಕರ್ಷಣೆ ನಿಮ್ಮ ದಾರಿ ತಪ್ಪಿಸಿ ಎಲ್ಲಿಗೋ ಎಳೆದೊಯ್ಯುವುದು. ಗುರು ಹಾಗು ಶುಕ್ರರು ಷಷ್ಠ ಹಾಗೂ ಅಷ್ಟಮದಲ್ಲಿದ್ದು ಯಾವುದೇ ವಿಘ್ನವನ್ನು ತರಲಾರರು.
ಕುಂಭ ರಾಶಿ :
ಹನ್ನೊಂದನೇ ರಾಶಿಯಾಗಿದ್ದು, ಈ ವಾರ ನಿಮಗೆ ಸಂಪತ್ತಿನ ಕಾರಣಕ್ಕೆ ಪ್ರೀತಿ ಹುಟ್ಟುವುದು. ಇದು ತಾತ್ಕಾಲಿಕ ಹಾಗೂ ಅಸಮಂಜಸವಾದ ಅದನ್ನು ಬಿಡುವುದು ಉತ್ತಮ. ಒಮ್ಮೆ ಇದ್ದರೂ ಅದನ್ನು ಮಿತಿಮೀರದಂತೆ ನೋಡಿಕೊಳ್ಳುವುದು ಉತ್ತಮ. ಶುಕ್ರ ಕೇತುಗಳು ಒಂದಾಗಿದ್ದಾರೆ ಎಂದರೆ ಕುಜ ಶುಕ್ರ ಎಂದೇ ಅರ್ಥ. ತಂದೆಯ ಮಾತನ್ನು ಕೇಳದೇ ದುಃಖಿಸುವಿರಿ.
ಮೀನ ರಾಶಿ :
ರಾಶಿ ಚಕ್ರದ ಕೊನೆಯ ರಾಶಿಯಾಗಿದ್ದು, ಈ ವಾರ ನಿಮಗೆ ಪ್ರೇಮವು ಒಳ್ಳೆಯ ವ್ಯಕ್ತಿಗಳಲ್ಲಿ ಆಗಲಿದ್ದು, ಪರಸ್ಪರ ಮಿತ್ರತ್ವ ಉಂಟಾಗಲಿದೆ. ತಂದೆಯ ಕಡೆಯಿಂದ ಪ್ರೇಮವಿರಲಿದೆ. ತಿಳಿವಳಿಕೆ ಉಳ್ಳಬರೂ ವಿದ್ಯಾವಂತರೂ ಸೌಹಾರ್ದವಾಗಿ ಒಪ್ಪಿಕೊಂಡು ಯಾವುದೇ ಉದ್ವೇಗಕ್ಕೆ ಒಳಗಾಗದೇ ಇರುವರು. ಇಷ್ಟಪಡುವ ವ್ಯಕ್ತಿಗಳೂ ಸಕಲಕಾರ್ಯ ಕುಶಲರೂ ಹೊಂದಾಣಿಕೆ ಸ್ವಭಾವವಿರುವವರೂ ಆಗಿರುವವರು.
– ಲೋಹಿತ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




