AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope: ಸೆ.15ರಿಂದ 21ರವರೆಗೆ ಈ ರಾಶಿಗಳಲ್ಲಿ ಮಹತ್ವದ ಬದಲಾವಣೆ

ವಾರ ಭವಿಷ್ಯ: ಕುಜನು ಮಿತ್ರ ಕ್ಷೇತ್ರಕ್ಕೆ, ಸೂರ್ಯನೂ ಮಿತ್ರ ಕ್ಷೇತ್ರ, ಹಾಗೂ ಬುಧನು ಉಚ್ಚ ಕ್ಷೇತ್ರ, ಶುಕ್ರ ಶತ್ರು ಕ್ಷೇತ್ರಕ್ಕೆ ಬಂದಿದ್ದಾರೆ. ಶುಕ್ರನನ್ನು ಹೊರತುಪಡಿಸಿ ಉಳಿದ ಮೂರು ಗ್ರಹಗಳೂ ಶುಭವನ್ನೇ ಕೊಡುವು. ಜಾತಕದಲ್ಲಿ ಗ್ರಹಗಳು ಎಲ್ಲಿವೆ ಎನ್ನುವುದರ ಮೇಲೆ ನಿರ್ಧಾರಿತವಾಗಿದೆ. ಶುಕ್ರದಶೆ ಶುಭವಲ್ಲ. ಈ ವಾರದ ರಾಶಿ ಫಲ ಇಲ್ಲಿದೆ ನೋಡಿ

Weekly Horoscope: ಸೆ.15ರಿಂದ 21ರವರೆಗೆ ಈ ರಾಶಿಗಳಲ್ಲಿ ಮಹತ್ವದ ಬದಲಾವಣೆ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷಯ್​ ಪಲ್ಲಮಜಲು​​|

Updated on: Sep 12, 2025 | 10:02 AM

Share

ಸಪ್ಟೆಂಬರ್ ತಿಂಗಳ ಮೂರನೇ ವಾರ 15-9-2025ರಿಂದ 21-9-2025ರವರೆಗೆ ಇರಲಿದೆ. ಅನೇಕ ಗ್ರಹಗಳ ಸ್ಥಳವೇ ಬದಲಾಗಲಿದೆ. ಕುಜನು ಮಿತ್ರ ಕ್ಷೇತ್ರಕ್ಕೆ, ಸೂರ್ಯನೂ ಮಿತ್ರ ಕ್ಷೇತ್ರ, ಹಾಗೂ ಬುಧನು ಉಚ್ಚ ಕ್ಷೇತ್ರ, ಶುಕ್ರ ಶತ್ರು ಕ್ಷೇತ್ರಕ್ಕೆ ಬಂದಿದ್ದಾರೆ. ಶುಕ್ರನನ್ನು ಹೊರತುಪಡಿಸಿ ಉಳಿದ ಮೂರು ಗ್ರಹಗಳೂ ಶುಭವನ್ನೇ ಕೊಡುವು. ಜಾತಕದಲ್ಲಿ ಗ್ರಹಗಳು ಎಲ್ಲಿವೆ ಎನ್ನುವುದರ ಮೇಲೆ ನಿರ್ಧಾರಿತವಾಗಿದೆ. ಶುಕ್ರದಶೆ ಶುಭವಲ್ಲ. ಉಳಿದವು ಶುಭಫಲವನ್ನೇ ಕೊಡಲಿದ್ದು, ಎಲ್ಲವೂ ಏಕಾದಶಸ್ಥಾನದ ಫಲವನ್ನು ಕೊಟ್ಟು ನಿಮ್ಮನ್ನು ಹರಸಲಿ.

ಮೇಷ ರಾಶಿ :

ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಸಪ್ಟೆಂಬರ್ ಮೂರನೇ ವಾರ ಉತ್ಯಮವೇ. ರಾಶಿಯ ಅಧಿಪತಿ ಸ್ವನಕ್ಷತ್ರದಲ್ಲಿಯೇ ಸಂಚಾರ ಮಾಡುತ್ತಿದ್ದು, ಚಿಂತಿತ ಕಾರ್ಯಗಳು ಕಾರ್ಯರೂಪಕ್ಕೆ ಬರಲಿವೆ. ನಂಬಿಕೆ ದ್ರೋಹಹವು ನಿಮಗಾಗಲಿದೆ. ಇಷ್ಟಪಟ್ಟವರನ್ನು ದೂರ ಮಾಡಿಕೊಳ್ಳುವಿರಿ. ಅನ್ಯರ ವಿಚಾರದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗುವುದು. ಸರ್ಕಾರದ ಕೆಲಸಕ್ಕಾಗಿ ಅಧಿಕ ಓಡಾಟವಾಗುವುದು. ಆರ್ಥಿಕ ನೆರವನ್ನು ಯಾರಿಂದಲಾದರೂ ನೀವು ಬಯಸುವಿರಿ. ಎರಡು ಮನಸ್ಸು ಬಾರದೇ ಒಂದೇ ನಿರ್ಧಾರದಿಂದ ಎಲ್ಲರ ಬಾಯಿಮುಚ್ಚಿಸುವಿರಿ. ನಿಮ್ಮ ಸ್ವಭಾವದಿಂದ ದಾಂಪತ್ಯದಲ್ಲಿ ಕೆಲವು ಮಾತುಗಳು ಕೇಳಿಬರಬಹುದು. ಅನಗತ್ಯ ವಿಚಾರವನ್ನು ಪ್ರಸ್ತಾಪಿಸಿ ವಿವಾದ ಮಾಡುವಿರಿ. ನಿಮ್ಮ ಆದಾಯವು ಅಧಿಕವಾಗಿದ್ದು ನಿಮಗೆ ಸಂತೋಷವನ್ನು ಕೊಡುವ ವಿಚಾರವು ಇದಾಗಿದೆ. ನಿರಂತರ ಪ್ರಯತ್ನಕ್ಕೆ ಅಪರೋಕ್ಷ ಫಲವಿದೆ.

ವೃಷಭ ರಾಶಿ :

ರಾಶಿಯ ಅಧಿಪತಿ ಶತ್ರುವಿನ ಮನೆಯಲ್ಲಿ ಇದ್ದು, ತಾಯಿಯ ಜೊತೆ ಕಲಹವಾಗಲಿದೆ. ಚಾಂಚಲ್ಯದ ಮನಸ್ಸಿನಿಂದ ಕೆಲವು ನಿರ್ಧಾರಗಳನ್ನು ಗಟ್ಟಿಯಾಗಿಸಲು ಕಷ್ಟವಾದೀತು. ನಿಮ್ಮ ಪುಟ್ಟ ಪ್ರಪಂಚದಿಂದ ಹೊರಬರಲು ತಯಾರಾಗುವಿರಿ‌. ಬಂಧುಗಳ ನಕಾರಾತ್ಮಕ ಹೇಳಿಕೆಗಳು ನಿಮಗೆ ಉದ್ವೇಗವನ್ನು ಉಂಟಾಗಲಿದೆ. ಮನೆಯ ಅಸಮಾಧಾನವನ್ನು ಎಲ್ಲಿಯೂ ಹೇಳಲಾರಿರಿ. ಆಡಿದ ಮಾತಿಗೆ ಕ್ಷಮೆಯನ್ನು ಕೇಳಬೇಕಾದೀತು. ನಿಮ್ಮ‌ ಸುರಕ್ಷತೆಯಲ್ಲಿ ನೀವಿರುವುದು ಉತ್ತಮ. ವಿದೇಶದ ಸಂಪರ್ಕದಿಂದ ನಿಮಗೆ ಅನನುಕೂಲವಾಗಲಿದೆ. ಈ ವಾರ ಸ್ನೇಹಿತರ ಜೊತೆ ಸೇರಿದರೆ ನಿಮ್ಮ ಗೌಪ್ಯ ವಿಚಾರವನ್ನು ಮುಚ್ಚಿಡಲು ಪ್ರಯತ್ನಿಸುವಿರಿ. ನಿಮ್ಮ ನಿಲುವು ಕೆಲವರಿಗೆ ಇಷ್ಟವಾಗುವುದು. ಶುಕ್ರ ದಶೆ ಶುಭವಲ್ಲ. ನಿಮ್ಮಲ್ಲಿ ಭೀತಿಯ ಮನೋಭಾವವು ಇರಲಿದೆ.

ಮಿಥುನ ರಾಶಿ :

ಈ ರಾಶಿಯವರಿಗೆ ರಾಶಿಯ ಅಧಿಪತಿ ಉಚ್ಚನಾಗಿದ್ದು, ಕೌಟುಂಬಿಕ ಸಮಾರಸ್ಯ, ತಾಯಿಗೆ ಸಹಾಯ, ತಂದೆಯ ಒಡನಾಟ ಎಲ್ಲವೂ ಆಗುವುದು. ತಾತ್ಕಾಲಿಕವಾಗಿ ನಿಮ್ಮ ಸಮಸ್ಯೆಗಳು ನಿವಾರಣೆಯಾಗಲಿದ್ದು ಸ್ವಲ್ಪ ಉಸಿರಾಡುವುದಕ್ಕೆ ಅನುವುಮಾಡಿಕೊಳ್ಳುವಿರಿ. ಉದ್ಯೋಗದಲ್ಲಿ ಭಡ್ತಿಗಾಗಿ ಕಾಯುತ್ತಿದ್ದು ಸಿಗುವುದು. ಸ್ನೇಹಿರಿಂದ ನಿಮಗೆ ಬಹುಮಾನ ಸಿಗಬಹುದು. ಮಕ್ಕಳ ಯಶಸ್ಸನ್ನು ಕಂಡು ಪೋಷಕರಿಗೆ ಸಂತಸವಾಗಲಿದೆ. ಈ ವಾರ ಅಭ್ಯಾಸವಿಲ್ಲದೇ ಇದ್ದರೂ ದೂರದ ಊರಿಗೆ‌ ಒಬ್ಬರೇ ವಾಹನ ಚಲಾಯಿಸುವಿರಿ. ವ್ಯಾಪರದಲ್ಲಿ‌ ಮಧ್ಯವರ್ತಿಗಳಿಂದ ನಿಮ್ಮ ವ್ಯಾಪಾರವು ಕುಂಠಿತವಾಗುವುದು. ಮೋಸದ ಜಾಲಕ್ಕೆ ಸಿಕ್ಕಬಹುದು, ಸಾಧ್ಯತೆ ಇದೆ. ಈ ವಾರ ಆಸೆಪಟ್ಟು ಮಾಡಿದ ಆಭರಣ ಖರೀದಿಯಿಂದ ಮುಂದಕ್ಕೆ ಬಳಕೆಯಾಗಬಹುದು. ಉತ್ತಮ‌ ಆಹಾರವನ್ನು ಪಡೆಯಲು ಯತ್ನಿಸಿ.‌ ಬುಧದಶೆ ಉತ್ತಮ. ಪೂಜಾಯೋಗ್ಯರಿಗೆ ಆತಿಥ್ಯವನ್ನು ನೀಡುವಿರಿ.

ಕರ್ಕಾಟಕ ರಾಶಿ :

ನಾಲ್ಕನೇ ರಾಶಿಯಾದ ನಿಮಗೆ ಈ ವಾರ ಯಾರ ಬಳಿಯೂ ಸಹಾಯ ಹಸ್ತವನ್ನು ಚಾಚದೇ ಸ್ವಂತ ಬಲದ ಮೇಲೆ ಬರುವ ಆಸೆ ಬರುವುದು. ನಿಮ್ಮ ನಿಷ್ಕಾಳಜಿಯಿಂದ ಅನಾಯಾಸವಾಗಿ ಬರುವ ಆದಾಯವು ಸಿಗದೇ ಹೋಗುವುದು. ಸಂಗಾತಿಯಿಂದ ಅವಮಾನವಾಗುವುದು. ಆರ್ಥಿಕಸ್ಥಿತಿಯು ನಿಮಗೆ ಖುಷಿಯನ್ನು ಕೊಟ್ಟರೂ ನೆಮ್ಮದಿ‌ ಮಾತ್ರ ಇರದು. ಗುರುದಶೆಯೂ ನಿಮಗೆ ಸುಖದಾಯಕವಲ್ಲ. ಕುಟುಂಬದಲ್ಲಿ ಐಕಮತ್ಯದ ಕೊರೆತೆಯು ಕಡಿಮೆ‌ ಆಗಬಹುದು. ವೃತ್ತಿಯಲ್ಲಿ ಬಂದ ಮಾತಿನಿಂದ ನೀವು ಉದ್ವೇಗಗೊಳ್ಳುವ ಅವಶ್ಯಕತೆ ಇರುವುದಿಲ್ಲ. ಈ ವಾರ ಕೆಲವರ ವಿಚಾರದಲ್ಲಿ ನಿಮ್ಮ ದೃಷ್ಟಿಯನ್ನು ಬದಲಿಸಿಕೊಳ್ಳದಿರುವುದೇ ಯೋಗ್ಯ. ನಿಮ್ಮ ಜೀವನದ ಕುರಿತು ತಂದೆ ತಾಯಿಯರು ಚಿಂತಿಸುವರು. ನೀವು ಮಾತಿಗೆ ತಪ್ಪಿದವರು ಎಂಬ ಪಟ್ಟಕ್ಕೆ ಸಿಗುವುದು.

ಸಿಂಹ ರಾಶಿ :

ಸಪ್ಟೆಂಬರ್ ತಿಂಗಳ ಮೂರನೇ ವಾರ ನಿಮಗೆ ಶುಭ. ಅನಿರೀಕ್ಷಿತ ಮಾತುಗಳನ್ನು ಕೇಳಬೇಕಾದ ಸ್ಥಿತಿ‌ಯು ಬರಬಹುದು. ಸಣ್ಣ ಆರೋಗ್ಯದ ತೊಂದರೆಯೂ ನಿಮ್ಮ‌ ಮನಸ್ಸಿಗೆ ಕಿರಿಕಿರಿಯನ್ನು ಉಂಟುಮಾಡುವುದು. ಕಾರ್ಯದಲ್ಲಿ ವೇಗವು ಕುಂಠಿತವಾಗುವುದು. ಈ ವಾರ ಸಿಗಬೇಕಿದ್ದ ಸರ್ಕಾರದ ಸೌಲಭ್ಯವು ನಿಮಗೆ ಸಿಗದೇ ಹೋಗಬಹುದು. ಯಶಸ್ಸನ್ನು ಪಡೆಯುವ ಹಂಬಲವಿರಲಿದೆ. ನೀವು ನೋಡಿದ್ದೇ ಸತ್ಯ ಎಂದು ತಿಳಿದುಕೊಳ್ಳುವುದು ಬೇಡ. ಯಾರಿಗೂ ನಿಮ್ಮ ಅವಶ್ಯಕತೆ ಇಲ್ಲದೇ ಹೋಗಬಹುದು. ಸ್ನೇಹಿತರಿಗೆ ಸಾಲವಾಗಿ ಹಣವನ್ನು ಪುನಃ ಬರುವ ನಿರೀಕ್ಷೆ ಇಲ್ಲದೇ ಕೊಡುವಿರಿ. ಈ ವಾರ ಸಾಮಾಜಿಕ ತಾಣದಿಂದ ಇದ್ದಕಿದ್ದಂತೆ ಪ್ರೇಮ ಉಂಟಾಗಬಹುದು. ಸಹೋದರಿಯು ಹಣಕ್ಕಾಗಿ ನಿಮ್ಮನ್ನು ಕಾಡಬಹುದು. ರವಿ ದಶೆ ವೈದ್ಯವೃತ್ತಿಯವ ದಿಕ್ಕು ಬದಲಾಗುವುದು.

ಕನ್ಯಾ ರಾಶಿ :

ರಾಶಿಯ ಅಧಿಪತಿ ಈ ವಾರ ಇದೇ ರಾಶಿಗೆ ಸೂರ್ಯನ ಜೊತೆಯೇ ಸಂಚಾರ ಮಾಡುವನು. ಧೈರ್ಯ, ಮನೋಬಲ ಎರಡೂ ಅತಿಯಾಗಿದ್ದು, ಯಾವುದೇ ಬೌದ್ಧಿಕ ಸಮಸ್ಯೆಗಳನ್ನು ನಿರಾಯಾಸವಾಗಿ ಬಗೆಹರಿಸುವಿರಿ. ಮನಶ್ಶಾಂತಿಗಾಗಿ ಧಾರ್ಮಿಕ ಕಾರ್ಯಗಳನ್ನು ಮಾಡಿಸುವಿರಿ. ಅಕಾಲದಲ್ಲಿ ಸೇವಿಸಿದ ಆಹಾರದಿಂದ ನಿಮಗೆ ಆರೋಗ್ಯವು ಹಾಳಾಗುವುದು. ಮನೆಯಲ್ಲಿ ನೌಕರರ ಕಾರಣಕ್ಕೆ ಸಿಟ್ಟಾಗುವಿರಿ. ಹೊಸ ಸಂಬಂಧದ ಕಡೆ ನಿಮ್ಮ ಚಿತ್ತವು ಇರಲಿದೆ. ಈ ವಾರ ಒಂದೇ ಕೆಲಸವನ್ನು ನಿರಂತರ ಮಾಡುವುದು ಇಷ್ಟವಾಗಲಿದೆ. ಸಂಗಾತಿಯ ಭಾವನೆಗೆ ಬೆಲೆ ಕೊಟ್ಟು ಸಂತೋಷಪಡಿಸುವಿರಿ. ಗೃಹನಿರ್ಮಾಣ ಕಾರ್ಯ ಕಾರಣಾಂತರಗಳಿಂದ ಮುಂದೆ ಹೋಗದು. ನಿಮಗೆ ಬೇಕಾದ ಅವಕಾಶವು ಸಿಗದೇ ಒದ್ದಾಡುವಿರಿ. ಬುಧ ದಶೆ ಒಳ್ಳೆಯ ದಶೆಯಾಗಲಿದೆ.

ತುಲಾ ರಾಶಿ :

ಈ ರಾಶಿಯವರಿಗೆ ಈ ವಾರ ಶುಭ. ರಾಶಿಯ ಅಧಿಪತಿ ಶತ್ರುವಿನ‌ ರಾಶಿಯಲ್ಲಿ, ಮಿತ್ರನ ನಕ್ಷತ್ರದಲ್ಲಿ ಸಂಚಾರ ಮಾಡುವನು. ಸ್ತ್ರೀಯರ ಉಪಸ್ಥಿತಿಯು ನಿಮಗೆ ಬಲವನ್ನು ತಂದುಕೊಡುವುದು. ವಿದೇಶದ ಮಿತ್ರರ ಸಹಾಯದಿಂದ ನೀವು ಉದ್ಯಮವು ವಿಸ್ತಾರವಾಗಬಹುದು. ಏಕಾದಶದಲ್ಲಿ ಶುಕ್ರನು ಧಾರ್ಮಿಕ ಆಚರಣೆಯ ಕಡೆಗೆ ಸೆಳೆದು ಒಯ್ಯುವನು. ಅಧಿಕ ಓಡಾಟದಿಂದ ನೀವು ಆಯಾಸಗೊಳ್ಳುವಿರಿ. ಹಣದ ಹರಿವು ಅಲ್ಪವಾಗಿ ಇರುವುದು. ಆಪ್ತರನ್ನು ಕಳೆದುಕೊಂಡು ಬೇಸರಿಸುವಿರಿ. ಕಲಾವಿದರು ಕಲಾ‌ಪ್ರದರ್ಶನಕ್ಕೆ ದೂರಪ್ರಯಾಣವನ್ನು ಮಾಡುವಿರಿ. ನಿದ್ರೆಯು ಕಡಿಮೆಯಾದ ಕಾರಣ ಕಾರ್ಯದಲ್ಲಿ ಉತ್ಸಾಹ ಕಡಿಮೆ ಇರಲಿದೆ‌. ಈ ವಾರ ಪ್ರೇಮಿಯ ಜೊತೆ ಹರಟೆ ಹೊಡೆಯಲು ಮನೆಯವರ ಅನುಮತಿ ಸಿಗದು. ಸ್ತ್ರೀಸಂಬಂಧದ ವಿಷಯದಲ್ಲಿ ಆರೋಪವು ಕೇಳಿಬರಬಹುದು. ನೇರವಾಗಿ ಹೇಳುವ ಸ್ವಭಾವವು ಎಲ್ಲ ಸನ್ನಿವೇಶದಲ್ಲಿಯೂ ಸಾಧುವಾಗದು.

ವೃಶ್ಚಿಕ ರಾಶಿ :

ಇದು ರಾಶಿಚಕ್ರದ ಎಂಟನೇ ರಾಶಿಯಾಗಿದ್ದು ಈ ವಾರ ತಂದೆಗೆ ಅನಿವಾರ್ಯವಾದ ಧನಸಹಾಯವನ್ನು ನೀವು ಮಾಡುವಿರಿ. ಬೇರೆ ಕಡೆಯಿಂದ ಬಂದ ಅಲ್ಪಾಲ್ಪ ಹಣವನ್ನು ಸಂಗ್ರಹಿಸಲು ಪ್ರಯತ್ನಿಸಿ. ಇಲ್ಲವಾದರೆ ಸಂಪತ್ತನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಈ ವಾರ ನಿಮಗೆ ಅಸಾಧ್ಯವನ್ನು ಸಾಧಿಸುವ ಹಠವು ಬೇಡವಾದೀತು. ಉದ್ಯಮದಲ್ಲಿ ಹಿನ್ನಡೆಯಾಗುವುದು ನಿಮಗೆ ಮೊದಲೇ ಗೊತ್ತಿದ್ದೂ ಪ್ರಯತ್ನಿಸುವಿರಿ. ಸಂಸ್ಥೆಯ ಮುಖ್ಯಸ್ಥರಾಗಲು ಆಹ್ವಾನವು ಬರಬಹುದು. ಅನಪೇಕ್ಷಿಯ ವಿಚಾರವನ್ನು ಪ್ರಸ್ತಾಪಿಸಿಕೊಂಡು ಕಾಲಹರಣ ಮಾಡುವಿರಿ. ಈ ವಾರ ತಾಯಿಯ ವಿಚಾರದಲ್ಲಿ ನೀವು ಕೋಪವು ಪದೆ‌ ಪದೆ ಬರಲಿದೆ. ದ್ವಾದಶ ಸ್ಥಾನದಲ್ಲಿ ತನ್ನ ನಕ್ಷತ್ರದಲ್ಲಿ ಇರುವುದು ನಿಮಗೆ ಶ್ರೇಯಸ್ಸು. ಉದ್ಯಮಿಗಳಿಗೆ ಉದ್ಯಮವನ್ನು ವಿಸ್ತರಿಸುವ ಚಿಂತನೆಯಲ್ಲಿ ಇರುವಿರಿ.

ಧನು ರಾಶಿ :

ಈ ತಿಂಗಳ ಮೂರನೇ ವಾರದಲ್ಲಿ ನಿಮ್ಮನ್ನು ದುರುಪಯೋಗ ಮಾಡಿಕೊಳ್ಳುವ ಸಂಭವವೇ ಹೆಚ್ಚು.‌ ನೀವು ಆಯ್ಕೆ ಆಗಿದ್ದು ಯಾವುದಕ್ಕೋ ಕೆಲಸವು ಮತ್ಯಾವುದೋ ಆಗಲಿದೆ. ಅನಾರೋಗ್ಯವು ಚಿಕಿತ್ಸೆಯಾಗಿ ಪರಿಣಮಿಸಬಹುದು. ಉತ್ತಮ ಭೂಮಿಯ ಲಾಭವನ್ನು ಪಡೆಯುವಿರಿ. ಈ ವಾರ ಅಪಾಯಯಕ್ಕೆ ಸಿಕ್ಕಿಕೊಳ್ಳುವ ಸಂಭವವಿದೆ. ಧನವ್ಯಯವನ್ನು ನಿಮ್ಮ ಜಾಣ್ಮೆಯಿಂದ ತಪ್ಪಿಸಿಕೊಳ್ಳುವಿರಿ‌. ಆದರೂ ಅಪರಿಚಿತರಿಗೆ ಅಲ್ಪ ಧನಸಹಾಯವನ್ನು ಮಾಡಬೇಕಾಗುವುದು. ಕೋಪದ ನಿಯಂತ್ರಣವು ಕಷ್ಟವಾದೀತು. ಗುರುದಶೆ ನಡೆಯುತ್ತಿದ್ದರೆ ಅವರಿಗೆ ಉತ್ತಮ ಅವಕಾಶ, ಸ್ಥಾನಮಾನ, ಧೈರ್ಯ, ಸಕಾರಾತ್ಮಕ ಬದಲಾವಣೆ ಎಲ್ಲವೂ ಒಂದೊಂದಾಗಿ ಅನುಭವಕ್ಕೆ ಬರುವುದು. ಸಂಸಾರದಲ್ಲಿ ನಿರಾಸಕ್ತಿಯು ಹೆಚ್ಚಾಗುವುದು. ಸಂಗಾತಿಯ ಜೊತೆ ನಿಮಗೆ ಸಮಯ ಕಳೆಯಲೂ ಕಷ್ಟವಾದೀತು. ಇಷ್ಟದವರನ್ನು ನೀವು ಭೇಟಿಯಾಗುವಿರಿ.

ಮಕರ ರಾಶಿ :

ಈ ರಾಶಿಯವರು ಈ ವಾರದಲ್ಲಿ ಶತ್ರುವಿನ ಮೇಲೆ ಸೇಡು ತೀರಿಸಿಕೊಳ್ಳಲು ಅಧಿಕ ಖರ್ಚನ್ನು ಮಾಡುವಿರಿ. ಉದ್ಯಮಿಗಳಿಗೆ ನೌಕರರ ಕಲಹವನ್ನು ಸರಿ ಮಾಡುವುದೇ ಹೆಚ್ಚಾಗುವುದು. ಸ್ನೇಹಿತರ ಸಹಕಾರದಿಂದ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಉದ್ಯಮಕ್ಕೆ ಬೇಕಾದ ವಿವರಗಳನ್ನು ಅನುಭವಿಗಳಿಂದ ಪಡೆಯಿರಿ. ಸ್ನೇಹಿತನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವಿರಿ. ಈ ವಾರ ಉದ್ಯಮಿಗಳು ನಿಮ್ಮ ಜೀವನೋತ್ಸಾಹವನ್ನು ಹೆಚ್ಚಿಸುವರು. ಮಾತನಾಡುವ ವೇಗದಲ್ಲಿ ಏನನ್ನಾದರೂ ಹೇಳಿಬಿಡುವಿರಿ. ಶನಿ ದಶೆ ನಿಮಗೆ ಉತ್ಕೃಷ್ಟ ದಶೆಯಾಗಲಿದೆ. ನಿಮಗೆ ಜಯದ ಸಂಭ್ರಮವು ಆಗಾಗ ಸಣ್ಣ ಸಣ್ಣ ಸಂಗತಿಗಳಲ್ಲಿ ಸಿಗಲಿದೆ. ಕಾರ್ಯದಲ್ಲಿ ಏಕಾಗ್ರತೆ ಇರಲಿ.

ಕುಂಭ ರಾಶಿ :

ಈ ವಾರದಲ್ಲಿ ನಿಮಗೆ ಶುಭವಿದ್ದು, ನಿಮ್ಮ‌ ಸಮ್ಮುಖದಲ್ಲಿ ಕುಟುಂಬದ ಸಮಸ್ಯೆಗಳು ಬಗೆಹರಿಯಬಹುದು. ಬಹಳ ದಿನಗಳ ಅನಂತರ ಸಾರ್ವಜನಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಉತ್ಸಾಹವೂ ಇರಲಿದೆ. ನಿರುದ್ಯೋಗದ ಸ್ಥಿತಿಯು ದಾಯಾದಿಗಳಿಗೆ ಸಂತಸವಾಗುವುದು. ಒತ್ತಡದ ನಡುವೆ ವಿವಾಹಕ್ಕೆ ಮಾತುಕತೆಯಾಗುವುದು. ಈ ವಾರ ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದ ಸಕಾರಾತ್ಮಕ ಆಲೋಚನೆಗಳನ್ನು ಆಪ್ತರ ಜೊತೆ ಹಂಚಿಕೊಳ್ಳಿ ನಿಮ್ಮ ಯೋಜನೆಗೆ ಬೆನ್ನೆಲುಬಾಗಿ ನಿಲ್ಲುವವರು ಬೇಕಾಗಿದ್ದರೆ. ಅಧಿಕ ಖರ್ಚನ್ನು ಮಾಡಬೇಕಾಗುವುದು. ನಿಮ್ಮ ದುರಭ್ಯಾಸವನ್ನು ಇನ್ನೊಬ್ಬರಿಗೂ ಹಿಡಿಸುವ ಸಾಧ್ಯತೆ ಇದೆ. ಭವಿಷ್ಯದ ಆಗುಹೋಗುಗಳ ಬಗ್ಗೆ ಅತಿಯಾದ ಚಿಂತೆ ಇರಲಿದೆ. ಸಿಕ್ಕಿದ್ದನ್ನು ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿಯು ನಿಮ್ಮದಾಗಿದೆ.

ಇದನ್ನೂ ಓದಿ: ನವರಾತ್ರಿಯ 9 ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು? ಪಿತೃ ಪಕ್ಷದಲ್ಲಿ ಬಟ್ಟೆ ಖರೀದಿ ಸೂಕ್ತವೇ?

ಮೀನ ರಾಶಿ :

ರಾಶಿ ಚಕ್ರದ ಹನ್ನೆರಡನೇ ರಾಶಿಯವರಿಗೆ ಈ ವಾರ ಆಲಸ್ಯದಿಂದ ಕಛೇರಿಯ ಕೆಲಸಗಳು ವಿಳಂಬವಾಗುವುದು. ಶನಿಯು ಈ ರಾಶಿಯಲ್ಲಿ ತನ್ನ ನಕ್ಷತ್ರದಲ್ಲಿ ಇದ್ದು ಶನಿ ದಶೆ ಉತ್ತಮ. ನಿಮ್ಮ ಬಗ್ಗೆ ಪ್ರಶಂಸೆಯ ನುಡಿಗಳು ಕೇಳಿಬರಬಹುದು. ವಿದ್ಯಾರ್ಥಿಗಳಿಗೆ ಓದಲು ಸಮಯವನ್ನು ಹೊಂದಿಕೆಯಾಗದು. ಪೂರಕ ವಾತಾವರಣದಲ್ಲಿ ಕೊರತೆ ಇರುವುದು. ಹೂಡಿಕೆಯ ವಿಚಾರದಲ್ಲಿ ಸಕಾರಾತ್ಮಕ ಆಲೋಚನೆಯು ಇರದು. ಸಾಡೇಸಾಥ್ ಮಧ್ಯಾವಧಿಯಲ್ಲಿದ್ದು ನೀವು ತಾಳ್ಮೆಯಿಂದ ಇದ್ದರೂ ನೋಡುಗರ ಕಣ್ಣಿಗೆ ಉದ್ವೇಗದಂತೆ ತೋರುವಿರಿ. ಪುಣ್ಯದ ಫಲವು ಸಿಗುವುದು. ಸಹೋದ್ಯೋಗಿಗಳ ವರ್ತನೆಯು ನಿಮಗೆ ಆಚ್ಚರಿಗೊಳ್ಳುವಿರಿ. ಕೆಲಸವನ್ನು ಬಿಡಬೇಕಾದ ಸಂದರ್ಭ ಬಂದರೂ ಹೇಗೋ ಉಳಿಸಿಕೊಳ್ಳುವಿರಿ.

– ಲೋಹಿತ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ