Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 31ರಿಂದ ಏಪ್ರಿಲ್ 6ರ ತನಕ ವಾರಭವಿಷ್ಯ  

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 31ರಿಂದ ಏಪ್ರಿಲ್ 6ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 31ರಿಂದ ಏಪ್ರಿಲ್ 6ರ ತನಕ ವಾರಭವಿಷ್ಯ  
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Mar 31, 2024 | 1:01 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 31ರಿಂದ ಏಪ್ರಿಲ್ 6ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಈ ವಾರ ತುಂಬ ಆರಾಮವಾಗಿ ಇದ್ದುಬಿಡೋಣ ಎಂದೆನಿಸಲಿದೆ. ಆ ಕಾರಣಕ್ಕಾಗಿ ಕೆಲವು ಕೆಲಸಗಳನ್ನು ಮುಂದಕ್ಕೆ ಹಾಕುವಂತಾಗುತ್ತದೆ. ಆದ್ದರಿಂದ ಯಾವ ಕೆಲಸದಲ್ಲೂ ಆಲಸ್ಯ ಮಾಡಬೇಡಿ. ನೀವೇ ಮಾಡಬೇಕಾದ ಕೆಲಸಗಳು ಯಾವ್ಯಾವು ಬಾಕಿ ಇವೆಯೋ ಅವುಗಳನ್ನು ಮಾಡಿ ಮುಗಿಸುವುದಕ್ಕೆ ಒಂದು ವೇಳಾಪಟ್ಟಿ ಹಾಕಿಕೊಳ್ಳಬೇಕಾಗುತ್ತದೆ. ಮೇಲಧಿಕಾರಿಗಳ ಜತೆಗೆ ಯಾವುದೇ ಮುಖ್ಯ ವಿಚಾರವನ್ನು ಮಾತನಾಡುತ್ತಿದ್ದೀರಿ ಅಂತಾದರೆ ಇ- ಮೇಲ್ ಮೂಲಕ ಸಂವಹನ ಮಾಡುವುದು ಉತ್ತಮ. ಈ ಹಿಂದೆ ನಿಮ್ಮ ಕೈಯಿಂದ ದುಡ್ಡು ಹಾಕಿ ಮಾಡಿಕೊಟ್ಟ ಕೆಲಸದಲ್ಲಿ ಬಾಕಿ ಬರಬೇಕಿದ್ದಲ್ಲಿ ಈಗ ಪ್ರಯತ್ನಿಸಿದರೆ ಆ ಹಣ ಬರುವಂಥ ಸಾಧ್ಯತೆಗಳಿವೆ. ಇನ್ನು ಮನೆಯಲ್ಲಿ ಶುಭ ಕಾರ್ಯಗಳಿಗೆ ಸಿದ್ಧತೆ ಆರಂಭವಾಗಲಿದೆ. ಇದಕ್ಕಾಗಿ ಕ್ರೆಡಿಟ್ ಕಾರ್ಡ್ ಬಳಸಬೇಕೆಂದು ಇರುವವರು ಅಥವಾ ಪರ್ಸನಲ್ ಲೋನ್ ಮಾಡಬೇಕು ಎಂದು ಇರುವವರಿಗೆ ಹಣಕಾಸಿನ ವ್ಯವಸ್ಥೆ ಸುಲಭವಾಗಿ ಆಗುತ್ತದೆ. ಆದರೆ ಆತುರ ಮಾಡಲಿಕ್ಕೆ ಹೋಗಬಾರದು. ಜತೆಗೆ ಮನೆಗೆ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಹ ಖರೀದಿಸಿ, ತರುವುದಕ್ಕೆ ಮನಸ್ಸು ಮಾಡಲಿದ್ದೀರಿ. ಇದರ ಜತೆಗೆ ಶಾಪಿಂಗ್ ಮಾಡುವ ಸಲುವಾಗಿ ನೀವಿರುವ ಸ್ಥಳದಿಂದ ಬೇರೆಡೆಗೆ ತೆರಳುವಂಥ ಸಾಧ್ಯತೆ ಇದೆ. ಈ ವಾರದಲ್ಲಿ ನೀವು ಕಾರು- ಬೈಕ್ ಚಲಾಯಿಸುವಾಗ ಬಹಳ ಜಾಗ್ರತೆಯಿಂದ ಇರಬೇಕು. ಅವುಗಳ ಸರ್ವೀಸ್ ಸಮಯಕ್ಕೆ ಸರಿಯಾಗಿ ಆಗಿದೆಯಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಕೃಷಿಕರಿಗೆ ದೇವತಾರಾಧನೆ, ಹೋಮ- ಹವನ, ಪೂಜೆಗಳಿಗೆ ಹಣ ಖರ್ಚು ಮಾಡುವಂಥ ಯೋಗ ಇದೆ. ಮನೆಗೆ ಸಂಬಂಧಿಕರು ಸಹ ಭೇಟಿ ನೀಡಲಿದ್ದು, ಇದರಿಂದ ಖರ್ಚಿನ ಪ್ರಮಾಣ ಜಾಸ್ತಿ ಆಗಲಿದೆ. ಒಂದಿಷ್ಟು ಒತ್ತಡದ ಸನ್ನಿವೇಶಗಳು ಎದುರಿಸಬೇಕಾಗುತ್ತದೆ. ವೃತ್ತಿನಿರತರಿಗೆ ನಿಶ್ಚಿತ ಖರ್ಚುಗಳ ಹೊರೆ ಜಾಸ್ತಿ ಆಗಲಿದೆ. ಬಾಡಿಗೆ ಜಾಸ್ತಿ ಮಾಡಬಹುದು, ಈಗಾಗಲೇ ನಿಮ್ಮ ಬಳಿ ಕೆಲಸ ಮಾಡುತ್ತಿರುವವರು ಹೆಚ್ಚಿನ ವೇತನಕ್ಕೆ ಬೇಡಿಕೆ ಇಟ್ಟು, ಅದನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಒತ್ತಡ ಸೃಷ್ಟಿ ಆಗುತ್ತದೆ. ಕೆಲವು ವಿಷಯಗಳ ವ್ಯಾಸಂಗ ಕಷ್ಟ ಎಂದು ಬಹಳ ಅನಿಸತೊಡಗುತ್ತದೆ. ಮಹಿಳೆಯರಿಗೆ ತವರು ಮನೆ ಕಡೆಯಿಂದ ಶುಭ ಕಾರ್ಯಗಳಿಗೆ ಆಹ್ವಾನ ಬರಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಉದ್ಯೋಗ ಮಾಡುತ್ತಿರುವವರು ಸ್ವಂತ ಉದ್ಯಮ ಅಥವಾ ವ್ಯವಹಾರವನ್ನು ಆರಂಭಿಸುವ ಬಗ್ಗೆ ನಿರ್ಧಾರ ಮಾಡಲಿದ್ದೀರಿ. ಈಗಾಗಲೇ ಸ್ವಂತ ಉದ್ಯೋಗ, ವ್ಯವಹಾರ ಅಥವಾ ಉದ್ಯಮವನ್ನು ಮಾಡುತ್ತಿರುವವರು ಅದರ ವಿಸ್ತರಣೆಗಾಗಿ ತೀರ್ಮಾನವನ್ನು ಕೈಗೊಳ್ಳಲಿದ್ದೀರಿ. ಬ್ಯಾಂಕ್ ಮೂಲಕ ಹಣಕಾಸಿನ ಸಾಲಕ್ಕಾಗಿ ಪ್ರಯತ್ನಿಸುವ ಸಾಧ್ಯತೆ ಇದೆ. ನಿಮ್ಮಲ್ಲಿ ಕೆಲವರಿಗೆ ಸ್ನೇಹಿತರು ಅಥವಾ ಸಂಬಂಧಿಕರೇ ಬಂಡವಾಳವನ್ನು ಒದಗಿಸುವ ಸಾಧ್ಯತೆಗಳು ಕೂಡ ಇವೆ. ಇನ್ನು ನಿಮ್ಮಲ್ಲಿ ಕೆಲವರಿಗೆ ಈಗಾಗಲೇ ಸ್ವಂತ ಮನೆ ಇದ್ದರೂ ಎರಡನೇ ಮನೆ ನಿಮಗಾಗಿಯೇ ಖರೀದಿಸುವಂಥ ಯೋಗ ಸಹ ಇದೆ. ಈಗಾಗಲೇ ಸೂಕ್ತ ಸ್ಥಳ ಅಥವಾ ಮನೆಗಾಗಿ ಹುಡುಕಾಟ ನಡೆಸುತ್ತಿದ್ದಲ್ಲಿ ಅದು ಸಿಗುವ ಅವಕಾಶಗಳು ಹೆಚ್ಚಿವೆ. ಆದರೆ ನಿಮ್ಮ ನಿರ್ಧಾರಕ್ಕೆ ಆಪ್ತ ವಲಯದಲ್ಲಿ ಅಥವಾ ಕುಟುಂಬ ಸದಸ್ಯರಲ್ಲಿಯೇ ಎರಡೆರಡು ಅಭಿಪ್ರಾಯಗಳು ವ್ಯಕ್ತವಾಗಬಹುದು. ಹೀಗೆ ಆಯಿತು ಎಂಬ ಕಾರಣಕ್ಕೆ ನಿಮ್ಮ ಮನಸ್ಸಿಗೂ ಒಂದಿಷ್ಟು ಬೇಸರ ಆಗಬಹುದು. ಆದರೆ ಅಂತಿಮವಾಗಿ ಒಳ್ಳೆಯದೇ ಆಗಲಿದೆ. ಕೃಷಿಕರಿಗೆ ಡೇರಿ ವ್ಯವಹಾರ ಕೈ ಹಿಡಿಯಲಿದೆ. ಪಶು ಸಾಕಣೆಯನ್ನು ಮಾಡುತ್ತಿರುವವರಿಗೆ ಲಾಭದ ಪ್ರಮಾಣವು ಹೆಚ್ಚಾಗಲಿದೆ. ಇನ್ನು ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ಉದ್ದೇಶದಿಂದಲೇ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಿದ್ದೀರಿ. ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವವರಿಗೆ ಪ್ರತಿಷ್ಠಿತ ಕಂಪನಿಯ ಜತೆಗೆ ವ್ಯವಹಾರದ ಮಾತುಕತೆಗಳು ನಡೆಯುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಚೌಕಾಶಿಗೆ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಂಗಾತಿಯ ಮಾತನ್ನು ಕೇಳಿಸಿಕೊಳ್ಳಿ. ಅವರು ನೀಡುವ ಸಲಹೆಗಳನ್ನು ಪಾಲಿಸುವ ಬಗ್ಗೆ ಗಂಭೀರವಾಗಿ ಆಲೋಚಿಸಿ. ವೃತ್ತಿನಿರತರು ನಿಮಗೆ ಅಗತ್ಯವೇ ಇಲ್ಲದಿದ್ದರೂ ಕೂಡಿಟ್ಟ ಹಣ ಅಚಾನಕ್ ಆಗಿ ಖರ್ಚು ಮಾಡುವ ಸಾಧ್ಯತೆ ಇದೆ ಅಥವಾ ನೀವಾಗಿಯೇ ಬೇಡದ ಜವಾಬ್ದಾರಿ ಅಥವಾ ಉಸಾಬರಿಯನ್ನು ತಲೆ ಮೇಲೆ ಹಾಕಿಕೊಂಡು, ಖರ್ಚು ಮಾಡಿಬಿಡುವಂಥ ಸಾಧ್ಯತೆ ಇದೆ. ಆದ್ದರಿಂದ ಮನಸ್ಸಿನ ಮೇಲೆ ಹತೋಟಿ ಸಾಧಿಸುವುದಕ್ಕೆ ಪ್ರಯತ್ನಿಸಿ. ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಿ ಅಂತಾದರೆ ಖರ್ಚಿನ ವಿಚಾರದಲ್ಲಿ ಇನ್ನೂ ಹೆಚ್ಚು ಜಾಗ್ರತೆಯಿಂದ ಇರುವುದು ಅತ್ಯವಶ್ಯ. ವಿದ್ಯಾರ್ಥಿಗಳು ನೀವು ತೆಗೆದುಕೊಂಡಿರುವ ಕೋರ್ಸ್ ಅನ್ನು ಬದಲಾಯಿಸಿಕೊಳ್ಳಬೇಕು ಎಂದಿದ್ದರೆ ಏಕಾಏಕಿ ದೊಡ್ಡ ದೊಡ್ಡ ತೀರ್ಮಾನಗಳನ್ನು ತೆಗೆದುಕೊಳ್ಳಬೇಡಿ. ಇದರಿಂದ ಆ ನಂತರ ಬೇಸರ ಪಡುವಂತಾಗುತ್ತದೆ. ಯಾವುದೇ ಮುಖ್ಯ ತೀರ್ಮಾನವನ್ನು ತೆಗೆದುಕೊಳ್ಳುವ ಮುನ್ನ ಅನುಭವಿಗಳು- ಹಿರಿಯರ ಮಾರ್ಗದರ್ಶನವನ್ನು ಪಡೆದುಕೊಳ್ಳಿ. ಮಹಿಳೆಯರು ನಿಮ್ಮ ಸಾಮರ್ಥ್ಯಕ್ಕೂ ಮೀರಿದ ಕೆಲಸ ವಹಿಸಿಕೊಂಡ ಪರಿಣಾಮವನ್ನು ಈ ವಾರ ಎದುರಿಸಲಿದ್ದೀರಿ. ಸಾರ್ವಜನಿಕ ಸಾರಿಗೆಯಲ್ಲಿ ಸಂಚಾರ ಮಾಡುವಂಥವರು ಮುಖ್ಯ ವಸ್ತುಗಳ ಬಗ್ಗೆ ಜಾಗ್ರತೆಯನ್ನು ವಹಿಸಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಉದ್ಯೋಗ ಬದಲಾವಣೆಗಾಗಿ ಪ್ರಯತ್ನಿಸುತ್ತಿರುವವರಿಗೆ ಬಹಳ ಉತ್ತಮವಾದ ಸಮಯ ಇದು. ಈಗಾಗಲೇ ಉಳಿತಾಯ ಮಾಡಿದಂಥ ಹಣವನ್ನು ತೆಗೆದು, ಬೇರೆ ಕಡೆಗೆ ಹೂಡಿಕೆ ಮಾಡಲಿದ್ದೀರಿ. ಯಾರು ವೃತ್ತಿಪರರು ಇದ್ದೀರೋ ಅಂಥವರಿಗೆ ಹೊಸದಾಗಿ ದೊಡ್ಡ ಸಂಸ್ಥೆಗಳ ಜತೆಗೆ ಕೆಲಸಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಬಹುದು. ಈ ವಾರದಲ್ಲಿ ನಿಮ್ಮ ಸ್ನೇಹಿತರು ತರುವಂಥ ರೆಫರೆನ್ಸ್ ಗಳ ಬಗ್ಗೆ ಗಂಭೀರವಾಗಿ ಪರಿಗಣಿಸುವುದು ಒಳ್ಳೆಯದು. ಇದರಿಂದ ನಿಮಗೆ ಆದಾಯ ಅಥವಾ ಲಾಭ ಹೆಚ್ಚಳ ಆಗಲಿದೆ. ನಿಮ್ಮಲ್ಲಿ ಕೆಲವರು ಮನೆಗೆ ಟೀವಿ, ಸೋಫಾ, ಗೃಹೋಪಯೋಗಿ ವಸ್ತುಗಳು ಮೊದಲಾದ ವಸ್ತುಗಳನ್ನು ಖರೀದಿಸಿ ತರಬೇಕು ಎಂಬ ಉದ್ದೇಶ ಏನಾದರೂ ಇದ್ದಲ್ಲಿ ಈ ವಾರ ಕೊಳ್ಳಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ನಿಮ್ಮ ಸಮರ್ಪಣಾ ಭಾವಕ್ಕೆ ಮೆಚ್ಚುಗೆ ವ್ಯಕ್ತವಾಗಲಿದೆ. ನಿಮ್ಮ ಬಗ್ಗೆ ಹಗುರವಾಗಿ ಮಾತನಾಡಿದ್ದವರು ಬೆರಗುಗಣ್ಣಿನಿಂದ ನೋಡುವಂತಾಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಅಲ್ಪ ಕಾಲಕ್ಕಾದರೂ ಉದ್ಯೋಗ ನಿಮಿತ್ತವಾಗಿ ವಿದೇಶಕ್ಕೆ ತೆರಳುವಂಥ ಅವಕಾಶ ಬರಬಹುದು. ಕೃಷಿಕರು ಮನೆಗೆ ರಾಸುಗಳನ್ನು ಖರೀದಿಸಿ ತರುವಂಥ ಯೋಗ ಇದೆ. ಯಾರು ಈಗಾಗಲೇ ಡೇರಿ ವ್ಯವಹಾರಗಳನ್ನು ಮಾಡುತ್ತಾ ಇರುವವರು ಅದರ ವಿಸ್ತರಣೆಗಾಗಿ ಹೂಡಿಕೆಯನ್ನು ಮಾಡಲಿದ್ದೀರಿ. ಹಣ್ಣು- ಹೂವಿನ ಬೆಳೆಯನ್ನು ಬೆಳೆಯುವಂಥವರಿಗೆ ಆದಾಯವು ಹೆಚ್ಚಾಗಲಿದೆ. ಕೃಷಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುತ್ತಿರುವಂಥವರು, ಅಂಥ ವಿಚಾರಗಳಿಗೆ ಇರುವಂಥ ಸೋಷಿಯಲ್ ಮೀಡಿಯಾ ಪೇಜ್ ನಿರ್ವಹಣೆ ಮಾಡುವಂಥವರಿಗೆ ಮೇಲಧಿಕಾರಿಗಳಿಂದ ಮೆಚ್ಚುಗೆ ಮಾತುಗಳನ್ನು ಕೇಳಿಸಿಕೊಳ್ಳಲಿದ್ದೀರಿ. ವೃತ್ತಿನಿರತರು ಸೋಷಿಯಲ್ ಕಾಂಟ್ಯಾಕ್ಟ್ ಗಳನ್ನು ಹೆಚ್ಚು ಮಾಡಿಕೊಳ್ಳಲಿದ್ದೀರಿ. ಪಾರ್ಟಿ ಹಾಗೂ ಗೆಟ್ ಟು ಗೆದರ್ ಗಳಲ್ಲಿ ಭಾಗವಹಿಸಲಿದ್ದು, ಅಲ್ಲಿ ಹೊಸದಾಗಿ ಪರಿಚಯ ಆದವರು ನಿಮ್ಮ ವೃತ್ತಿಗೆ ಅನುಕೂಲ ಆಗುವಂಥ ಸಹಾಯ ಮಾಡಲಿದ್ದಾರೆ. ರಿಸ್ಕ್ ಇರುವಂಥ ಕೆಲಸವನ್ನು ಧೈರ್ಯ ಮಾಡಿ, ಮುಗಿಸಲಿದ್ದೀರಿ. ವಿದ್ಯಾರ್ಥಿಗಳು ಗುರು ಗ್ರಹದ ಆರಾಧನೆಯನ್ನು ಮಾಡಿದಲ್ಲಿ ನೆನಪಿನ ಶಕ್ತಿ ವೃದ್ಧಿ ಆಗಲಿದೆ. ಇನ್ನು ಹಳದಿ ಬಣ್ಣದ ತುಂಡು ಬಟ್ಟೆಯೊಂದನ್ನು ನಿಮ್ಮ ಬಳಿ ಇರಿಸಿಕೊಳ್ಳುವುದು ಸಹ ಉತ್ತಮ ಫಲಿತಾಂಶವನ್ನು ನೀಡಲಿದೆ. ಮಹಿಳೆಯರು ತೀರ್ಥಕ್ಷೇತ್ರಗಳ ದರ್ಶನ ಮಾಡುವಂಥ ಯೋಗ ಇದೆ. ಸಂಬಂಧಿಕರ ಜತೆಗೂಡಿ ತೆರಳಬಹುದು. ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಪದೋನ್ನತಿ ಆಗಬಹುದು. ಮತ್ತು ಅರೆಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಉದ್ಯೋಗ ಕಾಯಂ ಆಗಬಹುದು.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಮ್ಮ ಆತ್ಮವಿಶ್ವಾಸವೇ ಕಡಿಮೆ ಆಗುವಂಥ ಬೆಳವಣಿಗೆಗಳು ಆಗಬಹುದು. ಬ್ಯಾಂಕ್ ವ್ಯವಹಾರಗಳಲ್ಲಿ ಕೆಲವು ತಪ್ಪುಗಳಾಗಿ, ಇತರರಿಂದ ಬೈಗುಳವನ್ನು ಕೇಳಬೇಕಾಗುತ್ತದೆ. ಇತರರಿಂದ ಆರ್ಡರ್ ಪಡೆದು, ಕೆಲಸ ಮಾಡಿಕೊಡುತ್ತಿರುವವರಿಗೆ ಹೇಳಿದ ಸಮಯಕ್ಕೆ ಕೆಲಸ ಮುಗಿಸುವುದು ಅಸಾಧ್ಯವಾಗುತ್ತದೆ. ಜತೆಯಲ್ಲಿ ಕೆಲಸ ಮಾಡುವವರು, ನಿಮಗಿಂತ ಮೇಲಿನ ಹಂತದಲ್ಲಿ ಇರುವವರು ತಾವು ತಪ್ಪು ಮಾಡಿ, ನಿಮ್ಮ ಕೆಲಸದಲ್ಲೇ ಏನೋ ಲೋಪ ಇದೆ ಎಂಬಂತೆ ಗಾಬರಿ ಹುಟ್ಟಿಸಬಹುದು. ಒಂದು ವೇಳೆ ಈ ರೀತಿಯ ಸನ್ನಿವೇಶ ಉದ್ಭವಿಸಿದಲ್ಲಿ ಧೈರ್ಯಗುಂದಬೇಡಿ. ಎಲ್ಲಿ ತಪ್ಪಾಗಿದೆ ಎಂಬುದನ್ನು ತೋರಿಸುವುದಕ್ಕೆ ಹೇಳಿ, ಮತ್ತು ಅದು ನಿಜವೇ ಎಂಬುದನ್ನು ನೀವೊಮ್ಮೆ ಪರೀಕ್ಷಿಸಿಕೊಳ್ಳಿ. ಏಕಕಾಲಕ್ಕೆ ಹಲವು ಕೆಲಸಗಳನ್ನು ಮಾಡುವುದಕ್ಕೆ ಪ್ರಯತ್ನ ಮಾಡಿದಲ್ಲಿ ತಪ್ಪುಗಳಾಗುತ್ತವೆ. ನಿಮಗೆ ಸರಿ ಎಂದು ಗೊತ್ತಿದ್ದ ವಿಚಾರವನ್ನು ಹೇಳುವುದಕ್ಕೆ ಹಿಂದೆ ಮುಂದೆ ಆಲೋಚಿಸಬೇಡಿ. ಮೇಲಧಿಕಾರಿಗಳ ಜತೆಗೆ ಮುಖ್ಯವಾದ ಚರ್ಚೆಗಳು ಏರ್ಪಾಡಾಗಬಹುದು. ಈ ವೇಳೆ ನೀವು ಮಾಡುತ್ತಿರುವ ಕೆಲಸದ ಬಗ್ಗೆ ಅವರಿಗೆ ಮಾಹಿತಿಯನ್ನು ನೀಡಿ. ಕೃಷಿ ವಲಯದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಂಥ ಸಮಯ. ಇದಕ್ಕಾಗಿ ಹಣ, ಸಮಯ ಮೀಸಲಿಡಲಿದ್ದೀರಿ. ಕೃಷಿ ಯಂತ್ರೋಪಕರಣಗಳನ್ನು ಖರೀದಿಸುವಂಥ ಯೋಗ ಇದೆ. ಇದಕ್ಕಾಗಿ ಬ್ಯಾಂಕ್ ಅಥವಾ ಸಹಕಾರ ಸಂಘಗಳಿಂದ ಸಾಲ ಪಡೆದುಕೊಳ್ಳುವಂಥ ಸಾಧ್ಯತೆ ಇದೆ. ನಿಮ್ಮ ಪ್ರಯತ್ನಕ್ಕೆ ಪ್ರಭಾವಿಗಳ ಶಿಫಾರಸು ಸಹ ದೊರೆಯಲಿದೆ. ವೃತ್ತಿ ನಿರತರಿಗೆ ಬಿಡುವಿಲ್ಲದಷ್ಟು ಕೆಲಸ ಇರುತ್ತದೆ. ಕುಟುಂಬ ಸದಸ್ಯರ ಜತೆಗೆ ಸ್ವಲ್ಪ ಸಮಯ ಕಳೆಯೋಣ ಅಂದುಕೊಂಡರೂ ಸಾಧ್ಯ ಇರದ ಮಟ್ಟಿಗೆ ನಿಮ್ಮ ಹೆಗಲ ಮೇಲೆ ಕೆಲಸಗಳು ಬೀಳುತ್ತವೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಉತ್ತಮ ಅಂಕ, ಸ್ನೇಹಿತರ ಮಧ್ಯೆ ನಿಮ್ಮ ಬಗ್ಗೆ ಉತ್ತಮವಾದ ಗೌರವ ದೊರೆಯಲಿದೆ. ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಇರುವಂಥವರಿಗೆ ಹೆಚ್ಚಿನ ಹುದ್ದೆ, ಜವಾಬ್ದಾರಿಗಳು ದೊರೆಯಲಿವೆ. ಅನಿರೀಕ್ಷಿತವಾಗಿ ದೊಡ್ಡ ಮೊತ್ತ ಸಹ ನಿಮ್ಮ ಕೈ ಸೇರುವಂತಹ ಯೋಗ ಕಂಡು ಬಡುತ್ತಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮಗೆ ಹಲವು ಬಗೆಯಲ್ಲಿ ಲಾಭ ದೊರೆಯುವಂತಹ ಸಾಧ್ಯತೆಗಳನ್ನು ಸೂಚಿಸುತ್ತಿದೆ. ಇಷ್ಟು ಸಮಯ ನೀವು ಪಟ್ಟ ಶ್ರಮಕ್ಕೆ ಫಲಿತಾಂಶ ದೊರೆಯುವುದಕ್ಕೆ ಶುರು ಆಗುತ್ತದೆ. ನಿಮ್ಮದೇ ವೃತ್ತಿಯಲ್ಲಿ ಇರುವಂಥವರು ಪ್ರತಿಭೆಯನ್ನು ಮೆಚ್ಚಿಕೊಳ್ಳಲಿದ್ದಾರೆ. ತಾಂತ್ರಿಕ ಜ್ಞಾನವನ್ನು ಇತರರು ಬೆರಗಿನಿಂದ ನೋಡುವಂತಾಗುತ್ತದೆ. ಉದ್ಯೋಗದ ನಿಮಿತ್ತವಾಗಿ ಕೆಲ ಕಾಲ ದೂರ ಪ್ರದೇಶಗಳಿಗೆ ತೆರಳುವಂತೆ ಸೂಚಿಸುವ ಸಾಧ್ಯತೆಗಳು ಹೆಚ್ಚಿವೆ. ಆರಂಭದಲ್ಲಿಯೇ ಹೇಳಿದಂತೆ ಸ್ಥಾನ ಲಾಭ, ಧನ ಲಾಭ, ವ್ಯಾಪಾರ- ವ್ಯವಹಾರದಲ್ಲಿ ಲಾಭ ಇತ್ಯಾದಿ ಶುಭ ಫಲಗಳಿವೆ. ಕೃಷಿಕರಿಗೆ ಭೂಮಿ ಅಥವಾ ಜಾನುವಾರು ಖರೀದಿ ಮಾಡುವಂತೆ ಕೆಲವರು ಕೇಳಿಕೊಳ್ಳಬಹುದು. ಅನಿರೀಕ್ಷಿತವಾಗಿ ಹಣಕಾಸಿನ ಅನುಕೂಲ ಒದಗಿಬಂದು, ಖರೀದಿ ಮಾಡಿಯೂ ಬಿಡುವಂಥ ಯೋಗಗಳಿವೆ. ಆಹಾರ ಪಥ್ಯದ ವಿಚಾರದಲ್ಲಿ ಮಾಮೂಲಿಗಿಂತ ಹೆಚ್ಚು ಜಾಗ್ರತೆ ವಹಿಸುವುದು ಮುಖ್ಯ, ಇಲ್ಲದಿದ್ದಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವೃತ್ತಿನಿರತರಿಗೆ ಸಂಗಾತಿಗೆ ಬರುವ ಅನುಕೂಲದ ಬಹುಪಾಲು ಪ್ರಯೋಜನ ನಿಮಗೇ ಆಗಲಿದೆ. ನಿಮ್ಮ ವೃತ್ತಿಗೆ ಸಂಬಂಧಿಸಿದ ಸಂಘ- ಸಂಸ್ಥೆಗಳಲ್ಲಿ ಸ್ಥಾನ- ಮಾನಗಳು ಈಗಾಗದಲೇ ಇದ್ದಲ್ಲಿ ಪದೋನ್ನತಿ ಆಗಬಹುದು. ಕಂಪನಿಗಳಲ್ಲಿ ಷೇರು, ಲಾಭದ ಪಾಲು ಇತ್ಯಾದಿ ದೊರೆಯುವಂತಾಗುತ್ತದೆ. ಈ ಹಿಂದೆ ನೀವು ಆರಂಭಿಸಿದ್ದ ವ್ಯವಹಾರ, ಮಾಡಿದ್ದ ಹೂಡಿಕೆ, ಪಟ್ಟ ಶ್ರಮ ಫಲ ನೀಡುವುದಕ್ಕೆ ಆರಂಭಿಸುತ್ತದೆ. ವಿದೇಶ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಲಾಭದ ಪ್ರಮಾಣ ಜಾಸ್ತಿ ಆಗಲಿದೆ. ವಿದ್ಯಾರ್ಥಿಗಳು ಗ್ಯಾಜೆಟ್ ಗಳನ್ನು ಖರೀದಿಸುವಂಥ ಯೋಗ ಇದೆ. ಮಹಿಳೆಯರಿಗೆ ಅನಿರೀಕ್ಷಿತವಾಗಿ ಆದಾಯದ ಮೂಲಗಳಲ್ಲಿ ಜಾಸ್ತಿ ಆಗಲಿದೆ. ಈ ಅವಧಿಯಲ್ಲಿ ಸಾಂಸಾರಿಕವಾಗಿಯೂ ನೆಮ್ಮದಿ, ಶಾಂತಿ ನೆಲೆಸಿರುತ್ತದೆ. ಈ ಕಾರಣಕ್ಕೆ ಇತರ ಕೆಲಸಗಳನ್ನು ಹೆಚ್ಚು ಆಸಕ್ತಿ, ಪರಿಣಾಮಕಾರಿಯಾಗಿ ಮಾಡಬಹುದು.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಈ ವಾರ ಯಾವುದಾದರೂ ಒಳ್ಳೆ ಉದ್ದೇಶಗಳಿಗೆ ಹಣಕಾಸನ್ನು ಹೊಂದಿಸುವುದು ನಿಮಗೆ ಮುಖ್ಯವಾಗುತ್ತದೆ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸಾಲಕ್ಕಾಗಿ ತೀವ್ರವಾದ ಪ್ರಯತ್ನ ಮಾಡುವ ಸಾಧ್ಯತೆ ಇದೆ. ನಿಮ್ಮಲ್ಲಿ ಕೆಲಸವರು ಪ್ರಭಾವಿಗಳ ನೆರವನ್ನು ಸಹ ಪಡೆಯುವ ಬಗ್ಗೆ ಆಲೋಚನೆಯನ್ನು ಮಾಡುತ್ತೀರಿ. ನೀವು ಖರೀದಿ ಮಾಡಬೇಕು ಎಂದಿದ್ದ ಸೈಟು ಅಥವಾ ಸೆಕೆಂಡ್ ಹ್ಯಾಂಡ್ ವಾಹನವನ್ನೇ ನಿಮಗೆ ಆಪ್ತರಾದವರು ಅಥವಾ ಸ್ನೇಹಿತರಾದವರೂ ಕೊಳ್ಳಬೇಕು ಎಂದು ಪ್ರಯತ್ನ ಮಾಡುತ್ತಿರುವುದು ಗೊತ್ತಾಗುತ್ತದೆ. ಈ ಕಾರಣಕ್ಕೆ ಸಣ್ಣ ಮಟ್ಟದ ಅಸಮಾಧಾನ ಉದ್ಭವಿಸುವ ಸಾಧ್ಯತೆಗಳಿವೆ. ಯಾವುದೇ ವಿಚಾರವಾದರೂ ಸರಿ, ಮುಕ್ತವಾಗಿ ಮಾತನಾಡುವುದು ಮುಖ್ಯವಾಗುತ್ತದೆ. ಇನ್ನು ಹೂಡಿಕೆ ಮಾಡಬೇಕು ಎಂದಿರುವವರು ಯಾವುದೇ ಕಾರಣಕ್ಕೂ ನಿಮ್ಮ ಬಳಿ ಇರುವ ಬಜೆಟ್ ಮೀರಿ ಪ್ರಯತ್ನ ಮಾಡುವುದಕ್ಕೆ ಹೋಗಬೇಡಿ. ಕುಟುಂಬ ಸದಸ್ಯರು, ಸಂಗಾತಿ ನೀಡುವಂಥ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ. ಕೃಷಿಕರಾಗಿರುವವರಿಗೆ ನೀವಾಗಿಯೇ ಒಪ್ಪಿಕೊಂಡ ಜವಾಬ್ದಾರಿಯೊಂದನ್ನು ಯಾಕಾದರೂ ಒಪ್ಪಿಕೊಂಡೆನೋ ಎಂಬಂಥ ಸನ್ನಿವೇಶವನ್ನು ತಂದಿಡಲಿದೆ. ಗೊಂದಲ ಮೂಡಿಸುತ್ತಿದೆ ಎಂಬ ಕಾರಣಕ್ಕೆ ಸಮಜಾಯಿಷಿಯನ್ನು ನೀಡುವ ಸಲುವಾಗಿ ನೀವು ಮಾತನಾಡಿದಲ್ಲಿ ಅಹಂಕಾರಿ ಅಂತಲೂ ಅಥವಾ ಮಾತನಾಡದೆ ಸುಮ್ಮನಿದ್ದರೆ ನಿಮಗೆ ಬೇಜವಾಬ್ದಾರಿ ಅಂತಲೂ ಹಣೆಪಟ್ಟಿ ಕಟ್ಟುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ವಿಚಾರದಲ್ಲೂ ಸನ್ನಿವೇಶವನ್ನು ಗಮನಿಸಿ, ಏನು ಮಾಡಬೇಕು ಎಂಬುದನ್ನು ನಿರ್ಧರಿಸಿ. ವೃತ್ತಿನಿರತರಾದವರಿಗೆ ನೀವಾಗಿಯೇ ಮಾಡಿಕೊಂಡ ಕೆಲವು ಕಟ್ಟುಪಾಡುಗಳನ್ನು ಮುರಿಯುವುದು ಅನಿವಾರ್ಯ ಎಂಬಂತಾಗುತ್ತದೆ. ಜೊತೆಗೆ ಈ ಹಿಂದೆ ಯಾವಾಗಲೋ ನಿಮ್ಮಿಂದ ಆದ ತಪ್ಪಿಗೆ ಒಂದೋ ದೂಷಣೆಗೆ ಗುರಿಯಾಗಬೇಕಾಗುತ್ತದೆ ಅಥವಾ ದಂಡವನ್ನು ತೆರಬೇಕಾಗುತ್ತದೆ. ಹೂಡಿಕೆ ಮಾಡಿ, ಅದು ನಷ್ಟದಲ್ಲಿದೆ ಎಂಬ ಕಾರಣಕ್ಕೆ ಬಹುತೇಕ ಮರೆತೇ ಹೋಗಿದ್ದಂತಹ ಇನ್ವೆಸ್ಟ್ ಮೆಂಟ್ ನೀವು ಅಂದುಕೊಂಡಂತೆ ಅಸಲಿಗಾದರೂ ಅಥವಾ ಅಸಲಿಗೆ ಸ್ವಲ್ಪ ಕಡಿಮೆಯಾದರೂ ಮೊತ್ತ ಸಿಗುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಆರೋಗ್ಯ ಸಮಸ್ಯೆಗಳು ಈಗಾಗಲೇ ಇದ್ದಲ್ಲಿ ಸೂಕ್ತ ವೈದ್ಯೋಪಚಾರಗಳಿಗೆ ಮಾರ್ಗದರ್ಶನ ದೊರೆಯಲಿದೆ. ಶತ್ರುಗಳನ್ನು ಎದುರಿಸುವ ನಿಮ್ಮ ಸಾಮರ್ಥ್ಯ ಹೆಚ್ಚಾಗಲಿದೆ. ವ್ಯಾಸಂಗಕ್ಕೆ ಸಹಾಯ ಆಗುತ್ತದೆ ಎಂಬ ಕಾರಣಕ್ಕೆ ವಾಹನ ಖರೀದಿ ಮಾಡಬೇಕು ಎಂದುಕೊಂಡಿರುವವರಿಗೆ ಅನುಕೂಲವಿದೆ. ಇನ್ನು ಹೊಸದಾಗಿ ಆಗುವ ಸ್ನೇಹಿತೆಯರು- ಸ್ನೇಹಿತರಿಂದ ನಿಮ್ಮ ಓದಿಗೂ ದೊಡ್ಡ ಮಟ್ಟದಲ್ಲಿ ಸಹಾಯ ದೊರೆಯಲಿದೆ. ಮಹಿಳೆಯರಿಗೆ ಉಷ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳಾಗಲಿವೆ. ಮನಸ್ಸಿಗೆ ಬೇಸರ, ಖಿನ್ನತೆ ಕಾಡಲಿದೆ. ಮನೆಯಲ್ಲಿ ಮಿಕ್ಸಿ, ಮೈಕ್ರೋವೇವ್ ಓವನ್, ಎಲೆಕ್ಟ್ರಿಕಲ್ ಸ್ಟೌ- ಕುಕ್ಕರ್ ಇತ್ಯಾದಿಗಳನ್ನು ಬಳಸುವಾಗ ಸಾಮಾನ್ಯವಾಗಿ ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನ ಎಚ್ಚರಿಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ವಿದ್ಯುತ್ ಅವಘಡಗಳು ಸಂಭವಿಸಬಹುದು, ಜಾಗ್ರತೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನೀವು ಈ ಹಿಂದೆ ಹೂಡಿಕೆ ಮಾಡಿದ್ದ ಹಣವು ಅಂದುಕೊಂಡಂಥ ರಿಟರ್ನ್ ನೀಡುವುದಿಲ್ಲ ಎಂಬ ಸಂಗತಿ ಆತಂಕಕ್ಕೆ ಕಾರಣವಾಗಲಿದೆ. ಒಂದು ವೇಳೆ ಸೈಟು, ಮನೆ ಅಥವಾ ಅಪಾರ್ಟ್ ಮೆಂಟ್ ಮಾರಾಟಕ್ಕೆ ಇಟ್ಟಿದ್ದಲ್ಲಿ ಹಿನ್ನಡೆ ಅನುಭವಿಸುವಂತಾಗುತ್ತದೆ. ಈ ಹಿಂದೆ ನಿಮಗೆ ಸಹಾಯ ಮಾಡಿದ್ದವರು ಈಗ ನಿಮ್ಮಿಂದ ಸಹಾಯ ಕೇಳಿಕೊಂಡು ಬರಲಿದ್ದು, ಇದರಿಂದ ಒತ್ತಡ ಹೆಚ್ಚಾಗಲಿದೆ. ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆ, ಪರವಾನಗಿ ಮೊತ್ತ, ದಂಡ ಶುಲ್ಕ ಹೀಗೆ ಯಾವುದೇ ಬಾಕಿ ಇದ್ದರೂ ಈ ವಾರ ಸರಿಯಾಗಿ ಗಮನಿಸಿಕೊಂಡು, ಪಾವತಿ ಮಾಡುವುದು ಉತ್ತಮ. ಇಲ್ಲದಿದ್ದರೆ ಸಮಸ್ಯೆಗೆ ಸಿಲುಕಿಕೊಳ್ಳುವಂತಾಗುತ್ತದೆ. ಕೃಷಿಕರಾಗಿರುವವರು ಈ ವಾರ ಪಟ್ಟು ಹಿಡಿದು ಕೆಲಸಗಳನ್ನು ಮಾಡಿಸಲಿದ್ದೀರಿ. ಅದು ಯಾವುದೇ ಕಾರ್ಯ ಇರಬಹುದು ಅಥವಾ ಸರ್ಕಾರಕ್ಕೆ ಸಂಬಂಧಪಟ್ಟಂತಹ ವಿಚಾರಗಳಿರಬಹುದು. ಇನ್ನು ಯಾವುದೇ ವಿಷಯ ಅಥವಾ ವಿಚಾರ ಇರಲಿ, ಗಡುವಿನ ತನಕ ಕಾಯುವುದಕ್ಕೆ ಹೋಗಬೇಡಿ. ಅದೇ ರೀತಿ ನಿಮ್ಮಲ್ಲಿ ಕೆಲವರಿಗೆ ಮಕ್ಕಳ ಶಿಕ್ಷಣದ ವಿಚಾರಕ್ಕೆ ಸ್ವಲ್ಪ ಮಟ್ಟಿಗೆ ಆತಂಕಕ್ಕೆ ಕಾರಣ ಆಗಬಹುದು. ಈಗ ಹೋಗುತ್ತಿರುವ ಶಿಕ್ಷಣ ಸಂಸ್ಥೆಯಿಂದ ಬದಲಾವಣೆ ಮಾಡುವುದಕ್ಕೆ ತುಂಬಾ ಗಟ್ಟಿಯಾಗಿ ನಿರ್ಧಾರ ಮಾಡುವ ಸಾಧ್ಯತೆಗಳಿವೆ. ಅದನ್ನು ಹೊರತುಪಡಿಸಿದರೆ ಯಾರು ವಿವಾಹ ವಯಸ್ಕರಾಗಿದ್ದು, ಮದುವೆಗಾಗಿ ಪ್ರಯತ್ನ ಪಡುತ್ತಿದ್ದಲ್ಲಿ ಅಂತಹವರಿಗೆ ಶುಭ ಸುದ್ದಿ ಕೇಳುವ ಯೋಗ ಇದೆ. ಮನೆಯಿಂದ ಹೊರಡುವ ಮೊದಲಿಗೆ ಮನಸ್ಸಿನಲ್ಲಿ ಧರ್ಮಸ್ಥಳದ ಮಂಜುನಾಥನನ್ನು ಸ್ಮರಿಸಿಕೊಳ್ಳಿ. ವೃತ್ತಿನಿರತರಿಗೆ ಈ ಹಿಂದೆ ನೀವೇ ಆಡಿದಂಥ ಮಾತುಗಳನ್ನು ಎತ್ತಾಡಿ, ಮನಸ್ಸಿಗೆ ನೋವು ಮಾಡುವವರ ಸಂಖ್ಯೆ ಈ ದಿನ ಜಾಸ್ತಿ ಇರಲಿದೆ. ನಿಮಗೆ ಸಂಬಂಧವೇ ಪಡದಂತಹ ವಿಚಾರವೊಂದಕ್ಕೆ ನೀವಾಗಿಯೇ ಹೋಗಿ ತಗುಲಿ ಹಾಕಿಕೊಳ್ಳಲಿದ್ದೀರಿ. ಅತ್ಯುತ್ಸಾಹದಿಂದ ಯಾರಿಗೂ ಗಡುವನ್ನು ನೀಡಿ, ಮಾತು ನೀಡಲು ಹೋಗಬೇಡಿ. ಸಂಬಂಧಿಕರ ಮನೆಯ ಕಾರ್ಯಕ್ರಮಗಳಿಗೆ ಭೇಟಿ ನೀಡುವಂತಹವರು ಆರ್ಥಿಕ ವಿಚಾರದ ಬಗ್ಗೆ ಚರ್ಚೆ ಮಾಡದಿರುವುದು ಕ್ಷೇಮ. ಇದನ್ನು ಮೀರಿ ಮಾತನಾಡಿದಲ್ಲಿ ಅವಮಾನದ ಪಾಲಾಗುತ್ತೀರಿ. ವಿದ್ಯಾರ್ಥಿಗಳಿಗೆ ಪರಿಸ್ಥಿತಿ, ಸನ್ನಿವೇಶ, ವ್ಯಕ್ತಿಗಳು ಎಲ್ಲರೂ- ಎಲ್ಲವೂ ನಿಮ್ಮ ವಿರುದ್ಧ ಕೆಲಸ ಮಾಡುತ್ತಿದೆಯೇನೋ ಎಂದು ಬಲವಾಗಿ ಅನಿಸಲಿದೆ. ಬೇರೆಯವರ ಒಳತಿಗಾಗಿ ನೀವು ನೀಡಿದ ಸಲಹೆ ಅಥವಾ ಆ ಸಂದರ್ಭಕ್ಕೆ ಸೂಕ್ತವಾದಂತಹ ಮಾರ್ಗೋಪಾಯಗಳನ್ನು ತಪ್ಪಾಗಿ ಗ್ರಹಿಸುವಂತಹ ಸಾಧ್ಯತೆಗಳು ಹೆಚ್ಚಿವೆ. ಮಹಿಳೆಯರಿಗೆ ಹಣಕಾಸಿನ ವಿಚಾರದಲ್ಲಿ ಖರ್ಚು ಕೈ ಮೀರಿ ಹೋಗುತ್ತಿದೆ ಎಂದೇನಾದರೂ ಆತಂಕಕ್ಕೆ ಒಳಗಾಗಿದ್ದಲ್ಲಿ ಅದು ಈ ವಾರ ನಿವಾರಣೆಯಾಗಲಿದೆ. ನೀವು ಯಾವಾಗಲೋ ಸಾಲ ಎಂದು ಕೊಟ್ಟಿದ್ದನ್ನು ಸಾಲ ಪಡೆದವರು ಹಿಂತಿರುಗಿಸುವ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನೀವು ಬಹಳ ಭರವಸೆ ಇಟ್ಟು ಮಾಡಿದ ಕೆಲಸಗಳು ಅಂದುಕೊಂಡಂಥ ದಿಕ್ಕಿನಲ್ಲೇ ಫಲಿತಾಂಶ ನೀಡುವುದಕ್ಕೆ ಆರಂಭಿಸುವುದರಿಂದ ಮನಸ್ಸಿಗೆ ಸಮಾಧಾನ ಆಗಲಿದೆ. ನಿಮ್ಮ ಮಾತು, ಪ್ರಭಾವ, ಸಹಾಯದಿಂದ ಇತರರಿಗೆ ಕೂಡ ದೊಡ್ಡ ಮಟ್ಟದಲ್ಲಿ ಅನುಕೂಲ ಆಗಲಿದೆ. ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಅಗತ್ಯವಾದ ನೆರವು ದೊರೆಯಲಿದೆ. ಈ ಹಿಂದೆ ನಿಮಗೆ ಇಷ್ಟವಾಗಿದ್ದ ವೈವಾಹಿಕ ಸಂಬಂಧಗಳೋ ಅಥವಾ ಆಸ್ತಿಯ ವಿಚಾರವೋ ಮತ್ತೆ ಹುಡುಕಿಕೊಂಡು ಬರುವ ಸಾಧ್ಯತೆಗಳಿವೆ ಅಥವಾ ನೀವು ಹುಡುಕಾಡುವಾಗ ಅದೇ ಮತ್ತೆ ಗಟ್ಟಿಯಾಗುವ ಸಾಧ್ಯತೆಗಳು ಹೆಚ್ಚಿವೆ. ನಿಮ್ಮ ಪಾಲಿಗೆ ಯಾವುದು ಒಳ್ಳೆಯದು ಅಥವಾ ಯಾವುದು ಅಲ್ಲ ಎಂಬುದನ್ನು ನಿರ್ಧರಿಸುವುದರಲ್ಲಿ ಒಂದಿಷ್ಟು ಗೊಂದಲಗಳಾಗಬಹುದು. ಆದರೆ ಆತಂಕಗೊಳ್ಳುವ ಅಗತ್ಯವಿಲ್ಲ. ಏಕೆಂದರೆ ನಿಮಗೆ ಒಳ್ಳೆಯದು ಆಗುವಂಥದ್ದನ್ನೇ ಆಯ್ಕೆ ಮಾಡಿಕೊಳ್ಳಲಿದ್ದೀರಿ. ನಿಮ್ಮ ಆತ್ಮವಿಶ್ವಾಸ ಕುಂದದ ರೀತಿಯಲ್ಲಿ ಎಚ್ಚರಿಕೆಯನ್ನು ತೆಗೆದುಕೊಳ್ಳಿ. ಆರಂಭದಲ್ಲಿ ಬೇಸರ ಆಯಿತು ಅಂತಲೋ ಅಥವಾ ನಿಮ್ಮ ಮನಸ್ಸಿಗೆ ಹಿತವಲ್ಲದ ಘಟನೆಗಳು ನಡೆಯಿತು ಎಂಬ ಕಾರಣಕ್ಕೋ ಉದ್ದೇಶದಿಂದ ದೂರ ನಿಲ್ಲಬೇಡಿ. ಕೃಷಿಕರಿಗೆ ಈಗ ಇರುವ ಮನೆ ಅಥವಾ ಊರು ಅಥವಾ ಕನಿಷ್ಠ ಆ ಬೀದಿಯನ್ನಾದರೂ ಬದಲಾಯಿಸಬೇಕು ಎಂದು ಬಲವಾಗಿ ಕಾಡಲಿದೆ. ಈ ಬಗ್ಗೆ ನಿಮ್ಮ ಆಪ್ತೇಷ್ಟರ ಜತೆಗೆ ಚರ್ಚೆ ಮಾಡುವ ಸಾಧ್ಯತೆಗಳು ಸಹ ಇವೆ. ನಿಮಗೆ ಇತರರ ಬಗ್ಗೆ ಏನಾದರೂ ಹೇಳಿಕೊಳ್ಳಬೇಕು ಎಂಬ ಭಾವನೆ ಇದ್ದಲ್ಲಿ ಒಂದೇ ಸಲಕ್ಕೆ ಹೇಳಿಕೊಂಡು ಬಿಡಬೇಡಿ. ಏಕೆಂದರೆ ಮೊದಲಿಗೆ ಅವರಿಗೆ ನಿಮ್ಮ ಬಗ್ಗೆ ಆ ನಿರ್ದಿಷ್ಟ ವಿಚಾರದ ಬಗ್ಗೆ ಎಂಥ ಅಭಿಪ್ರಾಯ ಇದೆ ಎಂಬುದನ್ನು ತಿಳಿಯುವುದಕ್ಕೆ ಪ್ರಯತ್ನಿಸಿ. ವೃತ್ತಿನಿರತರು ನೀವು ಯಾವ ಕೆಲಸವನ್ನು ಮಾಡಬೇಕು ಎಂದು ಬಹಳ ಸಲ ಪ್ರಯತ್ನಪಟ್ಟು ಅರ್ಧಕ್ಕೆ ನಿಂತಿರುತ್ತದೋ ಅಥವಾ ಆರಂಭವನ್ನೇ ಕಂಡಿರುವುದಿಲ್ಲವೋ ಅಂತಹದ್ದು ಈ ವಾರ ಚಾಲನೆ ಪಡೆದುಕೊಳ್ಳಲಿದೆ. ನೀವು ತುಂಬಾ ದೊಡ್ಡ ಮೊತ್ತ ಖರ್ಚಾಗಬಹುದು ಎಂದುಕೊಂಡಿದ್ದ ಕೆಲಸ ಒಂದರಲ್ಲಿ ತುಂಬಾ ಹಣ ಉಳಿಸಲಿದ್ದೀರಿ. ವೃತ್ತಿ ವಿಸ್ತರಣೆಗಾಗಿ ಪ್ರಯತ್ನ ಪಡಬೇಕು ಎಂದುಕೊಳ್ಳುತ್ತಿರುವವರಿಗೆ ಸೂಕ್ತ ಅನುಕೂಲಗಳು ಒದಗಿ ಬರಲಿವೆ. ಕುಟುಂಬ ಸದಸ್ಯರಿಗಾಗಿ ವಸ್ತ್ರಾಭರಣಗಳನ್ನು ಖರೀದಿಸುವಂತಹ ಯೋಗ ಈ ವಾರ ಇದೆ. ವಿದ್ಯಾರ್ಥಿಗಳು ಶೈಕ್ಷಣಿಕ ವಿಚಾರದಲ್ಲಿ ಸರಿಯಾದ ತೀರ್ಮಾನ ಮಾಡುವುದು ಮುಖ್ಯವಾಗುತ್ತದೆ. ಎಲ್ಲರಿಗೂ ಆಗಿದ್ದು ನನಗೂ ಆಗಲಿದೆ ಎಂಬ ಉಡಾಫೆ ಮಾಡದೆ ಯಾವುದೇ ವಿಚಾರದಲ್ಲಿ ಮುಂಜಾಗ್ರತೆ ಏನು ತೆಗೆದುಕೊಳ್ಳಬೇಕು ಎಂಬುದನ್ನು ತೀರ್ಮಾನಿಸಿ. ಮಹಿಳೆಯರು ಮನೆಯ ಹೊರಗೆ ಹಾಸ್ಟೆಲ್ ಗಳಲ್ಲಿ, ಪಿಜಿಗಳಲ್ಲಿ ಅಥವಾ ಸ್ನೇಹಿತೆಯರ ಜತೆಗೂಡಿ ಇರುವಂಥವರಿಗೆ ಬದಲಾವಣೆಯ ಯೋಗವಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ನೀವು ಅಂದುಕೊಂಡ ಬೆಳವಣಿಗೆಗಳು ಆಗಲಿವೆ. ನೀವು ನಿರೀಕ್ಷೆ ಮಾಡಿದಂತೆ ಹಣಕಾಸು ಆದಾಯ ಮೂಲಗಳು ಜಾಸ್ತಿ ಆಗಲಿವೆ. ತಾಯಿಯ ಕಡೆ ಸಂಬಂಧಿಕರ ಅನಾರೋಗ್ಯ ಚಿಂತೆಗೆ ಕಾರಣ ಆಗಲಿದೆ. ಹಳೇ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದಲ್ಲಿ ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳುವುದು ಸೂಕ್ತ. ಅಂದರೆ ಒಟ್ಟಾರೆಯಾಗಿ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದು ಮುಖ್ಯ. ನೀವು ಇತರರಿಂದ ಸಹಾಯ ಬಯಸುತ್ತಿದ್ದೀರಿ ಎಂದಾದಲ್ಲಿ ಕೇಳುವುದಕ್ಕೆ ಸಂಕೋಚ ಮಾಡಿಕೊಳ್ಳಬೇಡಿ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಈ ವಾರ ಮನಸ್ಸಿಗೆ ಒಪ್ಪುವಂಥ ಸಂಬಂಧಗಳು ದೊರೆಯುವ ಅವಕಾಶಗಳಿವೆ. ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಅಂದುಕೊಂಡ ಗುರಿಯನ್ನು ನಿಗದಿತವಾದ ಸಮಯಕ್ಕಿಂತ ಬೇಗನೇ ತಲುಪಲಿದ್ದೀರಿ. ವಿದೇಶಗಳಲ್ಲಿ ಉನ್ನತಾಭ್ಯಾಸಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಅಗತ್ಯ ನೆರವು ದೊರೆಯಲಿದೆ. ಬ್ಯಾಂಕ್ ನಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡಿದ್ದಲ್ಲಿ ಅದರಲ್ಲೂ ಅನುಕೂಲ ಆಗಲಿದೆ. ಕೃಷಿಕರಿಗೆ ಏಕಾಂಗಿತನ ಕಾಡಬಹುದು. ಆದರೆ ಇದು ಖಿನ್ನತೆಗೆ ತಿರುಗದಂತೆ ನೋಡಿಕೊಳ್ಳಿ. ಈ ಹಿಂದೆ ನೀವು ತೆಗೆದುಕೊಂಡ ನಿರ್ಧಾರದ ಬಗ್ಗೆ ಪರಾಮರ್ಶೆ ಮಾಡಲಿದ್ದೀರಿ. ಇನ್ನು ಮನೆಯಿಂದ ದೂರದಲ್ಲಿ ಇದ್ದು, ಬೇರೆಯವರ ಜಮೀನಿನಲ್ಲಿ ಕೆಲಸ ಮಾಡುತ್ತಿರುವವರಿಗೆ ಒತ್ತಡದ ಸನ್ನಿವೇಶ ಇರಲಿದೆ. ಸಾಲವನ್ನಾದರೂ ಪಡೆದು ಕುಟುಂಬದ ಸದಸ್ಯರ ಸಲುವಾಗಿ ಕೆಲವು ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಹಣ ಖರ್ಚು ಮಾಡುವಂಥ ಯೋಗ ಇದೆ. ಮಧುಮೇಹ- ರಕ್ತದೊತ್ತಡ ಈಗಾಗಲೇ ಇದ್ದಲ್ಲಿ ಆಹಾರ ಸೇವನೆ ಮಾಡುವಾಗ ನಿಮಗೆ ಅಲರ್ಜಿ ಆಗುವಂಥ ಪದಾರ್ಥಗಳಿಂದ ದೂರವಿರಿ. ವೃತ್ತಿನಿರತರಿಗೆ ಹೆಚ್ಚಾಗಿರುವ ಸ್ಪರ್ಧೆಗೆ ಸೂಕ್ತ ಸಿದ್ಧತೆಯನ್ನು ಮಾಡಿಕೊಳ್ಳಲಿದ್ದೀರಿ. ಈಗ ಮಾಡುತ್ತಿರುವ ವೃತ್ತಿಯ ಜತೆಗೆ ಹೊಸ ವ್ಯವಹಾರ ಕೂಡ ಶುರು ಮಾಡಬೇಕು ಎಂದು ಆಲೋಚಿಸಲಿದ್ದೀರಿ. ಇದಕ್ಕಾಗಿ ಬೇಕಾದಂಥ ಸಿದ್ಧತೆಯನ್ನು ಮಾಡಿಕೊಳ್ಳಲಿದ್ದೀರಿ. ನಿಮ್ಮಲ್ಲಿ ಯಾರು ಕಾರು ಅಥವಾ ಎಲೆಕ್ಟ್ರಿಕಲ್ ಸ್ಕೂಟರ್ ಖರೀದಿ ಮಾಡಬೇಕು ಎಂದಿದ್ದೀರಿ ಅದಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಕಲೆ ಹಾಕಲಿದ್ದೀರಿ ಮತ್ತು ನಿಮ್ಮಲ್ಲಿ ಕೆಲವರು ಅದಕ್ಕಾಗಿ ಅಡ್ವಾನ್ಸ್ ನೀಡುವ ಸಾಧ್ಯತೆ ಕೂಡ ಇದೆ. ವಿದ್ಯಾರ್ಥಿಗಳು ನಿಮಗೆ ಇಷ್ಟವಿರುತ್ತದೋ ಇಲ್ಲವೋ ಕೆಲವು ಕೆಲಸಗಳನ್ನು ಮಾಡಬೇಕಾಗುತ್ತದೆ. ಆದರೆ ಅಂತಿಮವಾಗಿ ಇದರಿಂದ ನಿಮಗೆ ಲಾಭವಾಗಲಿದೆ. ಈ ಹಿಂದೆ ಅಭಿಪ್ರಾಯ ಭೇದಗಳು, ಜಗಳ- ಕಲಹ ಏನೇ ಆಗಿದ್ದರೂ ಅದನ್ನು ನಿವಾರಿಸಿಕೊಳ್ಳುವುದಕ್ಕೆ ವೇದಿಕೆ ದೊರೆಯಲಿದೆ. ದೈಹಿಕ ದೃಢತೆ ಕಾಪಾಡಿಕೊಳ್ಳುವ ಸಲುವಾಗಿ ಜಿಮ್, ಯೋಗ ಅಥವಾ ಇಂಥ ಯಾವುದಾದರೂ ಒಂದರಲ್ಲಿ ತೊಡಗಿಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಮಹಿಳೆಯರಿಗೆ ಸಂಘ- ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳು ದೊರೆಯುವ ಅವಕಾಶಗಳು ಹೆಚ್ಚಿವೆ. ಕುಟುಂಬ ಸದಸ್ಯರ ಬೆಂಬಲ ಕೂಡ ನಿಮ್ಮ ಪಾಲಿಗೆ ದೊರೆಯಲಿದೆ.

ಲೇಖನ- ಎನ್‌.ಕೆ.ಸ್ವಾತಿ

ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು