Jupiter and Surya yoga: ಗುರು ಹಾಗೂ ಸೂರ್ಯರ ಯೋಗದಿಂದ ಯಾವ ರಾಶಿಗೆ ಏನೇನು ಫಲ?

ವೃಷಭ ರಾಶಿಯಲ್ಲಿ ಸೂರ್ಯ ಹಾಗೂ ಗುರುವಿನ ಸಂಯೋಗವಾಗಿದೆ. ವೃಷಭ ರಾಶಿಯು ಶುಕ್ರನ ಸ್ಥಾನವಾಗಿದ್ದು ಇದನ್ನು ಸ್ತ್ರೀ ರಾಶಿ ಎನ್ನುವುದಾಗಿಯೂ ಸೌಮ್ಯ ರಾಶಿ ಎಂದೂ ಕರೆಯುತ್ತಾರೆ. ಈ ರಾಶಿಯಲ್ಲಿ ಸೂರ್ಯ ಹಾಗೂ ಗುರುವಿರುವುದು ಬಹಳ ಉತ್ತವೇನಲ್ಲ. ಏಕೆಂದರೆ ಶುಕ್ರ ಹಾಗು ಗುರು ಇವರು ಪರಸ್ಪರ ಶತ್ರುಗಳು ಹಾಗಾಗಿ ಹೊಂದಾಣಿಕೆ ಅಸಾಧ್ಯ. ಆದ್ದರಿಂದ ಕಲಹಗಳು ಆಗುತ್ತದೆ. ಸೂರ್ಯನಿಗೆ ಶುಕ್ರನೂ ಹಾಗೂ ಗುರುವೂ ಮಿತ್ರರಾದ ಕಾರಣ ಸೂರ್ಯನಿಂದ ಶುಭಫಲವಿದೆ.

Jupiter and Surya yoga: ಗುರು ಹಾಗೂ ಸೂರ್ಯರ ಯೋಗದಿಂದ ಯಾವ ರಾಶಿಗೆ ಏನೇನು ಫಲ?
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷಯ್​ ಪಲ್ಲಮಜಲು​​

Updated on:May 17, 2024 | 2:00 PM

ಖಗೋಳದಲ್ಲಿ ಗ್ರಹಗಳ ಗತಿಗಳು ಬದಲಾವಣೆ ಆಗುತ್ತಿರುತ್ತದೆ. ಕೆಲವು ಗ್ರಹಗಳು ಕೆಲವು ಸಂದರ್ಭದಲ್ಲಿ ಒಂದಾದಾಗ ಅವುಗಳು ನೀಡುವ ಫಲವು ಶುಭಾಶುಭವಾಗಿರುತ್ತದೆ. ಅದರಲ್ಲಿಯೂ ಸೂರ್ಯ ಹಾಗೂ ಗುರು ಗ್ರಹರು ವಿಶೇಷ ಗ್ರಹರು. ಆತ್ಮ ಹಾಗು ಜ್ಞಾನವನ್ನು ನೀಡು ಈರ್ವರು. ಅಷ್ಟೇ ಅಲ್ಲದೇ ತಂದೆ ಹಾಗೂ ಮಾರ್ಗದರ್ಶನ ಸ್ಥಾನವನ್ನು ತುಂಬುವರು. ಇವರ ಯೋಗದಿಂದ ರಾಜಕೀಯದಲ್ಲಿಯೂ ಪರಿಣಾಮವಾಗಲಿದ್ದು ರಾಜ ಹಾಗು ಮಂತ್ರಿಗಳ ನಡುವೆ ಪರಸ್ಪರ ಮಿತ್ರತ್ವ ಸಾಮರಸ್ಯವು ಇರಲಿದೆ. ಉತ್ತಮ ರಾಜತಂತ್ರ ಪ್ರಜೆಗಳಿಗೆ ಸಿಗುವ ಮನ್ಸೂಚನೆ ಗುರು ಹಾಗು ಸೂರ್ಯರ ಯೋಗದಿಂದ ಸಿಗಲಿದೆ.

ವೃಷಭ ರಾಶಿಯಲ್ಲಿ ಸೂರ್ಯ ಹಾಗೂ ಗುರುವಿನ ಸಂಯೋಗವಾಗಿದೆ. ವೃಷಭ ರಾಶಿಯು ಶುಕ್ರನ ಸ್ಥಾನವಾಗಿದ್ದು ಇದನ್ನು ಸ್ತ್ರೀ ರಾಶಿ ಎನ್ನುವುದಾಗಿಯೂ ಸೌಮ್ಯ ರಾಶಿ ಎಂದೂ ಕರೆಯುತ್ತಾರೆ.

ಈ ರಾಶಿಯಲ್ಲಿ ಸೂರ್ಯ ಹಾಗೂ ಗುರುವಿರುವುದು ಬಹಳ ಉತ್ತವೇನಲ್ಲ. ಏಕೆಂದರೆ ಶುಕ್ರ ಹಾಗು ಗುರು ಇವರು ಪರಸ್ಪರ ಶತ್ರುಗಳು ಹಾಗಾಗಿ ಹೊಂದಾಣಿಕೆ ಅಸಾಧ್ಯ. ಆದ್ದರಿಂದ ಕಲಹಗಳು ಆಗುತ್ತದೆ. ಸೂರ್ಯನಿಗೆ ಶುಕ್ರನೂ ಹಾಗೂ ಗುರುವೂ ಮಿತ್ರರಾದ ಕಾರಣ ಸೂರ್ಯನಿಂದ ಶುಭಫಲವಿದೆ. ಇನ್ನು ಶುಕ್ರನು ಕುಜನ ರಾಶಿಯಲ್ಲಿ ಇರುವ ಕಾರಣ ಪ್ರೇಮವು ಅಂತ್ಯಗೊಳ್ಳುವ ಸಾಧ್ಯತೆ ಇರುತ್ತದೆ. ಪ್ರೇಮದಲ್ಲಿ ಇರುವವರು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇರಿಸಬೇಕಾಗುವುದು.

ವೃಷಭ ರಾಶಿ :

ಈ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಯಾವುದೇ ಕೆಲಸವನ್ನು ಒಪ್ಪಿಕೊಂಡು ಮಾಡುವ ಚುರುಕುತನದಿಂದ ಮಾಡುವರು. ಅನಾರೋಗ್ಯವನ್ನು ನಿರ್ಲಕ್ಷಿಸಿ ಕಾರ್ಯವನ್ನು ಮಾಡುವಿರಿ. ನಿಮ್ಮ ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸು ಪ್ರಾಪ್ತವಾಗಲಿದೆ.

ಕನ್ಯಾ ರಾಶಿ :

ಈ ರಾಶಿಯವರಿಗೆ ಮಕ್ಕಳಿಂದ ಸಂತೋಷ ಕಡಿಮೆ ಆಗುವುದು. ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗುವ ಸಾಧ್ಯತೆಯೂ ಇರಲಿ. ವಿದ್ಯೆಗೆ ಸರಿಯಾದ ಸ್ಥಾನ ಗೌರವ ಸಿಗದೇ ನೀವು ಹತಾಶರಾಗುವಿರಿ. ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಲಾಭವಾಗುವುದು. ಸಾಮಾಜಿಕ ಪ್ರತಿಷ್ಠೆ ಹೆಚ್ಚುತ್ತದೆ.

ಇದನ್ನೂ ಓದಿ: ಬುಧನ ಸಂಚಾರದಿಂದ ಯಾರಿಗೆ ಶುಭ ಫಲ?

ವೃಶ್ಚಿಕ ರಾಶಿ :

ಮನಸ್ಸಿನಲ್ಲಿ ನಾನಾ ಗೊಂದಲಗಳು ಇರಲಿದ್ದು ಅದನ್ನು ಸರಿಮಾಡಿಕೊಳ್ಳಲು ಸಾಧ್ಯವಾಗದು. ವಿವಾಹಕ್ಕೆ ಸಂಬಂಧಿಸಿದಂತೆ ಹೊಂದಾಣಿಕೆ ಕಷ್ಟವಾಗುವುದು. ಸಹೋದರರ ಕಾರಣದಿಂದ ನೀವು ಅನಿರೀಕ್ಷಿತ ವೆಚ್ಚಗಳನ್ನು ಮಾಡಬೇಕಾಗುವುದು.

ಮಕರ ರಾಶಿ :

ತಂದೆಯ ಜೊತೆ ಪರಸ್ಪರ ಸಹಕಾರದಿಂದ ಇದ್ದರೆ ಚೆನ್ನಾಗಿ ಕುಟುಂಬ ಮುಂದುವರಿಯುತ್ತದೆ. ಒಬ್ಬರ ಸಹಕಾರ ಸಿಗದಿದ್ದರೂ ಕಲಹವಾಗುವುದು. ಬಹಳ ಜಾಣ್ಮೆಯಿಂದ ಕುಟುಂಬವನ್ನು ನಡೆಸಬೇಕಾಗುವುದು. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚುತ್ತದೆ.

ಹೀಗೆ ವೈಯಕ್ತಿಕವಾಗಿ ಸಾಮಾನ್ಯ ಹಾಗೂ ರಾಜಕೀಯವಾಗಿ ಉತ್ತಮ ಪರಿವರ್ತನೆಯು ಸಿಗಲಿದ್ದು, ಸಾಮಾಜಿಕವಾಗಿ ಸಂತೋಷವನ್ನು ಅನುಭವಿಸುವ ಕಾಲ ಸನ್ನಿಹತವಾಗಲಿದೆ.

ಲೋಹಿತ ಹೆಬ್ಬಾರ್ – 8762924271 (what’s app only)

Published On - 1:59 pm, Fri, 17 May 24

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್