AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೃಂಗಾಟಕ, ವಜ್ರ ಮತ್ತು ಹಲಯೋಗಗಳು ನಿಮ್ಮ ಜಾತಕದಲ್ಲಿ ಇದ್ದರೇ?

ಜ್ಯೋತಿಷ್ಯದಲ್ಲಿ ಇನ್ನೂ ಅನೇಕ ಯೋಗಗಳನ್ನು ಹೇಳಿದ್ದಾರೆ. ಇವೆಲ್ಲವೂ ಪ್ರಾಚೀನ ವಿಜ್ಞಾನಿಗಳ ಸಾಧನೆಯಾಗಿದೆ. ಆಕಾಶದಲ್ಲಿ ಗ್ರಹಗಳ ಸ್ಥಿತಿಯನ್ನು ಕಂಡುಕೊಂಡು ಅವುಗಳಿಂದ ಉಂಟಾಗುವ ಪರಿಣಾಮವನ್ನು ಗುರುತಿಸಿದ್ದಾರೆ. ಅಂತಹ ಅನೇಕ ಯೋಗಗಳಲ್ಲಿ ಶೃಂಗಾಟಕ, ವಜ್ರ, ಹಲ ಯೋಗಗಳೂ ಇವೆ.

ಶೃಂಗಾಟಕ, ವಜ್ರ ಮತ್ತು ಹಲಯೋಗಗಳು ನಿಮ್ಮ ಜಾತಕದಲ್ಲಿ ಇದ್ದರೇ?
ಶೃಂಗಾಟಕ, ವಜ್ರ ಮತ್ತು ಹಲಯೋಗದ ಪ್ರಕಾರ ನಿಮ್ಮ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: Rakesh Nayak Manchi|

Updated on: Aug 15, 2023 | 8:19 PM

Share

ಜ್ಯೋತಿಷ್ಯದಲ್ಲಿ (Astrology) ಇನ್ನೂ ಅನೇಕ ಯೋಗಗಳನ್ನು ಹೇಳಿದ್ದಾರೆ. ಇವೆಲ್ಲವೂ ಪ್ರಾಚೀನ ವಿಜ್ಞಾನಿಗಳ ಸಾಧನೆಯಾಗಿದೆ. ಆಕಾಶದಲ್ಲಿ ಗ್ರಹಗಳ ಸ್ಥಿತಿಯನ್ನು ಕಂಡುಕೊಂಡು ಅವುಗಳಿಂದ ಉಂಟಾಗುವ ಪರಿಣಾಮವನ್ನು ಗುರುತಿಸಿದ್ದಾರೆ. ಅಂತಹ ಅನೇಕ ಯೋಗಗಳಲ್ಲಿ ಶೃಂಗಾಟಕ, ವಜ್ರ, ಹಲ ಯೋಗಗಳೂ ಇವೆ.

ಶೃಂಗಾಟಕ ಯೋಗ:

ಲಗ್ನ, ನವಮ ಮತ್ತು ಪಂಚಮಸ್ಥಾನದಲ್ಲಿ ಎಲ್ಲ ಗ್ರಹರಿದ್ದರೆ ಶೃಂಗಾಟಕ ಯೋಗ. ಈ ಯೋಗದ ಜೊತೆ ಜನಿಸಿದವನು ಬಹಳ ಕಾಲ ಸುಖದ ಜೀವನವನ್ನು ನಡೆಸುವನು ಅಥವಾ ಜೀವನದ ಕೊನೆಯ ಭಾಗದಲ್ಲಿ ಹೆಚ್ಚು ಸುಖವನ್ನು ಅನುಭವಿಸುವನು ಎಂದೂ ಹೇಳುವರು.

ಹಲ ಯೋಗ:

ಲಗ್ನದಿಂದ 2, 6, 10 ಸ್ಥಾನ, 3, 7, 11 ಸ್ಥಾನ, 4, 8, 12 ಸ್ಥಾನದಲ್ಲಿ ಎಲ್ಲ ಗ್ರಹರಿದ್ದರೆ ಅದನ್ನು ಹಲ ಯೋಗ ಎನ್ನುವರು. ಜನಿಸುವಾಗ ಈ ಯೋಗವಿದ್ದರೆ ಅವನು ಕೃಷಿಯಲ್ಲಿ ಆಸಕ್ತಿಯನ್ನು ಹೊಂದುವನು. ಕೃಷಿಯಲ್ಲಿ ತೊಡಗುವನು.

ಹಲ ಎಂದರೆ ನೇಗಿಲು ಎಂದರ್ಥ. ಈ ಯೋಗವೂ ಅದಕ್ಕೆ ಪೂರಕವಾಗಿ ಇರುವುದು. ಕೃಷಿ ಕಾರ್ಯಗಳಿಗೆ ಪೂರವಾಗಿ ಇರುವುದರಿಂದ ಇದನ್ನು ಹಲ ಯೋಗ ಎಂದೂ ಕರೆಯುವರು.

ಇದನ್ನೂ ಓದಿ: ಈ ರಾಶಿಯವರಿಗೆ ಮದುವೆ ಆಚೆಗಿನ ಸಂಬಂಧದ ಸೆಳೆತ ಹೆಚ್ಚು; ಇಲ್ಲಿವೆ ಜ್ಯೋತಿಷ್ಯ ಕಾರಣಗಳು

ವಜ್ರ ಯೋಗ:

ಲಗ್ನದಿಂದ ಸಪ್ತಮದವರೆಗೆ ಎಲ್ಲ ಶುಭಗ್ರಹರು ಅಂದರೆ ಪೂರ್ಣಚಂದ್ರ, ಶುಭಗ್ರಹಯುತನಾದ ಬುಧ, ಗುರು, ಶುಕ್ರ ಹಾಗೂ ಸಪ್ತಮದಿಂದ ದ್ವಾದಶದವರೆಗೆ ಪಾಪಗ್ರಹರೂ ಇದ್ದರೆ ಅಂದರೆ ಸೂರ್ಯ, ಅಮಾವಾಸ್ಯೆಯ ಚಂದ್ರ, ಕುಜ, ಪಾಪದ ಜೊತೆಗಿರುವ ಬುಧ, ಶನಿ, ರಾಹು ಹಾಗೂ ಕೇತು ಇದ್ದರೆ ವಜ್ರ ಯೋಗ.

ಈ ಯೋಗದಲ್ಲಿ ಜನಿಸಿದವನು ಬಾಲ್ಯ ಮತ್ತು ವೃದ್ಧಾವಸ್ಥೆಯಲ್ಲಿ ಭೋಗದಿಂದ ಹೆಚ್ಚು ಸುಖಿಯಾಗಿ ಇರುವರು. ಧೈರ್ಯದಿಂದ ಕೂಡಿದವನು ಅವನಾಗುವನು. ಎಲ್ಲ‌ ಕಾರ್ಯಗಳಲ್ಲಿ ಮುನ್ನಡೆ ಸಾಧಿಸುವನು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!