AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ರಾಶಿಯವರಿಗೆ ಮದುವೆ ಆಚೆಗಿನ ಸಂಬಂಧದ ಸೆಳೆತ ಹೆಚ್ಚು; ಇಲ್ಲಿವೆ ಜ್ಯೋತಿಷ್ಯ ಕಾರಣಗಳು

ಈ ರಾಶಿಯವರು ಇತರರ ಮೇಲೆ ತೋರಿಸುವ ಕಾಳಜಿ, ಪ್ರೀತಿ ಹಾಗೂ ತಮ್ಮದೇ ಕೆಲಸವೇನೋ ಎಂಬಂತೆ ಸಹಾಯ ಮಾಡುವ ಪರಿ ಈ ಎಲ್ಲ ಕಾರಣದಿಂದ ಪುರುಷರಾದರೆ ಸ್ತ್ರೀಯರು ಹಾಗೂ ಅದೇ ರೀತಿ ಸ್ತ್ರೀಯರಾದರೆ ಪುರುಷರು ಬಹಳ ಬೇಗ ಆಕರ್ಷಿತರಾಗುತ್ತಾರೆ. ಯಾವುದು ಈ ರಾಶಿ? ಓದಿ

ಈ ರಾಶಿಯವರಿಗೆ ಮದುವೆ ಆಚೆಗಿನ ಸಂಬಂಧದ ಸೆಳೆತ ಹೆಚ್ಚು; ಇಲ್ಲಿವೆ ಜ್ಯೋತಿಷ್ಯ ಕಾರಣಗಳು
ಸಾಂದರ್ಭಿಕ ಚಿತ್ರ
TV9 Web
| Updated By: Ganapathi Sharma|

Updated on: Aug 10, 2023 | 8:10 PM

Share

ಮದುವೆ ಎಂಬ ಸಾಮಾಜಿಕ ವ್ಯವಸ್ಥೆ ಇರುವಾಗ ಗಂಡ- ಹೆಂಡತಿ (Husband and Wife) ಮಧ್ಯೆ ಪರಸ್ಪರ ನಂಬಿಕೆ, ವಿಶ್ವಾಸ, ಪ್ರೀತಿ ಹಾಗೂ ಇದೆಲ್ಲದರ ಜತೆಗೆ ಪರಸ್ಪರಲ್ಲಿ ಕೊನೆಯ ತನಕ ಅನ್ಯೋನ್ಯತೆ ಬಹಳ ಮುಖ್ಯ. ಆದರೆ ಜ್ಯೋತಿಷ್ಯ ಪ್ರಕಾರವಾಗಿ ಆರು ರಾಶಿಯವರ ಜೀವನದಲ್ಲಿ ವಿವಾಹದ ಆಚೆಗೆ ಒಂದು ಸಂಬಂಧದ ಕಡೆಗೆ ಆಕರ್ಷಣೆ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಇಲ್ಲಿ ಅಡಿಗೆರೆ ಹಾಕಿದಂತೆ ಹೇಳುತ್ತಿರುವುದು ವಿವಾಹದ ಆಚೆಗೆ ಸೆಳೆತ ಇರುತ್ತದೆ ಅಂತ. ಆ ಸೆಳೆತ ಎಲ್ಲಿಗೆ ನಿಲ್ಲಬಹುದು ಎಂಬುದನ್ನು ನೋಡುವುದಕ್ಕೆ ಜನ್ಮ ಜಾತಕವನ್ನು ಕೂಲಂಕಷವಾಗಿ ಪರಿಶೀಲಿಸ ಬೇಕಾಗುತ್ತದೆ.

ವೃಷಭ

ಈ ರಾಶಿಯವರು ಇತರರ ಮೇಲೆ ತೋರಿಸುವ ಕಾಳಜಿ, ಪ್ರೀತಿ ಹಾಗೂ ತಮ್ಮದೇ ಕೆಲಸವೇನೋ ಎಂಬಂತೆ ಸಹಾಯ ಮಾಡುವ ಪರಿ ಈ ಎಲ್ಲ ಕಾರಣದಿಂದ ಪುರುಷರಾದರೆ ಸ್ತ್ರೀಯರು ಹಾಗೂ ಅದೇ ರೀತಿ ಸ್ತ್ರೀಯರಾದರೆ ಪುರುಷರು ಬಹಳ ಬೇಗ ಆಕರ್ಷಿತರಾಗುತ್ತಾರೆ. ಜತೆಗೆ ಈ ರಾಶಿಯವರಿಂದ “ಇಲ್ಲ” ಎಂಬ ಮಾತು ಬರುವುದೇ ಬಹಳ ಕಷ್ಟದ ವಿಷಯ. ಆದ್ದರಿಂದ ಏನಾಗುತ್ತದೆ. ಮದುವೆ ಆಚೆಗಿನ ಸಂಬಂಧ ಇದೆಯೇನೋ ಎಂಬಂಥ ಗುಮಾನಿ ಬರುತ್ತದೆ. ಹಲವರು ಬದುಕಿನಲ್ಲಿ ಉದ್ದೇಶವೇ ಇಲ್ಲದಿದ್ದರೂ ಅಂಥದ್ದೊಂದು ಬಾಂಧವ್ಯ ಬೆಳೆದು ಬಿಡುತ್ತದೆ. ಇನ್ನೊಂದು ವಿಚಾರ ಏನೆಂದರೆ, ವೃಷಭ ರಾಶಿಯವರು ಹಠಮಾರಿಗಳಲ್ಲ. ತುಂಬ ಬೇಡಿಕೆಗಳನ್ನು ಇಡುವವರಲ್ಲ. ಆದ್ದರಿಂದ ಬಹಳ ಬೇಗ ಇಷ್ಟವಾಗುತ್ತಾರೆ.

ತುಲಾ

ಈ ರಾಶಿಯವರ ಲೆಕ್ಕಾಚಾರ, ಡಿಪ್ಲೊಮ್ಯಾಟಿಕ್ ಆಗಿ ವ್ಯವಹರಿಸುವ ರೀತಿಯಿಂದಾಗಿ ಇವರ ಕಡೆಗೆ ಬೇಗ ಜನರು ಆಕರ್ಷಿತರಾಗುತ್ತಾರೆ. ಇವರ ಪ್ರಭಾ ವಲಯ ಅಗಾಧವಾಗಿರುತ್ತದೆ. ಸೋಷಿಯಲ್ ಕಾಂಟ್ಯಾಕ್ಟ್, ವ್ಯವಹಾರದಲ್ಲಿ ತೊಡಗಿಕೊಳ್ಳುವ ರೀತಿ ಹಾಗೂ ಸದಾ ಒಂದಿಲ್ಲೊಂದು ಕೆಲಸ ಹಚ್ಚಿಕೊಳ್ಳುವ ಇವರಿಗೆ ಉದ್ಯೋಗ ಅಥವಾ ವೃತ್ತಿಗೆ ಸಂಬಂಧಪಟ್ಟ ವ್ಯಕ್ತಿಗಳ ಜತೆಗೆ ಬಹಳ ಬೇಗ ಆತ್ಮೀಯತೆ ಬೆಳೆದು ಹೋಗುತ್ತದೆ. ಆ ಕಾರಣಕ್ಕೆ ವಿವಾಹದ ಆಚೆಗೆ ಸಂಬಂಧವೊಂದು ಬೆಳೆದು ಹೋಗುತ್ತದೆ. ತುಲಾ ರಾಶಿಯವರು ಸಾಮಾನ್ಯವಾಗಿ ಯಾರನ್ನಾದರೂ ಹಚ್ಚಿಕೊಂಡರೆ ಸಲೀಸಾಗಿ ಬಿಡುವಂಥವರಲ್ಲ. ಅದೇ ರೀತಿ ಇವರ ಸನಿಹಕ್ಕೆ ಬಂದವರಿಗೂ ದೂರ ಆಗುವುದೋ ಅಥವಾ ಅಂತರ ಕಾಯ್ದುಕೊಳ್ಳುವುದು ಕಷ್ಟ.

ಮೇಷ

ಈ ರಾಶಿಯವರು ಹುಡುಕಾಟದಲ್ಲೇ ಜೀವನ ಕಳೆಯುತ್ತಾರೆ. ಅದು ಪ್ರೀತಿಯ ಹುಡುಕಾಟ, ಆತ್ಮೀಯತೆಯ ಹುಡುಕಾಟ, ಸಾಮೀಪ್ಯದ ಹುಡುಕಾಟ ಹೀಗೆ ಅದು ಮದುವೆ ನಂತರದಲ್ಲೂ ಬಹಳ ಮಂದಿಗೆ ಮುಂದುವರಿದು ಬಿಡುತ್ತದೆ. ಈ ರಾಶಿಯವರದು ಮತ್ತೂ ಒಂದು ವಿಚಿತ್ರ ಇದೆ. ಅದೇನೆಂದರೆ, ಮುಂದೆ ಏನಾಗಬಹುದು, ಹೀಗೆ ಮಾಡುವುದರಿಂದ ಎಂಥೆಂಥ ಪರಿಣಾಮ ಆಗಬಹುದು ಅನ್ನೋದನ್ನು ಯೋಚಿಸುವುದೇ ಇಲ್ಲ. ಅಂದುಕೊಂಡಂತೆಯೇ ಇರುತ್ತಾರಲ್ಲ, ಅನಿಸಿದ್ದನ್ನೆಲ್ಲ ಹೇಳಿಬಿಡುತ್ತಾರಲ್ಲ ಎಂಬ ಕಾರಣಕ್ಕೆ ಇವರ ಕಡೆಗೆ ಆಕರ್ಷಿತರಾಗುವವರೇ ಹೆಚ್ಚು. ಆ ನಂತರ ಮೇಷಕ್ಕೆ ಹೊಸಬರು ಯಾರೋ ಇಷ್ಟ ಆಗುತ್ತಾರೆ. ಆಗ ಹಳಬರಿಗೆ ನೇರವಾಗಿಯೇ ಇದನ್ನು ಹೇಳಿಬಿಡುತ್ತಾರೆ.

ವೃಶ್ಚಿಕ

ಸಂಬಂಧ ಎಂದಾಗ ವೃಶ್ಚಿಕ ರಾಶಿಯವರು ನಡೆದುಕೊಳ್ಳುವ ರೀತಿಯ ಸಂಪೂರ್ಣ ಭಿನ್ನವಾಗಿರುತ್ತದೆ. ಇವರಿಗಿಂತ ತುಂಬ ಚಿಕ್ಕ ವಯಸ್ಸಿನ ಹುಡುಗಿಯರು, ಒಂದು ವೇಳೆ ಮಹಿಳೆಯರಾದರೆ ಇವರಿಗಿಂತ ಸಣ್ಣ ವಯಸ್ಸಿನ ಪುರುಷರು ಅಥವಾ ಹುಡುಗರು ಬೇಗ ಸೆಳೆತಕ್ಕೆ ಒಳಗಾಗುತ್ತಾರೆ. ವೃಶ್ಚಿಕ ರಾಶಿಯವರ ಜತೆಗೆ ಇದ್ದರೆ ತುಂಬ ಪ್ರೊಟೆಕ್ಟಿವ್ ಆದಂಥ ಭಾವ ಸಿಗುತ್ತದೆ. ತಮ್ಮ ಸಮಯ, ಹಣ, ಹುದ್ದೆ ಹೀಗೆ ಯಾವುದನ್ನು ಸಹ ಲೆಕ್ಕ ಮಾಡದೆ ಸಹಾಯಕ್ಕೆ ಮುಂದಾಗುತ್ತಾರೆ. ಕಾಳಜಿಯನ್ನೇ ಬೇರೆ ರೀತಿ ಭಾವಿಸಿ, ವಿಪರೀತ ಇವರನ್ನು ಹಚ್ಚಿಕೊಂಡು, ಬೇರ್ಪಡಲು ಆಗಲ್ಲ. ಆದ್ದರಿಂದ ವಿವಾಹದ ನಂತರದಲ್ಲೂ ಇವರಿಗೆ ಪ್ರೀತಿ- ಪ್ರೇಮದ ಸಂಬಂಧಗಳು ಮುಂದುವರಿಯುವ ಸಾಧ್ಯತೆ ಹೆಚ್ಚು.

ಮೀನ

ಈ ರಾಶಿಯವರು ಸೌಂದರ್ಯ ಆರಾಧಕರು. ಇವರಿಗೆ ತಮ್ಮ ಮನೆಯಲ್ಲಿರುವ ಪ್ರತಿ ವಸ್ತುವಿನಿಂದ, ಜತೆಯಲ್ಲಿರುವ ವ್ಯಕ್ತಿಗಳ ತನಕ ಒಂದು ಗುಣಮಟ್ಟ ನಿರೀಕ್ಷೆ ಮಾಡುತ್ತಾರೆ. ಅದು ಯಾವ ಪರಿ ಆಗುತ್ತದೆ ಅಂದರೆ, ಜತೆಯಲ್ಲಿ ಇರುವವರಿಗೆ, ನಾವೇನು ಈ ವ್ಯಕ್ತಿಯ ಪಾಲಿಗೆ ಮೆಡಲ್ ಏನು ಎಂದುಕೊಳ್ಳುವ ತನಕ ಹೋಗುತ್ತದೆ. ಆದರೆ ಈ ಮೀನ ರಾಶಿಯವರಿಗೆ ಇಷ್ಟವಾಗುವ ವ್ಯಕ್ತಿಗಳನ್ನು ವಿಪರೀತ ಮೆರೆಸುತ್ತಾರೆ, ಹೋದಲ್ಲಿ- ಬಂದಲ್ಲಿ ಜತೆಗೆ ಕರೆದುಕೊಂಡು ಹೋಗುತ್ತಾರೆ, ಸಿಕ್ಕಾಪಟ್ಟೆ ಹೊಗಳುತ್ತಾರೆ. ಇವೆಲ್ಲವೂ ಪರಸ್ಪರ ವಿರುದ್ಧ ಲಿಂಗಿಗಳಿದ್ದಾಗ ಆಕರ್ಷಣೆಯಾಗಿ ಮಾರ್ಪಡುತ್ತದೆ. ಸಂಬಂಧವಾಗಿ ಬದಲಾಗುವ ಸಾಧ್ಯತೆಯನ್ನು ಹೆಚ್ಚು ಮಾಡುತ್ತದೆ.

ಕನ್ಯಾ

ಈ ರಾಶಿಯವರ ಮೇಲೆ ಆರಾಧನಾ ಭಾವದಿಂದಲೇ ಇರುವವರು ಹೆಚ್ಚು. ಆ ವ್ಯಕ್ತಿನ ಜ್ಞಾನ, ತಿಳಿವಳಿಕೆ, ಪಾಂಡಿತ್ಯ, ಸಮಯ ಪ್ರಜ್ಞೆ ಎಷ್ಟು ಅದ್ಭುತ ಎಂಬ ಆರಾಧನಾ ಭಾವದಿಂದ ಶುರುವಾಗಿ ಯಾವುದೋ ಒಂದು ಹಂತದಲ್ಲಿ ಅದು ಪ್ರೀತಿಯಾಗಿ, ಸಂಬಂಧವಾಗಿ ಬದಲಾಗಿ ಬಿಡುತ್ತದೆ. ಇನ್ನು ಈ ಕನ್ಯಾ ರಾಶಿಯವರು ಬಹಳ ಗುಟ್ಟಿನ ಜನ. ಆದ್ದರಿಂದ ವರ್ಷಗಳ ಕಾಲ ಇಂಥದ್ದೊಂದು ಇತ್ತಂತೆ ಎಂದು ಯಾರೋ ಇವರ ಬಗ್ಗೆ ಹೇಳಿದರೂ ಇತರರು ನಂಬಲು ಸಾಧ್ಯವೇ ಆಗುವುದಿಲ್ಲ ಎಂಬ ಮಟ್ಟದ ವರ್ಚಸ್ಸು ಇವರಿಗಿರುತ್ತದೆ. ಮತ್ತು ಗುಟ್ಟಾಗಿ ಇರುವುದು, ನಡೆದುಕೊಳ್ಳುವುದು ಈ ರಾಶಿಯವರ ಸಾಮರ್ಥ್ಯ.

ಜ್ಯೀತಿಷ್ಯ ಸಂಬಂಧಿತ ಇನ್ನಷ್ಟು ಅಪ್​ಡೇಟ್​ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ