ಕೊರೊನಾ ಸಂದರ್ಭದಲ್ಲಿ ಸ್ವಂತ ವಾಹನ ಅತ್ಯವಶ್ಯಕ ಎನ್ನಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಆರ್ಥಿಕ ಚಟುವಟಿಕೆಗಳೆಲ್ಲಾ ಸ್ಥಗಿತಗೊಂಡಿರುವ ಸಂದರ್ಭದಲ್ಲಿ ಒಮ್ಮೆಲೆಗೆ ದೊಡ್ಡ ಮೊತ್ತದ ಹಣ ನೀಡಿ ವಾಹನ ಖರೀದಿಗೆ ಕೈ ಹಾಕುವುದೆಂದರೆ ಸಾಮಾನ್ಯ ಜನರ ಜೇಬಿಗೆ ಬಲುಭಾರವಾಗುತ್ತದೆ. ಇಂತಹ ಹೊತ್ತಿನಲ್ಲಿ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಪ್ರಸಿದ್ಧವಾಗಿರುವ ಹೋಂಡಾ ಕಂಪೆನಿಯ ವಾಹನವೊಂದರ ಮೇಲೆ ಭಾರೀ ಆಫರ್ ನೀಡಲಾಗಿದೆ. ಈ ಆಫರ್ ಅಡಿಯಲ್ಲಿ ಸುಮಾರು 70 ಸಾವಿರ ರೂಪಾಯಿ ಮೌಲ್ಯದ ಹೋಂಡಾ ಆ್ಯಕ್ಟೀವಾವನ್ನು ಕೇವಲ 25 ಸಾವಿರ ರೂಪಾಯಿಗೆ ಖರೀದಿಸಬಹುದಾಗಿದೆ. ಮಾರುಕಟ್ಟೆಯಲ್ಲಿ ಭರ್ಜರಿ ಡಿಮ್ಯಾಂಡ್ ಗಿಟ್ಟಿಸಿಕೊಂಡಿರುವ ಆ್ಯಕ್ಟೀವಾ ಮೇಲೆ ಇಷ್ಟು ದೊಡ್ಡ ಆಫರ್ ಹೇಗೆ ಕೊಡುತ್ತಿದ್ದಾರೆ ಎಂದು ಅಚ್ಚರಿಯಾಗುತ್ತದೆ ಅಲ್ಲವಾ? ಹೌದು, ಇದು ಅಚ್ಚರಿಯೆನಿಸಿದರೂ ಸತ್ಯ.
ಅಂದಹಾಗೆ ಈ ಆಫರ್ ಲಭ್ಯವಿರುವುದು ಡ್ರೂಮ್ ಎಂಬ ಆನ್ಲೈನ್ ವೇದಿಕೆಯಲ್ಲಿ. ಸೆಕೆಂಡ್ ಹ್ಯಾಂಡ್ ವಾಹನ ಮಾರಾಟ ಹಾಗೂ ಖರೀದಿಗೆ ಪ್ರಸಿದ್ಧಿಯಾಗಿರುವ ಡ್ರೂಮ್ ಈ ಕೊಡುಗೆಯನ್ನು ನೀಡಿದೆ. 110ಸಿಸಿಯ ಸೆಕೆಂಡ್ ಹ್ಯಾಂಡ್ ಆ್ಯಕ್ಟೀವಾ ಕೇವಲ 18ಸಾವಿರ ಕಿಲೋ ಮೀಟರ್ ಓಡಿದ್ದು, ಸುಸ್ಥಿತಿಯಲ್ಲಿದೆ. 2013ನೇ ಸಾಲಿನ ಮಾದರಿಯಾಗಿರುವ ಈ ವಾಹನ ಪ್ರಸ್ತುತ ಒಂದು ಲೀಟರ್ ಪೆಟ್ರೋಲ್ಗೆ 55 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಇದಕ್ಕೆ ಬೇಡಿಕೆಯೂ ಸಹಜವಾಗಿ ಹೆಚ್ಚಿದೆ.
ಆಟೋ ಮತ್ತು ಕಿಕ್ ಸ್ಟಾರ್ಟ್, 10ಇಂಚು ಅಗಲದ ಚಕ್ರ, ಆ್ಯಂಟಿ ಥೆಫ್ಟ್ ಅಲ್ರಾಮ್ ಸೇರಿದಂತೆ ಬಹುತೇಕ ಎಲ್ಲಾ ಸೌಲಭ್ಯಗಳೂ ಉತ್ತಮವಾಗಿಯೇ ಇದ್ದು, ಗಾಡಿಗೆ ವರ್ಷವಾಗಿದ್ದರೂ ನಿರ್ವಹಣೆ ಚೆನ್ನಾಗಿರುವ ಕಾರಣ ಹೊಸದರಂತೆಯೇ ಇದೆ. ಅಲ್ಲದೇ ದೆಹಲಿಯ ರಸ್ತೆಗಳಲ್ಲಿ ಅಡ್ಡಾಡಿರುವ ಬೈಕ್ ಇದಾಗಿದ್ದು, ಕಚ್ಚಾ ರಸ್ತೆಗಳಲ್ಲಿ ಓಡಿಸಿರದ ಕಾರಣ ಹೆಚ್ಚು ಹೊಡೆತವನ್ನೇನೂ ತಿಂದಿಲ್ಲ ಎನ್ನುವುದು ಮಾರಾಟಗಾರರ ಮಾತು.
ಒಂದುವೇಳೆ, ಈ ಬೈಕ್ ಕೊಳ್ಳಲು ನಿಮಗೂ ಆಸಕ್ತಿ ಇದ್ದರೆ ಭಾರೀ ಪೈಪೋಟಿಯ ನಡುವೆ ಪ್ರಯತ್ನಿಸಬೇಕಿದೆ. ಸೆಕೆಂಡ್ ಹ್ಯಾಂಡ್ ಆ್ಯಕ್ಟೀವಾವನ್ನು ಮಾರಾಟಕ್ಕಿಟ್ಟಿರುವ ಡ್ರೂಮ್ (Droom) ಜಾಲತಾಣದಲ್ಲಿ ಹೆಚ್ಚಿನ ವಿವರಗಳು ಲಭ್ಯವಿದ್ದು, ಅಲ್ಲಿಗೆ ಭೇಟಿ ನೀಡಿ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬಹುದಾಗಿದೆ.
ಸೂಚನೆ: ಯಾವುದೇ ಸಂದರ್ಭದಲ್ಲಿ ಸೆಕೆಂಡ್ ಹ್ಯಾಂಡ್ ವಾಹನ ಕೊಳ್ಳುವಾಗ ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸುವುದು ಅತ್ಯಗತ್ಯವಾಗಿದ್ದು, ಆರ್ಸಿ ಯಾರ ಹೆಸರಿನಲ್ಲಿ ಇರುತ್ತದೋ ಅವರೊಂದಿಗೆ ನೇರ ವ್ಯವಹಾರ ನಡೆಸಿ. ಅಲ್ಲದೇ ಯಾವುದೇ ಕಾರಣಕ್ಕೂ ಕಾನೂನಿನ ಅಡೆತಡೆಗಳನ್ನು ನಿವಾರಿಸಿಕೊಳ್ಳದೇ ಸೆಕೆಂಡ್ ಹ್ಯಾಂಡ್ ವಾಹನ ಖರೀದಿ ಮಾಡಬೇಡಿ.
ಇದನ್ನೂ ಓದಿ:
Honda car offers: ಹೋಂಡಾ ಕಾರುಗಳ ಮೇಲೆ ಜೂನ್ನಲ್ಲಿ ಇರುವ ಆಫರ್ ಮತ್ತು ರಿಯಾಯಿತಿಗಳ ಮಾಹಿತಿ ಇಲ್ಲಿದೆ
ಬಂಪರ್ ಆಫರ್! 4 ಲಕ್ಷ ರೂಪಾಯಿ ಕಾರಿಗೆ ಕೇವಲ 1.30 ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಿ
Published On - 8:53 am, Wed, 9 June 21