9 ಲಕ್ಷ ರೂಪಾಯಿಯ ಕಾರು 2.70 ಲಕ್ಷಕ್ಕೆ ಖರೀದಿಸಿ; 18 ತಿಂಗಳು ಓಡಿಸಿದ ಮೇಲೂ 1.84 ಲಕ್ಷ ಪಡೆಯಿರಿ
9 ಲಕ್ಷ ರೂಪಾಯಿಯ ಕಾರು 2.70 ಲಕ್ಷ ರೂಪಾಯಿಗೆ ಸಿಗುತ್ತದೆ. ಹದಿನೆಂಟು ತಿಂಗಳ ತನಕ ಬಳಕೆ ಮಾಡಿದ ಮೇಲೆ ಹಿಂತಿರುಗಿಸಿದ ಮೇಲೆ ಹಿಂತಿರುಗಿಸಿದರೂ 1.84 ಲಕ್ಷ ರೂಪಾಯಿ ಸಿಗುತ್ತದೆ.
ನೀವೇನಾದರೂ ಕಾರು ಖರೀದಿ ಮಾಡುವ ಆಲೋಚನೆಯಲ್ಲಿದ್ದರೆ ನಿಮಗಾಗಿಯೇ ಅದ್ಭುತವಾದ ಆಫರ್ ಇಲ್ಲಿದೆ. 9 ಲಕ್ಷ ರೂಪಾಯಿಯ ಕಾರನ್ನು 2.70 ಲಕ್ಷಕ್ಕೆ ಕೊಳ್ಳಬಹುದು. ಹುಂಡೈ i20 ಕಾರನ್ನು Spinnyಯಲ್ಲಿ ಕೊಳ್ಳಬಹುದು. ನಿಮಗೆ ಗೊತ್ತಿರಲಿ, Spinny ಎಂಬುದು ಸೆಕೆಂಡ್ ಕಾರುಗಳನ್ನು ಖರೀದಿ ಮತ್ತು ಮಾರಾಟ ಮಾಡುವಂಥ ವೆಬ್ಸೈಟ್. ಇದರಲ್ಲಿ 2011 ಹುಂಡೈ i20 (2008ರಿಂದ 2012ರ ಮಾಡೆಲ್) ಆಸ್ಟಾ 1.2 ಕಾರುಗಳು ಮಾರಾಟ ಆಗುತ್ತಿವೆ. ಈ ಕಾರುಗಳು ಕೂಡ ಸೆಕೆಂಡ್ ಹ್ಯಾಂಡ್ ಮತ್ತು ಪೆಟ್ರೋಲ್ ಎಂಜಿನ್ ಜತೆಗೆ ಮ್ಯಾನ್ಯುಯಲ್ ಟ್ರಾನ್ಮಿಷನ್ ಸಮೇತ ಬರುತ್ತದೆ. ಇದರ ನಿಗದಿತ ಬೆಲೆ 2,70,000 ರೂಪಾಯಿ. ವೆಬ್ಸೈಟ್ನಲ್ಲೇ ಕೊಟ್ಟಿರುವ ಮಾಹಿತಿಯಂತೆ, ಇಲ್ಲಿ ಒಂದು ಮೊದಲನೇ ಮಾಲೀಕರೇ ಬಳಸಿದ ಕಾರು ಇದ್ದು, 91,142 ಕಿಲೋಮೀಟರ್ ಕಿಲೋಮೀಟರ್ ತನಕ ಓಡಿದೆ. ಈ ಕಾರನ್ನು 2011ರ ಜುಲೈನಲ್ಲಿ ತಯಾರಿಸಲಾಗಿದ್ದು, ಅದೇ ವರ್ಷದ ನವೆಂಬರ್ನಲ್ಲಿ ನೋಂದಣಿ ಆಗಿದೆ.
ಇನ್ನೊಂದು ಮೊದಲನೇ ಮಾಲೀಕರ ಕಾರು ಇದೆ. ಇನ್ಷೂರೆನ್ಸ್ ಸಿಂಧುತ್ವ 2021ರ ನವೆಂಬರ್ ತನಕ ಇದೆ. ಈ ಕಾರಿನ ಭೌತಿಕ ಸ್ಥಿತಿ (ಫಿಜಿಕಲ್ ಕಂಡೀಷನ್) ಬಗ್ಗೆ ವೆಬ್ಸೈಟ್ನಲ್ಲಿ ಮಾಹಿತಿ ನೀಡಲಾಗಿದೆ. ಅದರಂತೆ, ಕೆಲವು ಡೆಂಟ್ಗಳಾಗಿವೆ. ಇದರ ಹೊರ ಭಾಗದಲ್ಲಿ ಸಣ್ಣಪುಟ್ಟ ಡೆಂಟ್ಗಳು ಮತ್ತು ಸ್ಕ್ರಾಚ್ಗಳಾಗಿವೆ. ಈ ಕಾರಿನ ಬಗ್ಗೆ ಇನ್ನಷ್ಟು ಮಾಹಿತಿ ಬೇಕು ಅಂತಾದಲ್ಲಿ ಈ ಲಿಂಕ್: https://www.spinny.com/buy-used-cars/delhi/hyundai/i20/asta-12-netaji-subhash-place-2011/631660/ ಕ್ಲಿಕ್ ಮಾಡಿದರೆ ದೊರೆಯುತ್ತದೆ.
ಇಎಂಐನಲ್ಲೂ ಖರೀದಿ ಮಾಡಬಹುದು ಈ ಕಾರಿನ ಖರೀದಿ ಮೇಲೆ ಒಂದು ವರ್ಷದ ವಾರಂಟಿ, ಐದು ದಿನದ ಮನಿ ಬ್ಯಾಕ್ ಗ್ಯಾರಂಟಿ ಮತ್ತು ಫಿಕ್ಸೆಡ್ ದರದ ಅನುಕೂಲ ಸಿಗುತ್ತದೆ. ಈ ಕಾರಿಗೆ ಶೇ 12.5ರ ಬಡ್ಡಿ ದರದಲ್ಲಿ 5 ವರ್ಷದ ತನಕ ಸಾಲ ದೊರೆಯುತ್ತದೆ. ಇದಕ್ಕಾಗಿ ಪ್ರತಿ ತಿಂಗಳು 4804 ರೂಪಾಯಿ ಮಾತ್ರ ಪಾವತಿಸಿದರಾಯಿತು. ಎಚ್ಡಿಎಫ್ಸಿ, ಟಾಟಾ ಕ್ಯಾಪಿಟಲ್, ಐಸಿಐಸಿಐ ಮತ್ತು ಇತರ ಬ್ಯಾಂಕ್ಗಳಲ್ಲಿ ಸಾಲ ದೊರೆಯುತ್ತದೆ. ವೆಬ್ಸೈಟ್ನಲ್ಲಿ ಇರುವ ಮಾಹಿತಿಯ ಪ್ರಕಾರ, 10 ರೂಪಾಯಿ ನೀಡಿ, ಕಾರು ತಮ್ಮದಾಗಿಸಿಕೊಳ್ಳಬಹುದು. ಇದರ ಹೊರತಾಗಿ ಖರದಿಗೆ ಮುಂಚೆ ಟೆಸ್ಟ್ ಡ್ರೈವ್ ತೆಗೆದುಕೊಳ್ಳಬಹುದು.
ಕಾರು ಇಷ್ಟವಾಗದಿದ್ದಲ್ಲಿ ಆರು ತಿಂಗಳ ನಂತರವಾದರೂ ಹಿಂತಿರುಗಿಸಬಹುದು ಸ್ಪಿನ್ನಿಯಿಂದ ಬೈಬ್ಯಾಕ್ ಮಾಡಬಹುದು. ಕಾರನ್ನು ಓಡಿಸಿದ ನಂತರವೂ ಹಣವನ್ನು ವಾಪಸ್ ಪಡೆಯಬಹುದು. ಈ ಬೈಬ್ಯಾಕ್ ಆರು ತಿಂಗಳಿಂದ 18 ತಿಂಗಳ ತನಕ ಇರುತ್ತದೆ. 18 ತಿಂಗಳ ಒಳಗಾಗಿ ಹಿಂತಿರುಗಿಸಿದಲ್ಲಿ 1,83,000 ರೂಪಾಯಿ ಸಿಗುತ್ತದೆ. ಇದರ ಜತೆಗೆ ಪ್ರತಿ ತಿಂಗಳು 4833 ರೂಪಾಯಿ ಮಾಲೀಕತ್ವ ವೆಚ್ಚ ಆಗುತ್ತದೆ.
ಇದನ್ನೂ ಓದಿ: Ola Electric Scooter: ಓಲಾ ಎಲೆಕ್ಟ್ರಿಕ್ ಸ್ಕೂಟರ್ ರೀಫಂಡಬಲ್ ರೂ. 499 ಪಾವತಿಸಿ, ಕಾಯ್ದಿರಿಸುವ ಅವಕಾಶ
(Buy Rs 9 Lakh Car For Just Below Rs 3 Lakhs Spinny Can Buyback This Within 18 Months)
Published On - 5:44 pm, Thu, 22 July 21