Ola Electric Scooter: ಓಲಾ ಎಲೆಕ್ಟ್ರಿಕ್ ಸ್ಕೂಟರ್​ ರೀಫಂಡಬಲ್ ರೂ. 499 ಪಾವತಿಸಿ, ಕಾಯ್ದಿರಿಸುವ ಅವಕಾಶ

ರೀಫಂಡಬಲ್ ಠೇವಣಿ ಮೊತ್ತವಾದ ರೂ. 499 ಪಾವತಿಸುವ ಮೂಲಕ ಓಲಾ ಸ್ಕೂಟರ್ ಕಾಯ್ದಿರಿಸಬಹುದು ಎಂದು ಓಲಾ ಎಲೆಕ್ಟ್ರಿಕ್ ಮಾಹಿತಿ ನೀಡಿದೆ.

Ola Electric Scooter: ಓಲಾ ಎಲೆಕ್ಟ್ರಿಕ್ ಸ್ಕೂಟರ್​ ರೀಫಂಡಬಲ್ ರೂ. 499 ಪಾವತಿಸಿ, ಕಾಯ್ದಿರಿಸುವ ಅವಕಾಶ
ಓಲಾ ಎಸ್ 1 ಎಲೆಕ್ಟ್ರಿಕ್ ಸ್ಕೂಟರ್​ನ ಆರಂಭಿಕ ಬೆಲೆ, 79,999 ರೂ ( ಗುಜರಾತ್ ಶೋ ರೂಂ ಬೆಲೆ), 85,099 ರೂ (ದೆಹಲಿ ಶೋ ರೂಂ ಬೆಲೆ). ಇನ್ನು ಪ್ರೀಮಿಯಂ ಎಸ್ 1 ವೆರಿಯಂಟ್ ಸ್ಕೂಟರ್ ಬೆಲೆ 1.10 ಲಕ್ಷ ರೂ. ಅಸುಪಾಸಿನಲ್ಲಿರಲಿದೆ. ಹಾಗೆಯೇ ಸಬ್ಸಿಡಿ ಇರದ ರಾಜ್ಯಗಳಲ್ಲಿ S1 ಬೆಲೆ 99,999 ರೂ. ಹಾಗೆಯೇ S1 ಪ್ರೊ ಬೆಲೆ 129,000 ರೂ. ನಿಗದಿಪಡಿಸಲಾಗಿದೆ.
Follow us
TV9 Web
| Updated By: Srinivas Mata

Updated on: Jul 15, 2021 | 8:27 PM

ಓಲಾ ಎಲೆಕ್ಟ್ರಿಕ್ (Ola Electric)ನಿಂದ ಎಲೆಕ್ಟ್ರಿಕ್ ಸ್ಕೂಟರ್ ರಿಸರ್ವೇಷನ್ ಆರಂಭವಾಗಿದೆ. ಗ್ರಾಹಕರು ರೀಫಂಡಬಲ್ ಠೇವಣಿ ಮೊತ್ತವಾದ ರೂ. 499 ಪಾವತಿಸುವ ಮೂಲಕ ಓಲಾ ಸ್ಕೂಟರ್ ಮೀಸಲಿರಿಸಬಹುದು. ಯಾರು ತಮ್ಮ ಸ್ಕೂಟರ್​ ಅನ್ನು olaelectric.comನಲ್ಲಿ ಕಾಯ್ದಿರಿಸುತ್ತಾರೋ ಅಂಥವರಿಗೆ ಡೆಲಿವರಿಯಲ್ಲಿ ಆದ್ಯತೆ ದೊರೆಯಲಿದೆ. ಮುಂಬರುವ ದಿನಗಳಲ್ಲಿ ಓಲಾದಿಂದ ಫೀಚರ್​ಗಳನ್ನು ಮತ್ತು ದರವನ್ನು ಬಹಿರಂಗ ಪಡಿಸಲಾಗುವುದು ಎಂದು ತಿಳಿಸಲಾಗಿದೆ. “ಆಕ್ರಮಣಕಾರಿ ಬೆಲೆಗಳ ಜೊತೆಗೆ ಅದರ ಅದ್ಭುತ ಕಾರ್ಯಕ್ಷಮತೆ, ತಂತ್ರಜ್ಞಾನ ಮತ್ತು ವಿನ್ಯಾಸದೊಂದಿಗೆ ಸುಸ್ಥಿರ ಚಲನಶೀಲತೆಗೆ ಪರಿವರ್ತನೆ ವೇಗಗೊಳಿಸಲು ಸಹಾಯ ಮಾಡುತ್ತದೆ. ಎಲೆಕ್ಟ್ರಿಕ್ ವಾಹನಗಳಲ್ಲಿ ವಿಶ್ವ ನಾಯಕ ಆಗಲು ಭಾರತಕ್ಕೆ ಅವಕಾಶ ಮತ್ತು ಸಾಮರ್ಥ್ಯವಿದೆ ಹಾಗೂ ಓಲಾ ಕಂಪೆನಿಯು ಇದನ್ನು ಮುನ್ನಡೆಸಲು ಹೆಮ್ಮೆಪಡುತ್ತದೆ,” ಎಂದು ಓಲಾದ ಅಧ್ಯಕ್ಷ ಮತ್ತು ಸಮೂಹದ ಸಿಇಒ ಭವಿಷ್ ಅಗರ್​ವಾಲ್ ಹೇಳಿದ್ದಾರೆ.

ಓಲಾ ಎಲೆಕ್ಟ್ರಿಕ್​ನಿಂದ ತನ್ನ ಕಾರ್ಖಾನೆಯ ಅಭಿವೃದ್ಧಿಯ ಮೊದಲ ಹಂತವನ್ನು ಮುಕ್ತಾಯಗೊಳಿಸಲು ಬ್ಯಾಂಕ್ ಆಫ್ ಬರೋಡಾದಿಂದ 100 ಮಿಲಿಯನ್ ಡಾಲರ್ ದೀರ್ಘಾವಧಿಯ ಸಾಲವನ್ನು ಸಂಗ್ರಹಿಸಿದ ಕೆಲವೇ ದಿನಗಳಲ್ಲಿ ಈ ಘೋಷಣೆ ಬಂದಿದೆ. ಅಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ತಯಾರಿಸಲು ಓಲಾ ಯೋಜಿಸಿದೆ. ಭವಿಷ್ ನೇತೃತ್ವದ ಓಲಾದಿಂದ ತಮಿಳುನಾಡಿನ ಕೃಷ್ಣಗಿರಿನಲ್ಲಿ 500 ಎಕರೆ ಕಾರ್ಖಾನೆಯನ್ನು ಸ್ಥಾಪಿಸುತ್ತಿದ್ದು, ವರ್ಷಕ್ಕೆ 10 ಮಿಲಿಯನ್ ವಾಹನಗಳನ್ನು ಪೂರ್ಣ ಸಾಮರ್ಥ್ಯದಲ್ಲಿ ತಯಾರಿ ಮಾಡುವ ಗುರಿ ಹೊಂದಿದೆ – ಇದು ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಕಾರ್ಖಾನೆ ಆಗಿದೆ, ಎಂದು ಕಂಪನಿ ಹೇಳಿದೆ.

ಮುಂದಿನ ಐದು ವರ್ಷಗಳಲ್ಲಿ ಓಲಾ ಎಲೆಕ್ಟ್ರಿಕ್ ತನ್ನ ಪಾಲುದಾರರೊಂದಿಗೆ 2 ಬಿಲಿಯನ್ ಡಾಲರ್ ಹೂಡಿಕೆ ಮಾಡಿ, 400 ನಗರಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಿದೆ ಎಂದು ಮನಿಕಂಟ್ರೋಲ್ ಏಪ್ರಿಲ್​ನಲ್ಲಿ ವರದಿ ಮಾಡಿತ್ತು. ಚಾರ್ಜಿಂಗ್ ಕೇಂದ್ರಗಳ ಕೊರತೆಯು ಸದ್ಯಕ್ಕೆ ಭಾರತದ ಮುಖ್ಯವಾಹಿನಿಯ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ದೊಡ್ಡ ಅಡಚಣೆಯಾಗಿದೆ.

ಮ್ಯಾಟ್ರಿಕ್ಸ್ ಪಾರ್ಟ್‌ನರ್ಸ್, ಟೈಗರ್ ಗ್ಲೋಬಲ್ ಮ್ಯಾನೇಜ್‌ಮೆಂಟ್ ಮತ್ತು ಸಾಫ್ಟ್‌ಬ್ಯಾಂಕ್ ಮುಂತಾದ ಹೂಡಿಕೆದಾರರ ಬೆಂಬಲದೊಂದಿಗೆ ಓಲಾ ಎಲೆಕ್ಟ್ರಿಕ್ ಮೌಲ್ಯವು ಒಂದು ಬಿಲಿಯನ್ ಡಾಲರ್‌ಗಿಂತ ಹೆಚ್ಚಿನದಾಗಿದೆ. ಓಲಾದ ಮುಖ್ಯ ಚಾಲನೆ ಆಧಾರಿತ ಘಟಕವನ್ನು ಶೀಘ್ರದಲ್ಲೇ ಸ್ಟಾಕ್ ಎಕ್ಸ್ಚೇಂಜ್​ಗಳಲ್ಲಿ ಲಿಸ್ಟಿಂಗ್ ಮಾಡಲು ಯೋಜಿಸುತ್ತಿದೆ. ಇದಕ್ಕಾಗಿ ಇದು ವಾರ್​ಬರ್ಗ್ ಪಿನ್ಕಸ್ ಮತ್ತು ಟೆಮಾಸೆಕ್​ನಿಂದ 500 ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿದೆ. ಆರಂಭಿಕ ಬೆಂಬಲಿಗ ಕಂಪೆನಿಗಳಾದ ಟೈಗರ್ ಮತ್ತು ಮ್ಯಾಟ್ರಿಕ್ಸ್ ತಮ್ಮ ಪಾಲಿನ ಒಂದು ಭಾಗದೊಂದಿಗೆ ನಿರ್ಗಮಿಸುತ್ತವೆ.

ಇದನ್ನೂ ಓದಿ: Electric cars in India: ಭಾರತದಲ್ಲಿ 2021ರಲ್ಲಿ ಬಿಡುಗಡೆ ಆಗಲಿರುವ ಟಾಪ್ ಎಲೆಕ್ಟ್ರಿಕ್ ಕಾರುಗಳು

(Ola electric scooter can book by customers by paying refundable Rs 499. Here is the details)

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ