Entrepreneurs Day 2022: ಇಂದು ವಾಣಿಜ್ಯೋದ್ಯಮಿಗಳ ದಿನ; ಭಾರತದ ಟಾಪ್ 10 ಉದ್ಯಮಿಗಳಿವರು…

TV9kannada Web Team

TV9kannada Web Team | Edited By: Ganapathi Sharma

Updated on: Nov 15, 2022 | 11:15 AM

ಭಾರತದಲ್ಲಿಯೂ ಅನೇಕ ವ್ಯಕ್ತಿಗಳು ಹೊಸದಾಗಿ ಉದ್ದಿಮೆಯನ್ನು ಕಟ್ಟಿ ಬೆಳೆಸಿ ದೊಡ್ಡ ಸಾಮ್ರಾಜ್ಯಗಳನ್ನು ನಿರ್ಮಿಸಿದ್ದಾರೆ. ಸಣ್ಣದಾಗಿ ಉದ್ಯಮ ಆರಂಭಿಸಿ ಬೃಹತ್ ಸಾಮ್ರಾಜ್ಯ ಕಟ್ಟಿದವರ ಪೈಕಿ ಪ್ರಮುಖರ ಹೆಸರುಗಳು ಇಲ್ಲಿವೆ.

Entrepreneurs Day 2022: ಇಂದು ವಾಣಿಜ್ಯೋದ್ಯಮಿಗಳ ದಿನ; ಭಾರತದ ಟಾಪ್ 10 ಉದ್ಯಮಿಗಳಿವರು...
ಸಾಂದರ್ಭಿಕ ಚಿತ್ರ
Image Credit source: Shutterstock

ನವೆಂಬರ್ ತಿಂಗಳ ಮೂರನೇ ಮಂಗಳವಾರವನ್ನು ಪ್ರತಿ ವರ್ಷ ರಾಷ್ಟ್ರೀಯ ವಾಣಿಜ್ಯೋದ್ಯಮಿಗಳ ದಿನವನ್ನಾಗಿ (National Entrepreneur’s Day) ಆಚರಿಸಲಾಗುತ್ತಿದೆ. ಬಡತನದ ಹಿನ್ನೆಲೆಯಿಂದ ಉದ್ಯಮ ಆರಂಭಿಸಿ ದೊಡ್ಡ ಸಾಮ್ರಾಜ್ಯ ಕಟ್ಟಿದವರನ್ನು ಗೌರವಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. ಸಿಯಾಮಕ್ ತಘಡ್ಡೋಸ್ ಎಂಬ ಉದ್ಯಮಿ ಇದರ ಮೂಲಕರ್ತ. ಈತ ಮೂಲತಃ ಇರಾನ್​ನ ವ್ಯಕ್ತಿ. ಅತಿಹೆಚ್ಚು ಸಂಖ್ಯೆಯ ಉದ್ಯಮಿಗಳನ್ನು ಹೊಂದಿದ್ದರೂ ಅಮೆರಿಕ ಯಾಕೆ ಅವರ ಸಾಧನೆ ಗುರುತಿಸಲು ದಿನವೊಂದನ್ನು ಮೀಸಲಿಟ್ಟಿಲ್ಲ ಎಂಬ ಕುತೂಹಲ ಹಾಗೂ ಪ್ರಶ್ನೆ ಸಿಯಾಮಕ್​ ಅವರಲ್ಲಿ ಉದ್ಭವಿಸಿತ್ತು. ಪರಿಣಾಮವಾಗಿ 2010ರಲ್ಲಿ ಸಹಿ ಅಭಿಯಾನವೊಂದನ್ನು ಆರಂಭಿಸಿದರು. ಈ ಅಭಿಯಾನ ಆರು ತಿಂಗಳ ಕಾಲ ನಡೆಯಿತು. ಸಾವಿರಾರು ಜನ ಸಹಿ ಹಾಕಿದ ಪತ್ರವನ್ನು ಅಮೆರಿಕದ ಅಂದಿನ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಸಲ್ಲಿಸಲಾಯಿತು. ಇದನ್ನು ಪುರಸ್ಕರಿಸಿದ ಅವರು, ರಾಷ್ಟ್ರೀಯ ಉದ್ಯಮಿಗಳ ಸಪ್ತಾಹದ ಕಡೆಯ ದಿನವನ್ನು (ನವೆಂಬರ್ 3ನೇ ಮಂಗಳವಾರ) ರಾಷ್ಟ್ರೀಯ ವಾಣಿಜ್ಯೋದ್ಯಮಿಗಳ ದಿನವನ್ನಾಗಿ ಘೋಷಿಸಿದರು. ಭಾರತದಲ್ಲಿಯೂ ಇದೇ ದಿನವನ್ನು ರಾಷ್ಟ್ರೀಯ ವಾಣಿಜ್ಯೋದ್ಯಮಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.

ಸಿಯಾಮಕ್ ತಘಡ್ಡೋಸ್ ಹಿನ್ನೆಲೆ…

ಸಿಯಾಮಕ್ ತಘಡ್ಡೋಸ್ ಅಮೆರಿಕದಲ್ಲಿ ಅನೇಕ ಉದ್ದಿಮೆಗಳನ್ನು ಹುಟ್ಟುಹಾಕಿರುವ ವ್ಯಕ್ತಿ, ಉದ್ಯಮಿ. ಮೂಲತಃ ಇರಾನ್​ನ ಟೆಹ್ರಾನ್​ನವರು. ಅಮೆರಿಕಕ್ಕೆ ವಲಸೆ ಹೋದ ಸಿಯಾಮಕ್, 23ನೇ ವಯಸ್ಸಿನಲ್ಲಿಯೇ ಉದ್ಯಮ ಸ್ಥಾಪಿಸುವ ಮೂಲಕ ಅತಿ ಕಿರಿಯ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 25ನೇ ವಯಸ್ಸಿನಲ್ಲೇ ಸಿಇಒ ಆಗಿ ಜವಾಬ್ದಾರಿ ವಹಿಸಿಕೊಂಡರು. ಗ್ರಾಸ್​ಹೋಪರ್, ಚಾರ್ಜಿಫೈ ಹಾಗೂ ಸೂಪರ್​ಫಿಟ್ ಎಂಬ ಕಂಪನಿಗಳನ್ನೂ ಸ್ಥಾಪಿಸಿದ್ದಾರೆ. ರಾಷ್ಟ್ರೀಯ ವಾಣಿಜ್ಯೋದ್ಯಮಿಗಳ ದಿನದ ಸ್ಥಾಪಕನಾಗಿಯೂ ಗುರುತಿಸಿಕೊಂಡಿದ್ದಾರೆ.

ಭಾರತದ ವಾಣಿಜ್ಯೋದ್ಯಮಿಗಳು…

ಭಾರತದಲ್ಲಿಯೂ ಅನೇಕ ವ್ಯಕ್ತಿಗಳು ಹೊಸದಾಗಿ ಉದ್ದಿಮೆಯನ್ನು ಕಟ್ಟಿ ಬೆಳೆಸಿ ದೊಡ್ಡ ಸಾಮ್ರಾಜ್ಯಗಳನ್ನು ನಿರ್ಮಿಸಿದ್ದಾರೆ. ಧಾರ್ಮಿಕ ಯಾತ್ರಿಗಳಿಗೆ ಸಾಂಪ್ರದಾಯಿಕ ತಿಂಡಿಗಳನ್ನು ಮಾರಾಟ ಮಾಡುವಲ್ಲಿಂದ ಸಣ್ಣದಾಗಿ ಉದ್ಯಮ ಆರಂಭಿಸಿದ ಧೀರೂಭಾಯಿ ಅಂಬಾನಿ ಸಾಮ್ರಾಜ್ಯ ಈಗ ಯಾವ ಸ್ತರಕ್ಕೆ ಬೆಳೆದು ನಿಂತಿದೆ ಎಂಬುದನ್ನು ತಿಳಿಯದವರು ಇರಲಾರರು. ಇನ್ನೂ ಅನೇಕ ವ್ಯಕ್ತಿಗಳು ದೇಶದಲ್ಲಿ ಇದೇ ರೀತಿ ಸಣ್ಣದಾಗಿ ಉದ್ಯಮ ಆರಂಭಿಸಿ ಬೃಹತ್ ಸಾಮ್ರಾಜ್ಯ ಕಟ್ಟಿದ್ದಾರೆ. ಈ ಪೈಕಿ ಪ್ರಮುಖರ ಪಟ್ಟಿ ಇಲ್ಲಿದೆ.

1. ಧೀರೂಭಾಯಿ ಅಂಬಾನಿ

2. ಜಹಂಗೀರ್ ರತನ್​ಜೀ ದಾದಾಭಾಯಿ ಟಾಟಾ

3. ಎನ್.ಆರ್. ನಾರಾಯಣಮೂರ್ತಿ

4. ಶಿವ ನಡಾರ್

5. ಲಕ್ಷ್ಮೀ ನಿವಾಸ್ ಮಿತ್ತಲ್

6. ಘನಶ್ಯಾಂ ದಾಸ್ ಬಿರ್ಲಾ

7. ದಿಲೀಪ್ ಸಾಂಘ್ವಿ

8. ಅಜೀಂ ಪ್ರೇಮ್​ಜಿ

9. ಮುಕೇಶ್ ಜಗತಿಯಾನಿ

10. ಆರ್ದೆಶಿರ್ ಗೋದ್ರೆಜ್

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada