ಬೆಂಗಳೂರು: ಕರ್ನಾಟಕ ರಾಜ್ಯದ ಕಾರ್ಮಿಕ ಕಾನೂನಿನಲ್ಲಿ (Karnataka Labour Laws) ಕೆಲ ಮಹತ್ವದ ತಿದ್ದುಪಡಿ ಮಾಡಲಾಗಿದೆ. ಕಂಪನಿಗಳು ಇನ್ಮುಂದೆ ತಮ್ಮ ನೌಕರರಿಗೆ 12 ಗಂಟೆ ಅವಧಿಯ ಶಿಫ್ಟ್ನಲ್ಲಿ ಕೆಲಸ ಮಾಡಿಸಲು (12 Hour Shift) ಕಾನೂನು ಈಗ ಅನುಮತಿಸುತ್ತದೆ. ಹಾಗೆಯೇ, ಮಹಿಳಾ ಉದ್ಯೋಗಿಗಳು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ತಕರಾರು ಎತ್ತಲು ಸಾಧ್ಯವಾಗುವುದಿಲ್ಲ. ಫೈನಾನ್ಷಿಯಲ್ ಟೈಮ್ಸ್ ವರದಿ ಪ್ರಕಾರ ಸರ್ಕಾರದ ಈ ಮಹತ್ವದ ಕಾನೂನು ತಿದ್ದುಪಡಿಗೆ ಪ್ರಮುಖ ಕಾರಣವಾಗಿದ್ದು ಆ್ಯಪಲ್ ಮತ್ತು ಫಾಕ್ಸ್ಕಾನ್. ಚೀನಾದಲ್ಲೂ ಇಂಥದ್ದೇ ರೀತಿಯ ಕಾರ್ಮಿಕ ಕಾನೂನುಗಳಿದ್ದು, ಇಲ್ಲಿಯೂ ಅಂಥ ವ್ಯವಸ್ಥೆ ಮಾಡಬೇಕೆಂದು ಫಾಕ್ಸ್ಕಾನ್ ಮತ್ತು ಆ್ಯಪಲ್ ಬೇಡಿಕೆ ಇಟ್ಟಿದ್ದವು ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರ ಸದ್ದಿಲ್ಲದೇ ಕಾರ್ಮಿಕ ಕಾನೂನಿನಲ್ಲಿ ತಿದ್ದುಪಡಿ ತಂದಿದೆ.
ದೇಶದೆಲ್ಲೆಡೆ ಕಾರ್ಮಿಕರಿಗೆ ಗರಿಷ್ಠ 9 ಗಂಟೆ ಅವಧಿಯ ಕೆಲಸ ಪಾಳಿ ಎಂಬ ಕಾನೂನಿದೆ. ಮಹಿಳಾ ಉದ್ಯೋಗಿಗಳನ್ನು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಂತೆ ಕಡ್ಡಾಯಪಡಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಕಾರ್ಮಿಕ ಕಾನೂನು ತಿದ್ದುಪಡಿ ಗಮನ ಸೆಳೆದಿದೆ. ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲವಾಗುವಂತೆ ಕಾರ್ಮಿಕ ಕಾನೂನಿನಲ್ಲಿ ಬದಲಾವಣೆ ತಂದಿದೆ.
ಇದನ್ನೂ ಓದಿ: Foxconn: ಬೆಂಗಳೂರು ಏರ್ಪೋರ್ಟ್ನ ಹೊಸ ಟರ್ಮಿನಲ್ ಕಂಡು ಅಸ್ತು ಎಂದರಾ ಐಫೋನ್ ತಯಾರಕರು?
ಆ್ಯಪಲ್ ಕಂಪನಿಯ ಐಫೋನ್ ಅನ್ನು ತಯಾರಿಸುವ ಮೂರು ಕಂಪನಿಗಳಲ್ಲಿ ಫಾಕ್ಸ್ಕಾನ್ ಒಂದು. ಚೀನಾದಲ್ಲಿ ಐಫೋನ್ ಫ್ಯಾಕ್ಟರಿಗಳನ್ನು ಹೊಂದಿರುವ ಫಾಕ್ಸ್ಕಾನ್ ಭಾರತದಲ್ಲಿ ಘಟಕಗಳನ್ನು ತೆರೆಯಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಮತ್ತು ಹೈದರಾಬಾದ್ ನಗರಗಳ ಪರಿಶೀಲನೆ ನಡೆಸಿರುವ ಫಾಕ್ಸ್ಕಾನ್, ಕರ್ನಾಟಕ ಮತ್ತು ತೆಲಂಗಾಣ ಸರ್ಕಾರಗಳ ಜೊತೆ ಎಂಒಯು ಮಾಡಿಕೊಂಡಿದೆ. ಆದರೆ, ಈ ಎರಡು ರಾಜ್ಯಗಳಲ್ಲಿ ಅಂತಿಮವಾಗಿ ಯಾವುದು ಬೇಕೆಂದು ಆಯ್ಕೆ ಮಾಡಿಕೊಳ್ಳುವ ಹಕ್ಕು ಫಾಕ್ಸ್ಕಾನ್ಗೆ ಇದೆ. ಐಟಿ ಬೀಡು ಎಂದೇ ಖ್ಯಾತವಾಗಿರುವ ಕರ್ನಾಟಕಕ್ಕೆ ಫಾಕ್ಸ್ಕಾನ್ ಕಾರ್ಖಾನೆ ಶುರುವಾದರೆ ಇನ್ನೊಂದು ಗರಿ ಬಂದಂತೆ. ಹೀಗಾಗಿ, ರಾಜ್ಯ ಸರ್ಕಾರಕ್ಕೆ ಫಾಕ್ಸ್ಕಾನ್ಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುವುದು ಅನಿವಾರ್ಯವಾಗಿದೆ. ಇದೇ ಕಾರಣಕ್ಕೆ ಫಾಕ್ಸ್ಕಾನ್ ಇಟ್ಟಿದ್ದ ಬೇಡಿಕೆಗೆ ರಾಜ್ಯ ಸರ್ಕಾರ ಮಣಿದು ಕಾರ್ಮಿಕ ಕಾನೂನಿನಲ್ಲಿ ತಿದ್ದುಪಡಿ ಮಾಡಿದೆ ಎಂದು ವರದಿಗಳು ಹೇಳುತ್ತಿವೆ.
ಕಾರ್ಮಿಕ ಕಾನೂನಿನಲ್ಲಿ ಆಗಿರುವ ತಿದ್ದುಪಡಿಗಳೇನು?
ಫಾಕ್ಸ್ಕಾನ್ ಕರ್ನಾಟಕಕ್ಕೆ ಬರುವುದು ಖಚಿತವೇ?
ಫಾಕ್ಸ್ಕಾನ್ನ ಐಫೋನ್ ಫ್ಯಾಕ್ಟರಿ ಕರ್ನಾಟಕಕ್ಕೆ ಬರುವುದು ಬಹುತೇಕ ಖಚಿತ ಎಂದು ರಾಜ್ಯ ಸರ್ಕಾರದ ಮೂಲಗಳು ಹೇಳುತ್ತಿವೆ. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಕೇಂದ್ರ ಐಟಿ ಸಚಿವ ರಾಜೀವ್ ಚಂದ್ರಶೇಖರ್ ಮೊದಲಾದವರು ಈಗಾಗಲೇ ಈ ಬಗ್ಗೆ ಸುಳಿವು ನೀಡಿದ್ದಾರೆ. ನಿರಾಣಿ ನಿನ್ನೆ ಗುರುವಾರ ಮಾತನಾಡುತ್ತಾ, ಫಾಕ್ಸ್ಕಾನ್ ಬರುವುದು ನಿಶ್ಚಿತ ಎಂದು ಖಚಿತವಾಗಿ ಹೇಳಿದ್ದಾರೆ.
ಇದನ್ನೂ ಓದಿ: Vehicles Sale: ಭಾರತದಲ್ಲಿ ವಾಹನಗಳ ಮಾರಾಟ ಭರಾಟೆ; ಫೆಬ್ರುವರಿಯಲ್ಲಿ ಒಟ್ಟು ಸೇಲ್ ಆಗಿದ್ದು ಎಷ್ಟು?
ಸರ್ಕಾರ ಈಗಾಗಲೇ ದೊಡ್ಡಬಳ್ಳಾಪುರದ ಐಟಿಇಎಸ್ ಬಳಿ 300 ಎಕರೆ ಪ್ರದೇಶವನ್ನು ಫಾಕ್ಸ್ಕಾನ್ಗೆ ತೆಗೆದಿರಿಸಿದೆ. ಫಾಕ್ಸ್ಕಾನ್ ಈಗೇನಿದ್ದರೂ ಫ್ಯಾಕ್ಟರಿ ತೆರೆಯುವುದೊಂದೇ ಬಾಕಿ. ಅತ್ತ ತೆಲಂಗಾಣ ಸರ್ಕಾರ ಕೂಡ ಫಾಕ್ಸ್ಕಾನ್ಗೋಸ್ಕರ ಹೈದರಾಬಾದ್ ಸಮೀಪ 200 ಎಕರೆ ಜಾಗವನ್ನು ಎತ್ತಿ ಇಟ್ಟಿದೆ. ಅಲ್ಲಿಯ ಸಿಎಂ ಕೆ ಚಂದ್ರಶೇಖರ್ ರಾವ್ ಕೂಡ ಫಾಕ್ಸ್ಕಾನ್ ಬರುತ್ತೆ ಅನ್ನೋ ಆತ್ಮವಿಶ್ವಾಸದಲ್ಲಿದ್ದಾರೆ. ಆದರೆ, ಈಗ ಕರ್ನಾಟಕ ಮಾಡಿರುವ ಕಾರ್ಮಿಕ ಕಾನೂನು ತಿದ್ದುಪಡಿ ಗೇಮ್ ಚೇಂಜರ್ ಆಗಿ, ಫಾಕ್ಸ್ಕಾನ್ ಅನ್ನು ಸೆಳೆಯಲು ಯಶಸ್ವಿಯಾಗಬಹುದು.
Published On - 10:56 am, Fri, 10 March 23