ರಿಸೆಷನ್ ಪ್ರೂಫ್ ಜಾಬ್ ಇದೆಯೇ? ಆರ್ಥಿಕ ಹಿಂಜರಿತದ ವೇಳೆ ಉದ್ಯೋಗ ಉಳಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಆರ್ಥಿಕ ಹಿಂಜರಿತ ಅಥವಾ ಉದ್ಯೋಗ ಕಡಿತದ ಈ ಸಂದರ್ಭದಲ್ಲಿ ಇರುವ ಕೆಲಸವನ್ನು ಉಳಿಸಿಕೊಳ್ಳಲು ಏನು ಮಾಡಬಹುದು? ರಿಸೆಷನ್ ಪ್ರೂಫ್ ಜಾಬ್ ಎಂದು ಇದೆಯೇ? ಇದ್ದರೆ ಅದಕ್ಕೆ ಏನು ಮಾಡಬೇಕು? ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ.

ರಿಸೆಷನ್ ಪ್ರೂಫ್ ಜಾಬ್ ಇದೆಯೇ? ಆರ್ಥಿಕ ಹಿಂಜರಿತದ ವೇಳೆ ಉದ್ಯೋಗ ಉಳಿಸಿಕೊಳ್ಳಲು ಇಲ್ಲಿದೆ ಟಿಪ್ಸ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Nov 10, 2022 | 4:00 PM

ವಿಶ್ವದಾದ್ಯಂತ್ಯ ಆರ್ಥಿಕ ಪರಿಸ್ಥಿತಿಯು ಶೋಚನೀಯವಾಗುತ್ತಿದ್ದು ಆರ್ಥಿಕ ಹಿಂಜರಿತ (Global Recession), ಆರ್ಥಿಕ ಕುಸಿತ (Economic Downturn), ಆರ್ಥಿಕ ಸ್ಥಗಿತದ (Economic Stagnantion) ಭೀತಿ ಜನರನ್ನು ಕಾಡುತ್ತಿರುವುದು ಪ್ರತಿನಿತ್ಯದ ಮಾಧ್ಯಮ ವರದಿಗಳಿಂದ ತಿಳಿದುಬರುತ್ತಿದೆ. ಜತೆ-ಜತೆಗೇ ಉದ್ಯೋಗ ಕಡಿತದ ಗುಮ್ಮ ಕೂಡ ದುಡಿಯುವ ವರ್ಗವನ್ನು ಕಾಡುತ್ತಿದೆ. ಫೇಸ್​ಬುಕ್, ಇನ್​ಸ್ಟಾಗ್ರಾಮ್ ಮತ್ತು ವಾಟ್ಸ್ಯಾಪ್ ಮಾಲೀಕತ್ವ ಹೊಂದಿರುವ ಮೆಟಾ ಕಂಪನಿಯು 11,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಅದಕ್ಕೂ ಮುನ್ನ ಟ್ವಿಟರ್ ಸುಮಾರು 3,500ಕ್ಕೂ ಹೆಚ್ಚು ಉದ್ಯೋಗಿಗಳನ್ನು ಮನೆಗೆ ಕಳುಹಿಸಿತ್ತು. ಅಮೆರಿಕದ ಅನೇಕ ಟೆಕ್ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ಕಳೆದ ಕೆಲವು ದಿನಗಳಲ್ಲಂತೂ ಐಟಿ ಕಂಪನಿಗಳ ಉದ್ಯೋಗ ಕಡಿತದ ಸುದ್ದಿ ಮಾಮೂಲಾಗಿಬಿಟ್ಟಿದೆ.

ಇತ್ತೀಚಿನ ಕಾರ್ಮಿಕ ವರದಿಯೊಂದರ ಪ್ರಕಾರ, ಸುಮಾರು 20 ಲಕ್ಷ ಜನ ಅಲ್ಪಾವಧಿಯ ಅಥವಾ ದೀರ್ಘಾವಧಿಗೆ ನಿರುದ್ಯೋಗಿಗಳಾಗಿದ್ದಾರೆ ಎಂದು ಅಂದಾಜಿಸಲಾಗಿದೆ. 2008, 2009ರ ಆರ್ಥಿಕ ಹಿಂಜರಿತದಿಂದ ಪಾಠ ಕಲಿಯಬೇಕೆಂಬುದು ನಿಜವಾದರೂ ಉದ್ಯೋಗ ಕ್ಷೇತ್ರದಲ್ಲಿ ಕಳೆದ 15 ವರ್ಷಗಳಲ್ಲಿ ಅನೇಕ ಬದಲಾವಣೆಗಳಾಗಿವೆ. ಹೀಗಾಗಿ ಆರ್ಥಿಕ ಹಿಂಜರಿತ ಅಥವಾ ಉದ್ಯೋಗ ಕಡಿತದ ಈ ಸಂದರ್ಭದಲ್ಲಿ ಇರುವ ಕೆಲಸವನ್ನು ಉಳಿಸಿಕೊಳ್ಳಲು ಏನು ಮಾಡಬಹುದು? ರಿಸೆಷನ್ ಪ್ರೂಫ್ ಜಾಬ್ ಎಂದು ಇದೆಯೇ? ಇದ್ದರೆ ಅದಕ್ಕೆ ಏನು ಮಾಡಬೇಕು? ಅಮೆರಿಕದ ಉದ್ಯಮ ನಿಯತಕಾಲಿಕೆ ‘ಫಾಸ್ಟ್ ಕಂಪನಿ’ಯಲ್ಲಿ ಉದ್ಯೋಗ ತಜ್ಞೆ ಅಮಂಡಾ ಆಗಸ್ಟಿನ್ ನೀಡಿರುವ ಸಲಹೆಗಳು ಇಲ್ಲಿವೆ.

ರಿಸೆಷನ್ ಪ್ರೂಫ್ ಜಾಬ್ ಎಂದಿದೆಯೇ?

ಇದನ್ನೂ ಓದಿ
Image
Gold Price Today: ಚಿನ್ನ, ಬೆಳ್ಳಿ ಬೆಲೆ ಏರಿಕೆ; ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಧಾರಣೆ ಇಲ್ಲಿದೆ
Image
Meta Layoffs: ನನ್ನನ್ನು ಕ್ಷಮಿಸಿ; 11,000 ಉದ್ಯೋಗಿಗಳ ವಜಾಕ್ಕೆ ಮಾರ್ಕ್ ಝುಕರ್​ಬರ್ಗ್ ವಿಷಾದ
Image
2027ಕ್ಕೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಭಾರತ: ವರದಿ
Image
Mutual Funds: ಉತ್ತಮ ರಿಟರ್ನ್ಸ್ ತಂದುಕೊಡುತ್ತಿರುವ ಮಿಡ್​ಕ್ಯಾಪ್ ಮ್ಯೂಚುವಲ್ ಫಂಡ್​ಗಳಿವು

ಸಂಪೂರ್ಣವಾಗಿ ರಿಸೆಷನ್ ಪ್ರೂಫ್ ಜಾಬ್ ಅಥವಾ ಆರ್ಥಿಕ ಹಿಂಜರಿತ ನಿರೋಧಕ ಉದ್ಯೋಗ ಎಂಬ ಪರಿಕಲ್ಪನೆ ಇಲ್ಲ. ಆದರೆ, ಆರ್ಥಿಕ ಹಿಂಜರಿತದ ಸಂದರ್ಭದಲ್ಲಿಯೂ ಅದರ ಹೊಡೆತವನ್ನು ತಾಳಿಕೊಂಡು, ಉದ್ಯೋಗಕ್ಕೆ ತೊಂದರೆಯಾಗದಂತೆ ಕಾರ್ಯಾಚರಿಸಬಲ್ಲ ಹಲವು ಕ್ಷೇತ್ರಗಳಿವೆ ಎಂದಿದ್ದಾರೆ ಆಗಸ್ಟಿನ್. ಆರೋಗ್ಯ ಕ್ಷೇತ್ರ, ಶಿಕ್ಷಣ, ಹಣಕಾಸು ಸೇವೆಗಳು, ನ್ಯಾಯಾಂಗ ಸಂಬಂಧಿತ ಉದ್ಯೋಗಗಳು, ಯುಟಿಲಿಟಿ ಸೇವೆಗಳು ಇವುಗಳೆಲ್ಲ ಜನರ ಮೂಲ ಅವಶ್ಯಕತೆಗಳು. ಸಾಂಕ್ರಾಮಿಕದ ಸಂದರ್ಭದಲ್ಲಿಯೂ ಆರ್ಥಿಕ ಹೊಡೆತವನ್ನು ತಾಳಿಕೊಂಡು ಮುನ್ನಡೆದಿವೆ. ಹೀಗಾಗಿ ಆರ್ಥಿಕ ಹಿಂಜರಿತ, ಉದ್ಯೋಗ ಕಡಿತಂಥ ಕಾಲಘಟ್ಟದಲ್ಲಿ ಈ ಕ್ಷೇತ್ರಗಳ ಉದ್ಯೋಗ ಅವಲಂಬಿಸುವುದರಿಂದ ಆರ್ಥಿಕ ಹಿಂಜರಿತದ ನೇರ ಹೊಡೆತದಿಂದ ಪಾರಾಗಬಹುದು ಎನ್ನುತ್ತಾರವರು. ಉದ್ಯೋಗ ಕಡಿತಂಥ ಬೆಳವಣಿಗೆಗಳ ಮೇಲೆ ಸೂಕ್ಷ್ಮ ನಿಗಾ ವಹಿಸುತ್ತಿರಬೇಕು. ಸಂದರ್ಭಕ್ಕನುಗುಣವಾಗಿ ಮೊದಲೇ ನಾವು ಬದಲಾವಣೆಗೆ ಸಿದ್ಧರಾಗಿರಬೇಕು. ಆಗ ಏಕಾಏಕಿ ಸಮಸ್ಯೆಗೆ ಒಳಗಾಗುವುದನ್ನು ತಪ್ಪಿಸಬಹುದು ಎಂದು ಅವರು ಹೇಳಿದ್ದಾರೆ.

ಇರುವ ಉದ್ಯೋಗ ಉಳಿಸಿಕೊಳ್ಳುವುದು ಹೇಗೆ?

ಒಂದು ವೇಳೆ ನೀವು ಕೆಲಸ ಮಾಡುತ್ತಿರುವ ಕಂಪನಿಯು ಉದ್ಯೋಗ ಕಡಿತಕ್ಕೆ ಮುಂದಾದರೆ, ನೀವು ಹೇಗೆ ಕಂಪನಿಗೆ ಅನಿವಾರ್ಯ ಎಂಬುದನ್ನು ತೋರಿಸಿಕೊಡುವ ನಿಟ್ಟಿನಲ್ಲಿ ಜಾಣತನ ಮೆರೆಯಬೇಕು. ನಿಮ್ಮ ಕಂಪನಿಗೆ ನೀವು ಯಾವತ್ತೂ ಹೊರೆ ಎಂದು ಭಾವಿಸುವಂಥ ವಾತಾವರಣ ಸೃಷ್ಟಿಯಾಗಲು ಕಾರಣರಾಗಬಾರದು ಎಂದು ಸಲಹೆ ನೀಡಿದ್ದಾರೆ ಆಗಸ್ಟಿನ್. ನೀವು ಕಂಪನಿಗೆ ಏನು ಕೊಡುಗೆ ನೀಡುತ್ತಿದ್ದೀರಿ ಎಂಬುದನ್ನು ನಿಮ್ಮ ಮ್ಯಾನೇಜರ್​ಗೆ ಅರಿವು ಮಾಡಿಕೊಡುವತ್ತ ಗಮನಹರಿಸಬೇಕು. ಪ್ರತಿ ದಿನ ಅಲ್ಲವಾದರೂ ವಾರಕ್ಕೊಮ್ಮೆಯೋ, 15 ದಿನಗಳಿಗೊಮ್ಮೆಯಾದರೂ ಬಾಸ್ ಜತೆ ಸಮಾಲೋಚನೆ ನಡೆಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Global Recssion: ಆರ್ಥಿಕ ಹಿಂಜರಿತದ ಆತಂಕದಲ್ಲಿ ಟೆಕ್ ಕಂಪನಿಗಳು, ವಿಶ್ವದಾದ್ಯಂತ ಆವರಿಸಿಕೊಂಡಿದೆ ಉದ್ಯೋಗ ಕಡಿತದ ಭೀತಿ

ಕಂಪನಿಗೆ ವೆಚ್ಚ ಕಡಿತದ ದೃಷ್ಟಿಯಿಂದ ನೀವು ಹೇಗೆ ಸಹಕಾರ ನೀಡಬಹುದು ಎಂಬುದರ ಬಗ್ಗೆಯೂ ಚಿಂತಿಸಿ. ನಿಮ್ಮ ಕಡೆಯಿಂದ ಏನು ಉಪಕರಣ, ಸಲಕರಣೆಗಳನ್ನು ಕಡಿಮೆ ಮಾಡುವ ಮೂಲಕ ಕಂಪನಿಯ ಖರ್ಚಿನಲ್ಲಿ ಕಡಿತ ಮಾಡಬಹುದು ಎಂದು ಯೋಚಿಸಿ. ಮತ್ತು ಈ ನಿಟ್ಟನಲ್ಲಿ ನೀವು ನೀಡಿದ ಕೊಡುಗೆಯನ್ನು ಸಂಬಂಧಪಟ್ಟವರಿಗೆ ಮನವರಿಕೆ ಮಾಡಿಕೊಡಿ ಎಂದು ಅವರು ತಿಳಿಸಿದ್ದಾರೆ.

ಉದ್ಯೋಗ ಹುಡುಕಾಟಕ್ಕೆ ಸಿದ್ಧರಾಗುವುದು

ಆರ್ಥಿಕ ಹಿಂಜರಿತದಂಥ ಸಂದರ್ಭಗಳಲ್ಲಿ ಉದ್ಯೋಗ ಮಾರುಕಟ್ಟೆ ಮೇಲೆ ಸದಾ ನಿಗಾ ಇಟ್ಟಿರಬೇಕು. ನಾವು ಕೆಲಸ ಮಾಡುತ್ತಿರುವ ಉದ್ದಿಮೆ ಸುರಕ್ಷಿತವಾಗಿದೆಯೇ? ಇಲ್ಲವಾದಲ್ಲಿ ಮುಂದಿನ ನಡೆ ಏನಿರಬೇಕು ಎಂಬುದರ ಬಗ್ಗೆ ಸ್ಪಷ್ಟ ಯೋಜನೆ ರೂಪಿಸಬೇಕು. ಬೇರೆ ಉದ್ಯೋಗ ಪಡೆಯುವುದು ಅನಿವಾರ್ಯವಾದರೆ ಅದಕ್ಕೆ ಸಿದ್ಧರಾಗಬೇಕು. ಮೊದಲೇ ತಯಾರಿ ಮಾಡಿಕೊಂಡು ಹೊಸ ಉದ್ಯೋಗದ ಹುಡುಕಾಟ ಆದಷ್ಟು ಬೇಗನೇ ಮಾಡಬೇಕು ಎಂದು ಆಗಸ್ಟಿನ್ ಸಲಹೆ ನೀಡಿದ್ದಾರೆ. ಒಂದು ವೇಳೆ ನೀವು ಕೆಲಸ ಮಾಡುತ್ತಿರುವ ಉದ್ದಿಮೆ ಚೆನ್ನಾಗಿದ್ದು, ಪ್ರತಿಸ್ಪರ್ಧಿಗಲು ಅದಕ್ಕಿಂತಲೂ ಚೆನ್ನಾಗಿ ನಿರ್ವಹಿಸುತ್ತಿದ್ದರೆ ಇಂಥ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆಯೂ ವಿವೇಚನೆ ನಡೆಸಬೇಕು ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ