RANGE ROVER VELAR: ಭಾರತದಲ್ಲಿ ಈಗ ಹೊಸ ರೇಂಜ್ ರೋವರ್ ವೆಲಾರ್ ಲಭ್ಯ; ಬೆಲೆ, ವೈಶಿಷ್ಟ್ಯ ಮತ್ತಿತರ ವಿವರಗಳು ಇಲ್ಲಿವೆ

| Updated By: Srinivas Mata

Updated on: Jun 17, 2021 | 11:58 PM

Range Rover Velar Introduced In India: ಹೊಸ ವೆಲಾರ್ ಇಂಜಿನಿಯಮ್ 2.0 ಲೀ. ಪೆಟ್ರೋಲ್ ಮತ್ತು ಡೀಸೆಲ್ ಪವರ್​ಟ್ರೇನ್‍ಗಳಲ್ಲಿ ಆರ್-ಡೈನಾಮಿಕ್ ಎಸ್ ಟ್ರಿಮ್‍ನಲ್ಲಿ ಲಭ್ಯವಿದೆ. ಬೆಲೆ, ವೈಶಿಷ್ಟ್ಯ ಮತ್ತಿತರ ವಿವರಗಳು ಇಲ್ಲಿವೆ

RANGE ROVER VELAR: ಭಾರತದಲ್ಲಿ ಈಗ ಹೊಸ ರೇಂಜ್ ರೋವರ್ ವೆಲಾರ್ ಲಭ್ಯ; ಬೆಲೆ, ವೈಶಿಷ್ಟ್ಯ ಮತ್ತಿತರ ವಿವರಗಳು ಇಲ್ಲಿವೆ
ರೇಂಜ್ ರೋವರ್ ವೆಲಾರ್ ಕಾರು
Follow us on

ಭಾರತದಲ್ಲಿ ಈಗ ಹೊಸ ರೇಂಜ್ ರೋವರ್ ವೆಲಾರ್ ಅನ್ನು 79.87 ಲಕ್ಷದ ಪ್ರಾರಂಭಿಕ ಬೆಲೆಯೊಂದಿಗೆ ಪರಿಚಯಿಸಲಾಗಿದೆ. ಈ ಹೊಸ ರೇಂಜ್ ರೋವರ್ ವೆಲಾರ್ ಎಲ್ಲಾ ಭೂ ಪ್ರದೇಶದಲ್ಲೂ ಆಲ್-ವ್ಹೀಲ್ ಡ್ರೈವ್ ಸಾಮರ್ಥ್ಯದೊಂದಿಗೆ, ಅತ್ಯಾಧುನಿಕ ವಿನ್ಯಾಸ ಮತ್ತು ಸ್ಮಾರ್ಟ್ ತಂತ್ರಜ್ಞಾನದ ಪರಿಪೂರ್ಣ ಸಮತೋಲನವನ್ನು ನೀಡುತ್ತದೆ ಇದರ ಅಸಾಧಾರಣ ದಕ್ಷತೆ, ಶಕ್ತಿ ಮತ್ತು ಆನ್-ರೋಡ್ ಕಾರ್ಯಕ್ಷಮತೆಯನ್ನು ನೀಡುವ ನೆಕ್ಸ್ಟ್ ಜನರೇಷನ್ ನಾಲ್ಕು ಸಿಲಿಂಡರ್ ಇಂಜಿನಿಯಮ್ ಡೀಸೆಲ್ ಎಂಜಿನ್‍ನೊಂದಿಗೆ ಬರುತ್ತದೆ ಏರ್ ಸಸ್ಪೆನ್ಷನ್, 3D ಸರೌಂಡ್ ಕ್ಯಾಮೆರಾ ಮತ್ತು PM2.5 ಫಿಲ್ಟರ್​ನೊಂದಿಗೆ ಕ್ಯಾಬಿನ್ ಏರ್ ಅಯಾನೈಸೇಶನ್​ನಂತಹ ಹೊಸ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ. ಇತ್ತೀಚಿನ ತಂತ್ರಜ್ಞಾನಗಳಾದ ಪಿವಿ ಪ್ರೊ ಇನ್ಫೋಟೈನ್‍ಮೆಂಟ್ ಮತ್ತು ಆಕ್ಟಿವ್ ರೋಡ್ ನಾಯ್ಸ್ ಕ್ಯಾನ್ಸಲೇಷನ್​ಗಳನ್ನು ಸಹ ಪರಿಚಯಿಸಲಾಗಿದೆ. ಗ್ರಾಹಕರು www.findmeasuv.in ಗೆ ಭೇಟಿ ನೀಡುವ ಮೂಲಕ ತಮ್ಮ ಮನೆಗಳಿಂದಲೇ ಹೊಸ ರೇಂಜ್ ರೋವರ್ ವೆಲಾರ್ ಅನ್ನು ಆನ್‍ಲೈನ್‍ನಲ್ಲಿ ಕಾಯ್ದಿರಿಸಬಹುದು.

ಹೊಸ ವೆಲಾರ್ ಇಂಜಿನಿಯಮ್ 2.0 ಲೀ. ಪೆಟ್ರೋಲ್ ಮತ್ತು ಡೀಸೆಲ್ ಪವರ್​ಟ್ರೇನ್‍ಗಳಲ್ಲಿ ಆರ್-ಡೈನಾಮಿಕ್ ಎಸ್ ಟ್ರಿಮ್‍ನಲ್ಲಿ ಲಭ್ಯವಿದೆ. 2.0 ಲೀ ಪೆಟ್ರೋಲ್ ಎಂಜಿನ್ 184 ಕಿ.ವ್ಯಾ ಮತ್ತು 365 ಎನ್‍ಎಂ ಟಾರ್ಕ್ ಶಕ್ತಿಯನ್ನು ನೀಡುತ್ತದೆ ಮತ್ತು 2.0 ಎಲ್ ಡೀಸೆಲ್ ಎಂಜಿನ್ 150 ಕಿ.ವ್ಯಾ ಮತ್ತು 430 ಎನ್‍ಎಂ ಟಾರ್ಕ್ ಶಕ್ತಿಯನ್ನು ನೀಡುತ್ತದೆ.

ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಸೂರಿ ಮಾತನಾಡಿ, ರೇಂಜ್ ರೋವರ್ ವೆಲಾರ್ ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಎಸ್​ಯುವಿಗಳಲ್ಲಿ ಒಂದಾಗಿದೆ. ಏಕೆಂದರೆ ಇದು ಅವಂತ್-ಗಾರ್ಡ್ ವಿನ್ಯಾಸ, ಐಷಾರಾಮಿ ಮತ್ತು ತಂತ್ರಜ್ಞಾನದ ಅಸಾಮಾನ್ಯ ಮಿಶ್ರಣವಾಗಿದೆ. ಅದರ ಇತ್ತೀಚಿನ ರೂಪದಲ್ಲಿ, ಹೊಸ ತಂತ್ರಜ್ಞಾನ ಮತ್ತು ಅನುಕೂಲಕರ ವೈಶಿಷ್ಟ್ಯಗಳ ಪರಿಚಯದೊಂದಿಗೆ, ರೇಂಜ್ ರೋವರ್ ವೆಲಾರ್ ಎಂದಿಗಿಂತಲೂ ಹೆಚ್ಚು ಆಕರ್ಷಣೀಯವಾಗಿದೆ ಎಂದಿದ್ದಾರೆ. ಹೊಸ ರೇಂಜ್ ರೋವರ್ ವೆಲಾರ್ ಕುರಿತ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು www.landrover.inಗೆ ಭೇಟಿ ನೀಡಿ.

ಲ್ಯಾಂಡ್ ರೋವರ್ ಉತ್ಪನ್ನಗಳ ಪೋರ್ಟ್‍ಫೋಲಿಯೊ
ಭಾರತದ ಲ್ಯಾಂಡ್ ರೋವರ್ ಶ್ರೇಣಿಯು 20MYRange Rover Evoque ರೂ. 59.04 ಲಕ್ಷದಿಂದ ಪ್ರಾರಂಭ, Discovery Sport ರೂ. 65.30 ಲಕ್ಷದಿಂದ ಪ್ರಾರಂಭ, New Range Rover Velar ರೂ. 79.87 ಲಕ್ಷದಿಂದ ಪ್ರಾರಂಭ, Defender 110 ರೂ. 83.38 ಲಕ್ಷದಿಂದ ಪ್ರಾರಂಭ, Range Rover Sport ರೂ. 91.27 ಲಕ್ಷದಿಂದ ಪ್ರಾರಂಭ ಮತ್ತು Range Rover ರೂ. 2.11 ಕೋಟಿಯಿಂದ ಪ್ರಾರಂಭ. ಈ ಎಲ್ಲವೂ ಎಕ್ಸ್ ಶೋರೂಮ್ ಬೆಲೆಗಳಾಗಿವೆ.

ಭಾರತದ ಅಹಮದಾಬಾದ್, ಔರಂಗಾಬಾದ್, ಬೆಂಗಳೂರು (3), ಭುವನೇಶ್ವರ, ಚಂಡೀಗರ್, ಚೆನ್ನೈ(2), ಕೊಯಮತ್ತೂರು, ದೆಹಲಿ, ಗುರ್ಗಾಂ​ವ್, ಹೈದರಾಬಾದ್, ಇಂದೋರ್, ಜೈಪುರ, ಕೋಲ್ಕತ್ತಾ , ಕೊಚ್ಚಿ, ಕರ್ನೂಲ್, ಲಖನೌ, ಲುಧಿಯಾನ, ಮಂಗಳೂರು, ಮುಂಬೈ (2), ನೋಯ್ಡಾ, ಪುಣೆ, ರಾಯ್‍ಪುರ, ಸೂರತ್ ಮತ್ತು ವಿಜಯವಾಡ ಸೇರಿದಂತೆ 24 ನಗರಗಳಲ್ಲಿನ 28 ಅಧಿಕೃತ ಮಳಿಗೆಗಳ ಮೂಲಕ ಜಾಗ್ವಾರ್ ಲ್ಯಾಂಡ್ ರೋವರ್ ವಾಹನಗಳು ಲಭ್ಯವಿದೆ.

ಇದನ್ನೂ ಓದಿ: ಹೊಸ ಜಾಗ್ವಾರ್ F-PACE ಭಾರತದಲ್ಲಿ ರೂ. 69.99 ಲಕ್ಷದಿಂದ ಆರಂಭ; ವೈಶಿಷ್ಟ್ಯ, ಬೆಲೆ ಮತ್ತಿತರ ವಿವರ ಇಲ್ಲಿದೆ

(The New Range Rover Velar car introduced in India at starting price of Rs 79.87 lakh. Other details here)

Published On - 11:49 pm, Thu, 17 June 21