ಹೊಸ ಜಾಗ್ವಾರ್ F-PACE ಭಾರತದಲ್ಲಿ ರೂ. 69.99 ಲಕ್ಷದಿಂದ ಆರಂಭ; ವೈಶಿಷ್ಟ್ಯ, ಬೆಲೆ ಮತ್ತಿತರ ವಿವರ ಇಲ್ಲಿದೆ

ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಭಾರತದಲ್ಲಿ ಹೊಸ ಜಾಗ್ವಾರ್ F-PACE ವಿತರಣೆ ಪ್ರಾರಂಭಿಸಿದೆ. ಭಾರತದಲ್ಲಿ ಜಾಗ್ವಾರ್ ಉತ್ಪನ್ನಗಳ ಪೋರ್ಟ್‍ಫೋಲಿಯೊ XE ರೂ. 46.64 ಲಕ್ಷದಿಂದ ಪ್ರಾರಂಭ, XF ರೂ. 55.67 ಲಕ್ಷದಿಂದ ಪ್ರಾರಂಭ, I-PACE ರೂ. 1.06 ಕೋಟಿಯಿಂದ ಪ್ರಾರಂಭ, F-TYPE ರೂ. 95.12 ಲಕ್ಷದಿಂದ ಪ್ರಾರಂಭ- ಇವುಗಳನ್ನು ಒಳಗೊಂಡಿದೆ.

ಹೊಸ ಜಾಗ್ವಾರ್ F-PACE ಭಾರತದಲ್ಲಿ ರೂ. 69.99 ಲಕ್ಷದಿಂದ ಆರಂಭ; ವೈಶಿಷ್ಟ್ಯ, ಬೆಲೆ ಮತ್ತಿತರ ವಿವರ ಇಲ್ಲಿದೆ
ಲ್ಯಾಂಡ್​ ರೋವರ್ ಜಾಗ್ವಾರ್ ಎಫ್ ಪೇಸ್
Follow us
TV9 Web
| Updated By: Srinivas Mata

Updated on: Jun 14, 2021 | 1:56 PM

ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಭಾರತದಲ್ಲಿ ಹೊಸ ಜಾಗ್ವಾರ್ F-PACE ವಿತರಣೆ ಪ್ರಾರಂಭಿಸಿದೆ ಎಂದು ಪ್ರಕಟಣೆ ನೀಡಿದೆ. ಹೊಸ F-PACE ಮೊದಲ ಬಾರಿಗೆ ಆರ್-ಡೈನಾಮಿಕ್ ಎಸ್ ಟ್ರಿಮ್‍ನಲ್ಲಿ ಇಂಜಿನಿಯಮ್ 2.0 ಎಲ್ ಪೆಟ್ರೋಲ್ ಮತ್ತು ಡೀಸೆಲ್ ಪವರ್​ಟ್ರೇನ್‍ಗಳಲ್ಲಿ ಲಭ್ಯವಿದೆ. 2.0 ಎಲ್ ಪೆಟ್ರೋಲ್ ಎಂಜಿನ್ 184 ಕಿಲೋ ವ್ಯಾಟ್ ಮತ್ತು 365 ಎನ್‍ಎಂ ಟಾರ್ಕ್ ಶಕ್ತಿಯನ್ನು ನೀಡುತ್ತದೆ ಹಾಗೂ 2.0 ಎಲ್ ಡೀಸೆಲ್ ಎಂಜಿನ್ 150 ಕಿಲೋ ವ್ಯಾಟ್ ಮತ್ತು 430 ಎನ್‍ಎಂ ಟಾರ್ಕ್ ಶಕ್ತಿಯನ್ನು ನೀಡುತ್ತದೆ. ಹೊಸ ಜಾಗ್ವಾರ್ F-PACEನ ಭಾರತದ ಎಕ್ಸ್ ಶೋ ರೂಂ ಬೆಲೆ 69.99 ಲಕ್ಷ ರೂಪಾಯಿಯಷ್ಟಿದೆ.

ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಸೂರಿ ಮಾತನಾಡಿ, ಹೊಸ ಜಾಗ್ವಾರ್ F-PACE ಸೌಂದರ್ಯ ಮತ್ತು ಐಷಾರಾಮಿ ಆಕರ್ಷಣೆಯಲ್ಲಿ ಹೊಸ ಮಾನದಂಡವನ್ನು ನಿಗದಿಪಡಿಸುತ್ತದೆ. ಇದರ ಅಪ್ರತಿಮ ಐಷಾರಾಮಿ ಕಾರ್ಯಕ್ಷಮತೆಯ ಎಸ್​ಯುವಿಯಿಂದ ಉತ್ತಮ ಸಂಪರ್ಕಿತ (ಕನೆಕ್ಟಿಟಿವಿಟಿ) ಕಾರು ಅನುಭವವನ್ನು ಸಹ ಗ್ರಾಹಕರು ಪಡೆಯುತ್ತಾರೆ.

ಬಾಹ್ಯ ವಿನ್ಯಾಸ ಹೊಸ ಬಾಹ್ಯ ವಿನ್ಯಾಸವು ಪ್ರಶಸ್ತಿ ವಿಜೇತ ಜಾಗ್ವಾರ್ F-PACE ಅನ್ನು ಸ್ವಚ್ಛ ಮತ್ತು ಹೆಚ್ಚು ಭರವಸೆ ನೀಡುವಂತೆ ಮಾಡಿದೆ. ಇದು ಹೊಸ ವಿನ್ಯಾಸದ, ವಿಶಾಲವಾದ ಪವರ್ ಬಲ್ಜ್ ಅನ್ನು ಹೊಂದಿರುತ್ತದೆ. ದೊಡ್ಡದಾಗಿಸಿದ ಗ್ರಿಲ್‍ನಲ್ಲಿ ಜಾಗ್ವಾರ್​ನ ಹೆರಿಟೇಜ್ ಲೋಗೋ-ಪ್ರೇರಿತ ಡೈಮಂಡ್ ವಿವರವಿದೆ. ಆದರೆ ಸೈಡ್ ಫೆಂಡರ್ ದ್ವಾರಗಳು ಸಾಂಪ್ರದಾಯಿಕ ಲೀಪರ್ ಲಾಂಛನವನ್ನು ಹೊಂದಿವೆ. ಮರುವಿನ್ಯಾಸಗೊಳಿಸಲಾದ ಗಾಳಿಯ (Air) ಸೇವನೆ ಮತ್ತು ಗಾಢ ಜಾಲರಿಯ ವಿವರಗಳನ್ನು ಹೊಂದಿರುವ ಹೊಸ ಮುಂಭಾಗದ ಬಂಪರ್ ಈಗಿನ F-PACE ಅನ್ನು ಹೆಚ್ಚು ಕ್ರಿಯೇಟಿವ್ ಮಾಡಿವೆ.

ಡಬಲ್ ಜೆ ಡೇಟೈಮ್ ರನ್ನಿಂಗ್ ಲೈಟ್ (ಡಿಆರ್‍ಎಲ್) ಚಿಹ್ನೆಗಳನ್ನು ಹೊಂದಿರುವ ಹೊಸ ಸೂಪರ್ ಸ್ಲಿಮ್ ಆಲ್-ಎಲ್‍ಇಡಿ ಕ್ವಾಡ್ ಹೆಡ್‍ಲೈಟ್‍ಗಳು ಹೆಚ್ಚಿನ ರೆಸಲ್ಯೂಷನ್ ಮತ್ತು ಹೊಳಪನ್ನು ನೀಡುತ್ತದೆ. ಹಿಂಭಾಗದಲ್ಲಿ, ಹೊಸ ಸ್ಲಿಮ್‍ಲೈನ್ ದೀಪಗಳು ವಾಹನದ ಅಗಲವನ್ನು ಎತ್ತಿ ಹಿಡಿಯಲು ಜಾಗ್ವಾರ್​ನ ಡಬಲ್ ಚಿಕೇನ್ ಗ್ರಾಫಿಕ್ ಅನ್ನು ಮೊದಲು ಆಲ್-ಎಲೆಕ್ಟ್ರಿಕ್ ಐ-ಪೇಸ್‍ನಲ್ಲಿ ಪ್ರಿವ್ಯೂವ್ ಮಾಡುತ್ತವೆ. ಹೊಸ ಬಂಪರ್ ವಿನ್ಯಾಸ ಮತ್ತು ಹೊಸ ಟೈಲ್‍ಗೇಟ್ ಸಹ ಭವ್ಯನೋಟವನ್ನು ಸೇರಿಸುತ್ತದೆ ಮತ್ತು ಹೆಚ್ಚು ಆತ್ಮವಿಶ್ವಾಸ ನೀಡುತ್ತದೆ. ಆರ್-ಡೈನಾಮಿಕ್ ವಿವರಣೆಯಲ್ಲಿ, ಹೊಸ F-PACE ಹೆಚ್ಚು ಕಾರ್ಯಕ್ಷಮತೆ-ಕೇಂದ್ರಿತ ನೋಟಕ್ಕಾಗಿ ವಿಭಿನ್ನ ವಿನ್ಯಾಸ ಅಂಶಗಳ ಸರಣಿಯನ್ನು ಒಳಗೊಂಡಿದೆ.

Land Rover Jaguar F Pace

ಲ್ಯಾಂಡ್​ರೋವರ್ ಜಾಗವಾರ್ ಎಫ್​- ಪೇಸ್

ಒಳಾಂಗಣ ವಿನ್ಯಾಸ F-PACE ಅತ್ಯಾಧುನಿಕ ಒಳಾಂಗಣವನ್ನು ಹೊಂದಿದ್ದು, ಐಷಾರಾಮಿ, ಆ್ಯಡೆಡ್ ಕನೆಕ್ಟಿವಿಟಿ ಮತ್ತು ಹೆಚ್ಚಿನ ಪರಿಷ್ಕರಣೆಯನ್ನು ಹೊಂದಿದೆ. ಅನನ್ಯ, ಸ್ಪೋರ್ಟಿ ಮತ್ತು ಐಷಾರಾಮಿ ಅನುಭವಕ್ಕಾಗಿ ಮಾರ್ಸ್ ರೆಡ್ ಮತ್ತು ಸಿಯೆನಾ ಟ್ಯಾನ್‍ನಲ್ಲಿ ಎರಡು ಹೊಸ ಬಣ್ಣ ಸಂಯೋಜನೆಗಳನ್ನು ಪರಿಚಯಿಸಲಾಗಿದೆ. ಹೊಸ ಕಾಕ್‍ಪಿಟ್ ವಿನ್ಯಾಸವು ಎದ್ದು ಕಾಣುವಂತೆ, ಹೆಚ್ಚು ಕ್ರಿಯಾತ್ಮಕವಾಗಿದೆ ಮತ್ತು ಚಾಲಕರ ಮೇಲೆ ಹೆಚ್ಚಿನ ಕೇಂದ್ರೀಕೃತವಾಗಿದೆ. ಹೊಸದಾಗಿ ಅಳವಡಿಸಲಾದ ಕೇಂದ್ರ ಕನ್ಸೋಲ್, ಇನ್​ಸ್ಟ್ರುಮೆಂಟ್ ಪ್ಯಾನಲ್ ಜೊತೆ ಬೆಸೆದುಕೊಳ್ಳುತ್ತದೆ ಮತ್ತು ವಯರ್​ಲೆಸ್ ಸಾಧನ ಚಾರ್ಜಿಂಗ್ ವೈಶಿಷ್ಟ್ಯವನ್ನು ಒಳಗೊಂಡಿದೆ. ಬಾಗಿಲಿನ ಮೇಲ್ಭಾಗದ ಒಳಸೇರಿಸುವಿಕೆ ಮತ್ತು ಪೂರ್ಣ ಅಗಲ ಪಿಯಾನೋ ಮುಚ್ಚಳದಂತಹ ಸುಂದರವಾಗಿ ರೂಪುಗೊಂಡ ಆಕಾರಗಳಲ್ಲಿ ಅಧಿಕೃತ ಅಲ್ಯೂಮಿನಿಯಂ ಫಿನಿಷರ್ ಅದು ಸಾಧನಫಲಕದ ಅಗಲದುದ್ದಕ್ಕೂ ರೂಪುಗೊಳ್ಳುತ್ತದೆ.

ಹೊಸ F-PACEನ ಹಲವು ಸುಂದರವಾದ ವೈಶಿಷ್ಟ್ಯಗಳಲ್ಲಿ ಒಂದಾದ ಹೊಸ ಡ್ರೈವ್ ಸೆಲೆಕ್ಟರ್, ಮೇಲಿನ ಭಾಗವನ್ನು ಕ್ರಿಕೆಟ್-ಬಾಲ್ ಹೊಲಿಗೆಯೊಂದಿಗೆ ಪೂರ್ಣಗೊಳಿಸಿದೆ. ಕೆಳಗಿನ ಭಾಗವನ್ನು ಆ್ಯಡೆಡ್ ಸ್ಪರ್ಶಕ್ಕಾಗಿ ನಿಖರ ಎಂಜಿನಿಯರಿಂಗ್ ಲೋಹದಿಂದ ಮಾಡಲಾಗಿದೆ. 360 ಡಿಗ್ರಿ ಗ್ರ್ಯಾಬ್ ಹ್ಯಾಂಡಲ್ ಅನ್ನು ಒಳಗೊಂಡಿರುವ ಹೊಸ ಬಾಗಿಲಿನ ಕೇಸಿಂಗ್‍ಗಳು ಬಾಟಲಿಗಳು ಮತ್ತು ಇತರ ವಸ್ತುಗಳಿಗೆ ಸುಲಭ ಅವಕಾಶ ಮತ್ತು ಹೆಚ್ಚಿದ ಸಂಗ್ರಹವನ್ನು ಒದಗಿಸುತ್ತದೆ. ಪವರ್ ರೆಕ್ಲೈನ್‍ನೊಂದಿಗೆ ರೋ 2 ಸೀಟ್, ನಾಲ್ಕು ವಲಯ ಹವಾಮಾನ ನಿಯಂತ್ರಣ, ಇಂಟರ್ ಆಕ್ಟಿವ್ ಡ್ರೈವರ್ ಡಿಸ್​ಪ್ಲೇ ಮತ್ತು ಸ್ಥಿರ ಪನೋರಮಿಕ್ ರೂಫ್ ಇತರ ಪ್ರಮುಖ ಲಕ್ಷಣಗಳಾಗಿವೆ.

ತಂತ್ರಜ್ಞಾನ ಹೊಸ ಜಾಗ್ವಾರ್ F-PACE ವಾಹನವು ಯಾವಾಗಲೂ ಸಂಪರ್ಕಿತ (ಕನೆಕ್ಟಿವ್) ಮತ್ತು ನವೀಕೃತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಹೊಸ ತಂತ್ರಜ್ಞಾನಗಳ ಶ್ರೇಣಿಯನ್ನು ಹೊಂದಿದೆ. 28.95 ಸೆಂ (11.4) ಬಾಗಿದ ಗಾಜಿನ ಎಚ್​ಡಿ ಟಚ್ ಸ್ಕ್ರೀನ್ ಮೂಲಕ ಇತ್ತೀಚಿನ ಪಿವಿ ಪ್ರೊ ಇನ್​ಫೋಟೇನ್​ಮೆಂಟ್ ತಂತ್ರಜ್ಞಾನವನ್ನು ಪ್ರವೇಶಿಸಬಹುದು. ಇದರ ಪ್ರಮುಖ ಪ್ರಯೋಜನಗಳೆಂದರೆ ಹೆಚ್ಚಿನ ಸ್ಪಷ್ಟತೆ ಮತ್ತು ಸರಳೀಕರಿಸಿದ ಮೆನು ರಚನೆ, ಇದು ಹೋಂ-ಸ್ಕ್ರೀನ್​ನಿಂದ ಶೇಕಡಾ 90 ಸಾಮಾನ್ಯ ಕಾರ್ಯಗಳನ್ನು ಎರಡು ಅಥವಾ ಅದಕ್ಕಿಂತ ಕಡಿಮೆ ಟ್ಯಾಪ್‍ಗಳಲ್ಲಿ ಪ್ರವೇಶಿಸಲು ಅಥವಾ ವೀಕ್ಷಿಸಲು ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ. ಕ್ಯಾಬಿನ್ ಏರ್ ಅಯಾನೈಸೇಶನ್ ನ್ಯಾನೊ ತಂತ್ರಜ್ಞಾನದ ಮೂಲಕ ಆಂತರಿಕವಾಗಿ ಗಾಳಿಯ ಗುಣಮಟ್ಟವನ್ನು ಸುಧಾರಿಸುತ್ತದೆ. ಇದು ಅಹಿತಕರ ವಾಸನೆಯನ್ನು ತೆಗೆದುಹಾಕುತ್ತದೆ. ಈ ವ್ಯವಸ್ಥೆಯು ಈಗ PM2.5 ಶೋಧನೆಯನ್ನು ಸಹ ಹೊಂದಿದೆ, ಇದು ಪ್ರಯಾಣಿಕರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸಲು PM2.5 ಕಣಗಳನ್ನು ಒಳಗೊಂಡಂತೆ ಅತಿ-ಸೂಕ್ಷ್ಮ ಕಣಗಳನ್ನು ಸೆರೆಹಿಡಿಯುತ್ತದೆ.

Land Rover Jaguar F Pace Infotainment System

ಲ್ಯಾಂಡ್​ ರೋವರ್ ಜಾಗ್ವಾರ್ ಎಫ್​ ಪೇಸ್ ಇನ್​ಫೋಟೇನ್​ಮೆಂಟ್ ಸಿಸ್ಟಮ್

ಹೊಸ F-PACE 3ಡಿ ಸರೌಂಡ್ ಕ್ಯಾಮೆರಾ, ಮೆರಿಡಿಯನ್ ಆಡಿಯೊ ಸಿಸ್ಟಮ್, ಸ್ಮಾಟ್ರ್ಫೋನ್ ಪ್ಯಾಕ್ ಮತ್ತು ರಿಮೋಟ್ (ಇ-ಕಾಲ್ ಮತ್ತು ಬಿ-ಕಾಲ್ ಕ್ರಿಯಾತ್ಮಕತೆಯೊಂದಿಗೆ)ನಂತಹ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಹೊಸ ಜಾಗ್ವಾರ್ F-PACE ಕುರಿತ ಹೆಚ್ಚಿನ ಮಾಹಿತಿಗಾಗಿ, www.jaguar.in ಗೆ ಭೇಟಿ ನೀಡಿ. ಭಾರತದಲ್ಲಿ ಜಾಗ್ವಾರ್ ಉತ್ಪನ್ನಗಳ ಪೋರ್ಟ್‍ಫೋಲಿಯೊ XE ರೂ. 46.64 ಲಕ್ಷದಿಂದ ಪ್ರಾರಂಭ, XF ರೂ. 55.67 ಲಕ್ಷದಿಂದ ಪ್ರಾರಂಭ, I-PACE ರೂ. 1.06 ಕೋಟಿಯಿಂದ ಪ್ರಾರಂಭ, F-TYPE ರೂ. 95.12 ಲಕ್ಷದಿಂದ ಪ್ರಾರಂಭ- ಇವುಗಳನ್ನು ಒಳಗೊಂಡಿದೆ. ಈ ಎಲ್ಲವೂ ಭಾರತದಲ್ಲಿನ ಎಕ್ಸ್ ಶೋರೂಮ್ ಬೆಲೆಗಳಾಗಿವೆ.

ಜಾಗ್ವಾರ್ ಲ್ಯಾಂಡ್ ರೋವರ್ ರೀಟೇಲ್ ವ್ಯಾಪಾರಿ ಜಾಲ ಜಾಗ್ವಾರ್ ಲ್ಯಾಂಡ್ ರೋವರ್ ವಾಹನಗಳು ಭಾರತದಲ್ಲಿ ಅಹಮದಾಬಾದ್, ಔರಂಗಾಬಾದ್, ಬೆಂಗಳೂರು (3 ಕಡೆ), ಭುವನೇಶ್ವರ, ಚಂಡೀಗರ್, ಚೆನ್ನೈ(2 ಕಡೆ), ಕೊಯಮತ್ತೂರು, ದೆಹಲಿ, ಗುರಗಾಂವ್, ಹೈದರಾಬಾದ್, ಇಂದೋರ್, ಜೈಪುರ, ಕೋಲ್ಕತ್ತಾ, ಕೊಚ್ಚಿ, ಕರ್ನೂಲ್, ಲಖನೌ, ಲುಧಿಯಾನ, ಮಂಗಳೂರು, ಮುಂಬೈ (2 ಕಡೆ), ನೋಯ್ಡಾ, ಪುಣೆ, ರಾಯ್‍ಪುರ, ಸೂರತ್ ಮತ್ತು ವಿಜಯವಾಡ ಸೇರಿದಂತೆ 24 ನಗರಗಳಲ್ಲಿ 28 ಅಧಿಕೃತ ಮಳಿಗೆಗಳ ಮೂಲಕ ಲಭ್ಯವಿದೆ.

ಇದನ್ನೂ ಓದಿ: Hyundai cars: ಹುಂಡೈ ಕಾರುಗಳ ಖರೀದಿ ಮೇಲೆ ಜೂನ್ ತಿಂಗಳ ಆಫರ್ ನಗದು ರಿಯಾಯಿತಿ ವಿನಿಮಯ ಬೋನಸ್ ಎಷ್ಟೆಲ್ಲ ಇವೆ!

ಇದನ್ನೂ ಓದಿ: Car sales: ಕೊರೊನಾ ಬಿಕ್ಕಟ್ಟಿನ ಹಿಂದಿನ ಸ್ಥಿತಿಗೆ ಕಾರು ಮಾರಾಟಕ್ಕೆ ಬೇಕು ಕನಿಷ್ಠ ಎರಡು ವರ್ಷ ಎಂದ ಮಹೀಂದ್ರಾ ಮುಖ್ಯಸ್ಥ

(New Land Rover Jaguar F Pace launched in India with the starting price of Rs 70 lakhs in India. Here is the complete details of car)

ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ