ಒಂದೆಡೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರುತ್ತಿದ್ದು, ಮತ್ತೊಂದೆಡೆ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ, ಬಹುತೇಕ ಎಲ್ಲಾ ವಾಹನ ಕಂಪನಿಗಳು ಎಲೆಕ್ಟ್ರಿಕ್ ವಾಹನ ಉತ್ಪಾದನೆಯತ್ತ ಗಮನ ಹರಿಸುತ್ತಿವೆ. ಈ ಪಟ್ಟಿಗೆ ಇತ್ತೀಚಿನ ಸೇರ್ಪಡೆ ರೆಟ್ರೊ ಮಾಡರ್ನ್ ಬೈಕ್ ಜಾವಾ.
ಹೌದು, ಕಳೆದ ವರ್ಷ ಬಿಡುಗಡೆ ಮಾಡಿದ್ದ ಜಾವಾ ಕೂಡ ಎಲೆಕ್ಟ್ರಿಕ್ ಬೈಕ್ ಆಗಲಿದೆ. ಈಗಾಗಲೇ ಹೊಸ ಮಾಡೆಲ್ ಬೈಕ್ನ ವಿನ್ಯಾಸಗಳು ರೆಡಿಯಾಗಿದ್ದು, ಅದರ ಫಸ್ಟ್ ಲುಕ್ ಫೋಟೋಗಳು ವೈರಲ್ ಆಗಿವೆ. ಕೆಲ ಮೂಲಗಳ ಪ್ರಕಾರ ಹೊಸ ಜಾವಾ ಇವಿ 2022 ರಲ್ಲಿ ಬಿಡುಗಡೆ ಆಗಲಿದೆ.
ಪ್ರಸ್ತುತ ಮಾಹಿತಿ ಪ್ರಕಾರ ಈಗಾಗಲೇ ಬಿಡುಗಡೆಯಾಗಿರುವ ಜಾವಾ ಮಾದರಿಯಲ್ಲೇ ಎಲೆಕ್ಟ್ರಿಕ್ ಬೈಕ್ಗಳ ವಿನ್ಯಾಸ ಮತ್ತು ವೈಶಿಷ್ಟ್ಯಗಳಿರಲಿದೆ. ಇದರ ಹೊರತಾಗಿ ಬ್ಯಾಟರಿ ಪ್ಯಾಕ್ ಅನ್ನು ಸಾಮಾನ್ಯ ಪೆಟ್ರೋಲ್ ಟ್ಯಾಂಕ್ ಅಡಿಯಲ್ಲಿರುವ ದೊಡ್ಡ ಸುತ್ತುವರಿದ ಕವಚದಲ್ಲಿ ರಚಿಸಲಾಗುತ್ತದೆ. ಹಾಗೆಯೇ ಚಾರ್ಜಿಂಗ್ ಪೋರ್ಟ್ ಮತ್ತು ಇತರ ವಿದ್ಯುತ್ ಘಟಕಗಳು ಟ್ಯಾಂಕ್‌ನ ಮೇಲ್ಭಾಗದಲ್ಲಿರಲಿದೆ.
ಇನ್ನು ಈ ಬೈಕ್ ತ್ವರಿತ ಚಾರ್ಜಿಂಗ್ ಸೌಲಭ್ಯದೊಂದಿಗೆ ಬರಲಿದ್ದು, ಹಾಗೆಯೇ ಹೆಚ್ಚಿನ ವೇಗವನ್ನು ಇದರಲ್ಲಿ ನೀಡಲಾಗುತ್ತೆ ಎಂದು ಹೇಳಲಾಗಿದೆ. ಇದರಿಂದ ಜಾವಾ ಎಲೆಕ್ಟ್ರಿಕ್ ಬೈಕ್ನಲ್ಲಿ ಆರಾಮವಾಗಿ ಹೆಚ್ಚು ದೂರ ಪ್ರಯಾಣಿಸಬಹುದು.
ಮುಂದಿನ ವರ್ಷ ಮಾರುಕಟ್ಟೆಗೆ:
ಸದ್ಯದ ಮಾಹಿತಿ ಪ್ರಕಾರ ಹೊಸ ಎಲೆಕ್ಟ್ರಿಕ್ ಬೈಕ್ ಮುಂದಿನ ವರ್ಷದ ಅಂತ್ಯದ ವೇಳೆಗೆ ಭಾರತೀಯ ಮಾರುಕಟ್ಟೆಗೆ ಬರಲಿದೆ. ಆದರೆ ಈ ಬಗ್ಗೆ ಜಾವಾ ಕಂಪನಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈ ಹಿಂದೆ, ಜಾವಾ ಎಲೆಕ್ಟ್ರಿಕ್ ಮೋಟಾರ್ ವಿಭಾಗಕ್ಕೆ ಪ್ರವೇಶಿಸಲಿದೆ ಎಂದು ವರದಿಯಾಗಿತ್ತು. ಅದರಂತೆ ದಸರಾ ಮತ್ತು ದೀಪಾವಳಿ ಹಬ್ಬದ ವೇಳೆ ಜಾವಾ ಎಲೆಕ್ಟ್ರಿಕ್ ಬೈಕ್ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಬಹುದು.
ಇದನ್ನೂ ಓದಿ: ಮದ್ಯಪಾನ ಮಾಡಿ ಶತಕ ಸಿಡಿಸಿದ್ದ ಗ್ಯಾರಿ ಸೋಬರ್ಸ್..!
ಇದನ್ನೂ ಓದಿ: ಸೂರ್ಯಕುಮಾರ್ ಯಾದವ್ಗೆ ಅವಕಾಶ ಕೈತಪ್ಪುವ ಆತಂಕ
(Jawa Electric Motorcycle Launch By Mid 2022)