ರೈತರ ಕೆಂಗಣ್ಣು: ವೊಡಾಫೋನ್-ಏರ್ಟೆಲ್ ನಂಬರ್ ಪೋರ್ಟೆಬಿಲಿಟಿ ವಿರುದ್ಧ TRAI ಕದ ತಟ್ಟಿದ ರಿಲಯನ್ಸ್ ಜಿಯೋ
ದೇಶದ ಉತ್ತರ ಭಾಗಗಳಲ್ಲಿ ನಡೆಸುತ್ತಿರುವ ರೈತ ಪ್ರತಿಭಟನೆಯನ್ನು ಗುರಿಯಾಗಿಸಿಕೊಂಡು ಲಾಭ ಮಾಡಿಕೊಳ್ಳಲು ಏರ್ಟೆಲ್, ಐಡಿಯಾ ಮತ್ತು ವೊಡಾಫೋನ್ ಮೊಬೈಲ್ ನಂಬರ್ ಪೋರ್ಟೆಬಿಲಿಟಿ(MNP) ಅಭಿಯಾನವನ್ನು ಸಾರಿತ್ತಿದೆ ಎಂದು ರಿಲಯನ್ಸ್ ಜಿಯೋ ಇನ್ಫೋಕಾಮ್ ಆರೋಪಿಸಿದೆ
ಬೆಂಗಳೂರು: ಹೊಸ ಕೃಷಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿನ ರೈತರ ಪ್ರತಿಭಟನೆಯ ಮಧ್ಯೆ ಲಾಭಗಳಿಸಿಕೊಳ್ಳಲು ವೊಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್ಟೆಲ್ ಸಂಚು ಹೂಡಿವೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಿಲಯನ್ಸ್ ಜಿಯೋ ಇನ್ಫೋಕಾಮ್ ಸೋಮವಾರ ನಿಯಂತ್ರಣ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI)ಗೆ ಪತ್ರ ಬರೆದಿದೆ.
ದೇಶದ ಉತ್ತರ ಭಾಗಗಳಲ್ಲಿ ನಡೆಸುತ್ತಿರುವ ರೈತ ಪ್ರತಿಭಟನೆಯನ್ನು ಗುರಿಯಾಗಿಸಿಕೊಂಡು ಲಾಭ ಮಾಡಿಕೊಳ್ಳಲು ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಮೊಬೈಲ್ ನಂಬರ್ ಪೋರ್ಟೆಬಿಲಿಟಿ (MNP) ಅಭಿಯಾನವನ್ನು ಸಾರುತ್ತಿದೆ ಎಂದು ಪತ್ರದಲ್ಲಿ ಹೇಳಿದೆ.
ರಿಲಯನ್ಸ್ ಜಿಯೋ ಮಾಡಿದ ಆರೋಪಗಳಿಗೆ ಪ್ರತಿಕ್ರಿಯಿಸಿದ ಏರ್ಟೈಲ್, ‘ಏರ್ಟೆಲ್ ಟೆಲಿಕಾಂ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ನಾವು ಮಾರುಕಟ್ಟೆಯಲ್ಲಿ ಸ್ಪರ್ಧಿಸುತ್ತಿದ್ದೇವೆ. ನಮ್ಮ ಗ್ರಾಹಕರಿಗೆ ಅತ್ಯುತ್ತಮವಾಗಿ ಸೇವೆ ಸಲ್ಲಿಸಲು ಶ್ರಮಿಸುತ್ತಿದ್ದೇವೆ. ನಮ್ಮ ಸ್ಪರ್ಧಿಗಳು ಮತ್ತು ಪಾಲುದಾರರನ್ನು ಗೌರವದಿಂದ ನಡೆಸಿಕೊಳ್ಳುವಲ್ಲಿ ನಾವು ಹೆಮ್ಮೆ ಪಡುತ್ತೇವೆ’ ಎಂದು ಹೇಳಿದೆ.
ನಾವು ನಮ್ಮ ವ್ಯವಹಾರಗಳನ್ನು ಪ್ರಾಮಾಣಿಕತೆಯಿಂದ ನಡೆಸಿದ್ದೇವೆ. ಕೆಲವು ಸ್ಪರ್ಧಿಗಳಿಂದ ಪ್ರಚೋದಿಸಲ್ಪಟ್ಟಿದ್ದರೂ, ಅಧಾರ ರಹಿತ ಆರೋಪಗಳನ್ನು ಮಾಡುವುದು, ಬೆದರಿಸುವ ತಂತ್ರಗಳನ್ನು ಹೂಡಿದರೆ ಎದಿರಿಸುತ್ತೇವೆ ಎಂದೂ ಭಾರತೀಯ ಏರ್ಟೆಲ್ ಹೇಳಿದೆ.
ವೊಡಾಫೋನ್ ಐಡಿಯಾ ಕೂಡಾ ಆರೋಪಗಳನ್ನು ನಿರಾಕರಿಸಿ, ‘ಇವುಗಳೆಲ್ಲ ಆಧಾರ ರಹಿತ ಆರೋಪಗಳಾಗಿವೆ. ನಮ್ಮ ಪ್ರತಿಷ್ಠೆಯನ್ನು ಕೆಡಿಸಲು ಹೂಡಿರುವ ತಂತ್ರಗಳು ಎಂದು ಪ್ರತಿಕ್ರಿಯೆ ನೀಡಿದೆ.
Published On - 12:47 pm, Tue, 15 December 20