Maruti Cars: ಮಾರುತಿ ಸ್ವಿಫ್ಟ್​, ಸಿಎನ್​ಜಿ ಕಾರುಗಳ ಬೆಲೆಯಲ್ಲಿ ಇಂದಿನಿಂದ ಏರಿಕೆ

| Updated By: Srinivas Mata

Updated on: Jul 12, 2021 | 12:55 PM

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್​ನಿಂದ ಇಂದಿನಿಂದ ಅನ್ವಯ ಆಗುವಂತೆ ಸ್ವಿಫ್ಟ್​ ಹಾಗೂ ಸಿಎನ್​ಜಿಯ ಎಲ್ಲ ವೇರಿಯಂಟ್​ಗಳ ದರದಲ್ಲಿ ಏರಿಕೆ ಮಾಡಲಾಗಿದೆ. ಔಟ್​ಪುಟ್​ ವೆಚ್ಚದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮಾರುತಿ ಸುಜುಕಿ ಮುಂದಾಗಿದೆ.

Maruti Cars: ಮಾರುತಿ ಸ್ವಿಫ್ಟ್​, ಸಿಎನ್​ಜಿ ಕಾರುಗಳ ಬೆಲೆಯಲ್ಲಿ ಇಂದಿನಿಂದ ಏರಿಕೆ
ಸಾಂದರ್ಭಿಕ ಚಿತ್ರ
Follow us on

ನೀವೇನಾದರೂ ಮಾರುತಿ ಕಾರು (Maruti Suzuki Cars) ಖರೀದಿಸಬೇಕು ಅಂತಿದ್ದೀರಾ? ಹಾಗಿದ್ದಲ್ಲಿ ಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್​ನಿಂದ ಇಂದಿನಿಂದ ಅನ್ವಯ ಆಗುವಂತೆ ಸ್ವಿಫ್ಟ್​ ಹಾಗೂ ಸಿಎನ್​ಜಿಯ ಎಲ್ಲ ವೇರಿಯಂಟ್​ಗಳ ದರದಲ್ಲಿ ಏರಿಕೆ ಮಾಡಲಾಗಿದೆ. ಔಟ್​ಪುಟ್​ ವೆಚ್ಚದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮಾರುತಿ ಸುಜುಕಿ ಮುಂದಾಗಿದೆ. ಹೊಸ ದರಗಳು ಜುಲೈ 12, 2021ರಿಂದ ಜಾರಿಗೆ ಬರುತ್ತವೆ. ಪಿಟಿಐ ವರದಿ ಪ್ರಕಾರ, ಜೂನ್ 21, 2021ರ ರೆಗ್ಯುಲೇಟರಿ ಫೈಲಿಂಗ್​ನಲ್ಲಿ ಮಾರುತಿ ಸುಜುಕಿ ಈ ಬಗ್ಗೆ ತಿಳಿಸಿದ್ದು, ಕಳೆದ ಒಂದು ವರ್ಷದಿಂದ ಕಂಪೆನಿಯ ವಾಹನ ತಯಾರಿಕೆ ವೆಚ್ಚದಲ್ಲಿ ನಿರಂತರವಾಗಿ ಏರಿಕೆ ಆಗುತ್ತಿದ್ದು, ಇದರಿಂದಾಗಿ ವಿವಿಧ ಇನ್​ಪುಟ್​ ವೆಚ್ಚದಲ್ಲಿ ಹೆಚ್ಚಳವಾಗಿದೆ. ಆ ಕಾರಣಕ್ಕೆ ಹೆಚ್ಚುವರಿ ವೆಚ್ಚದ ಸ್ವಲ್ಪ ಭಾಗವನ್ನು ಬೆಲೆ ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ವರ್ಗಾಯಿಸಬೇಕಿದೆ ಎಂದು ಮಾರುತಿ ತಿಳಿಸಿದೆ.

ವರದಿಯ ಪ್ರಕಾರ, ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬೆಲೆ ಏರಿಕೆ ಜಾರಿಗೆ ಬರಲಿದೆ ಎಂದು ಮಾರುತಿ ಸುಜುಕಿ ತಿಳಿಸಿತ್ತು. ಅಂದಹಾಗೆ ವಿವಿಧ ಮಾಡೆಲ್​ಗಳಿಗೆ ಬೇರ ಬೇರೆ ಬಗೆಯಲ್ಲಿ ದರ ಏರಿಕೆ ಆಗಲಿದೆ. ಇವತ್ತು (ಜುಲೈ 12, 2021) ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಎಲ್ಲ ಸಿಎನ್​ಜಿ ವೇರಿಯಂಟ್​ಗಳ ದರ ಹೆಚ್ಚಿಸಲಾಗಿದೆ. ದೆಹಲಿಯಲ್ಲಿನ ಎಕ್ಸ್​ ಶೋರೂಮ್ ದರಗಳಿಗೆ ಅನ್ವಯ ಆಗುವಂತೆ 15,000 ರೂಪಾಯಿ ತನಕ ಹೆಚ್ಚಳ ಆಗಲಿದೆ. ಸದ್ಯದಲ್ಲೇ ಇತರ ಮಾಡೆಲ್​ಗಳ ಬೆಲೆಗಳಲ್ಲಿ ಸಹ ಏರಿಕೆ ಆಗಲಿದೆ ಎಂದು ಮಾರುತಿ ಸುಜುಕಿ ಕಂಪೆನಿಯು ಮಾಹಿತಿ ನೀಡಿದೆ.

ಏಪ್ರಿಲ್ 16, 2021ರಂದು, ವೇಯ್ಟೆಡ್ ಸರಾಸರಿ ಬೆಲೆ ದೆಹಲಿಗೆ (ಎಕ್ಸ್​ ಶೋ ರೂಂ) ಅನ್ವಯ ಆಗುವಂತೆ ಎಲ್ಲ ಮಾಡೆಲ್​ಗಳ ಮೇಲೆ ಶೇ 16ರಷ್ಟು ಏರಿಕೆಯನ್ನು ಮಾರುತಿ ಸುಜುಕಿ ಘೋಷಣೆ ಮಾಡಿತ್ತು. ಈ ವರ್ಷದ ಜನವರಿ 18, 2021ರಂದು ತಿಳಿಸಿದ್ದಂತೆ, ಇನ್​ಪುಟ್​ ವೆಚ್ಚಗಳ ಹೆಚ್ಚಳದಿಂದಾಗಿ ಮಾರುತಿ ಸುಜುಕಿಯ ಆಯ್ದ ಮಾಡೆಲ್​ಗಳ ಮೇಲೆ ರೂ. 34,000 ತನಕ ಏರಿಕೆ ಮಾಡುವುದಾಗಿ ಮಾಹಿತಿ ನೀಡಿತ್ತು.

ಇದನ್ನೂ ಓದಿ: ಮಾರುತಿ ಸುಜುಕಿ ಆಯ್ದ ಕಾರಿನ ಮಾಡೆಲ್​ಗಳ ಬೆಲೆಯಲ್ಲಿ ತಕ್ಷಣದಿಂದಲೇ ರೂ. 22,500 ತನಕ ಹೆಚ್ಚಳ

(Due to increase in input cost Maruti Suzuki India Limited announced price hike Swift and CNG all variants from July 12th 2021)