AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

New Baleno Hatchback: ಹೊಸ ಬಲೆನೊ ಬುಕಿಂಗ್ ಆರಂಭ; ಈ ಕಾರಿನ ವಿಶೇಷದ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ?

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್​ನಿಂದ ಹೊಸ ಬಲೆನ್​ ಹ್ಯಾಚ್​ಬ್ಯಾಕ್ ಬುಕಿಂಗ್ ಆರಂಭಿಸಲಾಗಿದೆ. ಅದರ ಬಗ್ಗೆ ವಿವರಗಳು ಇಲ್ಲಿವೆ.

New Baleno Hatchback: ಹೊಸ ಬಲೆನೊ ಬುಕಿಂಗ್ ಆರಂಭ; ಈ ಕಾರಿನ ವಿಶೇಷದ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ?
ಹೊಸ ಬಲೆನೊ (ಚಿತ್ರ ಕೃಪೆ: marutisuzuki.com)
TV9 Web
| Updated By: Srinivas Mata|

Updated on: Feb 07, 2022 | 2:19 PM

Share

ಮಾರುತಿ ಸುಜುಕಿ ಇಂಡಿಯಾ (Maruti Suzuki India) ಸೋಮವಾರದಂದು ತಿಳಿಸಿರುವಂತೆ, ಬಲೆನೊ ಹ್ಯಾಚ್​ಬ್ಯಾಕ್ ಕಾರಿನ ಹೊಸ ವರ್ಷನ್ ಬುಕಿಂಗ್ ಆರಂಭಿಸಿದೆ. ಗ್ರಾಹಕರು 11 ಸಾವಿರ ರೂಪಾಯಿಯನ್ನು ಪಾವತಿಸುವ ಮೂಲಕ ಹೊಸ ಬಲೆನೊ ಅನ್ನು ಬುಕ್ ಮಾಡಬಹುದು, ಎಂದು ವಾಹನ ತಯಾರಕ ಕಂಪೆನಿಯು ಹೇಳಿಕೆಯಲ್ಲಿ ತಿಳಿಸಿದೆ. “ಬಲೆನೊ ಬ್ರ್ಯಾಂಡ್ ಭಾರತದಲ್ಲಿ ಪ್ರೀಮಿಯಂ ಹ್ಯಾಚ್​ಬ್ಯಾಕ್​ ಸೆಗ್ಮೆಂಟ್​ನ ಪುನರ್​ವ್ಯಾಖ್ಯಾನ ಮಾಡಿದೆ ಮತ್ತು ಸ್ಥಿರವಾಗಿ ದೇಶದ ಟಾಪ್​ 5 ಬೆಸ್ಟ್​ ಸೆಲ್ಲಿಂಗ್ ಕಾರುಗಳಲ್ಲಿ ಸ್ಥಾನ ಪಡೆದಿದೆ,” ಎಂದು ಮಾರುತಿ ಸುಜುಕಿ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ (ಮಾರ್ಕೆಟಿಂಗ್ ಮತ್ತು ಮಾರಾಟ) ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ. ಹೊಸ ಬಲೆನೊ ಅನ್ನು ತಂತ್ರಜ್ಞಾನಪ್ರಿಯ ಹೊಸ ತಲೆಮಾರಿನ ಅಗತ್ಯಗಳನ್ನು ಪೂರೈಸುವ ಸಲುವಾಗಿಯೇ ಸಿದ್ಧಪಡಿಸಲಾಗಿದೆ. ಅದು ಅತ್ಯುತ್ತಮವಾದದ್ದನೇ ಕೊಡುವುದನ್ನು ಖಾತ್ರಿಪಡಿಸುತ್ತದೆ ಎಂದು ಅವರು ಸೇರಿಸಿದ್ದಾರೆ.

“ಅಮೋಘ ತಂತ್ರಜ್ಞಾನ ಮತ್ತು ಅದ್ಭುತವಾದ ಪರ್ಫಾಮೆನ್ಸ್​ನೊಂದಿಗೆ ವಿಶಿಷ್ಟವಾದ ಅಸ್ತಿತ್ವದ ಮೂಲಕ ಈ ಹೊಸ ಬಲೆನೊ ಗ್ರಾಹಕರು ತಮ್ಮ ದೃಷ್ಟಿಯನ್ನು ತಿರುಗಿಸುವಂತೆ ಮತ್ತು ಸಂಭ್ರಮಿಸುವಂತೆ ಮಾಡಲಿದೆ ಎಂಬುದರ ಬಗ್ಗೆ ನಮಗೆ ವಿಶ್ವಾಸ ಇದೆ,” ಎಂದು ದಾಖಲಿಸಿದ್ದಾರೆ ಶ್ರೀವಾಸ್ತವ. ಕಂಪೆನಿಯ ಮುಖ್ಯ ತಾಂತ್ರಿಕ ಅಧಿಕಾರಿ (ಎಂಜಿನಿಯರಿಂಗ್) ಸಿ.ವಿ.ರಾಮನ್ ಮಾತನಾಡಿ, 2015ರಲ್ಲಿ ಆರಂಭಿಸಿದ್ದು ರಚನೆ, ಪ್ರೀಮಿಯಂ ಒಳಾಂಗಣ, ಅನುಕೂಲಕರ ಫೀಚರ್​ಗಳ ಮೂಲಕ ಬಲೆನ್​ ಟ್ರೆಂಡ್​ ಸೆಟರ್​ ಆಗಿದೆ. “ಹೊಸ ಬಲೆನೊದಲ್ಲಿ ಆಧುನಿಕ ತಂತ್ರಜ್ಞಾನ ಇದೆ. ಅತ್ಯಾಧುನಿಕ ಫೀಚರ್​ಗಳು ಮತ್ತು ನೆಕ್ಸಾದ ಸಿಗ್ನೇಚರ್ ಆದ ಭವಿಷ್ಯದ ಕುಸುರಿ ರಚನೆ ಸಹ ಒಳಗೊಂಡಿದೆ. ಇದರಿಂದಾಗಿ ಪ್ರೀಮಿಯಂ ಹ್ಯಾಚ್ ಬ್ಯಾಕ್ ಸೆಗ್ಮೆಂಟ್​ನಲ್ಲಿ ಹೊಸ ಸಂಪರ್ಕಕ್ಕೆ ಅನುಕೂಲ ಮಾಡಿಕೊಡುತ್ತದೆ. ನಾವು ಹೊಸ ಬಲೆನೊಗಾಗಿ ಕೆಲಸ ಮಾಡುವಾಗ ಗ್ರಾಹಕರಿಗೆ ಸಂತೋಷ ನೀಡುವ ಆಧುನಿಕ ತಂತ್ರಜ್ಞಾನದ ಬಳಕೆಗೆ ವಿಶೇಷ ಗಮನ ನೀಡಿದೆವು. ಇದರ ಜತೆಗೆ ಆರಾಮದಾಯಕ ಮತ್ತು ಸುರಕ್ಷಿತ ಚಾಲನೆಯನ್ನೂ ಗ್ರಾಹಕರಿಗೆ ಖಾತ್ರಿಪಡಿಸುತ್ತೇವೆ,” ಎಂದಿದ್ದಾರೆ.

ಹೆಡ್ಸ್ ಅಪ್ ಡಿಸ್​ಪ್ಲೇ ಸೇರಿದಂತೆ ಹಲವಾರು ಹೊಸ ಫೀಚರ್​ಗಳೊಂದಿಗೆ ಹೊಸ ಬಲೆನೊ ಬರುತ್ತದೆ. ಕಾರಿನಲ್ಲಿ ಮುಂದಿನ ತಲೆಮಾರಿನ ಕೆ- ಸಿರೀಸ್ ಪೆಟ್ರೋಲ್ ಎಂಜಿನ್ ಇರಲಿದ್ದು, ಜತೆಗೆ ಐಡಲ್ ಸ್ಟಾರ್ಟ್- ಸ್ಟಾಪ್ ತಂತ್ರಜ್ಞಾನ ಸಹ ಇರಲಿದೆ. ಅಂದ ಹಾಗೆ ಭಾರತದಲ್ಲಿ ಅತಿ ದೊಡ್ಡ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್. ಅದರ ಪ್ರೀಮಿಯಂ ಸೆಗ್ಮೆಂಟ್ ನೆಕ್ಸಾ ಅಡಿಯಲ್ಲಿ ಬಲೆನೊ ಬರುತ್ತದೆ.

ಇದನ್ನೂ ಓದಿ: Maruti Celerio CNG: ಮಾರುತಿ ಸೆಲೆರಿಯೋ ಸಿಎನ್​ಜಿ ಘೋಷಣೆ; 36 ಕಿ.ಮೀ. ಮೈಲೇಜ್, 6.58 ಲಕ್ಷ ರೂಪಾಯಿ ಬೆಲೆ​