AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಂತ್ರಾ ಲೋಗೊ ರಾದ್ಧಾಂತ: ಆಕ್ಷೇಪಾರ್ಹ ಚಿಹ್ನೆ ಬದಲಿಸಿದ ಫ್ಯಾಷನ್ ದಿಗ್ಗಜ

ಈಗಾಗಲೇ ಸಂಸ್ಥೆ ಆನ್​ಲೈನ್​ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬದಲಾಯಿಸಿದ ಲೋಗೊ ಹಾಕಿದೆ. ಇನ್ನು, ಪ್ಯಾಕಿಂಗ್​ ವಸ್ತುಗಳ ಮೇಲೆ ಹೊಸ ಲೋಗೊ ಹಾಕುವ ಪ್ರಕ್ರಿಯೆ ನಡೆದಿದೆ.

ಮಿಂತ್ರಾ ಲೋಗೊ ರಾದ್ಧಾಂತ: ಆಕ್ಷೇಪಾರ್ಹ ಚಿಹ್ನೆ ಬದಲಿಸಿದ ಫ್ಯಾಷನ್ ದಿಗ್ಗಜ
ಮಿಂತ್ರಾ ಲೋಗೊ ರಾದ್ಧಾಂತ: ಆಕ್ಷೇಪಾರ್ಹ ಚಿಹ್ನೆ ಬದಲಿಸಿದ ಫ್ಯಾಷನ್ ದಿಗ್ಗಜ
ರಾಜೇಶ್ ದುಗ್ಗುಮನೆ
|

Updated on:Jan 30, 2021 | 6:51 PM

Share

ಫ್ಯಾಷನ್​ ವಸ್ತುಗಳ ಮಾರಾಟ ಜಾಲತಾಣ ಮಿಂತ್ರಾ ಕಂಪನಿಯ Myntra ಲೋಗೊ ಈಗ ವಿವಾದಕ್ಕೆ ತುತ್ತಾಗಿದೆ. ಮಹಿಳೆಯರಿಗೆ ಅವಮಾನ ಮಾಡುವ ವಿಚಾರ ಈ ಲೋಗೊದಲ್ಲಿದೆ ಎಂದು ದೂರು ದಾಖಲಾಗಿತ್ತು. ಇದನ್ನು ಒಪ್ಪಿರುವ ಸಂಸ್ಥೆ ಲೋಗೊ ಬದಲಾಯಿಸಿದೆ!

ಅವೆಸ್ತಾ ಫೌಂಡೇಷನ್​ ಎನ್​ಜಿಒ ಸಂಸ್ಥೆಯ ನಾಜ್​ ಪಟೇಲ್​ (Activist Naaz Patel) ಎಂಬುವವರು ಕಳೆದ ಡಿಸೆಂಬರ್​ ತಿಂಗಳಲ್ಲಿ ಮಿಂತ್ರಾ ಲೊಗೊ ವಿರುದ್ಧ ಮುಂಬೈ ಸೈಬರ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಈ ದೂರಿನಲ್ಲಿ ಅವರು ಮಿಂತ್ರಾ ಲೋಗೊ Myntra Logo ಆಕ್ಷೇಪಾರ್ಹವಾಗಿದೆ. ಇದು ಮಹಿಳೆಯರಿಗೆ ಅವಮಾನ ಮಾಡುವಂತಿದೆ. ಹೀಗಾಗಿ, ತಕ್ಷಣಕ್ಕೆ ಲೋಗೊದಲ್ಲಿ (Offensive Logo) ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿತ್ತು.

ಇದನ್ನು ಪರಿಶೀಲನೆ ಮಾಡಿರುವ ಮುಂಬೈ ಸೈಬರ್​ ಪೊಲೀಸರು ಮಿಂತ್ರಾ ಸಂಸ್ಥೆಗೆ ಇ-ಮೇಲ್​ ಕಳುಹಿಸಿದ್ದು, ಲೋಗೊ ಬದಲಿಸುವಂತೆ ಸೂಚಿಸಿತ್ತು. ಇದರ ಜೊತೆಗೆ ಜನಸಾಮಾನ್ಯರಿಂದಲೂ ಲೊಗೊಗೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಕಂಪೆನಿ ಸಭೆ ಸೇರಿತ್ತು. ಈ ವೇಳೆ ಲೋಗೊ ಬದಲಾವಣೆ ಮಾಡುವ ನಿರ್ಧಾರ ಕೈಗೊಂಡಿದೆ.

ಈಗಾಗಲೇ ಸಂಸ್ಥೆ ಆನ್​ಲೈನ್​ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬದಲಾಯಿಸಿದ ಲೋಗೊ ಹಾಕಿದೆ. ಇನ್ನು, ಪ್ಯಾಕಿಂಗ್​ ವಸ್ತುಗಳ ಮೇಲೆ ಹೊಸ ಲೋಗೊ ಹಾಕುವ ಪ್ರಕ್ರಿಯೆ ನಡೆದಿದೆ.

ಏನಿತ್ತು ಹಳೆಯ ಲೋಗೊದಲ್ಲಿ? ಹಳೆ ಲೋಗೊವನ್ನು ಸೂಕ್ಷ್ಮವಾಗಿ ನೋಡಿದರೆ, ಮಹಿಳೆ ತನ್ನ ಗುಪ್ತಾಂಗವನ್ನು ತೋರಿಸುವ ರೀತಿಯಲ್ಲಿ ಇತ್ತು. ಇದನ್ನು ಗಮನಿಸಿದ್ದ ನಾಜ್ ದೂರು ದಾಖಲಿಸಿದ್ದರು. ಈಗ ಸಂಸ್ಥೆ ಲೋಗೋವನ್ನು ಬದಲಾಯಿಸಿದ್ದು, ಗುಪ್ತಾಂಗ ರೀತಿಯಲ್ಲಿ ಕಾಣುತ್ತಿರುವ ಭಾಗವನ್ನು ತೆಗೆದು ಹಾಕಲಾಗಿದೆ.

ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆಂದು ಕಾರು ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಮಹಿಳೆ

Published On - 6:49 pm, Sat, 30 January 21

Follow Us
ಮಗನ ಆಸ್ಪತ್ರೆಗೆ ಕರೆದೊಯ್ದಿದ್ದ ಮಹಿಳೆಯ ಬಲಿ ಪಡೆದ ಬಿಎಂಟಿಸಿ ಬಸ್​​
ಮಗನ ಆಸ್ಪತ್ರೆಗೆ ಕರೆದೊಯ್ದಿದ್ದ ಮಹಿಳೆಯ ಬಲಿ ಪಡೆದ ಬಿಎಂಟಿಸಿ ಬಸ್​​
ಚಿಕ್ಕಪ್ಪ ಇದ್ದಾಗಿನ ಹುಟ್ಟುಹಬ್ಬ ಹೇಗಿತ್ತು? ನೆನಪಿಸಿಕೊಂಡ ವಿನಯ್-ಯುವ
ಚಿಕ್ಕಪ್ಪ ಇದ್ದಾಗಿನ ಹುಟ್ಟುಹಬ್ಬ ಹೇಗಿತ್ತು? ನೆನಪಿಸಿಕೊಂಡ ವಿನಯ್-ಯುವ
ಗೃಹ ಸಚಿವರಿಗೇ 50 ಲಕ್ಷ ಲಂಚ ಕೊಟ್ಟಿದ್ರಾ ಇನ್ಸ್‌ಪೆಕ್ಟರ್? ಸಂತ್ರಸ್ತೆ ಆರೋಪ
ಗೃಹ ಸಚಿವರಿಗೇ 50 ಲಕ್ಷ ಲಂಚ ಕೊಟ್ಟಿದ್ರಾ ಇನ್ಸ್‌ಪೆಕ್ಟರ್? ಸಂತ್ರಸ್ತೆ ಆರೋಪ
ಕರವೇ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ: ಮುಂಬಡ್ತಿ ಪರೀಕ್ಷೆ ಮುಂದೂಡಿಕೆ
ಕರವೇ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ: ಮುಂಬಡ್ತಿ ಪರೀಕ್ಷೆ ಮುಂದೂಡಿಕೆ
ಪುನೀತ್ ಸಮಾಧಿಗೆ ಪೂಜೆ ಮಾಡಿದ ಕುಟುಂಬಸ್ಥರು; ಅಪ್ಪುನ ನೆನಪಿಸಿಕೊಂಡ ಕುಟುಂಬ
ಪುನೀತ್ ಸಮಾಧಿಗೆ ಪೂಜೆ ಮಾಡಿದ ಕುಟುಂಬಸ್ಥರು; ಅಪ್ಪುನ ನೆನಪಿಸಿಕೊಂಡ ಕುಟುಂಬ
ಲೈಂಗಿಕ ಕಿರುಕುಳ ಆರೋಪ: ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಹೇಳಿದ್ದಿಷ್ಟು
ಲೈಂಗಿಕ ಕಿರುಕುಳ ಆರೋಪ: ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಹೇಳಿದ್ದಿಷ್ಟು
ಕನ್ನಡದಲ್ಲಿ ರೇಲ್ವೆ ಇಲಾಖೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ
ಕನ್ನಡದಲ್ಲಿ ರೇಲ್ವೆ ಇಲಾಖೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ
ಅಡುಗೆ ಮನೆಯಲ್ಲಿ ಹೆಡೆ ಎತ್ತಿ ಕುಳಿತಿದ್ದ ನಾಗಪ್ಪ!
ಅಡುಗೆ ಮನೆಯಲ್ಲಿ ಹೆಡೆ ಎತ್ತಿ ಕುಳಿತಿದ್ದ ನಾಗಪ್ಪ!
ಎಲ್​ಪಿಜಿ ಸಿಲಿಂಡರ್ ಸಮಸ್ಯೆ ಇದ್ರೂ ಇವರಿಗೆ ನೋ ಟೆನ್ಶನ್! ಯಾಕೆ ಗೊತ್ತೇ?
ಎಲ್​ಪಿಜಿ ಸಿಲಿಂಡರ್ ಸಮಸ್ಯೆ ಇದ್ರೂ ಇವರಿಗೆ ನೋ ಟೆನ್ಶನ್! ಯಾಕೆ ಗೊತ್ತೇ?
ಮಹಿಳೆ ಜತೆ ಅಕ್ರಮ ಸಂಬಂಧಕ್ಕಾಗಿ ತಡರಾತ್ರಿ ಕಂಪೌಂಡ್ ಹಾರಿದ್ದ ಪೊಲೀಸ್!
ಮಹಿಳೆ ಜತೆ ಅಕ್ರಮ ಸಂಬಂಧಕ್ಕಾಗಿ ತಡರಾತ್ರಿ ಕಂಪೌಂಡ್ ಹಾರಿದ್ದ ಪೊಲೀಸ್!