AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BYD Atto 3: ಪ್ರತಿ ಚಾರ್ಜ್ ಗೆ 521 ಕಿ.ಮೀ ಮೈಲೇಜ್ ನೀಡುವ ಬಿವೈಡಿ ಅಟ್ಟೊ 3 ಎಲೆಕ್ಟ್ರಿಕ್ ಕಾರಿನ ವಿಶೇಷತೆಗಳಿವು!

ಬಿವೈಡಿ ಅಟ್ಟೊ 3 ಎಲೆಕ್ಟ್ರಿಕ್ ಎಸ್ ಯುವಿ ಮಾದರಿಯು ಭಾರತದಲ್ಲಿ ಅನಾವರಣಗೊಂಡಿದ್ದು, ಹೊಸ ಕಾರು ಶೀಘ್ರದಲ್ಲಿಯೇ ಮಾರುಕಟ್ಟೆ ಪ್ರವೇಶಿಸಲಿದೆ.

BYD Atto 3: ಪ್ರತಿ ಚಾರ್ಜ್ ಗೆ 521 ಕಿ.ಮೀ ಮೈಲೇಜ್ ನೀಡುವ ಬಿವೈಡಿ ಅಟ್ಟೊ 3 ಎಲೆಕ್ಟ್ರಿಕ್ ಕಾರಿನ ವಿಶೇಷತೆಗಳಿವು!
New BYD Atto3 Electric SUV Highlights
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Oct 12, 2022 | 6:16 PM

Share

ಬಿವೈಡಿ (BYD) ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಅಟ್ಟೊ 3 ಎಲೆಕ್ಟ್ರಿಕ್ (Atto 3)ಎಸ್ ಯುವಿ ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ಕಾರು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲು ಸಿದ್ದವಾಗಿದೆ. ಭಾರತದಲ್ಲಿ ಇ6 ಎಲೆಕ್ಟ್ರಿಕ್ ಎಂಪಿವಿ ನಂತರ ಅಟ್ಟೊ 3 ಎಲೆಕ್ಟ್ರಿಕ್ ಎಸ್ ಯುವಿ ಬಿಡುಗಡೆಗೆ ಬಿವೈಡಿ ಕಂಪನಿಯು ಸಿದ್ದವಾಗಿದ್ದು, ಹೊಸ ಇವಿ ಕಾರನ್ನು ಕಂಪನಿಯು ಮುಂದಿನ ತಿಂಗಳು ನವೆಂಬರ್ ಮಧ್ಯಂತರದಲ್ಲಿ ಬಿಡುಗಡೆ ಮಾಡಬಹುದಾಗಿದೆ.

ಹೊಸ ಕಾರು ಅನಾವರಣದೊಂದಿಗೆ ಬಿವೈಡಿ ಕಂಪನಿಯು ರೂ. 50 ಸಾವಿರ ಮುಂಗಡದೊಂದಿಗೆ ಬುಕಿಂಗ್ ಕೂಡಾ ಆರಂಭಿಸಿದ್ದು, ಪ್ರೀಮಿಯಂ ಫೀಚರ್ಸ್, ಅತ್ಯುತ್ತಮ ಬ್ಯಾಟರಿ ಪ್ಯಾಕ್ ಮೂಲಕ ಭಾರೀ ಬೇಡಿಕೆ ಪಡೆದುಕೊಳ್ಳಲಿದೆ.

ಅಂದಾಜು ಬೆಲೆ

ಅಟ್ಟೊ 3 ಇವಿ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಹ್ಯುಂಡೈ ಕೊನಾ ಇವಿ, ಎಂಜಿ ಜೆಡ್ ಎಸ್ ಇವಿ ಮತ್ತು ಟಾಟಾ ನೆಕ್ಸಾನ್ ಮ್ಯಾಕ್ಸ್ ಮಾದರಿಗಳಿಗೆ ಪೈಪೋಟಿಯಾಗಿ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಎಕ್ಸ್ ಶೋರೂಂ ಪ್ರಕಾರ ರೂ. 22 ಲಕ್ಷದಿಂದ ರೂ. 25 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದಾಗಿದೆ.

ಬ್ಯಾಟರಿ ಮತ್ತು ಪರ್ಫಾಮೆನ್ಸ್

ಬಿವೈಡಿ ಕಂಪನಿಯು ಹೊಸ ಅಟ್ಟೊ 3 ಕಾರಿನಲ್ಲಿ ಎರಡು ಮಾದರಿಯ ಬ್ಯಾಟರಿ ಆಯ್ಕೆ ನೀಡಬಹುದಾಗಿದ್ದು, ಆರಂಭಿಕ ಮಾದರಿಯು 49.92 kWh ಬ್ಯಾಟರಿ ಪ್ಯಾಕ್ ಪಡೆದುಕೊಳ್ಳಲಿದ್ದರೆ ಹೈ ಎಂಡ್ ಮಾದರಿಯು 60.48 kWh ಬ್ಯಾಟರಿ ಪ್ಯಾಕ್ ಹೊಂದಿರಲಿದೆ.

49.92 kWh ಬ್ಯಾಟರಿ ಪ್ಯಾಕ್ ಮಾದರಿಯು ಪ್ರತಿ ಚಾರ್ಜ್ ಗೆ 430 ಕಿ.ಮೀ ಮೈಲೇಜ್ ನೀಡಲಿದ್ದರೆ ಹೈ ಎಂಡ್ ಮಾದರಿಯು 60.48 kWh ಬ್ಯಾಟರಿ ಪ್ಯಾಕ್ ಮೂಲಕ ಪ್ರತಿ ಚಾರ್ಜ್ ಗೆ ಗರಿಷ್ಠ 521 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದಾಗಿದೆ.

ಇದರೊಂದಿಗೆ ಹೊಸ ಕಾರು ಶಕ್ತಿಶಾಲಿಯಾಗಿರುವ ಸಿಂಗಲ್ ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಎಲೆಕ್ಟ್ರಿಕ್ ಮೋಟಾರ್ ಮೂಲಕ 201 ಬಿಎಚ್ ಪಿ ಮತ್ತು 310 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮೂಲಕ ಹೊಸ ಕಾರು ಕೇವಲ 7.3 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳುತ್ತದೆ.

ಅಟ್ಟೊ3 ಇವಿ ಕಾರಿನ ವೈಶಿಷ್ಟ್ಯತೆಗಳು

ಹೊಸ ಕಾರು ಅತ್ಯುತ್ತಮ ಪರ್ಫಾಮೆನ್ಸ್ ಮತ್ತು ಮೈಲೇಜ್ ನಲ್ಲಿ ಮಾತ್ರವಲ್ಲದೆ ಐಷಾರಾಮಿ ಫೀಚರ್ಸ್ ಹೊಂದಿರಲಿದ್ದು, ಹೊಸ ಕಾರಿನಲ್ಲಿ ಕಂಪನಿಯು ಎಲ್ಇಡಿ ಹೆಡ್ ಲ್ಯಾಂಪ್, ಎಸ್ ಯುವಿ ಬಲಾಡ್ಯತೆಗಾಗಿ ಮಸ್ ಕ್ಯೂಲರ್ ಲೈನ್ ಗಳನ್ನ ಮತ್ತು ಸ್ಪೋರ್ಟಿ ಲುಕ್ ನೀಡುವುದಕ್ಕಾಗಿ ಪುಲ್ ಎಲ್ಇಡಿ ಹೆಡ್ ಲೈಟ್ಸ್ ಪಡೆದುಕೊಂಡಿದೆ.

ಪ್ರೀಮಿಯಂ ಫೀಚರ್ಸ್ ಜೊತೆಗೆ ಹೊಸ ಕಾರು ವಿಶಾಲವಾದ ಕ್ಯಾಬಿನ್ ಸೌಲಭ್ಯವನ್ನು ಹೊಂದಿದ್ದು, 4,455 ಎಂಎಂ ಉದ್ದ, 1,875 ಎಂಎಂ ಅಗಲ, 1,615 ಎಂಎಂ ಎತ್ತರ ಮತ್ತು 2,720 ಎಂಎಂ ವೀಲ್ಹ್ ಬೆಸ್ ನೊಂದಿಗೆ ಅರಾಮದಾಯಕ ಪ್ರಯಾಣಕ್ಕೆ ಅನುಕೂಲಕರವಾಗಿದೆ.

ಇದನ್ನು ಓದಿ: ಪ್ರತಿ ಚಾರ್ಜ್ ಗೆ 315 ಕಿ.ಮೀ ಮೈಲೇಜ್ ನೀಡುವ ಟಾಟಾ ಟಿಯಾಗೋ ಇವಿ ಕಾರಿಗೆ ಭಾರೀ ಡಿಮ್ಯಾಂಡ್

ಹೊಸ ಕಾರಿನಲ್ಲಿರುವ ಇಂಟಿರಿಯರ್ ಫೀಚರ್ಸ್ ಬಗೆಗೆ ಹೇಳುವುದಾದರೆ ಹೊಸ ಕಾರಿನಲ್ಲಿ ಬಿವೈಡಿ ಕಂಪನಿಯು ಪ್ಲೊಟರಿಂಗ್ ವೈಶಿಷ್ಟ್ಯತೆಯ 12.8 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಸಿಸ್ಟಂ ಜೋಡಿಸಿದೆ. ಜೊತೆಗೆ ವೈರ್ ಲೆಸ್ ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ ಕನೆಕ್ಟಿವಿಟಿ ಮತ್ತು ವೈರ್ ಲೆಸ್ ಚಾರ್ಜಿಂಗ್ ಸೌಲಭ್ಯಗಳಿವೆ.

ಇದರೊಂದಿಗೆ ಮುಖ್ಯವಾಗಿ ಹೊಸ ಕಾರಿನಲ್ಲಿ ಬಿವೈಡಿ ಕಂಪನಿಯು ಲೆವಲ್ 2 ಅಡ್ವಾನ್ಸ್ ಡ್ರೈವರ್ಸ್ ಅಸಿಸ್ಟ್ ಸಿಸ್ಟಂ ಸೌಲಭ್ಯ ಜೋಡಿಸಬಹುದಾಗಿದ್ದು, ಇದರಲ್ಲಿ ಅಡಾಪ್ಟಿವ್ ಕ್ರೂಸರ್ ಕಂಟ್ರೊಲ್, ಫಾರ್ವಡ್ ಕೂಲಿಷನ್ ಅಲರ್ಟ್, ಲೇನ್ ಕಿಪಿಂಗ್ ಅಸಿಸ್ಟ್, ಡೋರ್ ಓಪನ್ ವಾರ್ನಿಂಗ್, ಬ್ಲೈಂಡ್ ಮಾನಿಟರಿಂಗ್ ಸಿಸ್ಟಂ, ಆಟೋ ಎನರ್ಜೆನ್ಸಿ ಬ್ರೇಕಿಂಗ್ ಮತ್ತು ರಿಯರ್ ಕ್ರಾಸ್ ಟ್ರಾಫಿಕ್ ಸೌಲಭ್ಯಗಳನ್ನು ಹೊಂದಿರಲಿದೆ.

Published On - 6:13 pm, Wed, 12 October 22

ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್