Okaya Freedum: 250 ಕಿ.ಮೀ ಮೈಲೇಜ್ ನೀಡಲಿರುವ ಒಕಯಾ ಇ-ಸ್ಕೂಟರ್

| Updated By: ಝಾಹಿರ್ ಯೂಸುಫ್

Updated on: Sep 16, 2021 | 9:35 PM

Okaya Freedum Electric Scooter: 48 ವೋಲ್ಟ್ 30 ಲಿಥಿಯಂ-ಐಯಾನ್ ಆವೃತ್ತಿಯನ್ನು 4 ರಿಂದ 5 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್​ ಮಾಡಿಕೊಳ್ಳಬಹುದು.

1 / 5
ಎನರ್ಜಿ ಸ್ಟೊರೇಜ್​ ಸೆಕ್ಟರ್​ನ ಮುಂಚೂಣಿ ಕಂಪನಿಯಾದ ಒಕಯಾ ಗ್ರೂಪ್ ಎಲೆಕ್ಟ್ರಿಕ್ ಸ್ಕೂಟರ್ (ಇ-ಸ್ಕೂಟರ್) ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಫ್ರೀಡಂ ಬ್ರಾಂಡ್ ಹೆಸರಿನಲ್ಲಿ ಈ ಸ್ಕೂಟರ್​ನ್ನು ಬಿಡುಗಡೆ ಮಾಡಲಾಗಿದ್ದು, ಶೀಘ್ರದಲ್ಲೇ ದೇಶದೆಲ್ಲೆಡೆ ಖರೀದಿಗೆ ಲಭ್ಯವಿರಲಿದೆ.

2 / 5
 ಈಗಾಗಲೇ ಕಂಪೆನಿಯು ಏವಿಯನ್ಐಕ್ಯೂ  ಮತ್ತು ಕ್ಲಾಸ್‌ಐಕ್ಯೂ ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್​ಗಳನ್ನು ಬಿಡುಗಡೆ ಮಾಡಿದ್ದು, ಅದರ ಜೊತೆಗೆ ಇದೀಗ ಫ್ರೀಡಂ ಹೆಸರಿನಲ್ಲಿ ನೂತನ ಸ್ಕೂಟರ್​ನ್ನು ಪರಿಚಯಿಸಿದೆ.

3 / 5
ಒಕಾಯಾ ಫ್ರೀಡಮ್ 250 ವ್ಯಾಟ್ ಬಿಎಲ್‌ಡಿಸಿ ಹಬ್ ಮೋಟಾರ್ ಅನ್ನು ಹೊಂದಿದೆ.  ಇನ್ನು ಈ ಇ-ಸ್ಕೂಟರ್​ ಲಿಥಿಯಂ ಐಯಾನ್ ಮತ್ತು ಲೀಡ್ ಆಸಿಡ್ ಬ್ಯಾಟರಿಗಳ ಆಯ್ಕೆಯೊಂದಿಗೆ ಲಭ್ಯವಿರಲಿದೆ.

4 / 5
48 ವೋಲ್ಟ್ 30 ಲಿಥಿಯಂ-ಐಯಾನ್ ಆವೃತ್ತಿಯನ್ನು 4 ರಿಂದ 5 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್​ ಮಾಡಿಕೊಳ್ಳಬಹುದು. ಹಾಗೆಯೇ ಲೀಡ್-ಆಸಿಡ್ ಆವೃತ್ತಿಯು ಚಾರ್ಜಿಂಗ್  8 ರಿಂದ 10 ಗಂಟೆಗಳನ್ನು ತೆಗೆದುಕೊಳ್ಳಲಿದೆ. ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿಕೊಂಡರೆ ಗರಿಷ್ಠ 250 ಕಿ.ಮೀ. ವರೆಗೆ ಚಲಿಸಬಹುದು ಎಂದು ಒಕಯಾ ಕಂಪೆನಿ ಹೇಳಿಕೊಂಡಿದೆ. ಇದರಿಂದ ಈ ಸ್ಕೂಟರ್​ ಅನ್ನು ದೂರ ಪ್ರಯಾಣಕ್ಕೂ ಬಳಸಿಕೊಳ್ಳಬಹುದು.

5 / 5
ಇನ್ನು ಒಕಯಾ ಪರಿಚಯಿಸಿರುವ ನೂತನ ಫ್ರೀಡಂ ಸ್ಕೂಟರ್​ನ ಆರಂಭಿಕ ಬೆಲೆ 69,900 ರೂ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇತರೆ ಎಲೆಕ್ಟ್ರಿಕ್ ಸ್ಕೂಟರ್​ಗಳಿಗೆ ಹೋಲಿಸಿದರೆ ಇದು ಕಡಿಮೆ ಎಂದೇ ಹೇಳಬಹುದು.