AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​ ಇದ್ದರೂ ಭಾರತದಲ್ಲಿ ಅತ್ಯಧಿಕ ಬುಕ್ಕಿಂಗ್​ ಕಂಡ ಒಯೋ; ಹೊಸದಾಗಿ 85 ಲಕ್ಷ ಗ್ರಾಹಕರು ಸೇರ್ಪಡೆ

ಈ ವರ್ಷದಲ್ಲಿ ಒಯೋ ಆ್ಯಪ್​ ಮತ್ತು ವೆಬ್​ಸೈಟ್​ ಒಟ್ಟು 85 ಲಕ್ಷ ಹೊಸ ಗ್ರಾಹಕರನ್ನು ಸೆಳೆದಿದೆ. ಧಾರ್ಮಿಕ ಕ್ಷೇತ್ರಗಳ ಪೈಕಿ ಪುರಿ ಅತಿ ಹೆಚ್ಚು ಜನರನ್ನು ಸೆಳೆದಿದೆ. ಪುರಿಯ ನಂತರ ಬೃಂದಾವನ, ತಿರುಪತಿ, ಶಿರಡಿ ಮತ್ತು ವಾರಣಾಸಿ ಕ್ಷೇತ್ರಗಳಿವೆ. ಅಧಿಕ ಪ್ರವಾಸಿಗರನ್ನು ಸೆಳೆದಿರುವ ಬೀಚ್​ಗಳ ಪಟ್ಟಿಯಲ್ಲಿ ಗೋವಾ ಮೊದಲ ಸ್ಥಾನದಲ್ಲಿದ್ದರೆ ನಂತರದಲ್ಲಿ ಕೊಚ್ಚಿ, ವಿಶಾಖಪಟ್ಟಣಂ ಮತ್ತು ಪುದುಚೆರಿ ಇವೆ.

ಕೊವಿಡ್​ ಇದ್ದರೂ ಭಾರತದಲ್ಲಿ ಅತ್ಯಧಿಕ ಬುಕ್ಕಿಂಗ್​ ಕಂಡ ಒಯೋ; ಹೊಸದಾಗಿ 85 ಲಕ್ಷ ಗ್ರಾಹಕರು ಸೇರ್ಪಡೆ
ಪ್ರಾತಿನಿಧಿಕ ಚಿತ್ರ
Skanda
| Edited By: |

Updated on: Dec 30, 2020 | 6:24 PM

Share

ದೆಹಲಿ: ಬಹುತೇಕ ಎಲ್ಲ ಉದ್ಯಮಗಳ ಮೇಲೂ ಕೋವಿಡ್-19 ವ್ಯತಿರಿಕ್ತ ಪರಿಣಾಮ ಬೀರಿದೆ. ಭಾರತದಲ್ಲಿ ಕೊವಿಡ್​ನ ಹೊಡೆತಕ್ಕೆ ಮೊದಲು ಸಿಕ್ಕ ಉದ್ಯಮಗಳ ಪೈಕಿ ಹೊಟೇಲ್​ ಮತ್ತು ಪ್ರವಾಸೋದ್ಯಮವೂ ಇವೆ. ಲಾಕ್​ಡೌನ್​, ಸೀಲ್​ಡೌನ್​ಗಳ ಭರಾಟೆಯಲ್ಲಿ ಜನ ಮನೆಯಿಂದ ಆಚೆ ತಲೆ ಹಾಕದಂತಾಗಿ ಈ ಉದ್ಯಮಗಳು ಅಕ್ಷರಶಃ ನೆಲಕಚ್ಚಿದ್ದವು. ಆದರೆ, ಇದರ ನಡುವೆಯೂ 2020ರಲ್ಲಿ ಒಯೋ (OYO) ಮಾತ್ರ ಬೇರೆಲ್ಲಾ ರಾಷ್ಟ್ರಗಳಿಗಿಂತ ಭಾರತದಲ್ಲೇ ಅಧಿಕ ಗ್ರಾಹಕರನ್ನು ಸೆಳೆದಿದೆ ಎಂಬ ಮಾಹಿತಿ ಬಹಿರಂಗವಾಗಿದೆ.

ಭಾರತದಲ್ಲಿ ಹಂತಹಂತವಾಗಿ ಅನ್​​ಲಾಕಿಂಗ್​ ಆರಂಭವಾದ ಮೇಲೆ ಜನರು ಹೊಟೇಲ್​ ಮತ್ತು ಪ್ರವಾಸಿತಾಣಗಳತ್ತ ಮುಖ ಮಾಡುತ್ತಿದ್ದಾರೆ. ಹಾಗಾಗಿ ವಿಶ್ವದ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಒಯೋ ಬುಕ್ಕಿಂಗ್​ ಹೆಚ್ಚಿನ ಸಂಖ್ಯೆಯಲ್ಲಿ ಆಗಿದೆ ಎಂದು ವರ್ಷಾಂತ್ಯದ ಒಯೋ ಟ್ರಾವೆಲೋಪಿಡಿಯಾ 2020ರ ವರದಿ ತಿಳಿಸಿದೆ.

ವರದಿಯಲ್ಲಿ ತಿಳಿಸಿರುವಂತೆ 2020ರ ಆರಂಭದಲ್ಲಿ ಜನರು ಅತಿ ಹೆಚ್ಚು ಪ್ರವಾಸ ಮಾಡಿದ್ದು, ಜನವರಿಯಲ್ಲಿ ಒಯೋ ಅತ್ಯಧಿಕ ಬುಕ್ಕಿಂಗ್​​ಗಳನ್ನು ಸ್ವೀಕರಿಸಿದೆ. ಆದರೆ, ಏಪ್ರಿಲ್​ನಲ್ಲಿ ಕೊರೊನಾ ಗಲಾಟೆ ಮತ್ತು ಲಾಕ್​ಡೌನ್ ಹೇರಿಕೆ ಆದ ಕಾರಣ ಬುಕ್ಕಿಂಗ್​ ಹಿಂಪಡೆದವರ ಸಂಖ್ಯೆ ದೊಡ್ಡದಿದೆ. ಲಾಕ್​ಡೌನ್​ ಜಾರಿಯಲ್ಲಿದ್ದ ತನಕ ಸಹಜವಾಗಿ ಯಾವುದೇ ಬುಕ್ಕಿಂಗ್​ಗಳು ಕಂಡುಬಂದಿಲ್ಲ.

ಅನ್​ಲಾಕಿಂಗ್​ ನಂತರ ಹೆಚ್ಚಿದ ಉತ್ಸಾಹ ಅನ್​ಲಾಕಿಂಗ್​ ಶುರುವಾದ ನಂತರ ಡಿಸೆಂಬರ್​ ಅತ್ಯಂತ ಬೇಡಿಕೆಯ ತಿಂಗಳಾಗಿ ಕಂಡುಬಂದಿದ್ದು, ಜನರು ಪ್ರವಾಸಿ ತಾಣಗಳತ್ತ ಹೋಗಲು ಉತ್ಸುಕರಾಗಿದ್ದಾರೆ ಎಂದು ಮಾಹಿತಿ ಲಭಿಸಿದೆ. ಲಾಕ್​ಡೌನ್​ ನಂತರ ಅಕ್ಟೋಬರ್​ 2 ರಂದು ಹೆಚ್ಚು ಬುಕ್ಕಿಂಗ್​ ಸ್ವೀಕರಿಸಿದ್ದನ್ನು ಹೊರತುಪಡಿಸಿದರೆ ಕ್ರಿಸ್​ಮಸ್​ ಅವಧಿಯ ತನಕ ಭಾರೀ ಬೇಡಿಕೆ ಕಂಡುಬಂದಿಲ್ಲ.

ಈ ವರ್ಷದಲ್ಲಿ ಒಯೋ ಆ್ಯಪ್​ ಮತ್ತು ವೆಬ್​ಸೈಟ್​ ಒಟ್ಟು 85 ಲಕ್ಷ ಹೊಸ ಗ್ರಾಹಕರನ್ನು ಸೆಳೆದಿದೆ. ಧಾರ್ಮಿಕ ಕ್ಷೇತ್ರಗಳ ಪೈಕಿ ಪುರಿ ಅತಿ ಹೆಚ್ಚು ಜನರನ್ನು ಸೆಳೆದಿದೆ. ಪುರಿಯ ನಂತರ ಬೃಂದಾವನ, ತಿರುಪತಿ, ಶಿರಡಿ ಮತ್ತು ವಾರಣಾಸಿ ಕ್ಷೇತ್ರಗಳಿವೆ. ಅಧಿಕ ಪ್ರವಾಸಿಗರನ್ನು ಸೆಳೆದಿರುವ ಬೀಚ್​ಗಳ ಪಟ್ಟಿಯಲ್ಲಿ ಗೋವಾ ಮೊದಲ ಸ್ಥಾನದಲ್ಲಿದ್ದರೆ ನಂತರದಲ್ಲಿ ಕೊಚ್ಚಿ, ವಿಶಾಖಪಟ್ಟಣಂ ಮತ್ತು ಪುದುಚೆರಿ ಇವೆ. ವ್ಯಾವಹಾರಿಕ ಉದ್ದೇಶಗಳಿಗಾಗಿ ಜನರು ದೆಹಲಿ, ಬೆಂಗಳೂರು ಮತ್ತು ಹೈದರಾಬಾದ್​ಗಳಿಗೆ ಅತಿ ಹೆಚ್ಚು ಭೇಟಿ ನೀಡಿದ್ದಾರೆಂದು ಒಯೋ ಹೇಳಿದೆ.

ಕೊವಿಡ್​ ಪೂರ್ವಕ್ಕಿಂತಲೂ ಈಗ ಒಯೋ ಹೆಚ್ಚೆಚ್ಚು ಪರಿಚಿತಗೊಳ್ಳುತ್ತಿದೆ ಮತ್ತು ಸದೃಢವಾಗಿ ಬೆಳೆಯುತ್ತಿದೆ. ಡಿಸೆಂಬರ್​ 31ರಂದು ಈ ವರ್ಷದ ಅತ್ಯಧಿಕ ಬುಕ್ಕಿಂಗ್​ಗಳಿಗೆ ಸಾಕ್ಷಿಯಾಗಬಹುದು ಎಂಬ ಭರವಸೆ ಇದೆ ಎಂದು ಒಯೋ ಸಂಸ್ಥೆಯ ಭಾರತ ಮತ್ತು ದಕ್ಷಿಣ ಏಷ್ಯಾ ಪ್ರಾಂತ್ಯದ ಸಿಇಓ ರೋಹಿತ್​ ಕಪೂರ್​ ತಿಳಿಸಿದ್ದಾರೆ.

Follow Us
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ