ಮುಂಬೈ: ಅಂಬಾನಿ ಕುಟುಂಬವು ಲಂಡನ್ಗೆ ಭಾಗಶಃ ವಾಸ್ತವ್ಯ ಬದಲಿಸುವ ಯಾವುದೇ ಆಸಕ್ತಿ ಹೊಂದಿಲ್ಲ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ. ಲಂಡನ್ನ ಸ್ಟೋಕ್ ಪಾರ್ಕ್ಗೆ ಅಂಬಾನಿ ಕುಟುಂಬ ಭಾಗಶಃ ವಾಸ್ತವ್ಯ ಬದಲಿಸಲು ಆಲೋಚಿಸುತ್ತಿದೆ ಎಂದು ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ವರದಿಯು ಕೆಲ ಅನಗತ್ಯ ಮತ್ತು ಅನಪೇಕ್ಷಿತ ಆಧಾರ ರಹಿತ ಊಹಾಪೋಹಗಳಿಗೆ ಕಾರಣವಾಗಿದೆ ಎಂದು ರಿಲಯನ್ಸ್ ಹೇಳಿದೆ.
ರಿಲಯನ್ಸ್ನ ಅಧ್ಯಕ್ಷರು ಅಥವಾ ಅವರ ಕುಟುಂಬವು ಲಂಡನ್ ಅಥವಾ ವಿಶ್ವದ ಬೇರೆ ಯಾವುದೇ ನಗರಕ್ಕೆ ವಾಸ್ತವ್ಯ ಬದಲಿಸುವ ಆಲೋಚನೆ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ನ ಭಾಗವಾಗಿರುವ ಆರ್ಐಐಎಚ್ಎಲ್ ಲಂಡನ್ನ ಸ್ಟೋಕ್ ಪಾರ್ಕ್ ಎಸ್ಟೇಟ್ ಅನ್ನು ಈಚೆಗೆ ಖರೀದಿಸಿತ್ತು. ಪರಂಪರೆಯ ಮೌಲ್ಯ ಹೊಂದಿರುವ ಈ ಆಸ್ತಿಯನ್ನು ಉತ್ತಮ ಗಾಲ್ಫ್ ಮತ್ತು ಕ್ರೀಡಾ ರೆಸಾರ್ಟ್ ಆಗಿ ಅಭಿವೃದ್ಧಿಪಡಿಸುವುದು ಕಂಪನಿಯ ಉದ್ದೇಶವಾಗಿದೆ. ಪ್ಲಾನಿಂಗ್ ವೇಳೆ ಸ್ಥಳೀಯ ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸಲಾಗುವುದು ಎಂದು ಭರವಸೆ ನೀಡಿದೆ.
ಈ ಆಸ್ತಿಯನ್ನು ತನ್ನ ಸುಪರ್ದಿಗೆ ಪಡೆದುಕೊಂಡ ನಂತರ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಗ್ರಾಹಕ ವ್ಯವಹಾರವೊಂದು ರಿಲಯನ್ಸ್ ಸಮೂಹದ ಭಾಗವಾದಂತೆ ಆಗಿದೆ. ಭಾರತವು ಹೆಸರುವಾಸಿಯಾಗಿರುವ ಆತಿಥ್ಯ ಉದ್ಯಮವನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಲು ಈ ಪ್ರಯತ್ನ ನೆರವಾಗಲಿದೆ ಎಂದು ಆರ್ಐಎಸ್ ಹೇಳಿದೆ.
ಇದನ್ನೂ ಓದಿ: Channapatna toys: ಅಂಬಾನಿಯ ರಿಲಯನ್ಸ್ ಸಹಭಾಗಿ ಸಂಸ್ಥೆಯ ನೆರವು, ಚನ್ನಪಟ್ಟಣದ ಬೊಂಬೆಗಳು ಸಿಂಗಾಪೂರಕ್ಕೆ ರಫ್ತು
ಇದನ್ನೂ ಓದಿ: Reliance Industries: ರಿಲಯನ್ಸ್ ಇಂಡಸ್ಟ್ರೀಸ್ಗೆ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದಾಖಲೆಯ 15,479 ಕೋಟಿ ರೂ. ಲಾಭ