ಹೊಸ ಹೈರೈಡರ್ ಎಸ್ಯುವಿ ಮಾದರಿಯು ಬಿಡುಗಡೆಯ ನಂತರ ಇದುವರೆಗೆ ಸುಮಾರು 40 ಸಾವಿರಕ್ಕೂ ಹೆಚ್ಚು ಬುಕಿಂಗ್ ಪಡೆದುಕೊಂಡಿದ್ದು, ಹೊಸ ಕಾರು ವಿತರಣೆ ನಂತರ ಇದುವರೆಗೆ ಸುಮಾರು 12 ಸಾವಿರಕ್ಕೂ ಹೆಚ್ಚು ಯುನಿಟ್ ವಿತರಣೆ ಮಾಡಲಾಗಿದೆ. ವಿತರಣೆ ಪ್ರಮಾಣವನ್ನು ಆಧರಿಸಿ ಗ್ರಾಹಕರಿಗೆ ಕಾಯುವಿಕೆ ಅವಧಿಯನ್ನು ನಿಗದಿಪಡಿಸಲಾಗಿದ್ದು, ಹೊಸದಾಗಿ ಬುಕಿಂಗ್ ಸಲ್ಲಿಸುವ ಗ್ರಾಹಕರು ಕನಿಷ್ಠ 6 ತಿಂಗಳು ಕಾಲ ಕಾಯಬೇಕಿದೆ.
ಹೊಸ ಕಾರಿನಲ್ಲಿ ಟಾಪ್ ಎಂಡ್ ಮಾದರಿಗಳನ್ನು ಬುಕಿಂಗ್ ಮಾಡುವ ಗ್ರಾಹಕರಿಗೆ ಅತಿ ಕಡಿಮೆ ಅವಧಿಯಲ್ಲಿ ವಿತರಣೆಯಾಗಲಿದ್ದರೆ ಬೆಸ್ ಮಾದರಿಗಳನ್ನು ಬುಕಿಂಗ್ ಮಾಡುವ ಗ್ರಾಹಕರು ಹೆಚ್ಚು ದಿನಗಳ ಕಾಲ ಕಾಯಬೇಕಾಗುತ್ತದೆ.
ಬೆಲೆ ಮತ್ತು ವೆರಿಯೆಂಟ್
ಟೊಯೊಟಾ ಕಂಪನಿಯು ಹೊಸ ಹೈರೈಡರ್ ಕಾರಿನಲ್ಲಿ ಒಟ್ಟು 11 ವೆರಿಯೆಂಟ್ ಗಳಲ್ಲಿ ಮಾರಾಟ ಮಾಡುತ್ತಿದ್ದು, ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 10.48 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 18.99 ಲಕ್ಷ ಬೆಲೆ ಹೊಂದಿದೆ.
ಹೊಸ ಹೈರೈಡರ್ ಮಾದರಿಯು ಸ್ಮಾರ್ಟ್ ಮತ್ತು ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ ಎಂಜಿನ್ ಆಯ್ಕೆ ನೀಡಿದ್ದು, ಇದರಲ್ಲಿ ಸ್ಮಾರ್ಟ್ ಹೈಬ್ರಿಡ್ ಮಾದರಿಯು ಆರಂಭಿಕವಾಗಿ ರೂ. 10.48 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 17.19 ಲಕ್ಷ ಬೆಲೆ ಹೊಂದಿದ್ದರೆ ಸ್ಟ್ಕಾಂಗ್ ಹೈಬ್ರಿಡ್ ಎಂಜಿನ್ ಹೊಂದಿರುವ ಮಾದರಿಯ ರೂ. 15.11 ಲಕ್ಷದಿಂದ ರೂ. ರೂ. 18.99 ಲಕ್ಷ ಬೆಲೆ ಹೊಂದಿದೆ.
ಹೈರೈಡರ್ ಕಾರಿನಲ್ಲಿ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಇ, ಎಸ್, ಜಿ, ವಿ ವೆರಿಯೆಂಟ್ ಗಳೊಂದಿಗೆ 2 ವ್ಹೀಲ್ ಡ್ರೈವ್ ಮತ್ತು 4 ವ್ಹೀಲ್ ಡ್ರೈವ್ ಸಿಸ್ಟಂ ಆಯ್ಕೆ ಹೊಂದಿದ್ದು, 4×4 ವೆರಿಯೆಂಟ್ ಸ್ಮಾರ್ಟ್ ಪೆಟ್ರೋಲ್ ಮಾದರಿಯ ಹೈ ಎಂಡ್ ಆವೃತ್ತಿಯಲ್ಲಿ ಖರೀದಿಗೆ ಲಭ್ಯವಿರಲಿದೆ.
ಎಂಜಿನ್ ಮತ್ತು ಮೈಲೇಜ್
ಹೊಸ ಹೈರೈಡರ್ ಕಾರಿನಲ್ಲಿ ಟೊಯೊಟಾ ಕಂಪನಿಯು ಮಾರುತಿ ಸುಜುಕಿ ಜೊತೆ ಅಭಿವೃದ್ದಿಪಡಿಸಲಾದ ಆಟ್ಕಿನ್ ಸನ್ ಸೈಕಲ್ 1.5 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಮತ್ತು 1.5 ಲೀಟರ್ ಮೈಲ್ಡ್ ಹೈಬ್ರಿಡ್ ಪ್ರೇರಿತ ಕೆ15ಸಿ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದೆ.
ಆಟ್ಕಿನ್ ಸನ್ ಸೈಕಲ್ 1.5 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಮಾದರಿಯು ಇ-ಸಿವಿಟಿ ಗೇರ್ ಬಾಕ್ಸ್ ನೊಂದಿಗೆ 114 ಬಿಎಚ್ ಪಿ ಮತ್ತು 141ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 27.97 ಕಿ.ಮೀ ಮೈಲೇಜ್ ನೀಡುತ್ತದೆ.
ಹಾಗೆಯೇ ಕೆ15ಸಿ ಮೈಲ್ಡ್ ಹೈಬ್ರಿಡ್ ಎಂಜಿನ್ ಹೊಂದಿರುವ ಮಾದರಿಯು 5 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದ್ದು, ಇದು 103 ಬಿಎಚ್ ಪಿ ಮತ್ತು 137 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 19 ಕಿ.ಮೀ ಮೈಲೇಜ್ ನೀಡುತ್ತದೆ.
ಡಿಸೈನ್ ಮತ್ತು ಫೀಚರ್ಸ್
ಹೊಸ ಹೈರೈಡರ್ ಕಾರು ಮಾರುತಿ ಸುಜುಕಿಯ ಗ್ರ್ಯಾಂಡ್ ವಿಟಾರಾ ಪ್ಲ್ಯಾಟ್ ಫಾರ್ಮ್ ಹಂಚಿಕೊಂಡಿದ್ದು, ಡಿಸೈನ್, ಫೀಚರ್ಸ್ ಸೇರಿದಂತೆ ಹಲವಾರು ತಾಂತ್ರಿಕ ಸೌಲಭ್ಯಗಳು ಎರಡು ಮಾದರಿಯಲ್ಲೂ ಒಂದೇ ಆಗಿರಲಿವೆ. ಇದರ ಹೊರತಾಗಿಯೂ ಹೈರೈಡರ್ ಕಾರಿನ ವಿನ್ಯಾಸವು ಸಾಕಷ್ಟು ವಿಭಿನ್ನತೆ ಹೊಂದಿದ್ದು, ಹೊಸ ಕಾರಿನಲ್ಲಿ ಟು ಲೆಯರ್ ಹೊಂದಿರುವ ಡೇಟೈಮ್ ರನ್ನಿಂಗ್ ಲ್ಯಾಂಪ್ ಗಳನ್ನು ಜೋಡಿಸಲಾಗಿದೆ. ಇದರಲ್ಲಿರುವ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಎರಡು ಲೇಯರ್‌ಗಳಾಗಿ ವಿಭಜಿಸಿ ಗ್ರಿಲ್‌ನ ಒಂದು ಮೂಲೆಯಿಂದ ಇನ್ನೊಂದಕ್ಕೆ ವಿಸ್ತರಿಸಿರುವ ಕ್ರೋಮ್ ಸ್ಟ್ರಿಪ್ ನೀಡಲಾಗಿದೆ.
ಹಾಗೆಯೇ ಎರಡು ಬದಿಯಲ್ಲೂ ಹೈಬ್ರಿಡ್ ಬ್ಯಾಡ್ಜಿಂಗ್, ಸ್ಲಿಮ್ ಸಿ-ಆಕಾರದ ಟೈಲ್-ಲೈಟ್‌ಗಳನ್ನು ಹೊಂದಿದ್ದು, ಡ್ಯುಯಲ್ ಸಿ-ಆಕಾರದ ಪಾರ್ಕಿಂಗ್ ಲ್ಯಾಂಪ್‌ಗಳೊಂದಿಗೆ ಟೈಲ್‌ಗೇಟ್ ವಿಸ್ತರಣೆ ಹೊಂದಿದೆ.
ಹೈರೈಡರ್ ನಲ್ಲಿ ಉನ್ನತ ರೂಪಾಂತರಗಳಲ್ಲಿ ಲಭ್ಯವಾಗುವಂತೆ ಪನೋರಮಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಚಾರ್ಜರ್, ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೆಡ್ಸ್-ಅಪ್ ಡಿಸ್ಪ್ಲೇ, ಕನೆಕ್ಟ್ ಮಾಡಿದ ಕಾರ್ ಟೆಕ್ ಮತ್ತು ಗೂಗಲ್ ಮತ್ತು ಸಿರಿ ಹೊಂದಾಣಿಕೆಯೊಂದಿಗೆ ಧ್ವನಿ ಸಹಾಯದಂತಹ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.
ಸುರಕ್ಷಾ ಸೌಲಭ್ಯಗಳು
ಹೊಸ ಹೈರೈಡರ್ ಕಾರಿನಲ್ಲಿ ಟೊಯೊಟಾ ಕಂಪನಿಯು 6 ಏರ್ ಬ್ಯಾಗ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಇಎಸ್ ಪಿ, ಹಿಲ್ ಹೋಲ್ಡ್ ಸಿಸ್ಟಂ, ಇಎಸ್ ಪಿ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ಸೌಲಭ್ಯಗಳಿವೆ.
ವಾರಂಟಿ
ಟೊಯೊಟಾ ಕಂಪನಿಯು ಹೊಸ ಕಾರು ಖರೀದಿಗಾಗಿ ಗ್ರಾಹಕರಿಗೆ ಸ್ಟ್ಯಾಂಡರ್ಡ್ ಆಗಿ 3 ವರ್ಷ ಅಥವಾ 1 ಲಕ್ಷ ಕಿ.ಮೀ ತನಕ ವಾರಂಟಿ ನೀಡುತ್ತದೆ. ಆಸಕ್ತ ಗ್ರಾಹಕರನ್ನು ಇದನ್ನು ಹೆಚ್ಚುವರಿ ಮೊತ್ತದೊಂದಿಗೆ 5 ವರ್ಷ ಅಥವಾ 2.20 ಕಿ.ಮೀ ತನಕ ವಿಸ್ತರಿಸಿಕೊಳ್ಳಬಹುದು.
ಇದನ್ನು ಓದಿ: ಎಥರ್ ಮತ್ತು ಓಲಾ ಇವಿ ಸ್ಕೂಟರ್ ಗಳ ಪ್ರತಿಸ್ಪರ್ಧಿ ಹೀರೋ ವಿಡಾ ವಿ1 ಪ್ಲಸ್ ಮತ್ತು ವಿ1 ಪ್ರೊ ವಿಶೇಷತೆಗಳಿವು!
ಇನ್ನು ಹೊಸ ಕಾರಿನ ಸ್ಟ್ರಾಂಗ್ ಹೈಬ್ರಿಡ್ ಮಾದರಿಯ ಬ್ಯಾಟರಿಯ ಮೇಲೆ 8 ವರ್ಷ ಅಥವಾ 1.60 ಕಿ.ಮೀ ತನಕ ವಾರಂಟಿ ನೀಡಲಿದ್ದು, ಹೊಸ ಕಾರು ಮಾರುಕಟ್ಟೆಯಲ್ಲಿ ಮಧ್ಯಮ ಕ್ರಮಾಂಕದ ಪ್ರಮುಖ ಎಸ್ ಯುವಿ ಮಾದರಿಗಳಾದ ಹ್ಯುಂಡೈ ಕ್ರೆಟಾ, ಎಂಜಿ ಹೆಕ್ಟರ್, ಸ್ಕೋಡಾ ಕುಶಾಕ್ ಮತ್ತು ಟಾಟಾ ಹ್ಯಾರಿಯರ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ.
Published On - 3:40 pm, Thu, 13 October 22