ಮಹೀಂದ್ರಾ ಒಡೆತನದ ಭಾರತದ ಹೆಸರಾಂತ ಯೆಜ್ಡಿ (Yezdi) ಬ್ರ್ಯಾಂಡ್ಗೆ ಮರುಜೀವ ನೀಡಿದ್ದು, ಮೂರು ಹೊಸ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆ ಮಾಡಿದೆ. ಹೊಸ ಯೆಜ್ಡಿ ರೋಡ್‌ಸ್ಟರ್, ಸ್ಕ್ರ್ಯಾಂಬ್ಲರ್ ಮತ್ತು ಅಡ್ವೆಂಚರ್ ಮೋಟಾರ್‌ಸೈಕಲ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಹೊಸ ಯೆಜ್ಡಿ ರೋಡ್‌ಸ್ಟರ್‌ನ ಬೆಲೆಗಳು ರೂ. 1.98 ಲಕ್ಷದಿಂದ ಪ್ರಾರಂಭವಾಗುತ್ತವೆ, ಸ್ಕ್ರ್ಯಾಂಬ್ಲರ್ ಬೆಲೆ ರೂ. 2.04 ಲಕ್ಷದಿಂದ, ಅಡ್ವೆಂಚರ್ ಬೈಕ್ ರೂ. 2.09 ಲಕ್ಷದಿಂದ ಶುರು ಆಗಲಿವೆ. ಈ ಎಲ್ಲವೂ ಎಕ್ಸ್ ಶೋ ರೂಂ ಬೆಲೆಗಳಾಗಿವೆ. ಇವುಗಳ ಬುಕಿಂಗ್ ಈಗ ತೆರೆದಿದೆ.
ಹೊಸ ಯೆಜ್ಡಿ ಮೋಟಾರ್‌ಸೈಕಲ್‌ಗಳ ಮಾಡೆಲ್ ಪ್ರಕಾರ ಬೆಲೆಗಳು ಇಂತಿವೆ:
Yezdi ಮೋಟಾರ್ ಸೈಕಲ್ ಬೆಲೆ (ಎಕ್ಸ್ ಶೋ ರೂಂ)
ಯೆಜ್ಡಿ ರೋಡ್‌ಸ್ಟರ್ ರೂ. 1.98 ಲಕ್ಷ- ರೂ. 2.06 ಲಕ್ಷ
ಯೆಜ್ಡಿ ಸ್ಕ್ರ್ಯಾಂಬ್ಲರ್ ರೂ. 2.04 ಲಕ್ಷ- ರೂ. 2.10 ಲಕ್ಷ
ಯೆಜ್ಡಿ ಅಡ್ವೆಂಚರ್ ರೂ. 2.09 ಲಕ್ಷ- ರೂ. 2.18 ಲಕ್ಷ
ಈಗ, ಈ ಮೋಟಾರ್‌ಸೈಕಲ್‌ಗಳ ಎಂಜಿನ್ ವಿಶೇಷತೆಗಳ ಕುರಿತು ಹೇಳಬೇಕೆಂದರೆ, ಈ ಎಲ್ಲ ಯೆಜ್ಡಿಗಳು 334ಸಿಸಿ, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್, ಫ್ಯೂಯಲ್-ಇಂಜೆಕ್ಟೆಡ್ DOHC ಎಂಜಿನ್ ಹೊಂದಿವೆ. ಆದರೆ ಇವೆಲ್ಲ ಸಾಮ್ಯತೆಗಳು ಕೊನೆಗೊಂಡು, ಉಳಿದಂತೆ ತಮ್ಮ ಪಾತ್ರಕ್ಕೆ ತಕ್ಕಂತೆ ವಿಭಿನ್ನವಾಗಿ ಟ್ಯೂನ್ ಮಾಡಿವೆ. Yezdi ರೋಡ್‌ಸ್ಟರ್ 7,300 RPMನಲ್ಲಿ 29.2 hp ಶಕ್ತಿಯನ್ನು ಮತ್ತು 6,500 RPMನಲ್ಲಿ 29 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸ್ಕ್ರ್ಯಾಂಬ್ಲರ್ 8,000 RPM ನಲ್ಲಿ 28.7 hp ಶಕ್ತಿಯನ್ನು ಮತ್ತು 6,750 RPM ನಲ್ಲಿ 28.2 Nm ಟಾರ್ಕ್ ಅನ್ನು ಹೊರಹಾಕುತ್ತದೆ.
ಅಂತಿಮವಾಗಿ, ಅಡ್ವೆಂಚರ್ ಮೋಟಾರ್‌ಸೈಕಲ್ ಮೂರರಲ್ಲೇ ಅತ್ಯಂತ ಶಕ್ತಿಶಾಲಿಯಾಗಿದೆ. ಇದು 8,000 RPM ನಲ್ಲಿ 29.7 hp ಗರಿಷ್ಠ ಶಕ್ತಿಯನ್ನು ಮತ್ತು 6,500 RPM ನಲ್ಲಿ 29.9 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಲ್ಲ ಮೋಟಾರ್‌ಸೈಕಲ್‌ಗಳು 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ಗೆ ಹೊಂದಿಕೆಯಾಗುತ್ತವೆ. ಹಾರ್ಡ್‌ವೇರ್‌ಗೆ ಸಂಬಂಧಿಸಿದಂತೆ, ಈ ಎಲ್ಲ ಬೈಕ್ಗಳು ಒಂದೇ ಡಬಲ್-ಕ್ರೇಡಲ್ ಫ್ರೇಮ್ ಅನ್ನು ಆಧರಿಸಿವೆ ಮತ್ತು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಪಡೆಯುತ್ತವೆ. ಆದರೆ ರೋಡ್‌ಸ್ಟರ್ ಮತ್ತು ಸ್ಕ್ರ್ಯಾಂಬ್ಲರ್ ಹಿಂಭಾಗದಲ್ಲಿ ಅವಳಿ ಶಾಕ್-ಅಬ್ಸಾರ್ಬರ್‌ಗಳನ್ನು ಪಡೆದರೆ, ಅಡ್ವೆಂಚರ್ ಮೊನೊ-ಶಾಕ್ ಯೂನಿಟ್ ಪಡೆಯುತ್ತದೆ.
ಇದನ್ನೂ ಓದಿ: Two Wheeler Loan: ದ್ವಿಚಕ್ರ ವಾಹನ ಸಾಲಕ್ಕೆ ಯಾವ ಬ್ಯಾಂಕ್ನಲ್ಲಿ ಕಡಿಮೆ ಬಡ್ಡಿ ದರ? ಇಲ್ಲಿದೆ ಇಎಂಐ ಮತ್ತಿತರ ವಿವರ