International Yoga Day 2022: ಪಿಸಿಓಎಸ್ ಸಮಸ್ಯೆ ಇದ್ದವರು ಈ ಆಸನಗಳನ್ನು ತಪ್ಪದೇ ಮಾಡಿ

ಮಹಿಳೆಯರಲ್ಲಿ ಹಾರ್ಮೋನುಗಳ ಅಸಮತೋಲನದಿಂದಾಗಿ ಸಾಮಾನ್ಯವಾಗಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS) ಸಮಸ್ಯೆ ಕಾಣಿಸಿಕೊಳ್ಳುತ್ತದೆ. 15 ರಿಂದ 44 ವರ್ಷ ವಯಸ್ಸಿನ ಮಹಿಳೆಯರಲ್ಲಿ ಪಿಸಿಓಎಸ್ ಅತ್ಯಂತ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕ ಮಹಿಳೆಯರಿಗೆ ಪಿಸಿಓಎಸ್ ಸಮಸ್ಯೆ ಇದೆ.

International Yoga Day 2022: ಪಿಸಿಓಎಸ್ ಸಮಸ್ಯೆ ಇದ್ದವರು ಈ ಆಸನಗಳನ್ನು ತಪ್ಪದೇ ಮಾಡಿ
Bhujangasana
Follow us
| Updated By: ನಯನಾ ರಾಜೀವ್

Updated on:Jun 20, 2022 | 5:33 PM

ಮಹಿಳೆಯರಲ್ಲಿ ಹಾರ್ಮೋನುಗಳ ಅಸಮತೋಲನದಿಂದಾಗಿ ಸಾಮಾನ್ಯವಾಗಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS) ಸಮಸ್ಯೆ ಕಾಣಿಸಿಕೊಳ್ಳುತ್ತದೆ. 15 ರಿಂದ 44 ವರ್ಷ ವಯಸ್ಸಿನ ಮಹಿಳೆಯರಲ್ಲಿ ಪಿಸಿಓಎಸ್ ಅತ್ಯಂತ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕ ಮಹಿಳೆಯರಿಗೆ ಪಿಸಿಓಎಸ್ ಸಮಸ್ಯೆ ಇದೆ. ಆದರೆ ಈ ಬಗ್ಗೆ ಮಾಹಿತಿಯ ಕೊರತೆ ಇದೆ. ಹೀಗಾಗಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ತ್ರೀರೋಗತಜ್ಞೆ ಡಾ. ನೂಪುರ್ ಅನೇಕ ಸಲಹೆಗಳನ್ನು ನೀಡಿದ್ದಾರೆ.

ಪ್ರತಿ 5 ಮಹಿಳೆಯರಲ್ಲಿ ಒಬ್ಬರು ಪಿಸಿಓಎಸ್​ನಿಂದ ಬಳಲುತ್ತಿದ್ದಾರೆ. ಇದನ್ನು ಪಿಸಿಓಡಿ ಎಂದೂ ಕರೆಯುತ್ತಾರೆ. ಈ ಕಾಯಿಲೆಯಿಂದಾಗಿ, ಮಹಿಳೆಯರಲ್ಲಿ ಅನೇಕ ರೋಗಗಳು ಕಂಡುಬರುತ್ತದೆ. ಈ ಕಾರಣದಿಂದಾಗಿ ಮಹಿಳೆಯರ ಮುಖದ ಮೇಲೆ ಕೂದಲು ಬೆಳೆಯುವುದು ಮತ್ತು ದೇಹದ ಭಾಗಗಳು ಅಥವಾ ತಲೆಯ ಮೇಲೆ ಕೂದಲು ಉದುರುವುದು, ಮಧುಮೇಹ ಮತ್ತು ಹೃದ್ರೋಗಗಳು ಕಂಡುಬರುತ್ತದೆ.

ಪಿಸಿಒಎಸ್ ಸಮಸ್ಯೆ ಇದ್ದವರು ಮಾಡಬೇಕಾದ ಆಸನಗಳು ಮಲಾಸನ ಮಲಾಸನದಲ್ಲಿ ಮೊದಲು ಕೈ ಜೋಡಿಸಿ ನಿಂತುಕೊಳ್ಳಬೇಕು, ಬಳಿಕ ಕಾಲುಗಳನ್ನು ಅಗಲವಾಗಿ ಹರಡಿ ಮತ್ತು ಪಾದದ ಮೇಲೆ ಭಾರವನ್ನು ಇರಿಸಿ ಕುಳಿತುಕೊಳ್ಳಬೇಕು. ಈ ಆಸನದಲ್ಲಿ ಪಾದವನ್ನು ಯಾವುದೇ ರೀತಿಯಲ್ಲಿ ಚಲಿಸಬಾರದು. ಮೊಣಕಾಲುಗಳು ಸಾಧ್ಯವಾದಷ್ಟು ಅಗಲ ಮಾಡಬೇಕುಯ. ಈ ಆಸನ ಮಾಡಲು ಕಷ್ಟವಾದರೆ ಇದ್ದರೆ ಗೋಡೆಯ ಸಪೋರ್ಟ್ ತೆಗೆದುಕೊಳ್ಳಬಹುದು. ಈ ಯೋಗಾಸನದ ಮೂಲಕ ಸೊಂಟದ ಸ್ನಾಯುಗಳು ಬಲವಾಗುತ್ತದೆ. ಈ ಆಸನವು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ತುಂಬಾ ಉಪಯುಕ್ತವಾಗಿದೆ. ಮಲಾಸನ ಯೋಗವು ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಶ್ರೋಣಿಯ ಸ್ನಾಯುಗಳನ್ನು ಬಲಪಡಿಸುತ್ತದೆ. ಸಾಮಾನ್ಯ ಹೆರಿಗೆಗಾಗಿ ಮಹಿಳೆಯರು ಈ ಯೋಗಾಸನವನ್ನು ಆರಿಸಿಕೊಳ್ಳಬಹುದು. ಇದು PCOS ನಿರ್ವಹಣೆಯಲ್ಲಿ ಸಹ ಸಹಾಯ ಮಾಡುತ್ತದೆ.

ಭುಜಂಗಾಸನ: ಭುಜಂಗ ಎಂದರೆ ಸರ್ಪ ಎಂದರ್ಥ. ಈ ಆಸನದಲ್ಲಿ ಹೆಡೆ ಎತ್ತಿದ ಸರ್ಪದ ಆಕಾರವನ್ನು ಶರೀರವು ಹೋಲುವುದರಿಂದ, ಇದಕ್ಕೆ ‘ಭುಜಂಗಾಸನ’ ಎಂಬ ಹೆಸರು ಅನ್ವರ್ಥವಾಗಿದೆ.

ಮಾಡುವ ಕ್ರಮ: -ಎರಡೂ ಪಾದಗಳನ್ನು ಒಟ್ಟಿಗೆ ಜೋಡಿಸಿ, ಎದೆ ಎತ್ತಿ, ನಮಸ್ಕಾರ ಮಾಡುತ್ತಾ ನಿಲ್ಲಬೇಕು.

-ಕಾಲುಗಳನ್ನು ಸ್ವಲ್ಪವೂ ಬದಲಿಸದೆ ಉಸಿರನ್ನು ಒಳಕ್ಕೆ ತೆಗೆದುಕೊಳ‍್ಳುತ್ತಾ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ನೇರವಾಗಿಡಬೇಕು.

-ಉಸಿರನ್ನು ಹೊರಕ್ಕೆ ಬಿಡುತ್ತಾ ಕಾಲುಗಳನ್ನು ಬಗ್ಗಿಸದೇ ಮುಂದಕ್ಕೆ ಬಗ್ಗಿ ಕೈಗಳನ್ನು ನೆಲದ ಮೇಲೆ ಇಡಬೇಕು.

-ಅನಂತರ ಯಾವುದಾದರೂ ಒಂದು ಕಾಲನ್ನು ಉದಾ: ಬಲಗಾಲನ್ನು ಹಿಂದೆ ಚಾಚಿ, ಇನ್ನೊಂದು ಕಾಲನ್ನು ಎರಡು ಕೈಗಳ ಮಧ್ಯೆ ಇಟ್ಟು, ಆದಷ್ಟೂ ಸೊಂಟವನ್ನು ಕೆಳಕ್ಕೆ ಒತ್ತಿ, ಬೆನ್ನನ್ನು ಹಿಂದಕ್ಕೆ ಬಗ್ಗಿಸಿ, ತಲೆ ಎತ್ತಿ ಆಕಾಶವನ್ನು ನೋಡಬೇಕು.

-ಅನಂತರ ಎಡಗಾಲನ್ನು ಬಲಗಾಲಿಗೆ ಸೇರಿಸಿ ಇದೇ ದೇಹವನ್ನು ನೇರವಾಗಿ ಇಡಬೇಕು.

-ಕೈ ಮತ್ತು ಕಾಲುಗಳ ಸ್ಥಿತಿಯನ್ನು ಸ್ವಲ್ಪವೂ ಬದಲಿಸದೆ ಸೂರ್ಯನಮಸ್ಕಾರ ಸ್ಥಿತಿ 6ರಲ್ಲಿ ವಿವರಿಸಿದಂತೆ ಅಷ್ಟಾಂಗಗಳನ್ನು ಮಾತ್ರ ನೆಲಕ್ಕೆ ತಗಲಿಸಿ ‘ಸಾಷ್ಟಾಂಗ ಪ್ರಣಿಪಾತಾಸನ ಮಾಡಿಬೇಕು. ಆ ಮೇಲೆ ಸಾಷಾಂಗ ಪ್ರಜಪಾತಾಸನದಿಂದ ಶರೀರವನ್ನು ಸ್ವಲ್ಪ ಮುಂದಕ್ಕೆ ತಂದು ಚಿತ್ರದಲ್ಲಿ ತೋರಿಸಿರುವಂತೆ ಇಡೀ ಶರೀರದ ಭಾರವನ್ನು ಅಂಗೈಗಳು ಮತ್ತು ಕಾಲ ಬೆರಳುಗಳ ಮೇಲೆ ಹೊರಿಸಿ ಬೆನ್ನನ್ನು ಸಾಧ್ಯವಾದಷ್ಟೂ ಹಿಂದಕ್ಕೆ ಬಗ್ಗಿಸಬೇಕು. ಇದೇ ಸ್ಥಿತಿಯಲ್ಲಿ ಒಂದೆರಡು ನಿಮಿಷಗಳಾದರೂ ಇರುವಂತೆ ಅಭ್ಯಾಸ ಮಾಡಬೇಕು.

ಲಾಭಗಳು: ಭುಜಂಗಾಸನದಿಂದ ಕೈಗಳು ಮತ್ತು ಸೊಂಟ ಬಲಶಾಲಿಯಾಗುವವು. ಮೇರುದಂಡವೂ ಹೆಚ್ಚು ಸುದೃಢವಾಗುವುದು. ಸೊಂಟ ಮತ್ತು ತೊಡೆಗಳಲ್ಲಿನ ದುರ್ಬಲತೆ ಹಾಗೂ ನೋವು ದೂರವಾಗುವುದು. ಶಾಸಕೋಶದಲ್ಲಿನ ತೊಂದರೆ ನಿವಾರಣೆಯಾಗುವುದು. ಉದರದ ಅನೇಕ ದೋಷಗಳೂ ಇಲ್ಲವಾಗುವವು.

ಸೇತುಬಂಧಾಸನ: ನಿಮ್ಮ ರಕ್ತದೊತ್ತಡ ಸಹಜ ಸ್ಥಿತಿಯಲ್ಲಿ ಇಲ್ಲದಿದ್ದರೆ, ಅಂದರೆ ಕೆಲವರಿಗೆ ಹೆಚ್ಚಿರಬಹುದು ಅಥವಾ ಕೆಲವರಿಗೆ ಕಡಿಮೆ ಇರಬಹುದು. ಹೀಗೆ ಇದ್ದಾಗ, ಲಕ್ವ, ಹೃದ್ರೋಗ ಸಮಸ್ಯೆ ಅಥವಾ ಮೂತ್ರಪಿಂಡದ ಸಮಸ್ಯೆಗಗಳನ್ನು ಎದುರಿಸುವ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ರಕ್ತದೊತ್ತಡ ಹೆಚ್ಚಿದ್ದರೂ, ಕಡಿಮೆ ಇದ್ದರೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಸರಿಯಾದ ಸಮಯಕ್ಕೆ ಕಾಳಜಿ ವಹಿಸದಿದ್ದರೆ ಅನಾಹುತವೂ ಆಗಬಹುದು. ಹಾಗಾಗಿ, ಇಂತಹ ರಕ್ತದೊತ್ತಡದಿಂದಾಗುವ ಗಂಭೀರವಾದ ಸಮಸ್ಯೆಗಳನ್ನು ತಡೆಗಟ್ಟಲು, ಸೇತುಬಂಧಾಸನವನ್ನು ಅಭ್ಯಾಸ ಮಾಡುವುದು ಸಹಾಯಕಾರಿಯಾಗುತ್ತ

ಪಿಸಿಓಎಸ್ ಎಂದರೇನು ಮತ್ತು ಅದು ಹೇಗೆ ಸಂಭವಿಸುತ್ತದೆ? ಹಾರ್ಮೋನುಗಳ ಅಸಮತೋಲನದಿಂದಾಗಿ ಪಿಸಿಓಎಸ್ ಉಂಟಾಗುತ್ತದೆ. ಇದು ಜೀವನಶೈಲಿಯಲ್ಲಿನ ಬದಲಾವಣೆಯಿಂದಾಗಿ ಪ್ರಾರಂಭವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಇದನ್ನು ಮೆಟಾಬಾಲಿಕ್ ಸಿಂಡ್ರೋಮ್ ಎಂದೂ ಕರೆಯುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:33 pm, Mon, 20 June 22

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್