ನಮ್ ದೇಶ ವಿಶ್ವಕ್ಕೆ ಯೋಗವನ್ನು ಪರಿಚಯ ಮಾಡ್ಕೊಟ್ಟ ದೇಶ. ಯೋಗ (Yoga) ಮನುಷ್ಯನ ಆರೋಗ್ಯವನ್ನು ಕಾಪಾಡೋ ದೃಷ್ಟಿಯಿಂದ ತುಂಬಾ ಮಹತ್ವ ಪಡ್ದಿದೆ. ಯೋಗ ಯಾರಿಗೆ ಗೊತ್ತಿದೆಯೋ, ಯಾರು ಯೋಗವನ್ನು ಡೈಲೀ ಲೈಫ್‌ನಲ್ಲಿ ರೂಢಿ ಮಾಡ್ಕೊಂಡಿದಾರೋ ಅವರ ಲೈಫ್ ಹೆಲ್ದೀ ಆಗಿರುತ್ತೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ಇನ್ನು ಈ ದೇಶದ ಆಡಳಿತವನ್ನು ಪ್ರಧಾನಿ ಮೋದಿ ಅವರು ವಹಿಸ್ಕೊಂಡ ಮೇಲೆ ಯೋಗ ಎಂಬುದು ಇಡೀ ವಿಶ್ವಕ್ಕೆ ಆಪ್ತವಾಗಿದೆ. ಜೂನ್ ತಿಂಗಳ 21 ರಂದು ಯೋಗ ಡೇ ಕೂಡಾ ಆಚರಣೆ ಮಾಡಲಾಗ್ತಿದೆ. ಜೂನ್ 21 ನ್ನು ಅಂತರಾಷ್ಟ್ರೀಯ ಯೋಗ ದಿನ ಅಂತ 2015 ರಲ್ಲಿ ಘೋಷಣೆ ಸಹ ಮಾಡಲಾಗಿದೆ. ಇದು ಕೇವಲ ಇಂಡಿಯಾಗೆ ಸಂಬಂಧಪಟ್ಟ ವಿಷಯ ಆಗಿ ಉಳ್ದಿಲ್ಲ. ಬದ್ಲಾಗಿ ಇವತ್ತು ಇಡೀ ವಿಶ್ವವೇ ಇಂಟರ್ ನ್ಯಾಶನಲ್ ಡೇ ಆಫ್ ಯೋಗ ಆಚರಣೆ ಮಾಡ್ತಾ ಇದೆ. ಇವತ್ತು ನಮ್ಮ ಭಾರತದ ಯೋಗವು ಇಡೀ ವಿಶ್ವಕ್ಕೆ ವ್ಯಾಪಿಸಿದೆ (International Yoga Day 2022).
ಯೋಗ ಡೇ ವಿಶೇಷ : ಸೋಷಿಯಲ್ ಮೀಡಿಯಾ ಮೂಲಕವೂ ಜೋಶಿ ಕೊಡ್ತಿದ್ದಾರೆ “ಯೋಗ ಸಂದೇಶ”
ಯೋಗ ಡೇ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವ್ರು (Pralhad Joshi -Union Minister of Parliamentary Affairs, Coal and Mines of India) ಈಗಾಗ್ಲೇ ತುಂಬಾ ಕಾರ್ಯಪ್ರವೃತ್ತರಾಗಿದ್ದಾರೆ. ದಿನಕ್ಕೊಂದು ಯೋಗಾಸನದ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳ ಮೂಲಕ (Social Media) ಜನರಿಗೆ ಜಾಗೃತಿ ಮೂಡಿಸುವಂಥಾ ಮಾಹಿತಿ ಹಂಚಿಕೊಳ್ತಾ ಇದ್ದಾರೆ. ಆ ಮೂಲಕ ಜನ್ರಿಗೆ ಯೋಗದ ಮಹತ್ವ, ಅದು ಹೇಗೆ ಆರೋಗ್ಯ ಕಾಪಾಡ್ಕೊಳ್ಳೋದಿಕ್ಕೆ ಹೆಲ್ಪ್ ಮಾಡುತ್ತೆ ಅನ್ನೋ ಬಗ್ಗೆ ಮಾಹಿತಿ ನೀಡೋ ಕೆಲ್ಸ ಮಾಡ್ತಿದಾರೆ.
ತಮ್ಮ ಟ್ವೀಟರ್ ಖಾತೆ, ಫೇಸ್ಬುಕ್ ಖಾತೆಗಳ ಮೂಲಕ ನಿತ್ಯ ಯೋಗದ ಒಂದೊಂದು ಆಸನದ ಬಗ್ಗೆ ಸವಿವರವಾಗಿ ಫೋಟೋಸ್ ಅಪ್ಲೋಡ್ ಮಾಡೋ ಮೂಲಕ ಯೋಗದ ಇಂಪಾರ್ಟೆನ್ಸ್ ಅನ್ನು ಸಮಾಜಕ್ಕೆ ತಿಳಿಸ್ತಾ ಇದ್ದಾರೆ ಸಚಿವ ಪ್ರಲ್ಹಾದ್ ಜೋಶಿ. ಯೋಗಕ್ಕೆ ಸಂಬಂಧಿಸಿದಂತೆ ಇರೋ ಆಸನಗಳು, ಅವುಗಳಿಂದ ನಮ್ ದೇಹಕ್ಕೆ ಏನು ಉಪಯೋಗ ಆಗುತ್ತೆ, ಯಾವ ಆಸನ ಮಾಡೋದ್ರಿಂದ ಆಗೋ ಲಾಭ ಏನು? ಅನ್ನೋದ್ರ ಬಗ್ಗೆ ಎಲ್ಲಾ ಜನರನ್ನು ಎಜುಕೇಟ್ ಮಾಡೋ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಗಳಲ್ಲೂ ಯೋಗಾಸನಗಳ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಾಹಿತಿ ಹಂಚಿಕೊಳ್ಳೋ ಮೂಲಕ ಜಾಗೃತಿ ಮೂಡಿಸ್ತಾ ಇದ್ದಾರೆ.
ಸಚಿವ ಪ್ರಲ್ಹಾದ್ ಜೋಶಿ ಸೋಷಿಯಲ್ ಮೀಡಿಯಾ ಖಾತೆಗಳು:
Adho Mukha Svanasana is beneficial for building better balance & flexibility throughout the entire body. It promotes strengthening, stretching, improves blood circulation and much more.#YogaInIndia #IDY2022 #YogaForHumanity pic.twitter.com/em3XG03uhO
— Pralhad Joshi (@JoshiPralhad) June 16, 2022
Gomukhasana or Cow Face Pose helps you stretch the back, hips, arms, as well as thighs. Apart from this, it also promotes muscle relaxation. Thus, add this asana to your routine and experience the change. #YogaInIndia #IDY2022 #YogaForHumanity pic.twitter.com/Gh9kESjiv9
— Pralhad Joshi (@JoshiPralhad) June 15, 2022
ಏನೇ ಇರಲಿ, ಇವತ್ತು ಭಾರತದ ಯೋಗ ಜಗದ್ವಿಖ್ಯಾತ ಆಗಿದೆ. ನಮ್ ದೇಶದ ಶಾಲೆಗಳಲ್ಲಿಯೂ ಯೋಗ ತರಗತಿಗಳು ಆರಂಭ ಆಗಿವೆ. ಪುಟ್ಟ ಮಕ್ಕಳಿಗೂ ಯೋಗದ ಪರಿಚಯ ಆಗ್ತಾ ಇದೆ. ಜೊತೆಗೆ ಭಾರತದ ಯೋಗವನ್ನು ಜಗತ್ತು ಕೂಡಾ ಅನುಸರಿಸ್ತಾ ಇರೋದು ನಮ್ ದೇಶದ ಹಿರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದೆ ಅಂತಾನೇ ಹೇಳ್ಬಹುದು. ಇದೀಗ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕೂಡಾ ಯೋಗವನ್ನು ಮತ್ತಷ್ಟು ಪರಿಚಯ ಮಾಡ್ತಾ ಇರೋದು ಅವರ ಸಾಮಾಜಿಕ ಕಳಕಳಿಗೆ ಹಿಡಿದ ಕೈಗನ್ನಡಿ ಅನ್ನೋದರಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ:
Published On - 8:52 pm, Thu, 16 June 22