ಮೈಸೂರು: ಪ್ರಧಾನಿ ನರೇಂದ್ರ ಮೋದಿ(Narendra Modi) ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದು ಜೂನ್ 20 ರಂದು ಬೆಂಗಳೂರಿನಲ್ಲಿ ಅನೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಜೂನ್ 21ರಂದು ಮೈಸೂರು ಅರಮನೆ ಆವರಣದಲ್ಲಿ ಅಂತರಾಷ್ಟ್ರೀಯ ಯೋಗ ದಿನದಲ್ಲಿ(International Yoga Day 2022,)ಭಾಗಿಯಾಗಿ ದೆಹಲಿಗೆ ತೆರಳಿದ್ದಾರೆ. ಸದ್ಯ ಬೆಳ್ಳಂ ಬೆಳಗ್ಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಯೋಗ ದಿನದ ಕಾರ್ಯಕ್ರಮದಲ್ಲಿ ಮೋದಿಯವರೊಂದಿಗೆ ಮಂಗಳಮುಖಿಯರು(Transgender) ಕೂಡ ಯೋಗ ಮಾಡಿದ್ದು ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೂ ವಿಶೇಷ ಮನವಿವೊಂದನ್ನು ಮಾಡಿದ್ದಾರೆ.
ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿದ್ದ ಮಂಗಳ ಮುಖಿಯರು ಪ್ರಧಾನಿ ನರೇಂದ್ರ ಮೋದಿ ಜೊತೆ ಯೋಗ ಮಾಡಿ ಖುಷಿ ಪಟ್ಟಿದ್ದಾರೆ. ಅವಕಾಶ ನೀಡಿದಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಆಯುಷ್ ಹಾಗೂ ಶಾಸಕ ಎಸ್ಎ ರಾಮದಾಸ್‌ಗೆ ಮಂಗಳಮುಖಿಯರು ಧನ್ಯವಾದ ತಿಳಿಸಿದ್ದಾರೆ. ನಮ್ಮನ್ನು ಸಮಾಜ ಕಡೆಗಣಿಸುವ ವೇಳೆ ಪ್ರಧಾನಿ ಜೊತೆ ಯೋಗಕ್ಕೆ ಅವಕಾಶ ನೀಡಿದ್ದಾರೆ. ನಮಗೆ ಸಾಕಷ್ಟು ಖುಷಿ ಕೊಟ್ಟಿದೆ. ಸಮಾಜ ನಮ್ಮನ್ನು ಸಮಾನವಾಗಿ ಕಾಣಬೇಕು ಎಂದು ಮಂಗಳಮುಖಿಯರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಿಲ್ ನೀಡದೆ ಗದಗ ಜಿಲ್ಲಾ ಪಂಚಾಯತಿ ಕಿರಿಕ್! ಸಿಇಓ ಕಚೇರಿ ಮುಂದೆ ವಿಷದ ಬಾಟಲಿ ಹಿಡಿದು ಆಕ್ರೋಶ ವ್ಯಕ್ತಪಡಿಸಿದ ಗುತ್ತಿಗೆದಾರರು
PM Modi Speech: ಯೋಗ ಶಾಂತಿ ತಂದುಕೊಡುತ್ತದೆ; ಶಾಂತಿ ವ್ಯಕ್ತಿಗೆ ಸೀಮಿತವಾಗಿಲ್ಲ, ಇಡೀ ಜಗತ್ತಿಗೆ ಅನ್ವಯ ಆಗುತ್ತೆ
ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ(Mysuru) ಇಂದು 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ(International Yoga Day 2022) ಅದ್ಧೂರಿಯಾಗಿ ನೆರವೇರಿದೆ. ಮೈಸೂರು ಅರಮನೆ ಮುಂಭಾಗದಲ್ಲಿ ಪ್ರಧಾನಿ ನರೇಂದ್ರ(PM Narendra Modi) ಮೋದಿ ನೇತೃತ್ವದಲ್ಲಿ ಯೋಗಾಭ್ಯಾಸ ಕಾರ್ಯಕ್ರಮ ನಡೆಯಿತು. ಸಾವಿರಾರು ಯೋಗಪಟುಗಳು, ರಾಜ್ಯಪಾಲ, ಸಿಎಂ ಬೊಮ್ಮಾಯಿ, ರಾಜವಂಶಸ್ಥರಾದ ಪ್ರಮೋದಾದೇವಿ, ಯದುವೀರ್ ಒಡೆಯರ್, ಕೇಂದ್ರ ಆಯುಷ್ ಇಲಾಖೆ ಸಚಿವ ಸರ್ಬಾನಂದ ಸೋನೋವಾಲ್, ಸಚಿವರಾದ ಡಾ.ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರ ಜೊತೆ ಮೋದಿ ಯೋಗ ಮಾಡಿದ್ರು. ಈ ವೇಳೆ ಭಾಷಣ ಮಾಡಿದ ಪ್ರಧಾನಿ ಮೋದಿ ಯೋಗ ಮಾತ್ರ ನಿರೋಗದಿಂದ ಬದುಕುವಂತೆ ಮಾಡುತ್ತೆ ಎಂದರು.
ಯೋಗ ದಿನದ ಶುಭಾಶಯಗಳನ್ನ ತಿಳಿಸಿದ ಪ್ರಧಾನಿ ಮೋದಿ, ಮೈಸೂರು ಭಾರತದ ಸಂಸ್ಕೃತಿಯ ಕೇಂದ್ರ. ವಿಶ್ವ ಸ್ವಾಸ್ಥ್ಯಕ್ಕೆ ಮೈಸೂರು ಯೋಗದ ಮೂಲಕ ಕೊಡುಗೆ ನೀಡಿದೆ. ವಿಶ್ವದ ಮೂಲೆ ಮೂಲೆಯಲ್ಲೂ ಯೋಗ ಮಾಡುವಂತಾಗಿದೆ. ಮಾನವತೆಗಾಗಿ ಯೋಗ ಧ್ಯೇಯ ನೀಡಿದ ವಿಶ್ವಸಂಸ್ಥೆಗೆ ಧನ್ಯವಾದ. ನಮ್ಮ ಋಷಿ, ಮಹರ್ಷಿಗಳು, ಆಚಾರ್ಯರು ಯೋಗ ಶಾಂತಿ ತಂದುಕೊಡುತ್ತದೆ ಎಂದು ಹೇಳಿದ್ದಾರೆ. ಶಾಂತಿ ವ್ಯಕ್ತಿಗೆ ಸೀಮಿತವಾಗಿಲ್ಲ, ಇಡೀ ಜಗತ್ತಿಗೆ ಅನ್ವಯ ಆಗುತ್ತೆ. ಜಾಗತಿಕ ತಾಪಮಾನ, ಅಂತಾರಾಷ್ಟ್ರೀಯ ಸಮಸ್ಯೆಗಳಿಂದ ಜಗತ್ತಿಗೆ ಆತಂಕ ಶುರುವಾಗಿದೆ. ಸಮಸ್ಯೆ ನಿವಾರಕನಾಗಿ ಯೋಗ ಕೆಲಸ ಮಾಡಲಿದೆ. ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ 75 ಪಾರಂಪರಿಕ ತಾಣಗಳಲ್ಲಿ ಯೋಗ ಆಚರಣೆ ಮಾಡಲಾಗುತ್ತಿದೆ. ಮೈಸೂರು ಅರಮನೆಗೆ ಐತಿಹಾಸಿಕ ಹಿನ್ನೆಲೆ ಇದೆ ಎಂದು ಹೊಗಳಿದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:18 pm, Tue, 21 June 22