ರಾಮನಗರದಲ್ಲಿ 108 ಆಂಬ್ಯುಲೆನ್ಸ್ ಸಿಬ್ಬಂದಿ ದುರಂಕಾರ; ಅಪಘಾತ ಸ್ಥಳದಲ್ಲೇ ಗಾಯಾಳು ಬಿಟ್ಟು ವಾಪಾಸ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 07, 2022 | 11:44 AM

108 ಆಂಬ್ಯುಲೆನ್ಸ್ ನಲ್ಲಿ ಗಾಯಾಳು ಒಬ್ಬನನ್ನೇ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಿಲ್ಲ ಎಂದು ಅಪಘಾತವಾದ ಸ್ಥಳದಲ್ಲೇ ಗಾಯಾಳುವನ್ನು ಬಿಟ್ಟು ವಾಪಾಸ್ ಹೋದ 108 ಆಂಬ್ಯುಲೆನ್ಸ್ ಸಿಬ್ಬಂದಿ.

ರಾಮನಗರದಲ್ಲಿ 108 ಆಂಬ್ಯುಲೆನ್ಸ್ ಸಿಬ್ಬಂದಿ ದುರಂಕಾರ; ಅಪಘಾತ ಸ್ಥಳದಲ್ಲೇ ಗಾಯಾಳು ಬಿಟ್ಟು ವಾಪಾಸ್
ರಾಮನಗರ
Follow us on

ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಬಳಿ ಬೈಕ್​ನಲ್ಲಿ ಬರುವಾಗ ಆಯಾತಪ್ಪಿ ಬಿದ್ದು ಗಾಯಾಗೊಂಡಿದ್ದ ಬೈಕ್ ಸವಾರನನ್ನು 108 ಸಿಬ್ಬಂದಿಗಳು ಗಾಯಾಳು ಜೊತೆ ಯಾರು ಬರದೇ ಇದ್ದರಿಂದ ಸ್ಥಳದಲ್ಲಿಯೇ ಬಿಟ್ಟು ಹೋಗಿರುವ ದಾರುಣ ಘಟನೆ ನಡೆದಿದೆ.

ತಿಟ್ಟಮಾರನಹಳ್ಳಿ ಗ್ರಾಮದ ಬಳಿ ಬೈಕ್​ನಿಂದ ಬಿದ್ದಿದ್ದ ಸವಾರನನ್ನು ನೋಡಿ ಊರಿನವರು ತಕ್ಷಣ 108 ಗೆ ಕರೆ ಮಾಡಿದ್ದಾರೆ. ನಂತರ ಸ್ಥಳಕ್ಕೆ ಬಂದ 108 ಅಲ್ಲಿ ಗಾಯಾಳುವನ್ನು ಮಲಗಿಸಿದ್ದಾರೆ. ಗಾಯಾಳು ಬೈಕ್ ಸವಾರನ ಜೊತೆ ಯಾರಾದರೂ ಸ್ಥಳೀಯರು ಆಸ್ಪತ್ರೆಗೆ ಬರುವಂತೆ ಸಿಬ್ಬಂದಿಗಳು ಒತ್ತಾಯ ಮಾಡಿದ್ದು, ಗ್ರಾಮಸ್ಥರು ತೆರಳದ ಹಿನ್ನೆಲೆ ಗಾಯಾಳುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹಿಂದೇಟು ಹಾಕಿದ್ದು, ಗಾಯಾಳುವನ್ನು ಸ್ಥಳದಲ್ಲೇ ಬಿಟ್ಟು ವಾಪಾಸ್ ಹೋದ 108 ಆಂಬುಲೈನ್ಸ್​ ಸಿಬ್ಬಂದಿಗಳು. ನಂತರ ಸ್ಥಳಕ್ಕೆ ಬಂದ ಜೆಸಿಬಿ ಚಾಲಕ ಗಾಯಾಳುವನ್ನು ಬೈ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ:ದಾವಣಗೆರೆ ತಾಲೂಕಿನಲ್ಲಿ ಮತ್ತೊಂದು ದುರಂತ ಅಪಘಾತ! ನವ ವಿವಾಹಿತ ನೀರುಪಾಲು, ಇಲ್ಲಿದೆ ಆ ಡಿಫರೆಂಟ್ ಆಕ್ಸಿಡೆಂಟ್ ಸ್ಟೋರಿ

ಚಿಕ್ಕಬಳ್ಳಾಪುರದ ಹೆದ್ದಾರಿಯಲ್ಲಿ ಅಡ್ಡ ಬಂದ ಹಾವಿನಿಂದ ಸರಣಿ ಅಪಘಾತ

ಚಿಕ್ಕಬಳ್ಳಾಪುರ: ತಾಲೂಕಿನ ಅಗಲಗುರ್ಕಿ ಗ್ರಾಮದ ಹೆದ್ದಾರಿ 44 ರಲ್ಲಿ ಅಡ್ಡ ಬಂದ ಹಾವು, ತಪ್ಪಿಸಲು ಹೋಗಿ ಬ್ರೇಕ್ ಹಾಕಿದ ಲಾರಿ ಚಾಲಕ. ಲಾರಿ ಚಾಲಕನ ಅವಾಂತರದಿಂದ ಹೆದ್ದಾರಿಯಲ್ಲಿ ಸರಣಿ ಅಪಘಾತವಾಗಿದೆ. ಎರಡು ಕಂಟೈನರ್ ಲಾರಿ, ಒಂದು ಟಾಟಾ ಏಸ್, ಕಾರು, ಟಿಪ್ಪರ್ ಮದ್ಯೆ ಸರಣಿ ಅಪಘಾತ ಸಂಭವಿಸಿದೆ. ಟಾಟಾ ಏಸ್ ಚಾಲಕನ ಸ್ಥಿತಿ ಗಂಭೀರವಾಗಿದೆ. ಟಿಪ್ಪರ್ ಒಳಗೆ ಸಿಲುಕಿ ರಕ್ಷಣೆಗೆ ಚಾಲಕ ರಕ್ಷಣೆಗಾಗಿ ಬೇಡಿಕೊಂಡಿದ್ದಾನೆ.

ಚಿಕ್ಕಬಳ್ಳಾಪುರ ವಾಹನಗಳ ತಪಾಸಣೆ ಮಾಡುತ್ತಿದ್ದ ಸಂಚಾರಿ ಠಾಣೆ ಪೊಲೀಸರಿಂದ ಅಪಘಾತವಾಗಿದೆಯೆಂದು ಸ್ಥಳಿಯರಿಂದ ಸಂಚಾರಿ ಠಾಣೆ ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ