ಸದ್ಯಕ್ಕೆ ಕೃಷ್ಣಾ ನದಿಯಲ್ಲಿ 2.05 ಲಕ್ಷ ಕ್ಯೂಸೆಕ್ ಒಳಹರಿವು ಇದ್ದು, ಅಪಾಯದ ಮಟ್ಟವನ್ನು ಮೀರಿ ನದಿ ಹರಿಯುತ್ತಿದೆ. ಈಗಾಗಲೆ ಕೆಲವು ಗ್ರಾಮಗಳ ಸಂಪರ್ಕ ಕಲ್ಪಿಸುವ ರಸ್ತೆಗಳು ಕೂಡ ಜಲಾವೃತವಾಗಿವೆ. ಹಾಗಾದರೆ ಆಲಮಟ್ಟಿ ಜಲಾಶಯದಲ್ಲಿ ಎಷ್ಟು ನೀರು ಸಂಗ್ರಹವಾಗಿದೆ? ಇಂದಿನ ನೀರಿನ ಮಟ್ಟ ಸೇರಿದಂತೆ ಕರ್ನಾಟಕದ
ಪ್ರಮುಖ ಜಲಾಶಯಗಳಲ್ಲಿ (Karnataka Dam Water Level) ಇಂದಿನ (ಜು.26) ನೀರಿನ ಮಟ್ಟ ವಿವರ ಇಲ್ಲಿದೆ.
ಜಲಾಶಯಗಳ ನೀರಿನ ಮಟ್ಟ | ||||||
ಕರ್ನಾಟಕದ ಪ್ರಮುಖ ಜಲಾಶಯಗಳು (Dam) | ಗರಿಷ್ಠ ನೀರಿನ ಮಟ್ಟ (ಮೀ) | ಒಟ್ಟು ಸಾಮರ್ಥ್ಯ (ಟಿಎಂಸಿ) | ಇಂದಿನ ನೀರಿನ ಮಟ್ಟ (ಟಿಎಂಸಿ) | ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ) | ಒಳಹರಿವು (ಕ್ಯೂಸೆಕ್ಸ್) | ಹೊರಹರಿವು (ಕ್ಯೂಸೆಕ್ಸ್) |
ಆಲಮಟ್ಟಿ ಜಲಾಶಯ (Almatti Dam) | 519.60 | 123.08 | 88.89 | 71.81 | 1,76,466 | 2,11,686 |
ತುಂಗಭದ್ರಾ ಜಲಾಶಯ (Tungabhadra Dam) | 497.71 | 105.79 | 101.42 | 31.66 | 75,810 | 23,647 |
ಮಲಪ್ರಭಾ ಜಲಾಶಯ (Malaprabha Dam) | 633.80 | 37.73 | 23.61 | 14.33 | 20,657 | 194 |
ಕೆ.ಆರ್.ಎಸ್ (KRS Dam) | 38.04 | 49.45 | 49.45 | 22.81 | 42,045 | 30,546 |
ಲಿಂಗನಮಕ್ಕಿ ಜಲಾಶಯ (Linganamakki Dam) | 554.44 | 151.75 | 102.93 | 52.75 | 53,371 | 1,936 |
ಕಬಿನಿ ಜಲಾಶಯ (Kabini Dam) | 696.13 | 19.52 | 18.38 | 17.35 | 15,965 | 16,792 |
ಭದ್ರಾ ಜಲಾಶಯ (Bhadra Dam) | 657.73 | 71.54 | 54.50 | 36.53 | 26,044 | 200 |
ಘಟಪ್ರಭಾ ಜಲಾಶಯ (Ghataprabha Dam) | 662.91 | 51.00 | 45.74 | 23.64 | 39,174 | 10,044 |
ಹೇಮಾವತಿ ಜಲಾಶಯ (Hemavathi Dam) | 890.58 | 37.10 | 36.14 | 23.95 | 34,568 | 34,568 |
ವರಾಹಿ ಜಲಾಶಯ (Varahi Dam) | 594.36 | 31.10 | 14.00 | 8.59 | 10,218 | 0 |
ಹಾರಂಗಿ ಜಲಾಶಯ (Harangi Dam) | 871.38 | 8.50 | 7.85 | 6.60 | 10,363 | 7,200 |
ಸೂಫಾ (Supa Dam) | 564.00 | 145.33 | 83.80 | 60.89 | 76,646 | 0 |
ನಾರಾಯಣಪುರ ಜಲಾಶಯ (Narayanpura Dam) | 492.25 | 33.31 | 27.21 | 16.76 | 2,06,505 | 2,11,094 |
ವಾಣಿವಿಲಾಸ ಸಾಗರ (VaniVilas Sagar Dam) | 652.24 | 30.42 | 17.90 | 24.76 | 0 | 147 |
519 ಅಡಿ ಸಾಮರ್ಥ್ಯದ ಆಲಮಟ್ಟಿ ಜಲಾಶಯಲ್ಲಿ ಸದ್ಯ 517 ಅಡಿ ನೀರು ಇದೆ. 123 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ 88.89 ಟಿಎಂಸಿ ನೀರು ಇದೆ. ಒಳಹರಿವು 1.76 ಲಕ್ಷ ಕ್ಯೂಸೆಕ್ ಇದೆ. ಹೊರ ಹರಿವು 2.11 ಲಕ್ಷ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ