ಕರ್ನಾಟಕದಲ್ಲಿ ಕಳೆದ 6 ತಿಂಗಳಲ್ಲಿ ರಸ್ತೆ ಅಪಘಾತದಿಂದ 5830 ಜನ ಸಾವು, ಈ ಪೈಕಿ ಬೈಕ್ ಸವಾರರೇ ಹೆಚ್ಚು

| Updated By: ವಿವೇಕ ಬಿರಾದಾರ

Updated on: Sep 05, 2023 | 9:51 AM

ಹೆಚ್ಚು ಬೈಕ್​ ಸವಾರರೇ ರಸ್ತೆ ಅಪಘಾತದಲ್ಲಿ ಸಾವಿಗೀಡಾಗುತ್ತಿದ್ದಾರೆ. ಅಂಕಿಅಂಶಗಳ ಪ್ರಕಾರ, ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದವರಲ್ಲಿ ಶೇಕಡಾ 60 ರಷ್ಟು ಜನ ಬೈಕ್ ಸವಾರರು ಎಂಬುವುದು ಆಘಾತಕಾರಿ ಅಂಶವಾಗಿದೆ. ಮೂರನೇ ಎರಡರಷ್ಟು ಬೈಕ್ ಸವಾರರು ರಸ್ತೆಯಲ್ಲಿ ಹೋಗುವಾಗ ಹೆಲ್ಮೆಟ್ ಧರಿಸದ್ದರಿಂದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಕರ್ನಾಟಕದಲ್ಲಿ ಕಳೆದ 6 ತಿಂಗಳಲ್ಲಿ ರಸ್ತೆ ಅಪಘಾತದಿಂದ 5830 ಜನ ಸಾವು, ಈ ಪೈಕಿ ಬೈಕ್ ಸವಾರರೇ ಹೆಚ್ಚು
ಅಪಘಾತ
Follow us on

ಬೆಂಗಳೂರು: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಅಪಘಾತ (Karnataka Accident) ಪ್ರಕರಣಗಳ ಸಂಖ್ಯೆ ಏರುತ್ತಿದೆ. ಚಾಲಕರ ಅಜಾಗರೂಕತೆ, ಹಾಳಾದ ರಸ್ತೆಯಿಂದ ಅಪಘಾತಗಳು ಸಂಭವಿಸುತ್ತಿವೆ. 2023ರ ಮೊದಲಾರ್ಧದಲ್ಲಿ 5830 ಜನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ (Alok Kumar) ಅವರು ತಿಳಿಸಿದ್ದಾರೆ. ಮೇ ತಿಂಗಳಲ್ಲಿ ಅಪಘಾತದಿಂದ ಅತ್ಯಧಿಕ ಸಾವು ನೋವು ಸಂಭವಿಸಿದೆ. ಅಪಘಾತದಿಂದ ಬರೋಬ್ಬರಿ 1094 ಜನ ಮೃತಪಟ್ಟಿದ್ದಾರೆ. ಜೂನ್​ನಲ್ಲಿ 965, ಜುಲೈನಲ್ಲಿ 807, ಆಗಸ್ಟ್​​ನಲ್ಲಿ 795 ಜನ ನಿಧನರಾಗಿದ್ದಾರೆ. ಅಪಘಾತದ ಸಾವಿಗೀಡಾದ ಹೆಚ್ಚಿನ ಜನರು ಬೆಂಗಳೂರು (Bengaluru), ಬೆಂಗಳೂರು ಗ್ರಾಮಾಂತರ (Bengaluru Rurel) ಮತ್ತು ತುಮಕೂರು (Tumakuru) ಜಿಲ್ಲೆಯವರಾಗಿದ್ದಾರೆ.

ಹೆಚ್ಚು ಬೈಕ್​ ಸವಾರರೇ ರಸ್ತೆ ಅಪಘಾತದಲ್ಲಿ ಸಾವಿಗೀಡಾಗುತ್ತಿದ್ದಾರೆ. ಅಂಕಿಅಂಶಗಳ ಪ್ರಕಾರ, ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದವರಲ್ಲಿ ಶೇಕಡಾ 60 ರಷ್ಟು ಜನ ಬೈಕ್ ಸವಾರರು ಎಂಬುವುದು ಆಘಾತಕಾರಿ ಅಂಶವಾಗಿದೆ. ಮೂರನೇ ಎರಡರಷ್ಟು ಬೈಕ್ ಸವಾರರು ರಸ್ತೆಯಲ್ಲಿ ಹೋಗುವಾಗ ಹೆಲ್ಮೆಟ್ ಧರಿಸದ್ದರಿಂದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ: ನಿಂತಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ, ನಾಲ್ವರ ಸಾವು

ದ್ವಿಚಕ್ರ ವಾಹನ ಬಳಕೆದಾರರಿಗೆ ಸಂಬಂಧಿಸಿದ ಸುರಕ್ಷತೆಯ ಬಗ್ಗೆ ಅತಿಯಾಗಿ ಹೇಳಲಾಗುವುದಿಲ್ಲ. ಸಾವನ್ನಪ್ಪಿದ ಶೇ 60 ರಷ್ಟು ಬೈಕ್​ ಸವಾರರಲ್ಲಿ 2/3 ಜನರು ಮಾತ್ರ ಹೆಲ್ಮೆಟ್ ಧರಿಸಿದ್ದರು. ಹೆಲ್ಮೆಟ್ ಧರಿಸಿ ಪ್ರಯಾಣ ಮಾಡುವುದರಿಂದ ಅಪಘಾತ ಸಮಯದಲ್ಲಿ ಸಾವಿನಿಂದ ದೂರವಾಗಬಹುದು. ಇನ್ನು 50 ರಿಂದ 52 ರಷ್ಟು ಬೈಕ್ ಸವಾರರು ಬೆಂಗಳೂರಲ್ಲಿ ಸಂಭವಿಸಿದ ಅಪಘಾದಲ್ಲಿ ಮೃತಪಟ್ಟಿದ್ದಾರೆ.

ಇನ್ನು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇ ತಿಂಗಳಲ್ಲಿ 29, ಜೂನ್​ನಲ್ಲಿ 28, ಜುಲೈನಲ್ಲಿ 8 ಮತ್ತು ಆಗಸ್ಟ್​ನಲ್ಲಿ 6 ಜನ ಅಪಘಾತದಿಂದ ನಿಧನರಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:17 am, Tue, 5 September 23