ಸರಣಿ ಕೊಲೆ, ಸಾರ್ವಜನಿಕರ ಒತ್ತಡ: ಹು-ಧಾ ಕಮಿಷನರ್​ ಸೇರಿದಂತೆ 25 ಐಪಿಎಸ್​ ಅಧಿಕಾರಿಗಳ ವರ್ಗ

| Updated By: ವಿವೇಕ ಬಿರಾದಾರ

Updated on: Jul 03, 2024 | 8:37 AM

ಪೊಲೀಸ್​ ಇಲಾಖೆ ರಾತ್ರೋರಾತ್ರಿ ಪೊಲೀಸ್​ ಇಲಾಖೆಯಲ್ಲಿ ಮೇಜರ್​ ಸರ್ಜರಿ ಮಾಡಿದೆ. 25 ಜನ ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹುಬ್ಬಳ್ಳಿ-ಧಾರವಾಡ ಪೊಲೀಸ್​ ಆಯುಕ್ತೆಯಾಗಿದ್ದ ಐಪಿಎಸ್​ ಅಧಿಕಾರಿ ರೇಣುಕಾ ಸುಕುಮಾರ್​ ಅವರನ್ನು ವರ್ಗಾವಣೆ ಮಾಡಿದೆ.

ಸರಣಿ ಕೊಲೆ, ಸಾರ್ವಜನಿಕರ ಒತ್ತಡ: ಹು-ಧಾ ಕಮಿಷನರ್​ ಸೇರಿದಂತೆ 25 ಐಪಿಎಸ್​ ಅಧಿಕಾರಿಗಳ ವರ್ಗ
ಐಪಿಎಸ್ ಅಧಿಕಾರಿ ರೇಣುಕಾ ಸುಕುಮಾರ್​ ವರ್ಗ
Follow us on

ಬೆಂಗಳೂರು, ಜುಲೈ 03: ಹುಬ್ಬಳ್ಳಿಯಲ್ಲಿ (Hubballi) ಕಳೆದ ಮೂರು ತಿಂಗಳಲ್ಲಿ 3 ಕೊಲೆಗಳಾದವು. ಇಬ್ಬರು ಯುವತಿಯರು ಮತ್ತು ಓರ್ವ ಯುವಕನ ಕೊಲೆಯಾಯಿತು. ಇದರಿಂದ ಭಯಗೊಂಡ ಹುಬ್ಬಳ್ಳಿ ಜನತೆ ಮಹಾನಗರದ ಕಾನೂನು ಸುವ್ಯವಸ್ಥೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಹುಬ್ಬಳ್ಳಿ-ಧಾರವಾಡ (Hubballi-Dharwad) ಪೊಲೀಸ್​ ಆಯುಕ್ತೆ ರೇಣುಕಾ ಸುಕುಮಾರ್ (Renuka Sukumar)​ ಅವರನ್ನು ವರ್ಗಾವಣೆಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರು. ಇದೀಗ ಸರ್ಕಾರ ಹುಬ್ಬಳ್ಳಿ-ಧಾರವಾಡ ಪೊಲೀಸ್​ ಆಯುಕ್ತೆ ರೇಣುಕಾ ಸುಕುಮಾರ್​ ಸೇರಿದಂತೆ ರಾಜ್ಯದ 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಐಪಿಎಸ್​ ಅಧಿಕಾರಿ ರೇಣುಕಾ ಸುಕುಮಾರ್​ ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಎಐಜಿಪಿಯಾಗಿ ಬೆಂಗಳೂರು ಡಿಜಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಹುಬ್ಬಳ್ಳಿ-ಧಾರವಾಡ ಪೊಲೀಸ್​ ಆಯುಕ್ತರಾಗಿ ಐಪಿಎಸ್​ ಅಧಿಕಾರಿ ಎನ್. ಶಶಿಕುಮಾರ್​ ಅವರನ್ನು ನೇಮಿಸಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿಯ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಸುಲಭವಾಗಿ ಸಿಗುತ್ತಿದೆ ಡ್ರಗ್ಸ್​, ಗಾಂಜಾ! ಈ ಕುರಿತು ವಿಶೇಷ ವರದಿ ಇಲ್ಲಿದೆ

ರೇಣುಕಾ ಸುಕುಮಾರ ಅವರನ್ನ ವರ್ಗಾವಣೆ ಮಾಡಿ, ಹುಬ್ಬಳ್ಳಿ-ಧಾರವಾಡಕ್ಕೆ ಖಡಕ್ ಅಧಿಕಾರಿಯನ್ನ ನೇಮಿಸಿ ಎಂದು ಸ್ವತಃ ಕಾಂಗ್ರೆಸ್ ಮುಖಂಡರೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಅಲ್ಲದೆ ನೇಹಾ-ಅಂಜಲಿ ಕೊಲೆ ಪ್ರಕರಣಗಳು ನಡೆದಾಗ ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಸಾರ್ವಜನಿಕರು ಪ್ರತಿಭಟನೆ ಸಹ ಮಾಡಿದ್ದರು. ಕೊನೆಗೂ ಸರ್ಕಾರ ಸಾರ್ವಜನಿಕರ ಹೋರಾಟಕ್ಕೆ ಮತ್ತು ಕಾಂಗ್ರೆಸ್ ಮುಖಂಡರ ಮನವಿಗೆ ಸ್ಪಂದಿಸಿ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವರ್ಗಾವಣೆಯಾದ ಅಧಿಕಾರಿಗಳ ಪಟ್ಟಿ ಹೀಗಿದೆ

  1. ಲಾಬೂರಾಮ್​​​​: ಐಜಿಪಿ ಕೇಂದ್ರ ವಲಯ
  2. ರವಿಕಾಂತೇಗೌಡ: ಐಜಿಪಿ ಕೇಂದ್ರ ಕಚೇರಿ-1
  3. ಡಾ.ಕೆ.ತ್ಯಾಗರಾಜನ್: ಐಜಿಪಿ, ಐಎಸ್​​ಡಿ
  4. ಎನ್.ಶಶಿಕುಮಾರ್: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್
  5. ಬಿ.ರಮೇಶ್: ಡಿಐಜಿಪಿ ಪೂರ್ವ ವಲಯ ದಾವಣಗೆರೆ
  6. ಸೀಮಾ ಲಾಟ್ಕರ್​​: ಪೊಲೀಸ್ ಆಯುಕ್ತ, ಮೈಸೂರು ನಗರ
  7. ರೇಣುಕಾ ಸುಕುಮಾರ್: ಎಐಜಿಪಿ (ಬೆಂಗಳೂರು ಡಿಜಿ ಕಚೇರಿ)
  8. ಸಿ.ಕೆ.ಬಾಬಾ: ಎಸ್​​​​​ಪಿ, ಬೆಂಗಳೂರು ಗ್ರಾಮಾಂತರ
  9. ಎನ್.ವಿಷ್ಣುವರ್ಧನ್: ಎಸ್​​​​​ಪಿ, ಮೈಸೂರು ಜಿಲ್ಲೆ
  10. ಸುಮನ್​.ಡಿ.ಪೆನ್ನೇಕರ್: ಎಸ್​​​​​ಪಿ, ಬಿಎಂಟಿಎಫ್
  11. ಸಿ.ಬಿ.ರಿಷ್ಯಂತ್: ಎಸ್​​​​​ಪಿ, ವೈರ್​ಲೆಸ್​​​​
  12. ಚನ್ನಬಸವಣ್ಣ: ಎಐಜಿಪಿ, ಆಡಳಿತ ಪ್ರಧಾನ ಕಚೇರಿ
  13. ಎಂ.ನಾರಾಯಣ್: ಎಸ್​​​​​ಪಿ, ಉತ್ತರ ಕನ್ನಡ
  14. ಎಸ್​​.ಫಾತಿಮಾ: ಡಿಸಿಪಿ, ಬೆಂಗಳೂರು ಆಗ್ನೇಯ ವಿಭಾಗ
  15. ಅರುಣಾಂಗ್ಷು ಗಿರಿ: ಎಸ್​​​​​ಪಿ, ಸಿಐಡಿ
  16. ಡಿ.ಎಲ್​.ನಾಗೇಶ್: ಡಿಸಿಪಿ, ಸಿಎಆರ್​ಹೆಚ್​ ಪ್ರಧಾನ ಕಚೇರಿ, ಬೆಂಗಳೂರು
  17. ಪದ್ಮಿನಿ ಸಾಹೋ: ಡಿಸಿಪಿ ಆಡಳಿತ, ಬೆಂಗಳೂರು ನಗರ
  18. ಪ್ರದೀಪ್ ಗುಂಟಿ: ಎಸ್​​​​​ಪಿ, ಬೀದರ್ ಜಿಲ್ಲೆ
  19. ಯತೀಶ್.ಎನ್: ಎಸ್​​​​​ಪಿ, ದಕ್ಷಿಣ ಕನ್ನಡ ಜಿಲ್ಲೆ
  20. ಮಲ್ಲಿಕಾರ್ಜುನ ಬಾಲದಂಡಿ: ಎಸ್​​​​​ಪಿ, ಮಂಡ್ಯ ಜಿಲ್ಲೆ
  21. ವಿ.ಜೆ.ಡಾ.ಶೋಭಾ ರಾಣಿ: ಎಸ್​​​​​ಪಿ, ಬಳ್ಳಾರಿ ಜಿಲ್ಲೆ
  22. ಡಾ.ಟಿ.ಕವಿತಾ: ಎಸ್​​​​​ಪಿ, ಚಾಮರಾಜನಗರ ಜಿಲ್ಲೆ
  23. ಬಿ.ನಿಖಿಲ್: ಎಸ್​​​​​ಪಿ, ಕೋಲಾರ ಜಿಲ್ಲೆ
  24. ಕುಶಾಲ್ ಚೌಕ್ಸಿ: ಎಸ್​​​​​ಪಿ, ಚಿಕ್ಕಬಳ್ಳಾಪುರ ಜಿಲ್ಲೆ
  25. ಮಹಾನಿಂಗ್ ನಂದಗಾವಿ: ಡಿಸಿಪಿ ಕಾನೂನು ಸುವ್ಯವಸ್ಥೆ ಹುಬಳ್ಳಿ-ಧಾರವಾಡ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:30 am, Wed, 3 July 24