Karnataka Dam Water Level: ಏ.25ರ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟದ ವಿವರ ಇಲ್ಲಿದೆ

|

Updated on: Apr 25, 2024 | 6:00 AM

ಕರ್ನಾಟಕದ ಜಲಾಶಯಗಳ ಏಪ್ರಿಲ್​ 25ರ ನೀರಿನ ಮಟ್ಟ: ಕೆಆರ್​ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಫಾ ಸೇರಿದಂತೆ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಮತ್ತು ಒಳ ಹರಿವು ಎಷ್ಟಿದೆ? ಯಾವ ಡ್ಯಾಂ ನಲ್ಲಿ ಎಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Karnataka Dam Water Level: ಏ.25ರ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟದ ವಿವರ ಇಲ್ಲಿದೆ
ತುಂಗಭದ್ರಾ ಡ್ಯಾಂ
Follow us on

ತ್ರಿವಳಿ ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯ ಮಳೆ ಕೊರತೆಯಿಂದ ತುಂಬದಿದ್ದರೂ ಜಲಾಶಯದ ಇತಿಹಾಸದಲ್ಲಿ ಎರಡನೇ ಬಾರಿ ಅತಿ ಹೆಚ್ಚಿನ ನೀರು ಹರಿದು ಬಂದಿದೆ. ಕಳೆದ ವರ್ಷಕ್ಕಿಂತ ಈ ಭಾರಿ ಸುಮಾರು 1 ಟಿಎಂಸಿ ಹೆಚ್ಚು ನೀರು ಸಂಗ್ರಹವಾಗಿದೆ. ಇನ್ನು ಆಲಮಟ್ಟಿ ಜಲಾಶಯದಲ್ಲೂ ಕೂಡ ಕಳೆದ ವರ್ಷಕ್ಕಿಂತ ಈ ವರ್ಷ ಎರಡು ಪಟ್ಟು ಹೆಚ್ಚು ನೀರು ಸಂಗ್ರಹವಾಗಿದೆ. ಹಾಗಾದರೆ ರಾಜ್ಯದ ಪ್ರಮುಖ 12 ಜಲಾಶಯಗಳ ನೀರಿನ ಮಟ್ಟ (Karnataka Dam Water Level) ಏಪ್ರಿಲ್​ ​25ರಂದು ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟು ಇದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಲಾಶಯಗಳ ನೀರಿನ ಮಟ್ಟ
ಕರ್ನಾಟಕದ ಪ್ರಮುಖ ಜಲಾಶಯಗಳು (Dam) ಗರಿಷ್ಠ ನೀರಿನ ಮಟ್ಟ (ಮೀ) ಒಟ್ಟು ಸಾಮರ್ಥ್ಯ (ಟಿಎಂಸಿ) ಇಂದಿನ ನೀರಿನ ಮಟ್ಟ (ಟಿಎಂಸಿ) ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ) ಒಳಹರಿವು (ಕ್ಯೂಸೆಕ್ಸ್) ಹೊರಹರಿವು (ಕ್ಯೂಸೆಕ್ಸ್)
ಆಲಮಟ್ಟಿ ಜಲಾಶಯ (Almatti Dam) 519.60 123.08 32.76 27.15 0 896
ತುಂಗಭದ್ರಾ ಜಲಾಶಯ (Tungabhadra Dam) 497.71 105.79 3.77 2.96 0 249
ಮಲಪ್ರಭಾ ಜಲಾಶಯ (Malaprabha Dam) 633.80 37.73 08.30 10.54 0 194
ಕೆ.ಆರ್.ಎಸ್ (KRS Dam) 38.04 49.45 11.74 15.94 94 755
ಲಿಂಗನಮಕ್ಕಿ ಜಲಾಶಯ (Linganamakki Dam) 554.44 151.75 22.55 34.46 0 2594
ಕಬಿನಿ ಜಲಾಶಯ (Kabini Dam) 696.13 19.52 7.72 5.39 51 800
ಭದ್ರಾ ಜಲಾಶಯ (Bhadra Dam) 657.73 71.54 16.44 34.61 103 3437
ಘಟಪ್ರಭಾ ಜಲಾಶಯ (Ghataprabha Dam) 662.91 51.00 18.59 12.43 0 3566
ಹೇಮಾವತಿ ಜಲಾಶಯ (Hemavathi Dam) 890.58 37.10 9.70 18.29 7 330
ವರಾಹಿ ಜಲಾಶಯ (Varahi Dam) 594.36 31.10 5.22 4.48 0 0
ಹಾರಂಗಿ ಜಲಾಶಯ (Harangi Dam)​​ 871.38 8.50 3.09 2.73 177 200
ಸೂಫಾ (Supa Dam) 564.00 145.33 42.60 57.10 0 2952

ಏಪ್ರಿಲ್ 23ರ ಬೆಳಿಗ್ಗೆ 8.30 ರಿಂದ ಏಪ್ರಿಲ್ 24 2024ರ 8.30ರವರೆಗೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹರಗಾಪೂರ 23.5 ಮಿಮೀ ಮಳೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ