ಚಿಕ್ಕಪೇಟೆ ನಿವಾಸಿಗಳೇ‌ ಹುಷಾರ್! ಅಕ್ಕ-ಪಕ್ಕದಲ್ಲಿಯೇ ಇದಾರೆ ಕೊರೊನಾ ಪೇಷಂಟ್ಸ್

ಬೆಂಗಳೂರು: ಚಿಕ್ಕಪೇಟೆಯಲ್ಲಿ ಈಗಾಗಲೇ ಕೊರೊನಾ ಮರಣ ಮೃದಂಗ ಬಾರಿಸಿದೆ. ಎಂ ಎಸ್ ಲೈನ್, ಕಿಲಾರಿ ಮುಖ್ಯ ರಸ್ತೆ, ಕಿಲಾರಿ ಮೂರನೇ ಕ್ರಾಸ್ ಫುಲ್ ಡೇಂಜರ್ ಜೋನ್​ನಲ್ಲಿದೆ. ಅಲ್ಲದೆ ಒಬ್ಬ ವ್ಯಕ್ತಿಯನ್ನ ಕೊರೊನಾ ಮಹಾಮಾರಿ ಬಲಿ ತೆಗೆದುಕೊಂಡಿದೆ. ಈ ನಡುವೆ ಬೆಚ್ಚಿಬೀಳಿಸುವ ಸತ್ಯವೊಂದು ಬಹಿರಂಗವಾಗಿದೆ. ಮೂರು ಜನ ಕೊರೊನಾ ಸೋಂಕಿತರು ಒಂದೇ ಮನೆಯಲ್ಲೇ ಇದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ವಿಕ್ಟೋರಿಯಾ ಹಾಗೂ ಬೌರಿಂಗ್‌ನಲ್ಲಿ ಬೆಡ್ ಇಲ್ಲ ಅಂತ ವೈದ್ಯರು ವಾಪಸ್ ಮನೆಗೆ ಕಳಿಸಿದ್ದಾರೆ ಅನ್ನೂ ಆರೋಪ ಕೇಳಿ […]

ಚಿಕ್ಕಪೇಟೆ ನಿವಾಸಿಗಳೇ‌ ಹುಷಾರ್! ಅಕ್ಕ-ಪಕ್ಕದಲ್ಲಿಯೇ ಇದಾರೆ ಕೊರೊನಾ ಪೇಷಂಟ್ಸ್
Edited By:

Updated on: Jun 22, 2020 | 1:34 PM

ಬೆಂಗಳೂರು: ಚಿಕ್ಕಪೇಟೆಯಲ್ಲಿ ಈಗಾಗಲೇ ಕೊರೊನಾ ಮರಣ ಮೃದಂಗ ಬಾರಿಸಿದೆ. ಎಂ ಎಸ್ ಲೈನ್, ಕಿಲಾರಿ ಮುಖ್ಯ ರಸ್ತೆ, ಕಿಲಾರಿ ಮೂರನೇ ಕ್ರಾಸ್ ಫುಲ್ ಡೇಂಜರ್ ಜೋನ್​ನಲ್ಲಿದೆ. ಅಲ್ಲದೆ ಒಬ್ಬ ವ್ಯಕ್ತಿಯನ್ನ ಕೊರೊನಾ ಮಹಾಮಾರಿ ಬಲಿ ತೆಗೆದುಕೊಂಡಿದೆ. ಈ ನಡುವೆ ಬೆಚ್ಚಿಬೀಳಿಸುವ ಸತ್ಯವೊಂದು ಬಹಿರಂಗವಾಗಿದೆ.

ಮೂರು ಜನ ಕೊರೊನಾ ಸೋಂಕಿತರು ಒಂದೇ ಮನೆಯಲ್ಲೇ ಇದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ವಿಕ್ಟೋರಿಯಾ ಹಾಗೂ ಬೌರಿಂಗ್‌ನಲ್ಲಿ ಬೆಡ್ ಇಲ್ಲ ಅಂತ ವೈದ್ಯರು ವಾಪಸ್ ಮನೆಗೆ ಕಳಿಸಿದ್ದಾರೆ ಅನ್ನೂ ಆರೋಪ ಕೇಳಿ ಬಂದಿದೆ. ಹೀಗಾಗಿ ಮೂರು ಜನ ಕೊರೊನಾ ಸೋಂಕಿತರು ಮನೆಯಲ್ಲೇ ಇದ್ದಾರೆ ಎಂದು ಸ್ವತಃ ಚಿಕ್ಕಪೇಟೆ ಕಾರ್ಪೊರೇಟರ್ ಪತಿ ಶಿವಕುಮಾರ್ ಮಾಹಿತಿ ಬಹಿರಂಗ ಪಡಿಸಿದ್ದಾರೆ.

ಈ ಬಗ್ಗೆ ನಿವಾಸಿಗಳು ಟಿವಿ9 ಮುಂದೆ ಅಳಲು ತೋಡಿಕೊಂಡಿದ್ದಾರೆ. ಕೊರೊನಾ ರೋಗಿ ನಮ್ಮ ಮನೆಯಲ್ಲೇ ಇದ್ದಾರೆ. ಆಸ್ಪತ್ರೆಯಲ್ಲಿ ಬೆಡ್ ಇಲ್ಲ ಅಂತ ಅವರನ್ನ ಮನೆಯಲ್ಲೇ ಪ್ರತ್ಯೇಕ ಕೊಠಡಿಯಲ್ಲಿ ಐಸೋಲೇಷನ್ ಮಾಡಿದ್ದೀವಿ. ನಮ್ಮ ಮನೆಯಲ್ಲಿ ಒಟ್ಟು 15 ಜನ‌ ಇದ್ದೀವಿ. ಭಯದಲ್ಲೇ ಬದುಕ್ತಾ ಇದ್ದೀವಿ.

ವಯಸ್ಸಾದವರು, ಮಕ್ಕಳು ಮನೆಯಲ್ಲಿ ಇದ್ದಾರೆ. ಅಧಿಕಾರಿಗಳು ಯಾರೂ ಸ್ಥಳಕ್ಕೆ ಬಂದಿಲ್ಲ. ನಾವೇ ನಮ್ಮ ರಸ್ತೆಯನ್ನ ಸೀಲ್​ಡೌನ್ ಮಾಡ್ಕೊಂಡಿದ್ದೀವಿ ಎಂದು ಮನೆಯವರು ಅಳಲು ತೋಡಿಕೊಂಡಿದ್ದಾರೆ. ಜೊತೆಗೆ ನಮಗೂ ಕೊರೊನಾ ಟೆಸ್ಟ್ ಅಗತ್ಯ ಇದೆ. ಆದ್ರೆ ಆರೋಗ್ಯಾಧಿಕಾರಿಗಳು ಇನ್ನೂ ಬಂದಿಲ್ಲ. ದಯವಿಟ್ಟು ಕೊರೊನಾ ರೋಗಿಯನ್ನ ಆಸ್ಪತ್ರೆಗೆ ಶಿಫ್ಟ್ ಮಾಡಿಸಿ ಎಂದು ರೋಗಿಯ ಸಂಬಂಧಿ ಭಯ ವ್ಯಕ್ತಪಡಿಸಿದ್ದಾರೆ.

Follow Us