ಮುಡಾದಲ್ಲಿ ಬಗೆದಷ್ಟೂ ಹೊರ ಬರ್ತಿದೆ ಗೋಲ್​ಮಾಲ್, ಒಬ್ಬನಿಗೆ 3 ನಿವೇಶನ ಮಂಜೂರು

|

Updated on: Dec 14, 2019 | 12:42 PM

ಮೈಸೂರು: ಮುಡಾ ಅಧಿಕಾರಿಗಳಿಗೆ ಅದೇನಾಗಿದ್ಯೋ ಗೊತ್ತಿಲ್ಲ. ಒಂದರ ಮೇಲೆ ಒಂದು ಅವ್ಯವಹಾರಗಳು ಹೊರ ಬರುತ್ತಿದ್ದರು ಕಣ್ಮುಚ್ಚಿ ಕುಳಿತಿದ್ದಾರೆ. ಒಬ್ಬರಿಗೆ ಎರಡು ನಿವೇಶನ ಕೊಟ್ಟ ಬೆನ್ನಲ್ಲೇ ಈಗ ಒಬ್ಬರಿಗೆ ಮೂರು ನಿವೇಶನ ಕೊಟ್ಟು ಮುಡಾ ಅಧಿಕಾರಿಗಳು ಸುದ್ದಿಯಾಗಿದ್ದಾರೆ. ನಮ್ಮ ಸರ್ಕಾರಿ ಕಚೇರಿಗಳಲ್ಲಿ ಸಾಕಷ್ಟು ನಿಯಮಗಳಿವೆ. ಆದ್ರೆ, ಅವು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಬಡವರಿಗೂಂದು ನ್ಯಾಯ. ಉಳ್ಳವರಿಗೊಂದು ನ್ಯಾಯ ಎಂಬಂತಾಗಿದೆ. ಈ ರೂಲ್ಸ್‌ಗಳು ಅನ್ನೋದು ಕಡತಗಳಿಗೆ ಮಾತ್ರ ಸೀಮಿತಾನಾ ಅನ್ನೋ ಪ್ರಶ್ನೆಗಳು ಸಾಂಸ್ಕೃತಿಕ ನಗರಿಯಲ್ಲಿ ನಡೆದ ಅಕ್ರಮದಿಂದ ಎದ್ದಿವೆ. ‘ಮುಡಾ’ದಲ್ಲಿ […]

ಮುಡಾದಲ್ಲಿ ಬಗೆದಷ್ಟೂ ಹೊರ ಬರ್ತಿದೆ ಗೋಲ್​ಮಾಲ್, ಒಬ್ಬನಿಗೆ 3 ನಿವೇಶನ ಮಂಜೂರು
Follow us on

ಮೈಸೂರು: ಮುಡಾ ಅಧಿಕಾರಿಗಳಿಗೆ ಅದೇನಾಗಿದ್ಯೋ ಗೊತ್ತಿಲ್ಲ. ಒಂದರ ಮೇಲೆ ಒಂದು ಅವ್ಯವಹಾರಗಳು ಹೊರ ಬರುತ್ತಿದ್ದರು ಕಣ್ಮುಚ್ಚಿ ಕುಳಿತಿದ್ದಾರೆ. ಒಬ್ಬರಿಗೆ ಎರಡು ನಿವೇಶನ ಕೊಟ್ಟ ಬೆನ್ನಲ್ಲೇ ಈಗ ಒಬ್ಬರಿಗೆ ಮೂರು ನಿವೇಶನ ಕೊಟ್ಟು ಮುಡಾ ಅಧಿಕಾರಿಗಳು ಸುದ್ದಿಯಾಗಿದ್ದಾರೆ.

ನಮ್ಮ ಸರ್ಕಾರಿ ಕಚೇರಿಗಳಲ್ಲಿ ಸಾಕಷ್ಟು ನಿಯಮಗಳಿವೆ. ಆದ್ರೆ, ಅವು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಬಡವರಿಗೂಂದು ನ್ಯಾಯ. ಉಳ್ಳವರಿಗೊಂದು ನ್ಯಾಯ ಎಂಬಂತಾಗಿದೆ. ಈ ರೂಲ್ಸ್‌ಗಳು ಅನ್ನೋದು ಕಡತಗಳಿಗೆ ಮಾತ್ರ ಸೀಮಿತಾನಾ ಅನ್ನೋ ಪ್ರಶ್ನೆಗಳು ಸಾಂಸ್ಕೃತಿಕ ನಗರಿಯಲ್ಲಿ ನಡೆದ ಅಕ್ರಮದಿಂದ ಎದ್ದಿವೆ.

‘ಮುಡಾ’ದಲ್ಲಿ ಬಗೆದಷ್ಟು ಹೊರ ಬರುತ್ತಿದೆ ಅವ್ಯವಹಾರಗಳು!
ಮೈಸೂರಿನ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಗೆದಷ್ಟು ಬಗೆದಷ್ಟು ಅವ್ಯವಹಾರಗಳು ಹೊರ ಬರುತ್ತಲೇ ಇವೆ.‌ ಒಬ್ಬರಿಗೆ ಒಂದೇ ನಿವೇಶನವೆಂಬ ನಿಯಮವಿದ್ದರೂ ಒಬ್ಬರಿಗೆ ಎರಡೆರೆಡು ನಿವೇಶನ ನೀಡಿ ಸುದ್ದಿಯಾಗಿದ್ದ ಮುಡಾ ಈಗ ಮತ್ತೆ ಅದೇ ವಿಚಾರಕ್ಕೆ ಸುದ್ದಿಯಾಗಿದೆ. ಈ ಬಾರಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಮುಡಾ ಅಧಿಕಾರಿಗಳು ರಾಮಕೃಷ್ಣ ಎಂಬ ವ್ಯಕ್ತಿಗೆ ಒಂದಲ್ಲಾ ಎರಡಲ್ಲ ಪ್ರಾಧಿಕಾರದ ಮೂರು ನಿವೇಶನಗಳನ್ನು ನೀಡಿದೆ.

ಈ ಪ್ರಕರಣದ ಪ್ರಮುಖ ರೂವಾರಿ ಎಂ.ಎನ್. ರಾಮಕೃಷ್ಣ. ಈ ರಾಮಕೃಷ್ಣ ತಾನೊಬ್ಬ ಕೇಂದ್ರ ಸರ್ಕಾರಿ‌ ನೌಕರ ಎಂದು ಹೇಳಿಕೊಂಡು ಮೈಸೂರಿನ ಉದಯಗಿರಿ, ಮಹದೇವ ಪುರ ಹಾಗೂ ದೇವನೂರು ಬಡವಾಣೆಯಲ್ಲಿ ಎರಡು 30*40 ಮತ್ತು ಒಂದು 20*30 ನಿವೇಶನವನ್ನು ಪಡೆದಿದ್ದಾರೆ. ಅದರಲ್ಲಿ ಎರಡು ನಿವೇಶನ ಒಂದೇ ದಿನ ಮಂಜೂರಾಗಿರುವುದು ಅಚ್ಚರಿಗೆ ಕಾರಣವಾಗಿದೆ.‌ ಸದ್ಯ ಈ ಬಗ್ಗೆ ದೂರು ಸ್ವೀಕರಿಸಿರುವ ಕಾಂತರಾಜು ಈ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದಾರೆ. ಇದು ಕೇವಲ ಸ್ಯಾಂಪಲ್ ಮಾತ್ರ ಇಂತಹ ಹತ್ತು ಹಲವು ಅವ್ಯವಹಾರಗಳು ಮುಡಾದಲ್ಲಿ ನಡೆದಿವೆ.