ಉಪಚುನಾವಣೆ ಗೆಲುವು: ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ನೂತನ ಶಾಸಕ

ತುಮಕೂರಿನ ಸಿದ್ಧಗಂಗಾ ಮಠಕ್ಕೆ ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಭೇಟಿ ನೀಡಿದ್ರು. ಸಿದ್ಧಗಂಗಾಶ್ರೀಗಳ ಫೋಟೋಗೆ ನಮಿಸಿ ಬಳಿಕ ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದ್ರು. ಈ ವೇಳೆ ಶರತ್​ ಬಚ್ಚೇಗೌಡಗೆ ಬೆಂಬಲಿಗರು ಸಾಥ್ ನೀಡಿದ್ರು. ಗೋಡೆಗೆ ಬೈಕ್ ಡಿಕ್ಕಿ, ಸವಾರ ಸಾವು: ಮೈಸೂರಿನ ಜಲಪುರಿ ಬಳಿ ತಡೆ ಗೋಡೆಗೆ ಡಿಕ್ಕಿ ಹೊಡೆದು ಬೈಕ್ ಸವಾರನೋರ್ವ ಮೃತಪಟ್ಟಿದ್ದಾನೆ. ಶ್ರೇಯಸ್ ಚೌವ್ಹಾಣ್ ಮೃತ ದುರ್ದೈವಿ. ಹಿಂಬದಿಯಿದ್ದ ಮತ್ತೋರ್ವ ಸವಾರನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಸಿದ್ಧಾರ್ಥ ನಗರ […]

ಉಪಚುನಾವಣೆ ಗೆಲುವು: ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ನೂತನ ಶಾಸಕ
Follow us
ಸಾಧು ಶ್ರೀನಾಥ್​
|

Updated on:Dec 14, 2019 | 1:49 PM

ತುಮಕೂರಿನ ಸಿದ್ಧಗಂಗಾ ಮಠಕ್ಕೆ ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಭೇಟಿ ನೀಡಿದ್ರು. ಸಿದ್ಧಗಂಗಾಶ್ರೀಗಳ ಫೋಟೋಗೆ ನಮಿಸಿ ಬಳಿಕ ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದ್ರು. ಈ ವೇಳೆ ಶರತ್​ ಬಚ್ಚೇಗೌಡಗೆ ಬೆಂಬಲಿಗರು ಸಾಥ್ ನೀಡಿದ್ರು.

ಗೋಡೆಗೆ ಬೈಕ್ ಡಿಕ್ಕಿ, ಸವಾರ ಸಾವು: ಮೈಸೂರಿನ ಜಲಪುರಿ ಬಳಿ ತಡೆ ಗೋಡೆಗೆ ಡಿಕ್ಕಿ ಹೊಡೆದು ಬೈಕ್ ಸವಾರನೋರ್ವ ಮೃತಪಟ್ಟಿದ್ದಾನೆ. ಶ್ರೇಯಸ್ ಚೌವ್ಹಾಣ್ ಮೃತ ದುರ್ದೈವಿ. ಹಿಂಬದಿಯಿದ್ದ ಮತ್ತೋರ್ವ ಸವಾರನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಸಿದ್ಧಾರ್ಥ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಲಾರಿಗೆ ಬಲಿಯಾದ ಬೈಕ್ ಸವಾರ: ತುಮಕೂರು ತಾಲೂಕಿನ ಊರ್ಡಿಗೆರೆ ಗ್ರಾಮದ ಬಳಿ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರನೋರ್ವ ಅಸುನೀಗಿದ್ದಾನೆ. ಅರೇಬಿದ್ದನಹಳ್ಳಿಯ ರವಿಕುಮಾರ್ ಮೃತ ದುರ್ದೈವಿ. ಈ ವೇಳೆ ಲಾರಿಗಳ ವೇಗದಿಂದಾಗಿ ಅಪಘಾತ ಸಂಭವಿಸಿದೆ ಅಂತಾ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ರು.

ಎರಡು ಗುಂಪಿನ ಮಧ್ಯೆ ಘರ್ಷಣೆ: ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ 2ಗುಂಪಿನ ಮಧ್ಯೆ ಘರ್ಷಣೆ ಸಂಭವಿಸಿದ್ದು, ಪೊಲೀಸರು ಲಾಠಿ ಬೀಸಿದ್ದಾರೆ. ‘ಬೈಕ್​ಗೆ ಸೈಡ್ ಬಿಡಲಿಲ್ಲ’ ಅಂತಾ ಯುವಕರಿಬ್ಬರು ಗಲಾಟೆ ಮಾಡ್ಕೊಂಡಿದ್ದು, ತಟಕೋಟಿ ಗಲ್ಲಿ, ಕಿಲ್ಲಾ ಗಲ್ಲಿ ಜನರ ಮಧ್ಯೆ ಘರ್ಷಣೆಗೆ ಕಾರಣವಾಗಿದೆ. ಸದ್ಯ ಪರಿಸ್ಥಿತಿ ತಿಳಿಗೊಳಿಸಿ ಯುವಕರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಾಗಿಲು ಮುರಿದು ಕಳ್ಳತನ: ಹುಬ್ಬಳ್ಳಿಯ ಗಣೇಶ್ ನಗರದಲ್ಲಿ ದುಷ್ಕರ್ಮಿಗಳು ಬಾಗಿಲು ಮುರಿದು ಮನೆಯೊಂದಕ್ಕೆ ಕನ್ನ ಹಾಕಿದ್ದಾರೆ. ಇಂದಿರಾ ಬಾಯಿ ಹಳ್ಯಾಳ ಅನ್ನೋರು ಬೆಂಗಳೂರಿಗೆ ತೆರಳಿದ್ದು, ಮನೆಯಲ್ಲಿ ಯಾರು ಇಲ್ಲದ್ದನ್ನ ಗಮನಿಸಿ ನಾಲ್ಕೈದು ಜನ ಖದೀಮರು ಬೆಲೆ ಬಾಳೋ ವಸ್ತುಗಳನ್ನ ದೋಚಿದ್ದಾರೆ. ಹಳೇ ಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಶ್ರೀಗಳ ಆಶೀರ್ವಾದ ಪಡೆದ ಶಾಸಕ: ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರು ಮಠಕ್ಕೆ ನೂತನ ಶಾಸಕ ಹೆಚ್.ಪಿ. ಮಂಜುನಾಥ್ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ್ರು. ಹುಣಸೂರು ಕ್ಷೇತ್ರದ ಶಾಸಕ ಮಂಜುನಾಥ್​ರನ್ನ ಶ್ರೀಗಳು ಆತ್ಮೀಯವಾಗಿ ಬರ ಮಾಡಿಕೊಂಡ್ರು. ಬಳಿಕ ಕೆಲ ಹೊತ್ತು ಚರ್ಚೆ ನಡೆಸಿದ್ರು.

ಹುಲಿ ದಾಳಿಗೆ ಹಸು ಬಲಿ: ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಹರಹರ ಗ್ರಾಮದಲ್ಲಿ ಹುಲಿ ದಾಳಿಗೆ ಹಸುವೊಂದು ಬಲಿಯಾಗಿದೆ. ಸುರಕ್ಷಾ ಸುಗಂಧ ಅನ್ನೋರು ಹಸುವನ್ನ ಮೇಯಲು ಮನೆ ಬಳಿ ಬಿಟ್ಟಿದ್ರು. ಈ ವೇಳೆ ಹುಲಿ ಅಟ್ಯಾಕ್ ಮಾಡಿ ಹಸುವನ್ನ ಕೊಂದು ಹಾಕಿದೆ. ಹುಲಿ ದಾಳಿಯಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಗ್ರೀನ್ ರಾಯಚೂರಿಗೆ ಚಾಲನೆ: ರಾಯಚೂರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗ್ರೀನ್ ರಾಯಚೂರ್ ಶ್ರಮದಾನಕ್ಕೆ ಚಾಲನೆ ನೀಡಿದ್ರು. 175 ನೇ ವಾರದ ಶ್ರಮದಾನದಲ್ಲಿ ಸರ್ಕಾರಿ ಶಾಲೆಯೊಂದ್ರಲ್ಲಿ ಸಸಿ ನೆಟ್ಟರು. ಈ ವೇಳೆ ಮಾತ್ನಾಡಿದ ಎಸ್​ಪಿ, ಮಹಿಳೆಯರ ರಕ್ಷಣೆಗೆ ರಚನೆಯಾಗಿರೋ ಓಬವ್ವ ಪಡೆಯ ಸದುಪಯೋಗ ಪಡೆಯಿರಿ ಅಂತಾ ಸಲಹೆ ನೀಡಿದ್ರು.

Published On - 1:33 pm, Sat, 14 December 19

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್