ಸಿದ್ದರಾಮಯ್ಯರನ್ನ ನೀವೇ ನಮ್ಮ ನಾಯಕರು ಎಂದ SBM ಟೀಂ
ಬೆಂಗಳೂರು: ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಎಸ್ಬಿಎಂ ಟೀಂ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಇನ್ನು ಎಸ್ಬಿಎಂ ಟೀಂ ಕಂಡು ಸಿದ್ದರಾಮಯ್ಯ ಸಹ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಎಸ್ಬಿಎಂ ಟೀಂ ಸೇರಿದಂತೆ 17 ಶಾಸಕರು ರಾಜೀನಾಮೆ ನೀಡಿದ್ದರು. ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದರು. ಇದೀಗ ಸಿದ್ದರಾಮಯ್ಯ ‘ಏನ್ರಯ್ಯಾ ಎಸ್ಬಿಎಂ ಒಟ್ಟಿಗೆ ಬಂದಿದ್ದೀರಲ್ಲ ಎಂದರು. ಈ ವೇಳೆ ನೀವೇ ನಮ್ಮ ನಾಯಕರು ಸಾರ್ […]
ಬೆಂಗಳೂರು: ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಎಸ್ಬಿಎಂ ಟೀಂ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಇನ್ನು ಎಸ್ಬಿಎಂ ಟೀಂ ಕಂಡು ಸಿದ್ದರಾಮಯ್ಯ ಸಹ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಮೈತ್ರಿ ಸರ್ಕಾರದ ಅವಧಿಯಲ್ಲಿ ಎಸ್ಬಿಎಂ ಟೀಂ ಸೇರಿದಂತೆ 17 ಶಾಸಕರು ರಾಜೀನಾಮೆ ನೀಡಿದ್ದರು. ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದರು. ಇದೀಗ ಸಿದ್ದರಾಮಯ್ಯ ‘ಏನ್ರಯ್ಯಾ ಎಸ್ಬಿಎಂ ಒಟ್ಟಿಗೆ ಬಂದಿದ್ದೀರಲ್ಲ ಎಂದರು. ಈ ವೇಳೆ ನೀವೇ ನಮ್ಮ ನಾಯಕರು ಸಾರ್ ಎಂದು ಮುನಿರತ್ನ, ಭೈರತಿ ಬಸವರಾಜ್ ಮತ್ತು ಎಸ್.ಟಿ.ಸೋಮಶೇಖರ್ ಉತ್ತರಿಸಿದ್ದಾರೆ. ಯಾವಾಗಂತೆ ಮಂತ್ರಿ ಮಾಡೋದು ಎಂದ ಸಿದ್ದರಾಮಯ್ಯ, ಯಡಿಯೂರಪ್ಪ ನಿಮ್ಮನ್ನ ಮಂತ್ರಿ ಮಾಡ್ತಾರೆ ಬಿಡಿ ಎಂದಿದ್ದಾರೆ.