AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲಾ-ಕಾಲೇಜುಗಳ ಪಠ್ಯದಲ್ಲಿ ಶೇ. 30ರಷ್ಟು ಕಡಿತ, ಸಂಜೆಗೆ ಅಧಿಕೃತ ಮಾಹಿತಿ: ಸಚಿವ ಸುರೇಶ್​ ಕುಮಾರ್​

ಒಂದನೇ ತರಗತಿಯಿಂದ ರೆಗ್ಯುಲರ್​ ಕ್ಲಾಸ್​ ಆರಂಭ ಮಾಡುವ ಬಗ್ಗೆ ತಜ್ಞರ ವರದಿ ಕೇಳಲಾಗುವುದು. 15ರನಂತರ ತಜ್ಞರ ವರದಿಯನ್ನು ಆಧರಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸುರೇಶ್​ ಕುಮಾರ್​ ಮಾಹಿತಿ ನೀಡಿದರು.

ಶಾಲಾ-ಕಾಲೇಜುಗಳ ಪಠ್ಯದಲ್ಲಿ ಶೇ. 30ರಷ್ಟು ಕಡಿತ, ಸಂಜೆಗೆ ಅಧಿಕೃತ ಮಾಹಿತಿ: ಸಚಿವ ಸುರೇಶ್​ ಕುಮಾರ್​
ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಚಿವ ಸುರೇಶ್​ ಕುಮಾರ್​
Lakshmi Hegde
| Updated By: ಸಾಧು ಶ್ರೀನಾಥ್​|

Updated on: Jan 12, 2021 | 12:31 PM

Share

ಚಾಮರಾಜನಗರ: ಶಾಲಾ ಕಾಲೇಜುಗಳ ಪಠ್ಯದಲ್ಲಿ ಶೇ.30ರಷ್ಟು ಕಡಿತ ಮಾಡಲಾಗುವುದು. ಈ ಬಗ್ಗೆ ಸಂಜೆ ಶಿಕ್ಷಣ ಆಯುಕ್ತರು ಸಮಗ್ರ ಮಾಹಿತಿ ನೀಡುತ್ತಾರೆ ಎಂದು ಶಿಕ್ಷಣ ಸಚಿವ ಎಸ್​. ಸುರೇಶ್​ ಕುಮಾರ್ ಹೇಳಿದರು.

ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಭೇಟಿ ಕೊಟ್ಟ ಸುರೇಶ್​ ​ ಕುಮಾರ್, ನಂತರ ಮಾತನಾಡಿ​, ಒಂದನೇ ತರಗತಿಯಿಂದ ರೆಗ್ಯುಲರ್​ ಕ್ಲಾಸ್​ ಆರಂಭ ಮಾಡುವ ಬಗ್ಗೆ ತಜ್ಞರ ವರದಿ ಕೇಳಲಾಗುವುದು. 15ರನಂತರ ತಜ್ಞರ ವರದಿಯನ್ನು ಆಧರಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಇನ್ನು ಖಾಸಗಿ ಶಾಲೆಗಳ ಶುಲ್ಕದ ಬಗ್ಗೆ ಮಾತನಾಡಿದ ಸಚಿವರು, ಈಗಾಗಲೇ ಕೆಲವು ಖಾಸಗಿ ಶಾಲೆಗಳು ಶೇ.30ರಷ್ಟು ಶುಲ್ಕ ಕಡಿತ ಮಾಡಲು ಮುಂದೆ ಬಂದಿವೆ. ಪಾಲಕರಿಗೆ ಮಕ್ಕಳ ಫೀಸ್​ ಕಟ್ಟಲು ತೊಂದರೆ ಆಗುತ್ತಿರುವ ಕಾರಣಕ್ಕೆ ಈ ನಿರ್ಧಾರ ಮಾಡಿದ್ದರೂ, ಶುಲ್ಕ ಕಡಿತ ಮಾಡಿದರೆ ಶಾಲಾ ಸಿಬ್ಬಂದಿ ವೇತನಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಪೋಷಕರು ಮತ್ತು ಶಾಲಾ ಸಿಬ್ಬಂದಿಯನ್ನು ಗಮನದಲ್ಲಿರಿಸಿಕೊಂಡು, ಜ. 15ರ ನಂತರ ತಜ್ಞರ ವರದಿ ಪಡೆಯಲಾಗುವುದು. ಅದನ್ನೆಲ್ಲ ಪರಿಗಣಿಸಿ ಶುಲ್ಕ ನಿಗದಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಯುವಕರನ್ನು ಬಡಿದೆಬ್ಬಿಸಿದ ವಿವೇಕಾನಂದರ ಜನ್ಮ ದಿನಕ್ಕೆ ರಂಗೋಲಿ ಅರ್ಪಣೆ