ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ 4 ವಕೀಲರ ಹೆಸರು ಶಿಫಾರಸು
Karnataka High Court: ವಕೀಲರಾದ ಅನಂತ್ ರಾಮನಾಥ್ ಹೆಗ್ಡೆ, ಸಿ.ಎಂ.ಪೂಣಚ್ಚ, ಎಸ್. ರಾಚಯ್ಯ, ಕೆ.ಎಸ್.ಹೇಮಲೇಖಾ ಅವರ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಈ ನಾಲ್ವರೂ ಹೈಕೋರ್ಟ್‌ನ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿಗಳಾಗಿ 4 ವಕೀಲರ ಹೆಸರನ್ನು ಸುಪ್ರೀಂಕೋರ್ಟ್‌ನ ಕೊಲಿಜಿಯಂನಿಂದ ಶಿಫಾರಸು ಮಾಡಲಾಗಿದೆ. ವಕೀಲರಾದ ಅನಂತ್ ರಾಮನಾಥ್ ಹೆಗ್ಡೆ, ಸಿ.ಎಂ.ಪೂಣಚ್ಚ, ಎಸ್. ರಾಚಯ್ಯ, ಕೆ.ಎಸ್.ಹೇಮಲೇಖಾ ಅವರ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಈ ನಾಲ್ವರೂ ಹೈಕೋರ್ಟ್‌ನ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕರ್ನಾಟಕ ಹೈಕೋರ್ಟ್ಗೆ ನ್ಯಾಯಮೂರ್ತಿ ನೇಮಕ ಮಾಡಬೇಕು ಎಂದು ಸುಪ್ರೀಂಕೋರ್ಟ್‌ನ ಕೊಲಿಜಿಯಂ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ವಕೀಲ ನಾಗೇಂದ್ರ ನಾಯಕ್ ನೇಮಕಕ್ಕೆ ಮತ್ತೊಮ್ಮೆ ಶಿಫಾರಸು ಮಾಡಿತ್ತು. ಈ ಬಗ್ಗೆ ಹಿಂದೆಯೂ ಕೊಲಿಜಿಯಂ ಶಿಫಾರಸು ಮಾಡಿತ್ತು. ಆದರೆ, ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಹಾಗಾಗಿ, ಮಾರ್ಚ್ 2ರ ಕೊಲಿಜಿಯಂ ಸಭೆಯಲ್ಲಿ ಮತ್ತೊಮ್ಮೆ ಶಿಫಾರಸು ಮಾಡಲಾಗಿತ್ತು.
ಇದನ್ನೂ ಓದಿ:
ಸಚಿವರ ಮನೆ ಬಳಿ ರಸ್ತೆ ಉತ್ತಮಗೊಂಡರೆ ಸಾಲದು; ಬಡವರ ಮನೆ ಬಳಿ ರಸ್ತೆಯೂ ಸರಿಯಾಗಬೇಕು: ಹೈಕೋರ್ಟ್
Published On - 3:24 pm, Fri, 8 October 21