15 ಕಿ.ಮೀ ದೂರ ನೀರಲ್ಲಿ ಕೊಚ್ಚಿ ಹೋಗಿಯೂ ಬದುಕಿದ ಬಡಜೀವ..!

ಮಂಗಳೂರು: ನೇತ್ರಾವತಿ ನದಿಯಲ್ಲಿ ಭಾರೀ ಅಚ್ಚರಿಯೊಂದು ನಡೆದಿದೆ. ನದಿ ನೀರಿನಲ್ಲಿ15 ಕಿ.ಮೀ ಕೊಚ್ಚಿಕೊಂಡು ಹೋದ್ರೂ ಚಮತ್ಕಾರಿ ರೀತಿಯಲ್ಲಿ 70 ವರ್ಷದ ವೃದ್ಧೆ ಪರಾಗಿದ್ದಾರೆ. ಈ ಅಚ್ಚರಿ ಕಂಡು ಬಂದದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇಗುಲ ಬಳಿ. ಕಡಬ ತಾಲೂಕಿನ ರಾಮಕುಂಜ ನಿವಾಸಿ  70 ವರ್ಷದ ವೃದ್ದೆ ರಾಮಕ್ಕ ಇಂದು ಬೆಳೆಗ್ಗೆ6 ಗಂಟೆ ಸುಮಾರಿಗೆ ಸಹಸ್ರಲಿಂಗೇಶ್ವರ ದೇಗುಲ ಬಳಿ ಇರುವ ನೇತ್ರಾವತಿ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಹಾರಿದ್ದಳು, ಸುಮಾರು 15 ಕಿಲೋಮೀಟರ್ ನೀರಿನಲ್ಲಿ […]

15 ಕಿ.ಮೀ ದೂರ ನೀರಲ್ಲಿ ಕೊಚ್ಚಿ ಹೋಗಿಯೂ ಬದುಕಿದ ಬಡಜೀವ..!
ಸಾಧು ಶ್ರೀನಾಥ್​

Updated on: Sep 12, 2019 | 5:12 PM

ಮಂಗಳೂರು: ನೇತ್ರಾವತಿ ನದಿಯಲ್ಲಿ ಭಾರೀ ಅಚ್ಚರಿಯೊಂದು ನಡೆದಿದೆ. ನದಿ ನೀರಿನಲ್ಲಿ15 ಕಿ.ಮೀ ಕೊಚ್ಚಿಕೊಂಡು ಹೋದ್ರೂ ಚಮತ್ಕಾರಿ ರೀತಿಯಲ್ಲಿ 70 ವರ್ಷದ ವೃದ್ಧೆ ಪರಾಗಿದ್ದಾರೆ.

ಈ ಅಚ್ಚರಿ ಕಂಡು ಬಂದದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇಗುಲ ಬಳಿ. ಕಡಬ ತಾಲೂಕಿನ ರಾಮಕುಂಜ ನಿವಾಸಿ  70 ವರ್ಷದ ವೃದ್ದೆ ರಾಮಕ್ಕ ಇಂದು ಬೆಳೆಗ್ಗೆ6 ಗಂಟೆ ಸುಮಾರಿಗೆ ಸಹಸ್ರಲಿಂಗೇಶ್ವರ ದೇಗುಲ ಬಳಿ ಇರುವ ನೇತ್ರಾವತಿ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಹಾರಿದ್ದಳು, ಸುಮಾರು 15 ಕಿಲೋಮೀಟರ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ.

ತೇಲಿಕೊಂಡು ಬಂದಿದ್ದನ್ನು ಕಂಡ ನಾವಿಕ ಅಬ್ಬಾಸ್ ಮತ್ತು ಕೇಶವರಿಂದ ರಾಮಕ್ಕನನ್ನು  ಬಂಟ್ವಾಳ ತಾಲೂಕಿನ ಕಡೆಶಿವಾಲಯದ ಬಳಿ ರಕ್ಷಿಸಿದ್ದಾರೆ. ವೃದ್ಧೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಯದಿಂದ ಪರಾಗಿದ್ದಾಳೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us