ಮೈಸೂರು ಜಂಬೂ ಸವಾರಿಗೆ ಕೊಪ್ಪಳದಲ್ಲಿ ಶತಮಾನದ ಹಿಂದೆ ನಡೆದ ಅಂಬಾರಿ ಮೆರವಣಿಗೆ ಪ್ರೇರಣೆ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 11, 2024 | 9:46 PM

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡದಲ್ಲಿ ಇಂದು ಅದ್ದೂರಿ ದಸರಾ ಜಂಬೂಸವಾರಿ ನಡೆದಿದೆ. ಮೈಸೂರಲ್ಲಿ ನಡೆಯುವ ಅದ್ಧೂರಿ ದಸರಾಗೆ ಐತಿಹಾಸಿಕ ಹಿನ್ನೆಲೆ ದೊಡ್ಡದಿದೆ. ಅದೂ ಇಂದು ನಿನ್ನೆಯದಲ್ಲ, ಅದೂ ಮೊದಲು ಶುರುವಾಗಿದ್ದು, ಈಗಿನ ಕಲ್ಯಾಣ ಕರ್ನಾಟಕ ಭಾಗದ ಕುಮ್ಮಟ ದುರ್ಗದಲ್ಲಿ. 11ನೇ ಶತಮಾನದಲ್ಲಿ ಶುರುವಾದ ದಸರಾ ಜಂಬೂ ಸವಾರಿ, ಇಂದು ವಿಶ್ವ ವಿಖ್ಯಾತ ಮೈಸೂರು ದಸರಾ ಆಗಿ ಪ್ರಸಿದ್ದಿ ಪಡೆದಿದೆ ಅಂತ ಹೇಳಲಾಗುತ್ತದೆ.

ಮೈಸೂರು ಜಂಬೂ ಸವಾರಿಗೆ ಕೊಪ್ಪಳದಲ್ಲಿ ಶತಮಾನದ ಹಿಂದೆ ನಡೆದ ಅಂಬಾರಿ ಮೆರವಣಿಗೆ ಪ್ರೇರಣೆ
Follow us on

ಕೊಪ್ಪಳ, ಅಕ್ಟೋಬರ್​ 11: ಜಂಬೂ ಸವಾರಿ (jamboo savari) ಅಂದರೆ ಅದು ಮೈಸೂರು ಅಂತ ಇಡಿ ವಿಶ್ವಕ್ಕೆ ಗೊತ್ತು. ದಸರಾ ಹಬ್ಬದ ದಿನ ಇಡಿ ಜಗತ್ತಿನ ಕಣ್ಣು ಮೈಸೂರು ಅಂಬಾರಿಯ ಮೇಲಿರುತ್ತದೆ. ಆದರೆ ಆ ಜಂಬೂ ಸವಾರಿಗೆ ಪ್ರೇರಣೆ ಸಿಕ್ಕಿದ್ದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಶತಮಾನದ ಹಿಂದೆ ನಡೆದ ಅಂಬಾರಿ ಮೆರವಣಿಗೆ ಅನ್ನೋದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ಅದು 11ನೇ ಶತಮಾನದಲ್ಲಿಯೇ ಅಂಬಾರಿ ಮೆರವಣಿಗೆ ಅದ್ದೂರಿಯಾಗಿ ನಡೆಯುತ್ತಿತ್ತು. ಇದೀಗ ಪ್ರತಿ ವರ್ಷ ಆ ಜಾಗದಲ್ಲಿ ಮೈಸೂರು ದಸರಾಗೂ ಒಂದು ದಿನ ಮುಂಚೆ ಜಂಬೂ ಸವಾರಿ ನಡೆಯತ್ತೆ. ಈ ಕುರಿತಾದ ಕುತೂಹಲಕಾರಿ ಸ್ಟೋರಿ ಇಲ್ಲಿದೆ.

ಕೊಪ್ಪಳದ ಹೇಮಗುಡ್ಡದಲ್ಲಿ ಇಂದು ಅದ್ದೂರಿ ದಸರಾ ಜಂಬೂಸವಾರಿ 

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡದಲ್ಲಿ ಇಂದು ಅದ್ದೂರಿ ದಸರಾ ಜಂಬೂಸವಾರಿ ನಡೆದಿದೆ. ಮೈಸೂರಲ್ಲಿ ನಡೆಯುವ ಅದ್ಧೂರಿ ದಸರಾಗೆ ಐತಿಹಾಸಿಕ ಹಿನ್ನೆಲೆ ದೊಡ್ಡದಿದೆ. ಅದೂ ಇಂದು ನಿನ್ನೆಯದಲ್ಲ, ಅದೂ ಮೊದಲು ಶುರುವಾಗಿದ್ದು, ಈಗಿನ ಕಲ್ಯಾಣ ಕರ್ನಾಟಕ ಭಾಗದ ಕುಮ್ಮಟ ದುರ್ಗದಲ್ಲಿ. ಹೌದು ಈಗಿನ ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡದಲ್ಲಿ 11ನೇ ಶತಮಾನದಲ್ಲಿ ಶುರುವಾದ ದಸರಾ ಜಂಬೂ ಸವಾರಿ, ಇಂದು ವಿಶ್ವ ವಿಖ್ಯಾತ ಮೈಸೂರು ದಸರಾ ಆಗಿ ಪ್ರಸಿದ್ದಿ ಪಡೆದಿದೆ ಅಂತ ಹೇಳಲಾಗುತ್ತದೆ.

ಇದನ್ನೂ ಓದಿ: ದುರ್ಗಾ ದೇವಿ ಮೂರ್ತಿ ಮೆರವಣಿಗೆ: ಬೆಂಗಳೂರಿನ ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ, ಪಾರ್ಕಿಂಗ್​ ನಿಷೇಧ

11ನೇ ಶತಮಾನದಲ್ಲಿ ಗಂಡುಗಲಿ ಅಂತಲೇ ಪ್ರಸಿದ್ದಿ ಪಡೆದಿದ್ದ ಕುಮಾರರಾಮನ ಸಾಮ್ರಾಜ್ಯದ ದೇವತೆಯಾದ ದುರ್ಗಾಪರಮೇಶ್ವರಿ ದೇವಿಗೆ ಪ್ರತಿ ವರ್ಷ ಗಜಪಡೆಯ ಮೇಲೆ ಜಂಬೂಸವಾರಿಯನ್ನು ಅಂದೇ ನಡೆಸಲಾಗುತ್ತಿತ್ತಂತೆ. ಈ ಪರಂಪರೆ 14ನೇ ಶತಮಾನದಲ್ಲಿ ವಿಜಯನಗರ ಅರಸರು ನಡೆಸಿಕೊಂಡು ಬಂದಿದ್ದರು. ಆಮೇಲೆ ಪೆನುಗೊಂಡ ನಂತರ ಅದು ಮೈಸೂರು ಅರಸರು ಅದನ್ನು ನಡೆಸಿಕೊಂಡು ಬಂದರು. ಮೈಸೂರು ಅರಸರ ಕಾಲದಲ್ಲಿ ಚಿನ್ನದ ಅಂಬಾರಿಯ ಮೇಲೆ ಜಂಬೂ ಸವಾರಿ ನಡೆಯುತ್ತ ಬಂದಿದ್ದು ಇಂದು ವಿಶ್ವ ವಿಖ್ಯಾತಿ ಪಡೆದಿದೆ. ಆದರೆ ಈ ಜಂಬೂ ಸವಾರಿಯ ಮೂಲ ಸ್ಥಾನ ಅಂದಿನ ಕುಮ್ಮಟದುರ್ಗ, ಇಂದಿನ ಹೇಮಗುಡ್ಡದಲ್ಲಿ ಮೈಸೂರು ದಸರಾಗೂ ಒಂದು ದಿನ ಮೊದಲು ಆಯುಧ ಪೂಜೆಯ ದಿನ ದುರ್ಗಾಪರಮೇಶ್ವರಿ ದೇವಿಗೆ ಆನೆಯ ಮೇಲೆ ಅದ್ಧೂರಿಯಾಗಿ ಜಂಬೂ ಸವಾರಿ ನೆರವೇರತ್ತದೆ. ಇಂದು ಅದ್ದೂರಿ ಜಂಬೂ ಸವಾರಿ ನಡೆಯಿತು.

ಮೈಸೂರು ದಸರಾಗೆ ಪ್ರೇರಣೆಯಾದ ಹೇಮಗುಡ್ಡ ದಸರಾ ಅನಾದಿಕಾಲದಿಂದಲೂ ಕೂಡ ಪ್ರತಿ ವರ್ಷ ಕಟ್ಟಿಗೆಯ ಅಂಬಾರಿಯಲ್ಲಿ ಆನೆಯ ಮೇಲೆ ದೇವಿಯ ಮೆರವಣಿಗೆ ನಡೆಸಲಾಗತ್ತಿತ್ತಂತೆ. ಇದೇ ಪರಂಪರೆ ಇದೀಗ ಮೈಸೂರಿನಲ್ಲಿ ಮುಂದುವರಿದಿದೆ. ಪರಂಪರೆ ಆರಂಭವಾದ ಸ್ಥಳದಲ್ಲೇ ಅಂಬಾರಿ ಮೆರವಣಿಗೆ ಪರಂಪರೆ ನಿಂತುಹೋಗಿತ್ತು. ಆದರೆ ಕಳೆದ ನಲವತ್ತು ವರ್ಷಗಳಿಂದ ಹಳೆಯ ಪರಂಪರೆಯನ್ನು ಮತ್ತೆ ಮುಂದುವರಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: Dasara: ಖಾಸಗಿ ಬಸ್​​ಗಳ ಟಿಕೆಟ್ ದರ ದುಪ್ಪಟ್ಟು, ಪ್ರಯಾಣಿಕರು ಕಂಗಾಲು; ನಿಮ್ಮೂರಿಗೆ ಎಷ್ಟು ನೋಡಿ

ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಕೊಪ್ಪಳ, ಗಂಗಾವತಿ ಸೇರಿ ಸುತ್ತಮುತ್ತಲಿನ ಜನರು ಭಾಗವಹಿಸಿ ಈ ದಸರಾ ವೈಭೋಗವನ್ನ ಕಣ್ತುಂಬಿಕೊಳ್ತಾರೆ. ಮೈಸೂರು ದಸರಾ ಮಾದರಿಯಲ್ಲೇ ನಡೆಯುವ ದುರ್ಗಾಪರಮೇಶ್ವರಿ ದೇವಿಯ ಜಂಬೂಸವಾರಿ ಕಲ್ಯಾಣ ಕರ್ನಾಟಕ ಭಾಗದ ದಸರಾ ಎಂದೆ ಖ್ಯಾತಿ ಪಡೆದಿದ್ದು, ಜನರನ್ನ ತನ್ನತ್ತ ಆಕರ್ಷಿಸುತ್ತಿದೆ. ಇನ್ನೂ ಹೇಮಗುಡ್ಡ ದಸರಾ ವೀಕ್ಷಣೆಗೆ ಬರುವ ಜನರು ಮೈಸೂರು ದಸರಾ ನೋಡಿದಷ್ಟೇ ಖುಷಿ ಪಡುತ್ತಾರೆ.

ಶರನ್ನವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಗಳು ಸಾಮೂಹಿಕ ವಿವಾಹಗಳು ಸಹ ಇಲ್ಲಿ ನಡೆಯುತ್ತವೆ. ಹೇಮಗುಡ್ಡದಲ್ಲಿ ನಡೆಯುವ ಜಂಬೂ ಸವಾರಿ ಮೈಸೂರು ದಸರಾ ಜಂಬೂ ಸವಾರಿಯನ್ನೇ ನೆನಪು ಮಾಡುತ್ತೆ. ಸದ್ಯ ಮೈಸೂರಿಗೆ ಹೋಗಲಿಕ್ಕಾಗದೇ ಇರೋರು ಇಲ್ಲಿನ ಜಂಬೂ ಸವಾರಿ ನೋಡಿ ಸಂತಸಪಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:42 pm, Fri, 11 October 24