ಅಕ್ರಮ ಮರಳುಗಾರರ ಪರ ಬಂದ ಶಾಸಕಗೆ ಖಡಕ್ ಉತ್ತರ ಕೊಟ್ಟ ಲೇಡಿ ಅಧಿಕಾರಿ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 02, 2024 | 4:00 PM

ಕಾರವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಿನ್ನೆ ನಡೆದ ಕೆಡಿಪಿ ಸಭೆಯಲ್ಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ್ ಮತ್ತು ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಡಿಡಿ ಆಶಾ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಅಕ್ರಮ ಮರಳು ಸಾಗಾಟ ಮಾಡುವವರಿಗೆ ದಂಡ ಹಾಕಿದ ಬಗ್ಗೆ ಪ್ರಶ್ನಿಸಿದ ಶಾಸಕರಿಗೆ ತುಂಬಿದ ಸಭೆಯಲ್ಲಿ ಮಹಿಳಾ ಅಧಿಕಾರಿ ಖಡಕ್ ತಿರುಗೇಟು ನೀಡಿದ್ದಾರೆ.

ಅಕ್ರಮ ಮರಳುಗಾರರ ಪರ ಬಂದ ಶಾಸಕಗೆ ಖಡಕ್ ಉತ್ತರ ಕೊಟ್ಟ ಲೇಡಿ ಅಧಿಕಾರಿ
ಅಕ್ರಮ ಮರಳುಗಾರರ ಪರ ಬಂದ ಶಾಸಕಗೆ ಖಡಕ್ ಉತ್ತರ ಕೊಟ್ಟ ಲೇಡಿ ಅಧಿಕಾರಿ
Follow us on

ಕಾರವಾರ, ಅಕ್ಟೋಬರ್​ 02: ಅಕ್ರಮ ಮರಳು ಸಾಗಾಟ (Illegal sand) ಮಾಡುವವರಿಗೆ ದಂಡ ಹಾಕಿದ ಅಧಿಕಾರಿಗೆ ಶಿರಸಿ ಶಾಸಕ ಭೀಮಣ್ಣ ನಾಯ್ಕ್​​ ಕ್ಲಾಸ್​ ತೆಗದುಕೊಂಡಿದ್ದಾರೆ. ಶಾಸಕರ ಮಾತಿಗೆ ತುಂಬಿದ ಸಭೆಯಲ್ಲಿ ಮಹಿಳಾ ಅಧಿಕಾರಿ ಡಿಡಿ ಆಶಾ ಖಡಕ್ ತಿರುಗೇಟು ಕೊಟ್ಟಿರುವಂತಹ ಘಟನೆ ಕಾರವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಿನ್ನೆ ನಡೆದ ಕೆಡಿಪಿ ಸಭೆಯಲ್ಲಿ ನಡೆದಿದೆ.

ಶಾಸಕ ಮತ್ತು ಮಹಿಳಾ ಅಧಿಕಾರಿ ಮಧ್ಯೆ ಮಾತಿನ ಚಕಮಕಿ

ಅಕ್ರಮ ಮರಳು ಸಾಗಾಟ ಮಾಡಿದವರಿಗೆ ದಂಡ ವಿಧಿಸಿ ಹಿನ್ನಲೆ ಶಾಸಕ ಭೀಮಣ್ಣ ನಾಯ್ಕ್ ಮತ್ತು ಕಾರವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಡಿಡಿ ಆಶಾ ನಡುವೆ ಮಾತಿನ ಚಕಮಕಿ ನಡೆದಿದೆ. ನಿಯಮದ ಪ್ರಕಾರ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕರಿಗೆ ತಿರುಗೇಟು ಕೊಟ್ಟಿದ್ದಾರೆ.

ಇದನ್ನೂ ಓದಿ: ವಸತಿ ನಿಲಯದ ವಾರ್ಡನ್​ನಿಂದ ಸ್ವಚ್ಚತಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ; ಕೊಲೆ ಮಾಡುವುದಾಗಿ ಬೆದರಿಕೆ

ಅಕ್ರಮ ಮರಳು ಸಾಗಾಟ ಮಾಡುವವರು ನಮ್ಮ ಕ್ಷೇತ್ರದಲ್ಲಿ ಮಾತ್ರ ಸಿಗುತ್ತಾರೆ ನಿಮಗೆ, ಯಾಕೆ ಪದೇ ಪದೇ ಅಮಾಯಕರ ಮೇಲೆ ಕೇಸ್ ಹಾಕಿ ಮನೆ ಕಟ್ಟುವವರಿಗೆ ತೊಂದರೆ ಕೊಡುತ್ತೀರಾ, ಜಿಲ್ಲೆಯಲ್ಲಿ ಬೇರೆ ಎಲ್ಲೂ ಅಕ್ರಮ ಮರಳು ಸಾಗಾಟ ನಡೆಯುವುದೆ ಇಲ್ವಾ, ನನ್ನ ಕ್ಷೇತ್ರದಲ್ಲೇ ಹೆಚ್ಚು ಕೇಸ್ ದಾಖಲು ಮಾಡಿ ದಂಡ ವಿಧಿಸುವುದು ಯಾಕೆ ಎಂದು ಶಾಸಕ ಭೀಮಣ್ಣ ನಾಯ್ಕ್ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಉತ್ತರಿಸಿದ ಡಿಡಿ ಆಶಾ, ಜಿಲ್ಲೆಯ ಮರಳುಗಾರಿಕೆ ಪ್ರಕರಣ ಸದ್ಯಕ್ಕೆ ಕೋರ್ಟ್​ನಲ್ಲಿದೆ. ಇನ್ನೂ ಮಾರ್ನಾಲ್ಕು ತಿಂಗಳಲ್ಲಿ ಕೋರ್ಟ್ ಆದೇಶ ಬರಬಹುದು. ಜಿಲ್ಲೆಯಲ್ಲಿ ಮರಳುಗಾರಿಕೆ ಸದ್ಯಕ್ಕೆ ನಿಷೇಧ ಮಾಡಲಾಗಿದೆ ಎಂದು ಹೇಳಿದ್ದಾರೆ.

ಅಧಿಕಾರಿ ಆಶಾ ಮಾತಿಗೆ ಭಿಮಣ್ಣಾ ನಾಯ್ಕ್​​ಗೆ ಕೋಪ

ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮರಳು ಸಾಗಾಟ ಕಂಡು ಬಂದರೆ ದಂಡ ವಿಧಿಸುವುದು ನಿಯಮ. ನಿಯಮದ ಪ್ರಕಾರ ದಂಡ ತೆಗೆದುಕೊಳ್ಳುವಂತೆ ನಮ್ಮ ಸಿಬ್ಬಂದಿಗೆ ಸೂಚಿಸಿದ್ದೇನೆ. ನಾನು ಒಬ್ಬಳೇ ಮಾಡುತ್ತಿಲ್ಲ. ಪೊಲೀಸ್ ಇಲಾಖೆ ಕೂಡ ಮಾಡುತ್ತಿದ್ದಾರೆ. ಅವರಿಗೂ ಬೇಕಾದರೆ ಕರೆದು ಕೇಳಿ ನಾನು ನಿಯಮದ ಪ್ರಕಾರ ಕೆಲಸ ಮಾಡುತ್ತಿದ್ದೇನೆ ಎಂದು ಖಡಕ್​ ಆಗಿ ಹೇಳಿದ್ದಾರೆ.

ಇದನ್ನೂ ಓದಿ: ಕಾರವಾರ ಕಡಲ ತೀರದಲ್ಲಿ ಹಾರಾಡುವ ಗಾಳಿಪಟಗಳ ಫೋಟೋ ನೋಡಿ

ಅಧಿಕಾರಿ ಆಶಾ ಮಾತಿಗೆ ಕೋಪಗೊಂಡ ಶಾಸಕ ಭೀಮಣ್ಣ ನಾಯ್ಕ್​, ಆಯ್ತು ನಿಯಮದ ಪ್ರಕಾರ ಎಷ್ಟು ದಿನ ಜಿಲ್ಲೆಯಲ್ಲಿ ಕೆಲಸ ಮಾಡುತ್ತೀರಾ ನೊಡುತ್ತೇನೆ ಎಂದಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವ ಮಂಕಾಳು ವೈದ್ಯ ಆ ಮೇಲೆ ಕೂತು ಮಾತನಾಡೋಣ ಸದ್ಯಕ್ಕೆ ಇಲ್ಲಿಗೆ ನಿಲ್ಲಿಸಿ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.