ಕಾರವಾರ ಕಡಲ ತೀರದಲ್ಲಿ ಹಾರಾಡುವ ಗಾಳಿಪಟಗಳ ಫೋಟೋ ನೋಡಿ

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಕಾರವಾರ ಕಡಲ ತೀರದಲ್ಲಿ ಗಾಳಿಪಟ ಉತ್ಸವ ಆಯೋಜಿಸಲಾಗಿತ್ತು. ಸೂರ್ಯಸ್ತ ಸಮಯದಲ್ಲಿ ಕಡಲ ತೀರದಲ್ಲಿನ ಗಾಳಿ ಪಟ ಉತ್ಸವ ನೋಡುಗರ ಕಣ್ಮನ ಸೆಳೆಯಿತು.

ಸೂರಜ್​, ಮಹಾವೀರ್​ ಉತ್ತರೆ
| Updated By: ವಿವೇಕ ಬಿರಾದಾರ

Updated on:Sep 30, 2024 | 9:07 AM

World Tourism Day: Kite Festival in Uttar Kannada Karwar sea bank

ಮಳೆಗಾಲದಲ್ಲಿ ಹತ್ತು ಹಲವು ದುರಂತ ಸಂಭವಿಸಿದ ಉತ್ತರ ಕನ್ನಡ ಜಿಲ್ಲೆ ಮತ್ತೆ ಪ್ರವಾಸಿಗರಿಗೆ ಕೈ ಬಿಸಿ ಕರೆಯುತ್ತಿದೆ. ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಕಾರವಾರ ಕಡಲ ತೀರದಲ್ಲಿ ಗಾಳಿಪಟ ಉತ್ಸವ ಆಯೋಜಿಸಲಾಗಿತ್ತು. ಸೂರ್ಯಸ್ತ ಸಮಯದಲ್ಲಿ ಕಡಲ ತೀರದಲ್ಲಿನ ಗಾಳಿ ಪಟ ಉತ್ಸವ ನೋಡುಗರ ಕಣ್ಮನ ಸೆಳೆಯಿತು.

1 / 7
World Tourism Day: Kite Festival in Uttar Kannada Karwar sea bank

ಒಂದೆಡೆ ಎಂತವರನ್ನು ಸಹ ಆಕರ್ಷಿಸುವಂತಹ ಕಡಲ ತೀರದಲ್ಲಿನ ಸೂರ್ಯಾಸ್ತದ ದೃಶ್ಯ. ಇನ್ನೊಂದೆಡೆ ಇಂತಹ ಸುಂದರ ಪರಿಸರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಡಲ ತೀರದಲ್ಲಿ ಸೇರಿ ಗಾಳಿ ಪಟವನ್ನ ಕೈನಲ್ಲಿ ಹಿಡಿದು ಹಾರಿಸುತ್ತಾ ಎಂಜಾಯ್ ಮಾಡುತ್ತಿರುವ ಪ್ರವಾಸಿಗರು, ಸಾಯಂಕಾಲದ ಸಮಯದಲ್ಲಿ ಕಣ್ಮನ ಸೆಳೆಯುವ ಅಲೆಗಳ ಅಬ್ಬರ. ಈ ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ.

2 / 7
World Tourism Day: Kite Festival in Uttar Kannada Karwar sea bank

ವಿಶ್ವ ಪ್ರವಾಸೋದ್ಯಮ ದಿನದ ಹಿನ್ನಲೆಯಲ್ಲಿ ಉತ್ತರ ಕನ್ನಡ ಪ್ರವಾಸೋದ್ಯಮ ಇಲಾಖೆ ಇಂದು ಗಾಳಿಪಟ ಹಾರಿಸುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಕಾರವಾರ ನಗರದ ಪ್ರಸಿದ್ಧ ಠಾಗೋರ್ ಕಡಲ ತೀರದಲ್ಲಿ ಈ ಸ್ಪರ್ಧೆ ಆಯೋಜಿಸಿದ್ದು ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.

3 / 7
World Tourism Day: Kite Festival in Uttar Kannada Karwar sea bank

ಕೆಲವರು ವಿಭಿನ್ನ ಗಾಳಿಪಟವನ್ನು ಹಿಡಿದು ಕಡಲ ತೀರಕ್ಕೆ ಬಂದರೆ, ಗಾಳಿಪಟ ಇಲ್ಲದೇ ಇರುವವರಿಗೆ ಪ್ರವಾಸೋದ್ಯಮ ಇಲಾಖೆಯಿಂದಲೇ ಗಾಳಿಪಟವನ್ನು ವಿತರಿಸಲಾಯಿತು. ಸುಮಾರು 200ಕ್ಕೂ ಅಧಿಕ ಜನರು ಕಡಲ ತೀರದಲ್ಲಿ ಗಾಳಿಪಟವನ್ನ ಹಾರಿಸಿ ಎಂಜಾಯ್ ಮಾಡಿದರು. ಇನ್ನೊಂದೆಡೆ ಈ ದೃಶ್ಯವನ್ನ ಸಹ ನೋಡುವುದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಕಡಲ ತೀರದಲ್ಲಿ ಜನರು ಜಮಾವಣೆ ಆಗಿದ್ದರು.

4 / 7
World Tourism Day: Kite Festival in Uttar Kannada Karwar sea bank

ಪ್ರವಾಸೋದ್ಯಮ ದಿನಾಚರಣೆ ಹಿನ್ನಲೆಯಲ್ಲಿ ಕಳೆದ ಮೂರು ದಿನಗಳಿಂದ ಪ್ರವಾಸೋದ್ಯಮ ಇಲಾಖೆ ವಿಭಿನ್ನ ಕಾರ್ಯಕ್ರಮವನ್ನು ಕಡಲ ತೀರದಲ್ಲಿ ಆಯೋಜಿಸುತ್ತಾ ಬಂದಿದೆ. ಇವತ್ತು ಗಾಳಿಪಟ ಸ್ಪರ್ಧೆಯನ್ನು ಆಯೋಜನೆ ಮಾಡಿದ್ದು ಅದರಲ್ಲೂ ಭಾನುವಾರ ಆಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿಯೇ ಪ್ರವಾಸಿಗರು ಆಗಮಿಸಿದ್ದರು.

5 / 7
World Tourism Day: Kite Festival in Uttar Kannada Karwar sea bank

ಇನ್ನು ಪ್ರತಿಯೊಬ್ಬರು ಬಗೆ ಬಗೆಯ ಗಾಳಿಪಟ ಹಾರಿಸುತ್ತಾ ಎಂಜಾಯ್ ಮಾಡಿದರು. ಇದರೊಟ್ಟಿಗೆ ಸಂಜೆ ಆಗಿದ್ದರಿಂದ ಸೂರ್ಯಾಸ್ತದ ದೃಶ್ಯ ಸಹ ಎಂತವರನ್ನ ಆಕರ್ಷಿಸುವಂತಿತ್ತು. ಕಡಲ ತೀರದಲ್ಲಿ ಇಂತಹ ಸ್ಪರ್ಧೆಗಳು ಆಯೋಜನೆ ಮಾಡುವುದರಿಂದ ಪ್ರವಾಸಿಗರನ್ನು ಆಕರ್ಷಿಸಲು ಸಹಕಾರಿಯಾಗಲಿದೆ ಎಂದು ಸ್ಪರ್ಧೆಗೆ ಆಗಮಿಸಿದ್ದ ಸಾರ್ವಜನಿಕರು ಅಭಿಪ್ರಾಯಪಟ್ಟರು.

6 / 7
World Tourism Day: Kite Festival in Uttar Kannada Karwar sea bank

ಗಾಳಿಪಟ ಸ್ಪರ್ಧೆಗೆ ಶಾಸಕ ಸತೀಶ್ ಸೈಲ್, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಸೇರಿದಂತೆ ಹಲವರು ಆಗಮಿಸಿ ತಾವು ಗಾಳಿಪಟವನ್ನ ಹಾರಿಸಿ ಪ್ರವಾಸಿಗರಿಗೆ ಹುರಿದುಂಬಿಸಿದರು. ಅಲ್ಲದೇ ಕಾರವಾರ ಪ್ರವಾಸೋದ್ಯಮವನ್ನ ಗೋವಾ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಸರ್ಕಾರಕ್ಕೆ ಮನವಿ ಸಲ್ಲಿಸುವ ಬಗ್ಗೆ ಮಾಹಿತಿ ನೀಡಿದರು.

7 / 7

Published On - 9:06 am, Mon, 30 September 24

Follow us
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ
ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ
Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ
Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಕರ್ತವ್ಯನಿರತ ಪೊಲೀಸರ ಮೇಲೆ ಜೋರು ಮಾಡಲು ಮುಂದಾದ ಕಾಂಗ್ರೆಸ್ಸಿಗರು
ಕರ್ತವ್ಯನಿರತ ಪೊಲೀಸರ ಮೇಲೆ ಜೋರು ಮಾಡಲು ಮುಂದಾದ ಕಾಂಗ್ರೆಸ್ಸಿಗರು