ಬೆಂಗಳೂರು, ಮೇ 29: ರಾಜ್ಯ ರಾಜಧಾನಿ ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು (brand Bangaluru) ಮಾಡಲು ಸರ್ಕಾರ ಈಗಾಗಲೇ ನಿರ್ಧರಿಸಿ ಆಗಿದೆ. ಅದಕ್ಕಾಗಿ ನಾನಾ ಕ್ಷೇತ್ರಗಳ ಸಲಹೆ ಕೂಡ ಪಡೆಯಲಾಗಿದೆ. ಇದೀಗ ಇದೇ ಬ್ರ್ಯಾಂಡ್ ಬೆಂಗಳೂರು ಕನಸಿಗೆ ತಂತ್ರಜ್ಞಾನ (technology) ಟಚ್ ನೀಡಲು ಸರ್ಕಾರ ಮುಂದಾಗಿದೆ. ಆ ಮೂಲಕ ಗ್ರೀನ್ ಬೆಂಗಳೂರು, ಕ್ಲೀನ್ ಬೆಂಗಳೂರಿಗಾಗಿ ತಂತ್ರಜ್ಞಾನದ ಮೊರೆ ಹೋಗಲಾಗಿದೆ. ಈ ನಿಟ್ಟಿನಲ್ಲಿ ಇನ್ಮುಂದೆ ಬೆಂಗಳೂರಿನ ಸಮಸ್ಯೆಗಳನ್ನ ಎಐ ತಂತ್ರಜ್ಞಾನದ ಮೂಲಕ ನಿರ್ವಹಣೆ ಮಾಡಲಾಗುತ್ತದೆ. ನಗರದ ಸಮಸ್ಯೆಗಳನ್ನು ಪತ್ತೆ ಹಚ್ಚುವ ಎಐ ತಂತ್ರಜ್ಞಾನ ರಿಪೋರ್ಟ್ ಕೂಡ ನೀಡುತ್ತದೆ.
ಬೆಂಗಳೂರಿನ ರಸ್ತೆಗುಂಡಿ, ಕಸ, ಫುಟ್ಪಾತ್ ಸಮಸ್ಯೆ ಮೇಲೆ ಕ್ಯಾಮರಾ ನಿಗಾ ಇಡಲಿದೆ. ಎಐ ಕ್ಯಾಮೆರಾ ಅಳವಡಿಸಿರುವ ವಾಹನದ ಮೂಲಕ ಸಮಸ್ಯೆ ಪತ್ತೆ ಮಾಡಲಾಗುತ್ತದೆ. ಇದಕ್ಕಾಗಿ ಪಾಲಿಕೆಯಿಂದ ಸದ್ಯದಲ್ಲೇ ಕ್ಯಾಮರಾ ಅಳವಡಿಸಿರುವ ವಾಹನಗಳು ರಸ್ತೆಗಿಳಿಸಲು ಯೋಜನೆ ರೂಪಿಸಲಾಗಿದೆ.
ಇದನ್ನೂ ಓದಿ: ನಗರದ ಸಮಸ್ಯೆಗಳನ್ನು ವೀಕ್ಷಿಸಿದ ಬಳಿಕ ಸಿದ್ದರಾಮಯ್ಯ ದುರಸ್ತಿಗಾಗಿ ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ: ಆರ್ ಅಶೋಕ
ಈ ವಾಹನಗಳು ರಸ್ತೆಗುಂಡಿ, ಕಸ ವಿಲೇವಾರಿ ಸೇರಿ ಹಲವು ಸಮಸ್ಯೆಗಳನ್ನು ಮಾನಿಟರ್ ಮಾಡಲಿವೆ. ರಸ್ತೆಯಲ್ಲಿ ಏನಾದರೂ ಸಮಸ್ಯೆ ಇದ್ರೆ ಆಯಾ ವಲಯದ ಇಂಜಿನಿಯರ್ಗಳಿಗೆ ಮೆಸೇಜ್ ಹೋಗುತ್ತದೆ. ಎಐ ತಂತ್ರಜ್ಞಾನ ವಾಹನದ ಮೂಲಕ ಮೊಬೈಲ್ಗೆ ಮಾಹಿತಿ ನೀಡಲಿದೆ.
ಇದನ್ನೂ ಓದಿ: BBMP Budget: ಇಂದು ಬಿಬಿಎಂಪಿ ಬಜೆಟ್, ಬ್ರ್ಯಾಂಡ್ ಬೆಂಗಳೂರಿಗೆ ಏನೆಲ್ಲಾ ನಿರೀಕ್ಷೆ? ಇಲ್ಲಿದೆ ವಿವರ
ಸದ್ಯ ಪಾಲಿಕೆ ವ್ಯಾಪ್ತಿಯಲ್ಲಿ 15 ಕ್ಯಾಮರಾ ಅಳವಡಿಸಿರುವ ವಾಹನ ಸಂಚಾರಕ್ಕೆ ಪ್ಲ್ಯಾನ್ ಮಾಡಲಾಗುತ್ತಿದೆ. ವಾರಕ್ಕೆ 1,400 ಕಿ.ಮೀ ಸಂಚರಿಸಲಿರುವ ವಾಹನ ವರದಿ ನೀಡಲಿದೆ. ಇದರಿಂದ ನಗರದಲ್ಲಿನ ಸಮಸ್ಯೆಗೆ ಶೀಘ್ರವಾಗಿ ಪರಿಹಾರ ನೀಡುವುದಕ್ಕೆ ಪಾಲಿಕೆ ನಿರ್ಧರಿಸಿದೆ.
ಇಷ್ಟೇ ಅಲ್ಲ, ಮೊನ್ನೆ ತಾನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರು ಪ್ರದಕ್ಷಿಣೆ ನಡೆಸಿದ್ದರು. ನಗರದಲ್ಲಿನ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದರು. ಬಳಿಕ ಬ್ರ್ಯಾಂಡ್ ಬೆಂಗಳೂರು ಅನ್ನೋದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಹೊಸದೊಂದು ಯುದ್ದಕ್ಕೆ ಕಾರಣವಾಗಿತ್ತು.
ಮತ್ತೊಂದೆಡೆ ಬೆಂಗಳೂರಿನ ಅಭಿವೃದ್ಧಿಯ ಬಗ್ಗೆ ಪ್ರಶ್ನೆ ಮಾಡಿದ್ದ ಬಿಜೆಪಿ ನಾಯಕರು, ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಹೋರಾಟಕ್ಕೆ ಮುಂದಾಗಿದ್ದರು. ಬ್ರ್ಯಾಂಡ್ ಬೆಂಗಳೂರು ಕೇವಲ ಹೆಸರಿಗಷ್ಟೇ ಆಗಿದೆ, ಬೆಂಗಳೂರು ಅಭಿವೃದ್ಧಿಗೆ ಏನೂ ಮಾಡಿಲ್ಲ ಅಂತಾ ಬಿಜೆಪಿ ನಾಯಕರು ಆಕ್ರೋಶವ್ಯಕ್ತಪಡಿಸಿದ್ದರು. ಈ ಅವ್ಯವಸ್ಥೆಯ ವಿರುದ್ಧ ಬೃಹತ್ ಹೋರಾಟ ಮಾಡೋದಾಗಿ ಎಚ್ಚರಿಕೆ ಕೂಡ ಕೊಟ್ಟಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.