ಬಾಗಲಕೋಟೆಯಲ್ಲಿ ದಲಿತ ಯುವಕನ ಮೇಲೆ ಸವರ್ಣೀಯರಿಂದ ಹಲ್ಲೆ ಆರೋಪಕ್ಕೆ ಟ್ವಿಸ್ಟ್: ವಿಡಿಯೋ ವೈರಲ್

| Updated By: ಗಂಗಾಧರ​ ಬ. ಸಾಬೋಜಿ

Updated on: Sep 22, 2024 | 4:02 PM

ಇಬ್ಬರು ಯುವಕರ ನಡುವಿನ ವೈಮನಸ್ಸು ವಿಕೋಪಕ್ಕೆ ತಿರುಗಿ ದಲಿತರು, ಸವರ್ಣಿಯರನ್ನು ಬಹಿಷ್ಕಿರಿಸುವ ಹಂತಕ್ಕೆ ತಲುಪಿತ್ತು. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮ ಈ ಘಟನೆಗೆ ಸಾಕ್ಷಿಯಾಗಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಯುವಕನನ್ನು ಕಂಬಕ್ಕೆ ‌ಕಟ್ಟಿದ್ದಾಗ ನಡೆದ ಸಂಭಾಷಣೆ ವಿಡಿಯೋ ವೈರಲ್ ಆಗಿದೆ.

ಬಾಗಲಕೋಟೆಯಲ್ಲಿ ದಲಿತ ಯುವಕನ ಮೇಲೆ ಸವರ್ಣೀಯರಿಂದ ಹಲ್ಲೆ ಆರೋಪಕ್ಕೆ ಟ್ವಿಸ್ಟ್: ವಿಡಿಯೋ ವೈರಲ್
ಬಾಗಲಕೋಟೆಯಲ್ಲಿ ದಲಿತ ಯುವಕನ ಮೇಲೆ ಸವರ್ಣೀಯರಿಂದ ಹಲ್ಲೆ ಆರೋಪಕ್ಕೆ ಟ್ವಿಸ್ಟ್: ವಿಡಿಯೋ ವೈರಲ್
Follow us on

ಬಾಗಲಕೋಟೆ, ಸೆಪ್ಟೆಂಬರ್ 22: ಜಿಲ್ಲೆಯ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದ ದಲಿತ (Dalit) ಯುವಕನ ಮೇಲೆ ಸವರ್ಣೀಯರಿಂದ ಹಲ್ಲೆ ಆರೋಪಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.  ಯುವಕನನ್ನು ಕಂಬಕ್ಕೆ ‌ಕಟ್ಟಿದ್ದಾಗ ನಡೆದ ಸಂಭಾಷಣೆ ವಿಡಿಯೋ ಬಹಿರಂಗವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸವರ್ಣೀಯರ ವಿರುದ್ಧ ದೂರು ದಾಖಲಿಸಿ ಕೆಲವರನ್ನ ಬಂಧಿಸಲಾಗಿತ್ತು. ಆದರೆ ಅಂದು ನಡೆದಿದ್ದ ವಾಸ್ತವ ದೃಶ್ಯದ ವಿಡಿಯೋ ಇದೀಗ ವೈರಲ್​ ಆಗಿದೆ.

ವೈರಲ್​ ವಿಡಿಯೋದಲ್ಲಿ ಏನಿದೆ?

ದೇವಾಲಯ ಪ್ರವೇಶ ಮಾಡಿದ್ದಕ್ಕೆ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆಂದು ಜಾತಿನಿಂದನೆ ಕೇಸ್​ ದಾಖಲಾಗಿತ್ತು. ಆದರೆ ಅಸಲಿ ಕಾರಣವೇ ಬೇರೆ. ಅರ್ಜುನ ಮಾದರ ಎನ್ನುವ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಸೆ. 14 ರಂದು ದಲಿತ ಸಂಘಟನೆಯವರು ಗ್ರಾಮಕ್ಕೆ ತೆರಳಿ ಪ್ರತಿಭಟನೆ ನಡೆಸಿ ದೂರು ದಾಖಲಿಸಿದ್ದರು. ಇದರಿಂದ ಸವರ್ಣಿಯರ ಮೇಲೆ ದೂರು ದಾಖಲಿಸಿ ಕೆಲವರನ್ನ ಪೊಲೀಸರು ಬಂಧಿಸಿದ್ದರು. ಆದರೆ, ಅಂದು ನಡೆದಿದ್ದ ಘಟನೆಯ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಮುಸ್ಲಿಂ ಯುವಕನ ಪಾಕಿಸ್ತಾನ ಪ್ರೀತಿ; ಪಾಕ್ ಪರ ಸ್ಟೇಟಸ್ ಹಾಕಿ ಪುಂಡತನ ಮೆರೆದವ ಪೊಲೀಸ್​ ವಶಕ್ಕೆ

ದಲಿತ ಯುವಕ ದೇವಾಲಯಕ್ಕೆ ಹೋಗಿರಲಿಲ್ಲ. ಬದಲಿಗೆ ಅನೈತಿಕ‌ ಸಂಬಂಧ ಹೊಂದಿದ್ದ ಯುವಕ ಆಕೆಯ ಜೊತೆ ಅಸಭ್ಯವಾಗಿ ನಡೆದುಕೊಳುತ್ತಿದ್ದ. ಈ ವಿಚಾರವಾಗಿ ಗ್ರಾಮ ಪಂಚಾಯಿತಿ ಸದಸ್ಯ ನಿಂಗರೆಡ್ಡಿ, ಅರ್ಜುನಿಗೆ ಬುದ್ದಿ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಅರ್ಜುನ ರಾತ್ರಿ ವೇಳೆ ಕುಡಗೋಲಿನಿಂದ ನಿಂಗರೆಡ್ಡಿ ಹಲ್ಲೆ ಮಾಡಿದ್ದಾರೆ.

ತಕ್ಷಣ ಸ್ಥಳೀಯರು ಎಚ್ಚೆತ್ತುಕೊಂಡು ಅರ್ಜುನ್​ನನ್ನು ಹಿಡಿದಿದ್ದಾರೆ. ಹೆಚ್ಚಿನ ಜೀವಹಾನಿ ಆಗಬಹುದೆಂದು ಹಿಡಿದು ಅಲ್ಲೇ ಕಂಬಕ್ಕೆ ಕಟ್ಟಿದ್ದರು. ಕಂಬಕ್ಕೆ ಕಟ್ಟಿದಾಗಲೂ ಅರ್ಜುನ ಮೇಲೆ ಯಾವುದೇ ಹಲ್ಲೆ ಮಾಡಿಲ್ಲ. ಬದಲಿಗೆ ಏನಾಯಿತು ಸತ್ಯ ಹೇಳು ಬಿಡುತ್ತೇವೆ ಎಂದಿದ್ದಾರೆ. ಈ ವೇಳೆ ನಡೆದಿದ್ದ ಸತ್ಯವನ್ನು ಅರ್ಜುನ ಮಾದರ ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ಬಾಗಲಕೋಟೆ ಬನಶಂಕರಿ ದೇವಸ್ಥಾನದ ಶಿವಪುರ ಗುಡ್ಡದಲ್ಲಿ ಇಸ್ಪೀಟ್ ದಂಧೆ; ಕಲ್ಲು ಗೊಂಬೆಗಳಾದ್ರ ಪೊಲೀಸರು?

ಸೆಪ್ಟೆಂಬರ್ 10ರ ರಾತ್ರಿ ಈ ಘಟನೆ ನಡೆದಿದ್ದು, ಘಟನೆ ನಡೆದ 4 ದಿನಗಳ ಬಳಿಕ ಬಂದಿದ್ದ ದಲಿತ ಮುಖಂಡರು, ಜಾತಿನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆಂದು ಸುಳ್ಳು ಆರೋಪ ಮಾಡಿದ್ದಾರೆ. ದೇವಸ್ಥಾನಕ್ಕೆ ಹೋಗಿದ್ದರಿಂದ ಸವರ್ಣೀಯರು ಹಲ್ಲೆ ಮಾಡಿದ್ದು ಹಾಗೂ ಜಾತಿ ನಿಂದನೆ ಮಾಡಿದ್ದಾರೆಂದು ದಲಿತ ಮುಖಂಡರು ಕಥೆ ಕಟ್ಟಿದ್ದಾರೆ. ಆ ಮೂಲಕ ಪ್ರಕರಣ ತಿರುಚುವ ಪ್ರಯತ್ನ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.